ಮೂಡ್ ಹಾಳಾಗಿದ್ಯಾ? ಈ ಕೆಲ್ಸ ಮಾಡಿದ್ರೆ ನಿಮಿಷದಲ್ಲಿ ಖುಷಿಯಾಗ್ತೀರಿ ನೋಡಿ

First Published | Jan 24, 2023, 2:00 PM IST

ಕೆಲವೊಮ್ಮೆ ನಮ್ಮ ಮೂಡ್ ಚೆಂಜ್ ಆಗುತ್ತೆ, ಯಾರದರೂ ಮಾತನಾಡಲು ಬಂದಾಗ, ಏನಾದರೂ ಹೇಳಲು ಬಂದಾಗ ನಾವು… ಹೇ ಮೂಡ್ ಇಲ್ಲ… ಸುಮ್ನೆ ಬಿಟ್ಬಿಡು ನನ್ನ ಎಂದು ಹೇಳುತ್ತೇವೆ. ಕೆಲವೊಮ್ಮೆ ಕಾರಣ ಇದ್ದು, ಮೂಡ್ ಬದಲಾಗುತ್ತೆ, ಕೆಲವೊಮ್ಮೆ ಕಾರಣ ಇಲ್ಲದೇನೆ ಮೂಡ್ ಚೇಂಜ್ ಆಗುತ್ತೆ. ಒಂದು ವೇಳೆ ನಿಮಗೂ ಹಾಗೆ ಆಗುತ್ತಿದ್ದರೆ. ನಿಮಿಷದಲ್ಲಿ ಹ್ಯಾಪಿ ಮೂಡ್ ಗೆ ಬದಲಾಗೋದು ಹೇಗೆ ನೋಡೋಣ. 

ಸಂತೋಷ ಮತ್ತು ದುಃಖ ಎರಡೂ ಜೀವನದ ಅಂಶಗಳಾಗಿವೆ ಮತ್ತು ನಮ್ಮ ಜೀವನದಲ್ಲಿ ನಾವು ಸಾಮಾನ್ಯವಾಗಿ ಸಂತೋಷ ಮತ್ತು ದುಃಖ (happiness and sadness) ಎರಡನ್ನೂ ನೋಡುತ್ತೇವೆ, ಆದರೆ ಕೆಲವು ಜನರು ದುಃಖದ ಸ್ಥಿತಿಯಲ್ಲಿ ಒದ್ದಾಡುತ್ತಿರುತ್ತಾರೆ, ಇದರಿಂದ ಆವರ ಮೂಡ್ ತುಂಬಾನೆ ಕೆಟ್ಟದಾಗಿರುತ್ತೆ. ಇದರಿಂದಾಗಿ ಅವರು ಹುಚ್ಚುತನದಲ್ಲಿ ಮುಳುಗುತ್ತಾರೆ ಮತ್ತು ಅವರಿಗೆ ತಮ್ಮನ್ನು ತಾವು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಇದೇ ರೀತಿ ಆದಾಗ ನಾವು ಇತರರೊಂದಿಗೆ ಜಗಳ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತೆ. ಇದಕ್ಕೆ ಏನು ಮಾಡಬೇಕು ಅನ್ನೋದನ್ನು ನೋಡೋಣ. 

ನೀವು ಎಂದಾದರೂ ತುಂಬಾ ಕೆಟ್ಟದ್ದನ್ನು ಅನುಭವಿಸಿದರೆ ಅಥವಾ ಯಾರಾದರೂ ಏನನ್ನಾದರೂ ಮಾತನಾಡಿದಾಗ ಅಥವಾ ನೀವು ನಿರೀಕ್ಷಿಸದ ಪರಿಸ್ಥಿತಿ ನಡೆದರೆ, ಇದರಿಂದ ಮನಸ್ಸಿಗೆ ತುಂಬಾ ಘಾಸಿಯಾಗುತ್ತೆ (bad mood) ಮತ್ತು ಈ ಪರಿಸ್ಥಿತಿಯಲ್ಲಿ ಯಾವುದೇ ವ್ಯಕ್ತಿಯು ತಮ್ಮನ್ನು ತಾವು ಚೆನ್ನಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದು ನಿಮಗೂ ಸಂಭವಿಸಿದರೆ, ಈ ಸಲಹೆಗಳನ್ನು ಅನುಸರಿಸೋ ಮೂಲಕ, ನೀವು 15 ನಿಮಿಷಗಳಲ್ಲಿ ಮನಸ್ಸನ್ನು ಸಂತೋಷಗೊಳಿಸಬಹುದು. ಹೇಗೆ ಅನ್ನೊದನ್ನು ನೋಡೋಣ

Tap to resize

ಮನಸ್ಸಿನಿಂದ ಕೆಟ್ಟದ್ದನ್ನೆಲ್ಲಾ ತೆಗೆದು ಹಾಕಿ: ಮೊದಲನೆಯದಾಗಿ ನೀವು ನಿಮ್ಮ ಮನಸ್ಸನ್ನು ಶಾಂತಗೊಳಿಸಬೇಕು ಮತ್ತು ನಿಮ್ಮ ಮನಸ್ಸಿನಿಂದ ಎಲ್ಲಾ ಆಲೋಚನೆಗಳನ್ನು ತೆಗೆದು ಹಾಕಬೇಕು. ಇದನ್ನು ಮಾಡಲು, ನೀವು 5 ನಿಮಿಷಗಳ ಕಾಲ ಧ್ಯಾನ ಮಾಡಬಹುದು (meditation) ಮತ್ತು ಈ ಸಮಯದಲ್ಲಿ ಉಸಿರಾಟದ ಮೇಲೆ ಮಾತ್ರ ಮನಸ್ಸನ್ನು ಕೇಂದ್ರೀಕರಿಸಬಹುದು, ಅದರ ನಂತರ ನೀವು ತುಂಬಾ ಸಕಾರಾತ್ಮಕ ಮತ್ತು ಒಳ್ಳೆಯದನ್ನು ಅನುಭವಿಸುತ್ತೀರಿ.

ಹೊರಗೆ ಹೋಗಿ ಎಂಜಾಯ್ ಮಾಡಿ: ಮೂಡ್ ಔಟ್ ಆಗಿರೋವಾಗ ನಾಲ್ಕು ಗೋಡೆಗಳ ಮಧ್ಯೆ ಮಂಡಿಯೂರಿ ಕುಳಿತುಕೊಳ್ಳುವ ಬದಲು, ನೀವು ಹೊರಗೆ ಹೋಗುವ ಮೂಲಕ ಪ್ರಕೃತಿಯನ್ನು ಆನಂದಿಸಬೇಕು (enjoy the nature). ತೆರೆದ ಗಾಳಿಯಲ್ಲಿ ಆನಂದಿಸಬಹುದು ಅಥವಾ ಪಕ್ಷಿಗಳು ಅಥವಾ ಪ್ರಾಣಿಗಳನ್ನು ನೋಡುವ ಮೂಲಕ ಎಂಜಾಯ್ ಮಾಡಬಹುದು. ಇದು ನಿಮಗೆ ತುಂಬಾ ಒಳ್ಳೆಯ ಭಾವನೆಯನ್ನು ನೀಡುತ್ತದೆ. ಮನಸ್ಸು ಹ್ಯಾಪಿಯಾಗೋದರಲ್ಲಿ ಸಂಶಯವಿಲ್ಲ. 

ನಗುವುದು ಅವಶ್ಯಕ (Try to Laugh): ಜೀವನದಲ್ಲಿ ಎಂತಹುದೇ ಪರಿಸ್ಥಿತಿ ಇರಲಿ, ನಿಮ್ಮನ್ನು ನಗಿಸಲು ನೀವು ಪ್ರಯತ್ನಿಸಬೇಕು. ಇದಕ್ಕಾಗಿ, ನೀವು ನಗುವ ಪುಸ್ತಕವನ್ನು ಓದಬಹುದು ಅಥವಾ ಉತ್ತಮ ಹಾಸ್ಯ ಪ್ರಜ್ಞೆಯನ್ನು ಹೊಂದಿರುವ ಸ್ನೇಹಿತನೊಂದಿಗೆ ಮಾತನಾಡಬಹುದು. ಅಥವಾ ಕಾಮಿಡಿ ಶೋಗಳನ್ನು ನೋಡಿ.

ನೀವು ಹೇಗಿದ್ದೀರೋ ಹಾಗೆ ಹ್ಯಾಪಿಯಾಗಿರಿ: ಯಾವಾಗಲೂ ತನ್ನ ಬಳಿ ಅದಿಲ್ಲ, ಇದಿಲ್ಲ ಎಂದು ಯೋಚನೆ ಮಾಡಲೇ ಬೇಡಿ. ಹೀಗೆ ಯೋಚನೆ ಮಾಡುತ್ತಾ ಕುಳಿತರೆ, ನೋವು ಹೆಚ್ಚಾಗುತ್ತದೇ ವಿನಃ ಬೇರೇನೂ ಸಂಭವಿಸೋದಿಲ್ಲ. ಹಾಗಾಗಿ ನೀವು ಹೇಗಿದ್ದೀರೋ, ಅದೇ ಸ್ಥಿತಿಯಲ್ಲಿ ಎಂಜಾಯ್ ಮಾಡೋದನ್ನು ಕಲಿಯಿರಿ. 

ಒಳ್ಳೆಯದನ್ನು ಯಾವಾಗಲೂ ನೆನಪಿನಲ್ಲಿಡಿ: ಮೂಡ್ ಕೆಟ್ಟಿದ್ದರೆ, ಒಂದು ಪುಸ್ತಕವನ್ನು ತೆಗೆದುಕೊಂಡು ನಿಮಗೆ ಸಂಭವಿಸಿದ ವಿಷಯಗಳನ್ನು ಬರೆಯಲು ಪ್ರಾರಂಭಿಸಿ. ಇದರ ನಂತರ, ಇದೊಂದು ಸಣ್ಣ ಕಷ್ಟ ಅಷ್ಟೇ, ಈ ಪ್ರಪಂಚದಲ್ಲಿ ಅದೇಷ್ಟೋ ಜನ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೇ ನರಕ ಅನುಭವಿಸುತ್ತಿದ್ದಾರೆ. ಆದರೆ ತನಗೆ ಅಂತಹ ಕಷ್ಟ ಇಲ್ಲ ಅನ್ನೋದನ್ನು ನೆನಪಿಸಿ. ಇದು ನಿಮಗೆ ದೊಡ್ಡ ಕೃತಜ್ಞತೆಯ ಭಾವನೆಯನ್ನು ಉಂಟುಮಾಡುತ್ತದೆ.

Latest Videos

click me!