ಜೀರೋ ಶುಗರ್‌ ಡಯಟ್:‌ ತೂಕ ಇಳಿಸಿಕೊಳ್ಳಲು ಸೂಪರ್ ಟೆಕ್ನಿಕ್

Suvarna News   | Asianet News
Published : Aug 19, 2020, 06:54 PM IST

ತೂಕ ಕಡಿಮೆ ಮಾಡಲು ಪ್ರಯತ್ನಿಸುವವರು ಸಕ್ಕರೆಯನ್ನು ವಿಲನ್‌ ಎಂದೇ ಪರಿಗಣಿಸುತ್ತಾರೆ. ಆದ್ದರಿಂದ ಯಾರಾದರೂ ವೈಯಿಟ್‌ ಲಾಸ್‌ ಜರ್ನಿ ಪ್ರಾರಂಭಿಸಿದರೆ ಮೊದಲು ತಮ್ಮ ಆಹಾರದಿಂದ ಸಂಪೂರ್ಣವಾಗಿ ಬಿಡಲು ಪ್ರಯತ್ನಿಸುವುದೆಂದರೆ ಸಕ್ಕರೆ. ಆದರೆ ಸಕ್ಕರೆ ಕೇವಲ ಚಹಾ ಮತ್ತು ಕಾಫಿಯಲ್ಲಿ  ಮಾತ್ರವಲ್ಲದೇ, ಪ್ಯಾಕ್‌ ಮಾಡಿದ ಎಲ್ಲಾ  ಆಹಾರದಲ್ಲಿ ಅಡಗಿರುತ್ತದೆ.

PREV
18
ಜೀರೋ ಶುಗರ್‌ ಡಯಟ್:‌ ತೂಕ ಇಳಿಸಿಕೊಳ್ಳಲು ಸೂಪರ್ ಟೆಕ್ನಿಕ್

ನಮ್ಮ ಡಯಟ್‌ನಿಂದ ಸಕ್ಕರೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದು ತೂಕ ಇಳಿಸಲು ಸಹಾಯ ಮಾಡುತ್ತದೆಯೋ ಅಥವಾ ಇದು ಸುಳ್ಳಾ ಎಂಬ ಮಾಹಿತಿ ಇಲ್ಲಿದೆ.

28

ಒಂದು ಟೀ ಚಮಚ ಸಕ್ಕರೆಯು 16 ಕ್ಯಾಲೊರಿಗಳನ್ನು ಹೊಂದಿರುತ್ತದೆ.

38

ಆದರೆ ನಾವು ದಿನನಿತ್ಯ ಸೇವಿಸುವ ಅನೇಕ ಆಹಾರ ಮತ್ತು ಪಾನೀಯಗಳಲ್ಲಿ ಸಕ್ಕರೆ ಇರುವುದರಿಂದ ಪ್ರತಿನಿತ್ಯ ಸಕ್ಕರೆ ಸೇವನೆ ಹೆಚ್ಚಾಗುತ್ತದೆ. ತೂಕ ಇಳಿಸಿಕೊಳ್ಳಲು ಕ್ಯಾಲೋರಿ ಕೊರತೆಯನ್ನು ಸೃಷ್ಟಿಸಬೇಕಾಗಿದೆ, ಆದರೆ ಹೆಚ್ಚು ಸಕ್ಕರೆ ಸೇವಿಸುತ್ತಿದ್ದರೆ ಇದು ಕಷ್ಟ.

48

ಅತಿಯಾದ ಸಕ್ಕರೆ ಸೇವನೆ ಬೊಜ್ಜು, ಹೃದ್ರೋಗ, ಟೈಪ್ 2 ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ದೀರ್ಘಕಾಲದ ಉರಿಯೂತ, ಪಿತ್ತ ಜನಕಾಂಗದ ಕಾಯಿಲೆ, ಹಲ್ಲು ಹುಳುಕು ಮತ್ತು ಹಲ್ಲಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ, ನೀವು ಪ್ರತಿದಿನ ಸೇವಿಸುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ವಿವಿಧ ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು.

58

ದೈನಂದಿನ ಚಹಾ ಅಥವಾ ಕಾಫಿಯಲ್ಲಿ ಸಕ್ಕರೆ ಸೇರಿಸುವುದನ್ನು ಬಿಟ್ಟು ಬಿಡುವುದು ಸುಲಭ. ಆದರೆ ಗುಪ್ತ ಮೂಲಗಳನ್ನು ತಿಳಿಯುವುದು ಹೇಗೆ?

68

ಆಹಾರದಲ್ಲಿ ಅಡಗಿರುವ ಸಕ್ಕರೆಯ ಮೂಲಗಳನ್ನು ಕಂಡುಹಿಡಿಯಲು, ಏನನ್ನಾದರೂ ಖರೀದಿಸುವ ಮೊದಲು ಆಹಾರದ ಲೇಬಲ್‌ಗಳನ್ನು ಸಂಪೂರ್ಣವಾಗಿ ಚೆಕ್‌ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.  ಕೆಚಪ್, ಸಲಾಡ್ ಡ್ರೆಸ್ಸಿಂಗ್, ಸಂಸ್ಕರಿಸಿದ ಆಹಾರಗಳು, ಸಾಸ್ ಮತ್ತು ಕೋಲಾದಲ್ಲಿ ಹೆಚ್ಚು ಸಕ್ಕರೆ ಅಂಶ ಇರುತ್ತದೆ.

78

ಎಲ್ಲಾ ವಿಧದ ಸಕ್ಕರೆ ಕೆಟ್ಟದ್ದಲ್ಲ. ಆದ್ದರಿಂದ ಎಲ್ಲಾ ರೀತಿಯ ಸಕ್ಕರೆಯನ್ನು ಆವಾಯ್ಡ್‌ ಮಾಡುವ ಅಗತ್ಯವಿಲ್ಲ. ಆ್ಯಡೆಡ್‌ ಶುಗರ್‌, ಟೇಬಲ್ ಶುಗರ್‌ ಮತ್ತು ಹೈ-ಫ್ರಕ್ಟೋಸ್ ಕಾರ್ನ್ ಸಿರಪ್‌ಗಳನ್ನು ಸಾಧ್ಯವಾದಷ್ಟು  ತಪ್ಪಿಸಬೇಕು.

88

ಹಣ್ಣುಗಳು ಮತ್ತು ತರಕಾರಿಗಳಲ್ಲಿರುವಂತಹ ಸಕ್ಕರೆ ನೈಸರ್ಗಿಕ ರೂಪದಲ್ಲಿದ್ದು  ದೇಹಕ್ಕೆ ಅಗತ್ಯ ಕೂಡ ಹೌದು. ಇದು ನಮ್ಮ ಆಹಾರದ ಒಂದು ಭಾಗವಾಗಿರಬೇಕು.

click me!

Recommended Stories