ಮೊಟ್ಟೆಯ ಈ ಭಾಗ ವಿಷವಂತೆ, ವಿಜ್ಞಾನಿಗಳು ಹೇಳಿರೋದೇನು?

First Published | Jan 22, 2023, 4:01 PM IST

ಮೊಟ್ಟೆಯು ಪ್ರೋಟೀನ್ ನಂತಹ ಪೋಷಕಾಂಶಗಳಿಂದ ತುಂಬಿರುವ ಸೂಪರ್ ಫುಡ್ ಅನ್ನೋದು ನಿಮಗೂ ಗೊತ್ತು. ಇದನ್ನು ನಿಯಮಿತವಾಗಿ ಸೇವಿಸೋದ್ರಿಂದ ಸ್ನಾಯುಗಳು ಮತ್ತು ಮೂಳೆಗಳಿಗೆ ಬಲವನ್ನು ನೀಡುತ್ತದೆ. ಆದರೆ ಮೊಟ್ಟೆ ಎಲ್ಲಾ ಜನರಿಗೆ ಆರೋಗ್ಯಕರ ಆಯ್ಕೆ ಅಲ್ಲ ಅನ್ನೋದು ಗೊತ್ತ?. ಇದರ ಸೇವನೆಯಿಂದ ಕೆಲವರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು.

ಮೊಟ್ಟೆಯು ಸೂಪರ್‌ಫುಡ್‌ (egg is superfood) ಆಗಿದೆ.ಹಾಗಾಗಿ ಇದನ್ನು ವಿಶ್ವಾದ್ಯಂತ ಸೇವಿಸಲಾಗುತ್ತದೆ. ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸೇರಿದಂತೆ ದೇಹದ ಉತ್ತಮ ಕಾರ್ಯನಿರ್ವಹಣೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಮೊಟ್ಟೆ ಹೊಂದಿರುತ್ತವೆ. ಅಷ್ಟೆ ಅಲ್ಲ ಮೊಟ್ಟೆಯು ಟೇಸ್ಟಿಯಾಗಿರುತ್ತೆ ಮತ್ತು ಅಡುಗೆ ಮಾಡಲು ಸುಲಭವಾಗಿದೆ. ಮಕ್ಕಳಿಂದ ವೃದ್ಧರ ವರೆಗೆ ಎಲ್ಲರೂ ಸುಲಭವಾಗಿ ಮೊಟ್ಟೆಗಳನ್ನು ತಿನ್ನಬಹುದು.

ನ್ಯೂಟ್ರಿಷಿಯನಿಕ್ಸ್ ಪ್ರಕಾರ, ಒಂದು ಮೊಟ್ಟೆಯಲ್ಲಿ 6.3 ಗ್ರಾಂ ಪ್ರೋಟೀನ್, 69 ಮಿಗ್ರಾಂ ಪೊಟ್ಯಾಸಿಯಮ್ (potassium), 5.4% ವಿಟಮಿನ್ ಎ, 2.2% ಕ್ಯಾಲ್ಸಿಯಂ ಮತ್ತು 4.9% ಕಬ್ಬಿಣವಿದೆ. ಮೊಟ್ಟೆ ಕೆಲವು ಜನರ ಆರೋಗ್ಯಕ್ಕೆ ಮಾರಕವಾಗಿದೆ.  ಇದನ್ನು ಯಾರು ತಿನ್ನಬಾರದು ಅನ್ನೋದನ್ನು ನೋಡೋಣ. 

Tap to resize

ಪ್ರತಿದಿನ ಮೊಟ್ಟೆ ತಿನ್ನೋದ್ರಿಂದ ಮೂಳೆಗಳನ್ನು ಬಲಪಡಿಸಲು, ಮೆದುಳನ್ನು ತೀಕ್ಷ್ಣಗೊಳಿಸಲು (sharp brain), ಸ್ನಾಯುಗಳನ್ನು ಹೆಚ್ಚಿಸಲು, ಕ್ಯಾನ್ಸರ್ ತಪ್ಪಿಸಲು ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಅನೇಕ ಪ್ರಯೋಜನಗಳನ್ನು ಹೊಂದಿದ್ದರೂ, ಮೊಟ್ಟೆ ಕೆಲವು ಜನರಿಗೆ ಹಾನಿಕಾರಕವಾಗಿದೆ ಮತ್ತು ಅವರನ್ನು ಅನೇಕ ಗಂಭೀರ ಕಾಯಿಲೆಗಳ ಅಪಾಯಕ್ಕೆ ತಳ್ಳಬಹುದು, ಹೇಗೆ ಎಂದು ತಿಳಿಯೋಣ.

ಕೊಲೆಸ್ಟ್ರಾಲ್ (cholesterol) ರೋಗಿಗಳು ಮೊಟ್ಟೆ ತಿನ್ನಬಾರದು
ಮೊಟ್ಟೆಯ ಹಳದಿ ಭಾಗದಲ್ಲಿ ಕೊಲೆಸ್ಟ್ರಾಲ್ ಕಂಡುಬರುತ್ತದೆ. ಎನ್ಸಿಬಿಐ ವರದಿಯ ಪ್ರಕಾರ, ಹೆಚ್ಚು ಕೊಲೆಸ್ಟ್ರಾಲ್ ತಿನ್ನುವುದು ಗಂಭೀರ ಆರೋಗ್ಯ ಅಪಾಯಗಳನ್ನು ಉಂಟು ಮಾಡುತ್ತದೆ. ನೀವು ಈಗಾಗಲೇ ಕೊಲೆಸ್ಟ್ರಾಲ್ ಸಮಸ್ಯೆ ಹೊಂದಿದ್ದರೆ, ಮೊಟ್ಟೆ ತಿನ್ನುವುದನ್ನು ತಪ್ಪಿಸಬೇಕು.

ಸಕ್ಕರೆ ರೋಗಿಗಳು (diabetes patients) ಮೊಟ್ಟೆ ತಿನ್ನಬಾರದು
ಮಧುಮೇಹ ಮತ್ತು ಮೊಟ್ಟೆ ಸೇವನೆಯ ಬಗ್ಗೆ ವಿಜ್ಞಾನಿಗಳು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಎನ್ಸಿಬಿಐನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಯುಎಸ್ನಲ್ಲಿ ವಾರಕ್ಕೆ ಮೂರು ಅಥವಾ ಅದಕ್ಕಿಂತ ಹೆಚ್ಚು ಮೊಟ್ಟೆ ತಿನ್ನುವ ಜನರು 39% ದಷ್ಟು ಮಧುಮೇಹದ ಅಪಾಯವನ್ನು ಹೊಂದಿದ್ದಾರೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಚೀನಾದಲ್ಲಿ ನಿಯಮಿತವಾಗಿ ಮೊಟ್ಟೆ ತಿನ್ನುವ ಜನರಿಗೆ ಮಧುಮೇಹ ಬರುವ ಸಾಧ್ಯತೆ ಹೆಚ್ಚು.

ಹೃದ್ರೋಗಿಗಳು ಮೊಟ್ಟೆ ತಿನ್ನುವುದನ್ನು ತಪ್ಪಿಸಬೇಕು
ವರ್ಲ್ಡ್ ಹಾರ್ಟ್ ಫೆಡರೇಶನ್ ಪ್ರಕಾರ, ಹೆಚ್ಚಿನ ಕೊಲೆಸ್ಟ್ರಾಲ್ ಪಾರ್ಶ್ವವಾಯು ಮತ್ತು ಹೃದ್ರೋಗದ ಅಪಾಯವನ್ನು (heart problem) ಹೆಚ್ಚಿಸುತ್ತದೆ ಮತ್ತು ವಿಶ್ವಾದ್ಯಂತ ಪ್ರತಿ ವರ್ಷ 4.4 ದಶಲಕ್ಷಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗುತ್ತದೆ. ಮೊಟ್ಟೆಯ ಹಳದಿ ಲೋಳೆಯ ಸೇವನೆಯು ಅಪಧಮನಿಗಳಲ್ಲಿ ಪ್ಲೇಕ್ ಸಂಗ್ರಹಗೊಳ್ಳಲು ಕಾರಣವಾಗಬಹುದು, ಇದು ಅವುಗಳಲ್ಲಿ ತಡೆಗೆ ಕಾರಣವಾಗಬಹುದು.

ಕ್ಯಾನ್ಸರ್ ರೋಗಿಗಳು (cancer patients) ಯೋಚಿಸಿ ಮೊಟ್ಟೆ ತಿನ್ನಬೇಕು
ಎನ್ಐಎಚ್‌ನಲ್ಲಿ ಪ್ರಕಟವಾದ ಅಧ್ಯಯನವು ಮೊಟ್ಟೆಗಳ ಹೆಚ್ಚಿನ ಸೇವನೆಯು ಅನೇಕ ರೀತಿಯ ಕ್ಯಾನ್ಸರ್ ಗೆ ಸಂಬಂಧಿಸಿದೆ ಎಂದು ವರದಿ ಮಾಡಿದೆ. ಇದು ಪ್ರಾಸ್ಟೇಟ್ ಕ್ಯಾನ್ಸರ್ ಹೆಚ್ಚಿಸುವ ಸಾಧ್ಯತೆ ಇದೆ, ಅಷ್ಟೇ ಅಲ್ಲ ಇದು ಸಾವಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಮಹಿಳೆಯರು ವಾರಕ್ಕೆ ಐದು ಅಥವಾ ಅದಕ್ಕಿಂತ ಹೆಚ್ಚು ಮೊಟ್ಟೆಗಳನ್ನು ತಿನ್ನುವುದರಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.

ದುರ್ಬಲ ಜೀರ್ಣಕಾರಿ ಶಕ್ತಿ ಹೊಂದಿರುವ ಜನರು ಸಹ ಮೊಟ್ಟೆಗಳಿಂದ ದೂರವಿರಬೇಕು
ಸಾಲ್ಮೊನೆಲ್ಲಾ ಒಂದು ಬ್ಯಾಕ್ಟೀರಿಯಾದ ಸೋಂಕಾಗಿದ್ದು, ಇದು ಅತಿಸಾರ, ಸೆಳೆತ, ವಾಂತಿ, ಜ್ವರ, ತಲೆನೋವು ಮತ್ತು ವಾಕರಿಕೆಗೆ ಜೊತೆಗೆ ಫುಡ್ ಪಾಯಿಸನ್ ಗೆ (food poison) ಕಾರಣವಾಗುತ್ತದೆ. ಕೋಳಿಗಳು ಸೋಂಕಿತ ಮಲದೊಂದಿಗೆ ಸಂಪರ್ಕಕ್ಕೆ ಬಂದಾಗ ಮೊಟ್ಟೆಗಳು ಮತ್ತು ಮೊಟ್ಟೆಯ ಚಿಪ್ಪುಗಳು ಹೆಚ್ಚಾಗಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದಿಂದ ಕಲುಷಿತಗೊಳ್ಳುತ್ತವೆ. ನಿಮ್ಮ ಜೀರ್ಣಕ್ರಿಯೆ ದುರ್ಬಲವಾಗಿದ್ದರೆ, ನೀವು ಬೇಗನೆ ಆಹಾರ ವಿಷಕ್ಕೆ ಬಲಿಯಾಗಬಹುದು. ಆದ್ದರಿಂದ, ಯಾವಾಗಲೂ ಮೊಟ್ಟೆಗಳನ್ನು ತೊಳೆದು ತಿನ್ನಿ.

Latest Videos

click me!