ಮಧುಮೇಹ ರೋಗಿಯು ಸಿಹಿ ತಿನ್ನುವುದನ್ನು ನಿಯಂತ್ರಿಸುವುದು ಹೇಗೆ?

First Published | Sep 21, 2021, 5:07 PM IST

ದೇಶದಲ್ಲಿ ಹೆಚ್ಚಿನ ಜನರು ಸಾಮಾನ್ಯವಾಗಿ ಅನುಭವಿಸುತ್ತಿರುವ ಸಮಸ್ಯೆ ಎಂದರೆ ಅದು ಮಧುಮೇಹ. ನೀವು ಮಧುಮೇಹ ರೋಗಿಯಾಗಿದ್ದರೆ ಮತ್ತು ಸಿಹಿ ಪದಾರ್ಥಗಳನ್ನು ತಿನ್ನಲು ಬಯಕೆಯಾದರೆ, ನೀವು ಅದರ ಕಾರಣಗಳನ್ನು ಅರ್ಥಮಾಡಿಕೊಂಡು ಅದನ್ನು ಗುಣಪಡಿಸಲು ಪ್ರಯತ್ನಿಸುವುದು ಮುಖ್ಯ.
 

ಮಧುಮೇಹ ರೋಗಿಗಳ ಹಂಬಲವನ್ನು ತಪ್ಪಿಸುವುದು ಹೇಗೆ?
ಮಧುಮೇಹಿ ರೋಗಿಗೆ ಸರಿಯಾದ ಆಹಾರವನ್ನು ಆರಿಸುವುದು ಬಹಳ ಮುಖ್ಯ. ಅನೇಕ ಸಲ ಅವರಿಗೆ ಇಂತಹ ಪದಾರ್ಥಗಳನ್ನು ತಿನ್ನಬೇಕು ಅನಿಸುತ್ತದೆ. ವಾಸ್ತವವಾಗಿ, ಮಧುಮೇಹ ರೋಗಿಯ ಸಿಹಿ ಪದಾರ್ಥಗಳನ್ನು ತಿನ್ನುವ ಬಯಕೆ ಜಾಗೃತಗೊಳ್ಳುತ್ತದೆ ಮತ್ತು ಅನೇಕ ಬಾರಿ ಅವರು ತಮ್ಮ ಆಸೆಗಳನ್ನು ನಿಗ್ರಹಿಸಲು ವಿಫಲರಾಗುತ್ತಾರೆ ಮತ್ತು ತಪ್ಪಾಗಿ  ಸಿಹಿ ವಸ್ತುಗಳನ್ನು ಸೇವಿಸುತ್ತಾರೆ. ಪರಿಣಾಮವಾಗಿ,  ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. 
 

ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾದಂತಹ ಪರಿಸ್ಥಿತಿಯಲ್ಲಿ ಕಡುಬಯಕೆಗಳನ್ನು ನಿಯಂತ್ರಿಸುವುದು ಮುಖ್ಯ. ಕೆಲವೊಮ್ಮೆ ಈ ಸಿಹಿಕಾರಕಗಳಿಗಾಗಿ ಹಂಬಲವು  ಕೆಲವು ತಪ್ಪುಗಳಿಂದಾಗಿರುತ್ತದೆ. ಅದರಿಂದಾಗಿ ನಾವು ಪದೇ ಪದೇ ಸಿಹಿ ತಿಂಡಿಗಳನ್ನು ತಿನ್ನಲು ಬಯಸುತ್ತೇವೆ. ತಜ್ಞರ ಪ್ರಕಾರ, ಮಧುಮೇಹಿ ರೋಗಿಯು ಕಡುಬ ಯಕೆಗಳನ್ನು ನಿಯಂತ್ರಿಸುವುದು ತುಂಬಾ ಸುಲಭ. ಹೇಗೆ ಎಂದು ತಿಳಿಯೋಣ.
ಮಧಮೇಹವನ್ನು ನಿಯಂತ್ರಿಸೋ ಸಸ್ಯಗಳಿವು

Latest Videos


ಊಟ ಬಿಡುವುದನ್ನು ತಪ್ಪಿಸಿ
ಮಧುಮೇಹ ರೋಗಿಯಾಗಲಿ ಅಥವಾ ಸಾಮಾನ್ಯ ವ್ಯಕ್ತಿಯಾಗಲಿ, ಉಪಹಾರ, ಊಟ ಅಥವಾ ಭೋಜನವನ್ನು ಬಿಟ್ಟು ಬಿಟ್ಟಾಗಲೆಲ್ಲಾ, ಸಿಹಿ ತಿನ್ನಬೇಕು ಎಂಬ ಭಾವನೆ ಖಂಡಿತವಾಗಿಯೂ ಹಂಬಲಿಸುವಿರಿ. ಇಲ್ಲಿ ಹಂಬಲಿಸುವುದು ಎಂದರೆ, ಆಹಾರವನ್ನು ಹೊರತುಪಡಿಸಿ ಬೇರೆ ಆಹಾರಗಳ ಮೇಲೆ ವಿಪರೀತ ಹಂಬಲವಿರುತ್ತದೆ. 
 

ಮಧುಮೇಹ ರೋಗಿಯಾಗಿದ್ದರೆ, ನಿಯಮದ ಪ್ರಕಾರ, ಹಸಿವಿನ ಸಮಸ್ಯೆ ಇರದಂತೆ ಪ್ರತಿದಿನ ಉಪಾಹಾರ ಅಥವಾ ಊಟ ಮತ್ತು ಭೋಜನವನ್ನು ಸಮಯಕ್ಕೆ ಸರಿಯಾಗಿ ಮಾಡಿ. ಇಲ್ಲದಿದ್ದರೆ ಸಿಹಿ ತಿನ್ನುವ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ರೋಗ ಉಲ್ಬಣಗೊಳ್ಳುತ್ತದೆ, ಆ ಬಗ್ಗೆ ಇರಲಿ ಎಚ್ಚರ. 

ಮಗಳಿಗೆ ಅಪ್ಪನ ಭರ್ಜರಿ ಸ್ವೀಟ್ ಗಿಫ್ಟ್

ಉಪ್ಪಿನ ಅತಿಯಾದ ಸೇವನೆ ತಪ್ಪಿಸಿ
ಉಪ್ಪು ಹೆಚ್ಚಿರುವ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಸಿಹಿತಿಂಡಿಗಳ ಹಂಬಲಕ್ಕೂ ಕಾರಣವಾಗಬಹುದು ಎಂದು ಕೇಳಿದರೆ  ಆಶ್ಚರ್ಯವಾಗಬಹುದು. ಆದರೆ ಇದು ನಿಜ. ಉಪ್ಪು ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇವಿಸಿದಾಗ, ಊಟದ ನಂತರ ಹಲವು ಬಾರಿ  ಸಿಹಿ ಪದಾರ್ಥಗಳನ್ನು ತಿನ್ನಬೇಕು ಎಂದು ಅನಿಸುತ್ತದೆ.

ತೂಕ ಹೆಚ್ಚೋ ಭಯ ಬೇಡ, ಕಡಿಮೆ ಕ್ಯಾಲೋರಿ ಇರೋ ಸ್ವೀಟ್ಸ್ ತಿನ್ನಿ

ಸಾಕಷ್ಟು ನೀರು ಕುಡಿಯಿರಿ 
ಸಾಕಷ್ಟು ನೀರು ಕುಡಿಯದ ಕಾರಣ ಸಿಹಿಯಾದ ವಸ್ತುಗಳ ಹಂಬಲ ಹುಟ್ಟುತ್ತದೆ. 62% ಜನರು ಬಾಯಾರಿಕೆಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಸಂಶೋಧನೆ ತೋರಿಸುತ್ತದೆ. ಆದ್ದರಿಂದ,  ಬಾಯಾರಿಕೆಯಾದಾಗ, ನೀರನ್ನು ಮಾತ್ರ ಕುಡಿಯಬೇಕು, ಇದಕ್ಕಿಂತ ಹೆಚ್ಚೇನೂ ಇಲ್ಲ.

ಓಣಂ ಸ್ಪೆಷಲ್ ಅವಿಯಲ್ ಮಾಡೋದು ಹೇಗೆ?

ನೈಸರ್ಗಿಕ ಸಿಹಿಕಾರಕಗಳನ್ನು ಬಳಸಬಹುದು
ಪೌಷ್ಟಿಕತಜ್ಞರು ನಿಮಗೆ ಹೆಚ್ಚಿನ ಹಂಬಲವನ್ನು ಹೊಂದಿದ್ದರೆ,  ನೈಸರ್ಗಿಕ ಸಿಹಿಕಾರಕಗಳ ಸಹಾಯವನ್ನು ಪಡೆಯಬೇಕು ಎಂದು ಹೇಳುತ್ತಾರೆ. ಏಕೆಂದರೆ ಇದು ಹಾನಿಕಾರಕವಲ್ಲ. ಮಧುಮೇಹ ರೋಗಿಗಳು ಸೇವಿಸಬಹುದಾದ ಕೆಲವು ಹಣ್ಣುಗಳು ಮತ್ತು ಬೀಜಗಳಿವೆ.  ವೈದ್ಯರು ಅಥವಾ ಪೌಷ್ಟಿಕತಜ್ಞರ ಸಲಹೆಯ ಮೇರೆಗೆ  ನೈಸರ್ಗಿಕ ಸಿಹಿಕಾರಕಗಳನ್ನು ಸೇವಿಸಬಹುದು.

ಸಾಕಷ್ಟು ನಿದ್ರೆ ಬೇಕು
ಸಾಕಷ್ಟು ನಿದ್ರೆ ಪಡೆಯದಿರುವುದರಿಂದ ಜನರಲ್ಲಿ ಕಡುಬಯಕೆ ಸಮಸ್ಯೆ ಉದ್ಭವಿಸುತ್ತದೆ ಎಂದು ತಜ್ಞರು ನಂಬುತ್ತಾರೆ, ಆದ್ದರಿಂದ  ನಿಯಮಿತ ಸಮಯ ನಿದ್ರೆ ಮಾಡುವುದು  ಮತ್ತು ಬೆಳಿಗ್ಗೆ ಎದ್ದೇಳುವುದು ಮುಖ್ಯ. ಒಬ್ಬ ವಯಸ್ಕನು ಕನಿಷ್ಠ 7 ರಿಂದ 8 ಗಂಟೆಗಳ ನಿದ್ದೆ ಪಡೆಯಬೇಕು,  ತುಂಬಾ ಕಷ್ಟಪಟ್ಟರೆ 9 ಗಂಟೆ ಕೂಡ ನಿದ್ದೆ ಮಾಡುವುದು ತಪ್ಪಲ್ಲ.

click me!