ಫಳಫಳ ಹೊಳೆವ ತ್ವಚೆಗೆ, ಕಲೆ ಮುಕ್ತ ಮುಖಕ್ಕೆ ​ ಮ್ಯಾಂಗೋ ಫೇಸ್​ ಪ್ಯಾಕ್​: ಸಿಹಿಕಹಿ ಚಂದ್ರು ಟಿಪ್ಸ್​

Published : Jun 07, 2026, 03:12 PM IST

ಈಗ ಮಾವಿನ ಹಣ್ಣಿನ ಸೀಸನ್ ಆಗಿದ್ದು, ಮಾವಿನ ಹಣ್ಣು, ಕಡ್ಲೆಹಿಟ್ಟು, ಮೊಸರು ಮತ್ತು ಜೇನುತುಪ್ಪ ಬಳಸಿ ಫೇಸ್ ಪ್ಯಾಕ್ ತಯಾರಿಸಬಹುದು. ನಟ ಸಿಹಿಕಹಿ ಚಂದ್ರು ಅವರು ಹಂಚಿಕೊಂಡಿರುವ ಈ ಮನೆಮದ್ದು, ಮುಖದ ಮೇಲಿನ ಕಪ್ಪು ಕಲೆ ಮತ್ತು ಜಿಡ್ಡನ್ನು ತೆಗೆದುಹಾಕಿ, ತ್ವಚೆಗೆ ಹೊಳಪನ್ನು ನೀಡುತ್ತದೆ.

PREV
16
ಮಾವಿನ ಹಣ್ಣಿನ ಫೇಸ್​ಪ್ಯಾಕ್​

ಇದೀಗ ಹೇಳಿಕೇಳಿ ಮಾವಿನ ಹಣ್ಣಿನ ಸೀಸನ್​. ಮೂರೇ ಮೂರು ಪದಾರ್ಥ ಬಳಸಿ ಮಾವಿನ ಹಣ್ಣಿನ ಫೇಸ್​ಪ್ಯಾಕ್​ ಮಾಡಿಕೊಳ್ಳಬಹುದು.

26
ಕಪ್ಪು ಕಲೆ ಮಾಯ

ಮುಖದ ಮೇಲಿನ ಕಲೆ, ಜಿಡ್ಡು, ಬ್ಲ್ಯಾಕ್​ ಮಾರ್ಕ್ಸ್​ ಎಲ್ಲವೂ ಸುಲಭದಲ್ಲಿ ಹೋಗುವುದಕ್ಕೆ ಈ ಫೇಸ್​ಪ್ಯಾಕ್​ ಪರಿಣಾಮಕಾರಿಯಾದ ಮನೆ ಔಷಧವಾಗಿದೆ.

36
ಸಿಹಿಕಹಿ ಚಂದ್ರು ಟಿಪ್ಸ್​

ಈ ಕುರಿತು ನಟ, ಸಿಹಿಕಹಿ ಚಂದ್ರು ಅವರು ತಿಳಿಸಿಕೊಟ್ಟಿದ್ದಾರೆ. ಮೂರೇ ಮೂರು ಪದಾರ್ಥ ಬಳಸಿ Mango Face Pack ಮಾಡುವ ವಿಧಾನದ ಕುರಿತು ಅವರು ಹೇಳಿದ್ದಾರೆ. jiohotstarkannadaದಲ್ಲಿ ಇದನ್ನು ಶೇರ್​ ಮಾಡಲಾಗಿದೆ.

46
ನುಣ್ಣಗೆ ರುಬ್ಬಿಕೊಳ್ಳಿ

ಮೊದಲಿಗೆ ಪಲ್ಪ್​ ರೆಡಿ ಮಾಡಿಕೊಳ್ಳಬೇಕು. ಕಾಲು ಕಪ್​ ಮಾವಿನ ಹಣ್ಣಿನ ತಿರುಳನ್ನು ತೆಗೆದು ಅದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣುಗೆ ರುಬ್ಬಿಕೊಳ್ಳಬೇಕು.

56
ಕಡ್ಲೆಹಿಟ್ಟು, ಮೊಸಲು, ಜೇನುತುಪ್ಪ ತಲಾ ಒಂದು ಚಮಚ

ಇದಕ್ಕೆ ಒಂದು ಚಮಚ ಕಡ್ಲೆಹಿಟ್ಟನ್ನು ಹಾಕಬೇಕು. ಇದರ ಜೊತೆಗೆ ಒಂದು ಚಮಚದಷ್ಟು ಮೊಸರನ್ನು ಹಾಕಬೇಕು. ಒಂದು ಚಮಚ ಜೇನುತುಪ್ಪವನ್ನೂ ಸೇರಿಸಬೇಕು.

66
20 ನಿಮಿಷ ಹಚ್ಚಿಕೊಳ್ಳಿ

ಇದನ್ನು ಚೆನ್ನಾಗಿ ಮಿಕ್ಸ್​ ಮಾಡಬೇಕು. ಕ್ರೀಮಿ ಟೆಕ್ಸ್​ಚರ್​ ಬರುವವರೆಗೂ ಬೀಟ್​ ಮಾಡಬೇಕು. ಬಳಿಕ ಮುಖಕ್ಕೆ ನೀಟಾಗಿ ಹಚ್ಚಿಕೊಂಡು 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆಯಬೇಕು. ಹೀಗೆ ಮಾಡುತ್ತಾ ಬಂದರೆ ಫಳಫಳ ತ್ವಚೆಯ ಜೊತೆ ಮುಖದ ಮೇಲಿರುವ ಕಪ್ಪುಕಲೆಗಳೂ ಮಾಯವಾಗುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories