ಬೇವು -ಕಲ್ಲು ಸಕ್ಕರೆ ಆರೋಗ್ಯಕಾರಿ: ಪ್ರಧಾನಿ ಮೋದಿ ಫಿಟ್‌ನೆಸ್ ಸೀಕ್ರೇಟ್!

First Published Sep 21, 2021, 1:48 PM IST

ಸಾಮಾನ್ಯವಾಗಿ ಜನರು ಊಟ ಮಾಡಿದ ನಂತರ ಸೋಂಪಿನೊಂದಿಗೆ ಕಲ್ಲುಸಕ್ಕರೆಯ ಕ್ಯೂಬ್ ಗಳನ್ನು ತಿನ್ನುತ್ತಾರೆ. ಇದರ ಹೊರತಾಗಿ, ಕಲ್ಲು ಸಕ್ಕರೆ ಕ್ಯೂಬ್ ಗಳನ್ನು ಪ್ರಸಾದ ರೂಪದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದರ ಜೊತೆ ಬೇವು ತಿಂದರೆ ಬೆಸ್ಟ್ ಎನ್ನುತ್ತಾರೆ ಆರೋಗ್ಯ ತಜ್ಞರು. ಬೇವು ಅದರ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮತ್ತು ಪರಿಮಳದಿಂದಾಗಿ ಔಷಧಿ, ಆಹಾರ ಮತ್ತು ಚರ್ಮದ ಆರೈಕೆಯಲ್ಲಿ ಬಳಸಲಾಗುತ್ತದೆ.  

ಬೇವು ಮತ್ತು ಕಲ್ಲುಸಕ್ಕರೆ ಇವೆರಡನ್ನು ಒಟ್ಟಿಗೆ ಬೆರೆಸಿ ಸೇವಿಸಿದರೆ, ಇವು ಅದ್ಭುತ ಲಾಭ ನೀಡುತ್ತವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇಮ್ಯೂನ್ ಸಿಸ್ಟಂ ಅನ್ನು ಬೂಸ್ಟ್ ಮಾಡಲು ಬೇವು ಹಾಗೂ ಕಲ್ಲುಸಕ್ಕರೆಯ ಕಾಂಬಿನೇಷನ್ ಅತ್ಯಂತ ಪರಿಣಾಮಕಾರಿ.

ಪ್ರಧಾನಿ ಮೋದಿ ಕೂಡ ಬೇವು ಮತ್ತು ಕಲ್ಲುಸಕ್ಕರೆಯನ್ನು ಸೇವಿಸುತ್ತಾರೆ
ಈ ಹಿಂದೆ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದ ಪ್ರಧಾನಿ  ನರೇಂದ್ರ ಮೋದಿ ಕೂಡ ಬೇವು ಮತ್ತು ಕಲ್ಲು ಸಕ್ಕರೆ ಕ್ಯೂಬ್ ಒಟ್ಟಿಗೆ ಬಳಸುವುದರಿಂದ ಆಗುವ ಪ್ರಯೋಜನಗಳ  ಕುರಿತು ಮಾಹಿತಿ ನೀಡಿದ್ದರು. 
 

ಬೇವು ನಮ್ಮ ದೇಹದಲ್ಲಿರುವ ವಿಷವನ್ನು ಹೊರ ಹಾಕುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಯುಗಾದಿಯಂದು ತುಸು ಸೇವಿಸುವ ಬೇವು ದೈನಂದಿನ ಆಹಾರದ ಭಾಗವಾಗಬೇಕು!

ಬೇವು ಮತ್ತು ಕಲ್ಲು ಸಕ್ಕರೆ ಜೊತೆಯಾಗಿ ಸೇವಿಸುವುದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆ ತುಂಬಾ ಚೆನ್ನಾಗಿರುತ್ತದೆ ಮತ್ತು ದೇಹವು ಎಲ್ಲಾ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಪಡೆಯುತ್ತದೆ.ಆದುದರಿಂದ ಇದನ್ನು ಪ್ರತಿದಿನ ಸೇವಿಸಲು ಸಲಹೆ ನೀಡಲಾಗುತ್ತದೆ.

ಇದರ ಹೊರತಾಗಿ, ಬೇವು -ಬೆಲ್ಲದ ಸಂಯೋಜನೆಯು ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ಆಯಾಸ, ದೌರ್ಬಲ್ಯ, ರಕ್ತಹೀನತೆಯಂತಹ ಸಮಸ್ಯೆಗಳು  ನಿವಾರಣೆಯಾಗುತ್ತವೆ. ಒಟ್ಟಾರೆಯಾಗಿ ಇದು ಒಂದು ಉತ್ತಮ ರೋಗ ನಿರೋಧಕ ಮನೆ ಮದ್ದು.

ಬೇವಿನ ಕಡ್ಡಿಯನ್ನು ಹಲ್ಲುಜ್ಜಲು ಕೂಡ ಬಳಸಲಾಗುತ್ತದೆ
ಬೇವಿನ ಮರದ ವಿಶೇಷತೆ ಎಂದರೆ ಅದರ ಬೇರು, ಎಲೆಗಳು, ಗುರ್ಬೆಲ್ ಮತ್ತು ಮರದ ಕಟ್ಟಿಗೆ ಕೂಡ ತುಂಬಾ ಪ್ರಯೋಜನಕಾರಿ. ಆದರ ಕಡ್ಡಿಯನ್ನು ಹಲ್ಲುಜ್ಜಲು ಕೂಡ ಬಳಸಲಾಗುತ್ತದೆ. ಅಂದರೆ, ಬೇವಿನ ಮರದ ಪ್ರತಿಯೊಂದು ಭಾಗವು ತುಂಬಾ ಉಪಯುಕ್ತ.

ಬೇವಿನ ಕಡ್ಡಿಯಿಂದ ಹಲ್ಲುಜ್ಜುವುದರಿಂದ ಹಲ್ಲುಗಳು ಬಲಿಷ್ಠಗೊಳ್ಳುತ್ತವೆ. ಅನೇಕ ಉಪವಾಸದ ಸಂದರ್ಭಗಳಲ್ಲಿ ಸಾಮಾನ್ಯ ಟೂತ್ಪೇಸ್ಟ್ ನಿಂದ ಬ್ರಷ್ ಮಾಡುವ ಬದಲು, ಬೇವಿನ ಕಡ್ಡಿಯಿಂದ ಹಲ್ಲುಗಳನ್ನು ಉಜ್ಜಿಕೊಳ್ಳುವ ಸಲಹೆಗಳನ್ನು ನೀಡಲಾಗುತ್ತದೆ. ಇದಕ್ಕೆ ಧಾರ್ಮಿಕ ಮಹತ್ವವೂ ಇದೆ. ಅಂತೆಯೇ, ಸಕ್ಕರೆ ಕ್ಯಾಂಡಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮತ್ತೊಂದೆಡೆ, ಸಕ್ಕರೆ ಕ್ಯಾಂಡಿ ತಿನ್ನುವುದು ಕೆಮ್ಮಿನಿಂದ ಪರಿಹಾರ ಸಿಗುತ್ತದೆ.

click me!