Drinking Water : ಹೀಗೆ ನೀರು ಕುಡಿದ್ರೆ ತಿಂದ ಅನ್ನ ಜೀರ್ಣವಾಗೋಲ್ಲ!

Suvarna News   | Asianet News
Published : Dec 20, 2021, 02:16 PM ISTUpdated : Dec 20, 2021, 02:18 PM IST

ನೀರು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ (health benefits), ಆದರೆ ನೀವು ತಪ್ಪು ರೀತಿಯಲ್ಲಿ ನೀರು ಕುಡಿದರೆ ಅದು ನಿಮಗೆ ಹಾನಿ ಮಾಡಬಹುದು. ಆಯುರ್ವೇದದ ಪ್ರಕಾರ, ನೀರನ್ನು ಸರಿಯಾಗಿ ಕುಡಿಯದೆ ಇದ್ದರೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.   

PREV
18
Drinking Water  :  ಹೀಗೆ ನೀರು ಕುಡಿದ್ರೆ ತಿಂದ ಅನ್ನ ಜೀರ್ಣವಾಗೋಲ್ಲ!

ದೇಹವನ್ನು ತೇವಾಂಶದಿಂದ (hydrate) ಇರಿಸಲು ನೀರು ಕುಡಿಯುವುದು ಅತ್ಯಗತ್ಯ. ಇದು ದೇಹದಿಂದ ವಿಷವನ್ನು ತೆಗೆದುಹಾಕುವುದು. ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಜೀವಕೋಶಗಳಿಗೆ ಸಾಗಿಸುತ್ತದೆ. ಜೊತೆಗೆ, ದೇಹದ ತಾಪಮಾನವನ್ನು ನಿಯಂತ್ರಿಸುತ್ತದೆ.

28


ಮೆದುಳಿನ ಕಾರ್ಯ ನಿರ್ವಹಣೆಗೆ ನೀರು ಬಹಳ ಮುಖ್ಯ. ಆದರೆ ಕುಡಿಯುವ ನೀರಿನ ವಿಧಾನವು ಸರಿಯಾಗಿರಬೇಕು. ಇಲ್ಲದೆ ಹೋದರೆ ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸುವುದಿಲ್ಲ. ಆದುದರಿಂದ ಸರಿಯಾಗಿ ನೀರು ಕುಡಿಯುವುದು ಅಗತ್ಯವಾಗುತ್ತದೆ. 

38

ಆಯುರ್ವೇದದ (Ayurveda) ಪ್ರಕಾರ, ನೀರನ್ನು ತಪ್ಪಾಗಿ ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉದ್ಭವಿಸಬಹುದು. ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಜೀರ್ಣಕ್ರಿಯೆ ಬಹಳ ಮುಖ್ಯ. ಊಟಕ್ಕೆ ಮೊದಲು ಅಥವಾ ನಡುವೆ ನೀವು ತಕ್ಷಣ ನೀರು ಕುಡಿದರೆ, ಅದು ವಿಸರ್ಜನೆ ಕ್ರಿಯೆ ಹಾಳು ಮಾಡುತ್ತದೆ.

48

ನೀರು ಕುಡಿಯಲು ಸರಿಯಾದ ಮಾರ್ಗ
ಒಂದೇ ಬಾರಿಗೆ ಒಂದು ಲೋಟ ನೀರನ್ನು ಎಂದಿಗೂ ಕುಡಿಯಬೇಡಿ. ಈ ರೀತಿ ನೀರು ಕುಡಿಯುವುದರಿಂದ ಗ್ಯಾಸ್ಟ್ರಿಕ್ (gastric) ರಸವು ದುರ್ಬಲವಾಗುತ್ತದೆ, ಇದರಿಂದ ಆಹಾರದಿಂದ ಪೋಷಕಾಂಶಗಳನ್ನು ಜೀರ್ಣಿಸಿಕೊಳ್ಳಲು ಮತ್ತು ಹೀರಿಕೊಳ್ಳಲು ಕಷ್ಟವಾಗುತ್ತದೆ. 

58

ನೀರನ್ನು ಕುಡಿಯಲು (drink water) ಸರಿಯಾದ ಮಾರ್ಗವೆಂದರೆ ಪ್ರತಿ ಗುಟುಕು ತೆಗೆದುಕೊಳ್ಳುವ ಮೂಲಕ ಅದನ್ನು ನಿಧಾನವಾಗಿ ಕುಡಿಯುವುದು. ಒಂದೇ ಬಾರಿ ಕುಡಿದರೆ ಅದನ್ನು ಜೀರ್ಣಿಸಲು ಕಷ್ಟವಾಗುತ್ತದೆ. ಆದುದರಿಂದ ನೀರನ್ನು ನಿಧಾನವಾಗಿ ಸೇವಿಸಲು ಆದಷ್ಟು ಪ್ರಯತ್ನಿಸಿ. 

68

ಊಟಕ್ಕೆ 30 ನಿಮಿಷಗಳ ಮೊದಲು ಅಥವಾ ನಂತರ ಕುಡಿಯಿರಿ
ಊಟಕ್ಕೆ 30 ನಿಮಿಷ ಮೊದಲು ಅಥವಾ ಊಟದ 30 ನಿಮಿಷಗಳ ನಂತರ ನೀರು ಕುಡಿಯಿರಿ. ಊಟ ಮಾಡುವಾಗ ಬಾಯಾರಿಕೆಯ ಅನುಭವವಾದರೆ ಒಂದು ಲೋಟ ನೀರನ್ನು ನೇರವಾಗಿ ಕುಡಿಯದೆ ಒಂದು ಅಥವಾ ಎರಡು ಗುಟುಕು ನೀರು ಕುಡಿಯಿರಿ. 
 

78


ಉತ್ತಮ ಜೀರ್ಣಕ್ರಿಯೆಗೆ ಬೆಚ್ಚಗಿನ ನೀರನ್ನು (warm water) ಕುಡಿಯುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ತಣ್ಣಗಿನ ನೀರು ಕುಡಿಯುವುದರಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದುದರಿಂದ ಉತ್ತಮ ಜೀರ್ಣಕ್ರಿಯೆಗಾಗಿ ಉಗುರು ಬೆಚ್ಚಗಿನ ನೀರನ್ನು ಸೇವಿಸುವುದು ಉತ್ತಮ. 

88

ನಿಂತು ನೀರು ಕುಡಿಯುವುದು ಹಾನಿಕಾರಕ
ಎದ್ದು ನಿಂತು ನೀರು ಕುಡಿಯಬೇಡಿ. ಈ ರೀತಿ ನೀರು ಕುಡಿಯುವುದರಿಂದ  (drink water) ನಿಮಗೆ ಹಾನಿಯಾಗುತ್ತದೆ. ಇದರಿಂದ ಮೂತ್ರಪಿಂಡ ಮತ್ತು ಮೂತ್ರಕೋಶದಲ್ಲಿ ವಿಷಕಾರಿ ವಸ್ತುಗಳು ಶೇಖರಣೆಯಾಗುತ್ತವೆ.

Read more Photos on
click me!

Recommended Stories