ಗಂಡು-ಹೆಣ್ಣು ಒಂದಾಗದೆಯೇ ಮರಿಗಳಿಗೆ ಜನ್ಮ ನೀಡುವ ಜೀವಿಗಳಿವು: ಏನಿದು ದೊಡ್ಡ ರಹಸ್ಯ!

Published : Jun 05, 2026, 11:28 PM IST

ಲೈಂಗಿಕ ಸಂಪರ್ಕವೇ ಇಲ್ಲದೆ ಮರಿಗಳಿಗೆ ಜನ್ಮ ನೀಡುವುದು ಸಾಧ್ಯವೇ? ಹೌದು ಎನ್ನುತ್ತದೆ ವಿಜ್ಞಾನ. ಗಂಡು ಸಂಗಾತಿ ಇಲ್ಲದೆಯೇ ಸಂತಾನೋತ್ಪತ್ತಿ ಮಾಡುವ ಕೆಲವು ವಿಚಿತ್ರ ಜೀವಿಗಳಿವೆ. ಅವು ಯಾವುವು ಗೊತ್ತಾ?

PREV
15
ಗಂಡು ಸಂಗಾತಿ ಇಲ್ಲದೆ ಮರಿ ಹಾಕುವ ಜೀವಿಗಳು!

ಮನುಷ್ಯರಂತೆ ಪ್ರಾಣಿಗಳಲ್ಲಿಯೂ ಗಂಡು-ಹೆಣ್ಣಿನ ಮಿಲನ ಸಾಮಾನ್ಯ. ಸಂತಾನೋತ್ಪತ್ತಿಗಾಗಿ ಇದು ಅನಿವಾರ್ಯ ಕೂಡ. ಆನೆಯಿಂದ ಹಿಡಿದು ಇಲಿಯವರೆಗೂ ಇದೇ ಪ್ರಕ್ರಿಯೆ ನಡೆಯುತ್ತದೆ. ಆದರೆ, ಕೆಲವು ಜೀವಿಗಳು ಅಪರೂಪದ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಹೊಂದಿವೆ. ಇವು ಗಂಡು ಜೀವಿಯ ಸಂಪರ್ಕವೇ ಇಲ್ಲದೆ ಮರಿಗಳಿಗೆ ಜನ್ಮ ನೀಡುತ್ತವೆ. ಈ ಪ್ರಕ್ರಿಯೆಯನ್ನು 'ಪಾರ್ಥಿನೋಜೆನೆಸಿಸ್' (Parthenogenesis) ಎಂದು ಕರೆಯುತ್ತಾರೆ. ಹೀಗೆ ಲೈಂಗಿಕ ಕ್ರಿಯೆ ಇಲ್ಲದೆ ಸಂತಾನ ಪಡೆಯುವ ಜೀವಿಗಳು ಯಾವುವು? ಇದು ಹೇಗೆ ಸಾಧ್ಯ? ಎಂಬುದನ್ನು ಇಲ್ಲಿ ತಿಳಿಯೋಣ.

25
ಜೇನುನೊಣಗಳು (Honey bees)

ಜೇನುನೊಣಗಳು ಗಂಡು-ಹೆಣ್ಣಿನ ಸಂಪರ್ಕವಿಲ್ಲದೆ ಹುಟ್ಟುತ್ತವೆ. ಜೇನುಗೂಡಿನಲ್ಲಿರುವ ರಾಣಿ ಜೇನು, ಗಂಡು ಜೇನಿನೊಂದಿಗೆ ಸೇರದೆಯೇ ಮೊಟ್ಟೆಗಳನ್ನು ಇಡುತ್ತದೆ. ಫಲೀಕರಣಗೊಳ್ಳದ ಈ ಮೊಟ್ಟೆಗಳಿಂದ ಸಾವಿರಾರು ಗಂಡು ಜೇನುನೊಣಗಳು (ಡ್ರೋನ್‌ಗಳು) ಹುಟ್ಟುತ್ತವೆ.

35
ಇರುವೆಗಳು ಮತ್ತು ಕಣಜಗಳು

ಇರುವೆಗಳು (Ants): ಇವು ಕೂಡ ಪಾರ್ಥಿನೋಜೆನೆಸಿಸ್ ಮೂಲಕವೇ ತಮ್ಮ ಸಂತತಿಯನ್ನು ವೃದ್ಧಿಸಿಕೊಳ್ಳುತ್ತವೆ. ಅಂದರೆ, ಗಂಡು-ಹೆಣ್ಣು ಇರುವೆಗಳ ನಡುವೆ ಮಿಲನ ಪ್ರಕ್ರಿಯೆ ಇರುವುದಿಲ್ಲ. ಆದರೂ ಹೊಸ ಇರುವೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ.

ಕಣಜಗಳು (Wasps): ಕಣಜಗಳಲ್ಲಿಯೂ ಲೈಂಗಿಕ ಕ್ರಿಯೆ ಇರುವುದಿಲ್ಲ. ಆದರೂ, ಸಂತಾನೋತ್ಪತ್ತಿ ಪ್ರಕ್ರಿಯೆ ಮುಂದುವರಿದು, ಹೊಸ ಕಣಜಗಳು ಹುಟ್ಟುತ್ತವೆ.

45
ಕೊಮೊಡೊ ಡ್ರ್ಯಾಗನ್‌ಗಳು ಮತ್ತು ಹಾವುಗಳು

ಕೊಮೊಡೊ ಡ್ರ್ಯಾಗನ್‌ಗಳು (Komodo Dragons): ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾ ಪ್ರದೇಶಗಳಲ್ಲಿ ಕಂಡುಬರುವ ಬೃಹತ್ ಹಲ್ಲಿಗಳೇ ಈ ಕೊಮೊಡೊ ಡ್ರ್ಯಾಗನ್‌ಗಳು. ಇವು ಕೂಡ ಪಾರ್ಥಿನೋಜೆನೆಸಿಸ್ ಮೂಲಕ, ಅಂದರೆ ಗಂಡು ಜೀವಿ ಇಲ್ಲದಿದ್ದರೂ ಹೆಣ್ಣು ಜೀವಿಗಳು ಸಂತಾನವನ್ನು ಪಡೆಯಬಲ್ಲವು.

ಹಾವುಗಳು (Snakes): ಕೆಲವು ಜಾತಿಯ ಹೆಬ್ಬಾವುಗಳು (ರೆಟಿಕ್ಯುಲೇಟೆನಂತಹ) ಕೂಡ ಗಂಡು ಸಂಗಾತಿ ಇಲ್ಲದೆ ಮರಿಗಳಿಗೆ ಜನ್ಮ ನೀಡುತ್ತವೆ. ಈ ಹಾವುಗಳು ಸಂಗಾತಿ ಇಲ್ಲದೆಯೇ ಮೊಟ್ಟೆ ಇಟ್ಟು, ಅವುಗಳಿಗೆ ಕಾವು ಕೊಟ್ಟು ಮರಿ ಮಾಡುತ್ತವೆ.

55
ಶಾರ್ಕ್‌ಗಳು (Sharks)

ಸಮುದ್ರ ಜೀವಿಗಳಲ್ಲಿಯೂ ಈ ಪಾರ್ಥಿನೋಜೆನೆಸಿಸ್ ಕಂಡುಬರುತ್ತದೆ. ವಿಶೇಷವಾಗಿ ಬ್ಲ್ಯಾಕ್‌ಟಿಪ್ ಮತ್ತು ಜೀಬ್ರಾ ಶಾರ್ಕ್‌ನಂತಹ ಕೆಲವು ಶಾರ್ಕ್ ಪ್ರಭೇದಗಳಲ್ಲಿ, ಗಂಡು ಶಾರ್ಕ್‌ನ ಸಂಪರ್ಕವಿಲ್ಲದೆ ಹೆಣ್ಣು ಶಾರ್ಕ್ ಮರಿಗಳಿಗೆ ಜನ್ಮ ನೀಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories