ಸುಲಭವಾಗಿ ಅಡುಗೆ ಮಾಡಿ ತಿನ್ನಬಹುದಾದ ಮತ್ತು ಹೆಚ್ಚು ಪೌಷ್ಟಿಕಾಂಶವಿರುವ ಮೊಟ್ಟೆ ಬಹಳಷ್ಟು ಜನರಿಗೆ ಫೇವರೇಟ್.
ಸೆಲೇನಿಯಂ, ವಿಟಮಿನ್ ಡಿ, ವಿಟಮಿನ್ ಬಿ6, ವಿಟಮಿನ್ ಬಿ12, ಝಿಂಕ್, ಕಬ್ಬಿಣಂಶ ಇರುವ ಮೊಟ್ಟೆ ಬೆಳೆಯುವ ಮಕ್ಕಳಿಗೆ, ರೋಗಿಗಳಿಗೆ, ಸಾಮಾನ್ಯವಾಗಿ ಎಲ್ಲರಿಗೂ ಸೇವಿಸಬಹುದು.ಹಾಗಾಗಿ ಇದನ್ನು ಕಂಪ್ಲೀಟ್ ಫುಡ್ ಎಂದೂ ಕರೆಯಬಹುದು.
ಆದರೆ ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಕೂಡಾ ಇದೆ. ಹೀಗಾಗಿ ದಿನಕ್ಕೆಷ್ಟು ಮೊಟ್ಟೆ ತಿನ್ನಬೇಕು ಎನ್ನುವುದರ ಬಗ್ಗೆಯೂ ತಿಳಿದಿರಬೇಕು.
ತಜ್ಞರ ಪ್ರಕಾರ ದಿನಕ್ಕೆ 373 ಗ್ರಾಂಗಿಂತ ಹೆಚ್ಚು ಕೊಲೆಸ್ಟ್ರಾಲ್ ಸೇವಿಸಬಾರದು.
ಹಾಗಾದ್ರೆ ಹೃದಯ ಸಂಬಂಧಿ ರೋಗಿಗಳು ಮೊಟ್ಟೆ ತಿನ್ನಲೇ ಬಾರದಾ..? ಹೃದಯ ಸಂಬಂಧಿ ಕಾಯಿಲೆ ಇದ್ದರೆ ನೀವೇನು ಮಾಡಬೇಕು..? ಇಲ್ಲಿ ಓದಿ.
ಎಷ್ಟು ಮೊಟ್ಟೆ ತಿನ್ನಬಹುದು..? :ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ ಯಾವುದೇ ತೊಂದರೆ ಇಲ್ಲ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳೂ ಬರದು. ಡಯಾಬಿಟೀಸ್, ಹೃದಯ ಸಂಬಂಧಿ ರೋಗದಿಂದ ಬಳಲುವವರಿಗೂ ದಿನಕ್ಕೊಂದು ಮೊಟ್ಟೆ ಸೇವಿಸಬಹುದು. 2-3ಕ್ಕಿಂತ ಹೆಚ್ಚು ಮೊಟ್ಟೆ ಸೇವಿಸುವುದು ಡಯಾಬಿಟೀಸ್ ಇರುವವರಿಗೆ ಒಳ್ಳೆಯದಲ್ಲ.
ಸ್ಟಡಿ: ಪಾಪ್ಯುಲೇಷನ್ ಹೆಲ್ತ್ ಇನ್‌ಸ್ಟಿಟ್ಯೂಟ್ ನಡೆಸಿದ ಸಂಶೋಧನೆ ದಲ್ಲಿ 1,46,011 ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇವರೆಲ್ಲರೂ 21 ದೇಶದವರಾಗಿದ್ದು, ಬಿನ್ನ ಮಟ್ಟದ ಆದಾಯ ಪಡೆಯುವರು.
ಫಲಿತಾಂಶ:ಬಹುತೇಕ ಹೆಚ್ಚಿನ ಜನ ದಿನಕ್ಕೊಂದು ಅಥವಾ ಅಕ್ಕಿಂತ ಕಮ್ಮಿ ಮೊಟ್ಟೆ ತಿನ್ನುತ್ತಾರೆ. ಇದರಿಂದಾಗಿ ಜನರಿಗೆ ಯಾವುದೇ ಆರೋಗ್ಯ ಸಮಸ್ಯೆಯಾಗಿಲ್ಲ.
ದಿನಕ್ಕೊಂದು ಮೊಟ್ಟೆ ಸೇವನೆ ಒಳ್ಳೆಯದು. ಇದೇ ಮಿತಿಯಲ್ಲಿ ಸೇವಿಸಿದರೆ ಉತ್ತಮ. ನೀವು ಹೈ ಪ್ರೊಟೀನ್ ಡಯಟ್‌ನಲ್ಲಿದ್ದರೆ, ಹೆಚ್ಚು ಅಂದರೆ ಮೂರು ಮೊಟ್ಟೆ ಸೇವಿಸಬಹುದು. ಡಯಾಬಿಟೀಸ್ ಇರುವವರು ಒಂದಕ್ಕಿಂತ ಹೆಚ್ಚು ಮೊಟ್ಟೆ ಸೇವಿಸಬಾರದು