ಸೆಕ್ಸ್ ಡ್ರೈವ್ ಉತ್ತಮಗೊಳಿಸುವ ನಿಟ್ಟಿನಲ್ಲಿ 9 ಉಪಯುಕ್ತ ವಸ್ತುಗಳ ಪಟ್ಟಿ ಇಲ್ಲಿದೆ.
ವಾಲ್‌ನಟ್ಸ್ ವೀರ್ಯದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದು ವೀರ್ಯದ ಆಕಾರ,ಚಲನೆ ಮತ್ತು ಚೈತನ್ಯವನ್ನು ಹೆಚ್ಚಿಸುವುದರ ಜೊತೆಗೆ ಫಲವತ್ತತೆಯನ್ನು ಸುಧಾರಿಸುತ್ತದೆ. ಆರೋಗ್ಯಕರ ಲೈಂಗಿಕ ಜೀವನಕ್ಕಾಗಿ ಆಹಾರದಲ್ಲಿ ನಟ್ಸ್ ಸೇರಿಸಿಕೊಳ್ಳಿ.
ಸ್ಟ್ರಾಬೆರಿ ಮತ್ತು ರಾಸ್‌ಬೆರ್ರಿಸ್ ಬೀಜಳಲ್ಲಿ ಜಿಂಕ್ ಸಮೃದ್ದವಾಗಿದೆ. ಇದು ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಜೀವನಕ್ಕೆ ಅವಶ್ಯಕವಾಗಿದೆ. ಮಹಿಳೆಯರು ಹೆಚ್ಚಿನ ಪ್ರಮಾಣದ ಸತುವಿನ ಅಂಶ ಸೇವಿಸಿದರೆ, ಅವರ ದೇಹವು ಲೈಂಗಿಕತೆಗೆ ಸಿದ್ಧವಾಗುವುದು ಸುಲಭವಾಗುತ್ತದೆ. ಪುರುಷರಲ್ಲಿ, ಸತುವು ಟೆಸ್ಟೋಸ್ಟೆರಾನ್ ಮಟ್ಟವನ್ನು ನಿಯಂತ್ರಿಸುತ್ತದೆ, ಇದು ವೀರ್ಯವನ್ನು ಉತ್ಪಾದಿಸಲು ಕಾರಣವಾಗಿದೆ.
ಆವಕಾಡೊಬಟರ್‌ಫ್ರೂಟ್‌ಗಳು ವಿಟಮಿನ್ ಸಿ, ಇ, ಕೆ ಮತ್ತು ಬಿ -6, ರಿಬೋಫ್ಲಾವಿನ್, ನಿಯಾಸಿನ್, ಫೋಲೇಟ್, ಪ್ಯಾಂಟೊಥೆನಿಕ್ ಆಮ್ಲ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ಗಳ ಸಮೃದ್ಧ ಮೂಲವಾಗಿದೆ. ಆರೋಗ್ಯಕರ ಸೆಕ್ಸ್ ಡ್ರೈವ್‌ಗೆ ಫೋಲಿಕ್ ಆಸಿಡ್ ಮತ್ತು ವಿಟಮಿನ್ ಬಿ 6 ಅತ್ಯಗತ್ಯ. ಫೋಲಿಕ್ ಆಸಿಡ್ ದೇಹಕ್ಕೆ ಎನರ್ಜಿ ನೀಡುತ್ತದೆ ಮತ್ತು ವಿಟಮಿನ್ ಬಿ 6 ಹಾರ್ಮೋನುಗಳನ್ನು ಸ್ಥಿರಗೊಳಿಸುತ್ತದೆ.
ಕಲ್ಲಂಗಡಿ ಹಣ್ಣುಗಳು ಉದ್ನಿಗಗೊಳ್ಳಲು ಸಹಾಯ ಮಾಡುತ್ತದೆ ಮತ್ತು ಲೈಂಗಿಕ ಆಸೆಗಳನ್ನು ಹೆಚ್ಚಿಸುತ್ತದೆ ಎಂದು ವರದಿಯಾಗಿದೆ. ಅವುಗಳು ಸಿಟ್ರುಲ್ಲಿನ್ ಅನ್ನು ಹೊಂದಿರುತ್ತವೆ, ಇದು ದೇಹದಲ್ಲಿ ಅಮೈನೋ ಆಮ್ಲಗಳು ಮತ್ತು ಅರ್ಜಿನೈನ್ ಅನ್ನು ಬಿಡುಗಡೆ ಮಾಡುತ್ತದೆ. ವ್ಯಾಸ್ಕುಲರ್ ಆರೋಗ್ಯಕ್ಕೆ ಅರ್ಜಿನೈನ್ ಕಾರಣವಾಗಿದೆ.
ಬಾದಾಮಿಯಲ್ಲಿರುವ ಅರ್ಜಿನೈನ್ ರಕ್ತನಾಳಗಳು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ ಮತ್ತು ರಕ್ತ ಚಲನೆಯನ್ನು ಸುಧಾರಿಸುತ್ತದೆ. ಬಾದಾಮಿಗಳಲ್ಲಿ ಕಂಡುಬರುವ ಈ ಅಮೈನೊ ಆಸಿಡ್ ನಿಮಿರುವಿಕೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಪೀಚ್ ಹಣ್ಣುಗಳು ವಿಟಮಿನ್ ಸಿ ಯ ಹೆಚ್ಚಿನ ಮೂಲವಾಗಿದೆ, ಇದು ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ. ಅಲ್ಲದೆ, ಪೀಚ್‌ಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದ್ದು ಅದು ಬಂಜೆತನವನ್ನು ಕಡಿಮೆ ಮಾಡುತ್ತದೆ.
ಎನರ್ಜೈಸರ್ ಆಗಿ ಕೆಲಸ ಮಾಡುವ ಕಾಫಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರಚೋದನೆಯನ್ನು ಹೆಚ್ಚಿಸಲು ಕಾಫಿ ಮೆದುಳನ್ನು ಪ್ರಚೋದಿಸುತ್ತದೆ.
ಸೆಕ್ಸ್ ಡ್ರೈವ್ ಮತ್ತು ಲೈಂಗಿಕ ಕ್ರಿಯೆ ಸುಧಾರಿಸಲು ನೈಸರ್ಗಿಕ ಕೇಸರಿ ಸೇವಿಸಬೇಕು. ಕೇಸರಿ ಸ್ಟ್ಯಾಮಿನಾ ಮತ್ತು ಎನರ್ಜಿಯನ್ನು ಹೆಚ್ಚಿಸುತ್ತದೆ.
ಮಾಂಸದಲ್ಲಿ ಸತು, ವಿಟಮಿನ್ ಬಿ, ಕಬ್ಬಿಣ ಮತ್ತು ಪ್ರೋಟೀನ್ ಇರುತ್ತದೆ. ಈ ಕಾಪೌಂಡ್ ಪುರುಷರು ಮತ್ತು ಮಹಿಳೆಯರಿಗೆ ಕಾಮಾಸಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತವೆ.