ಚರ್ಮದ ಮೇಲೆ ಕಪ್ಪು ಕಲೆಗಳಾಗುತ್ತಿವೆಯಾ, ಒತ್ತಡವೂ ಆಗಿರಬಹುದು ಕಾರಣ

First Published | Nov 17, 2022, 6:00 PM IST

ಕೆಲಸದಿಂದ ಜನರು ಒತ್ತಡ, ಆತಂಕಕ್ಕೆ ಒಳಗಾಗುತ್ತಿರೋದು ಸಾಮಾನ್ಯ. ಕೆಲವು ಜನರು ದೈನಂದಿನ ಕಚೇರಿ, ಕೆಲಸಗಳಿಗೆ ಮರಳಿದ್ದಾರೆ, ಮತ್ತೆ ಕೆಲವರು ಹೈಬ್ರಿಡ್ ಕೆಲಸದ (Hybrind Work) ಮಾದರಿಗಳೊಂದಿಗೆ ಹೆಣಗಾಡುತ್ತಿದ್ದಾರೆ. ಇವೆಲ್ಲವುಗಳ ನಡುವೆ, ಒತ್ತಡವು ದೈನಂದಿನ ಜೀವನಕ್ಕೆ ಅಡ್ಡಿಯಾಗುತ್ತಿದೆ. ದೀರ್ಘ ಕಾಲದ ಒತ್ತಡವು ನಿಮ್ಮ ಇಡೀ ಚರ್ಮದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಎಸ್ಜಿಮಾ, ಮೊಡವೆ, ಸೋರಿಯಾಸಿಸ್ ಮತ್ತು ಕೂದಲು ಉದುರುವಿಕೆ ಸೇರಿ ಹಲವಾರು ಚರ್ಮದ ಸಮಸ್ಯೆಯನ್ನು ಉಂಟು ಮಾಡುತ್ತೆ. 
 

ಮೆದುಳು ಮತ್ತು ಚರ್ಮ ಪರಸ್ಪರ ಸಂಬಂಧ ಹೊಂದಿವೆ. ಮೆದುಳಿನ ಮಾನಸಿಕ ಒತ್ತಡ ಚರ್ಮದ ಮೇಲೆ ಪರಿಣಾಮ ಬೀರಬಹುದು. ಒತ್ತಡ, ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ (mental health) ಪರಿಸ್ಥಿತಿ ಹೊಸ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಅಸ್ತಿತ್ವದಲ್ಲಿರುವ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. 

ಆತಂಕವು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ (cortisol hormone) ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಇದು ನಿಮ್ಮ ಚರ್ಮದ ರಂಧ್ರಗಳನ್ನು ಬದಲಾಯಿಸುತ್ತದೆ ಮತ್ತು ಚರ್ಮದ ಎಣ್ಣೆ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ತೈಲವು ರಂಧ್ರಗಳನ್ನು ಮುಚ್ಚುತ್ತದೆ, ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ ಮತ್ತು ಮೊಡವೆಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ.  

Tap to resize

ಸೋರಿಯಾಸಿಸ್ (psoriasis) ಹೆಚ್ಚುವ ಸಾಧ್ಯತೆ

ಒತ್ತಡವು ವಿಶೇಷವಾಗಿ ಸೋರಿಯಾಸಿಸ್ ಎಂಬ ಉರಿಯೂತದ ಕಾಯಿಲೆಯನ್ನು ಪ್ರಚೋದಿಸುವ ಸಾಧ್ಯತೆಯಿದೆ, ಇದು ಚರ್ಮದ ಕೋಶಗಳು ಸಾಮಾನ್ಯಕ್ಕಿಂತ 10 ಪಟ್ಟು ವೇಗವಾಗಿ ಗುಣವಾಗಲು ಕಾರಣವಾಗುತ್ತದೆ, ಇದರಿಂದ ದದ್ದು ಕಾಣಿಸಿಕೊಳ್ಳುತ್ತದೆ. ಚರ್ಮದ ದದ್ದು ಎಸ್ಜಿಮಾಕ್ಕೂ ಕಾರಣವಾಗುತ್ತೆ. 
 

ಒತ್ತಡವು ಎಸ್ಜಿಮಾ (eczema) ಹೆಚ್ಚಲು ಕಾರಣವಾಗುವುದಲ್ಲದೇ ಇದು ಚರ್ಮದ ಕಲೆಗಳು ಉರಿಯೂತ, ತುರಿಕೆ, ಕೆಂಪು, ಬಿರುಕು ಮತ್ತು ಒರಟು ಚರ್ಮದ ಸಮಸ್ಯೆಗೆ ಕಾರಣವಾಗುತ್ತದೆ. ಗುಳ್ಳೆಗಳು ಸಹ ಕಾಣಿಸಿಕೊಳ್ಳಬಹುದು. ಆದುದರಿಂದ ನೀವು ಮನಸ್ಸನ್ನು ಸಾಧ್ಯವಾದಷ್ಟು ಸಂತೋಷವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ.

ರೊಸೇಸಿಯಾ ಸಾಮಾನ್ಯ ಚರ್ಮದ ಸಮಸ್ಯೆಗಳು

ರೊಸೇಸಿಯಾ ಮತ್ತೊಂದು ಸಾಮಾನ್ಯ ಚರ್ಮದ ಸಮಸ್ಯೆಯಾಗಿದ್ದು (skin problem), ಇದು ಒತ್ತಡದಿಂದಾಗಿ ಉಂಟಾಗುತ್ತದೆ ಅಥವಾ ಉಲ್ಬಣಗೊಳ್ಳುತ್ತದೆ. ಇದು ಮುಖದಲ್ಲಿ ಕೆಂಪಾಗಲು ಮತ್ತು ಗೋಚರಿಸುವ ಕೆಂಪು ರಕ್ತನಾಳಗಳಿಗೆ ಕಾರಣವಾಗುತ್ತದೆ. ಮೊಡವೆಗಳಂತಹ ಸಣ್ಣ, ಕೆಂಪು, ಉಬ್ಬುಗಳು ಸಹ ರೊಸೇಸಿಯಾದ ಲಕ್ಷಣಗಳಾಗಿವೆ. ಈ ರೋಗಲಕ್ಷಣಗಳು ವಾರಗಳು ಅಥವಾ ತಿಂಗಳುಗಳವರೆಗೆ ಕಾಣಿಸಿಕೊಳ್ಳುತ್ತವೆ, ಸ್ವಲ್ಪ ಸಮಯದ ನಂತರ ಕಣ್ಮರೆಯಾಗಬಹುದು.  

ಒತ್ತಡ ಮತ್ತು ಆತಂಕವು ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತೆ

ಒತ್ತಡ ಮತ್ತು ಆತಂಕ ಚರ್ಮದ ಸಮಸ್ಯೆಗಳನ್ನು ಮೀರಿ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ. ಒತ್ತಡ ಹೆಚ್ಚಾಗೋದರಿಂದ ಈ ಮೊದಲೇ ಇದ್ದ ಆರೋಗ್ಯ ಸಮಸ್ಯೆಗಳು ಮತ್ತಷ್ಟು ಹೆಚ್ಚುತ್ತವೆ. ಇದರಿಂದ ಮಾನಸಿಕ ಸಮಸ್ಯೆಗಳು ಉಂಟಾಗೋ ಸಾಧ್ಯತೆ ಕೂಡ ಇದೆ. 
 

ನಿರಂತರ ಮೊಡವೆಗಳು ಮತ್ತು ಹೆಚ್ಚು ಗಂಭೀರ ಚರ್ಮದ ಸಮಸ್ಯೆಗಳು

ಒತ್ತಡದಿಂದ ಉಂಟಾದ ಮೊಡವೆಗಳನ್ನು (pimple) ನಿವಾರಿಸಲು, ಸ್ಯಾಲಿಸಿಲಿಕ್ ಆಸಿಡ್ ಹೊಂದಿರುವ ಓವರ್-ದಿ-ಕೌಂಟರ್ ಮುಲಾಮುಗಳನ್ನು ಬಳಸೋದು ಉತ್ತಮ. ಇದು ರಂಧ್ರಗಳನ್ನು ಮುಚ್ಚುವ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುತ್ತದೆ, ಇದು ಮೊಡವೆಗಳಿಗೆ ಕಾರಣವಾಗುತ್ತದೆ. ಚರ್ಮದ ಎಣ್ಣೆಯನ್ನು (oily skin) ತೆಗೆದುಹಾಕಲು ಮೊಡವೆ ಸಮಸ್ಯೆ ಇರುವ ಜಾಗವನ್ನು ಸ್ವಚ್ಛಗೊಳಿಸಿ ಮತ್ತು ಉತ್ತಮ ಮಾಯಿಶ್ಚರೈಸರ್ ಬಳಸಿ. ಮೊಡವೆಗಳು ಮತ್ತು ಹೆಚ್ಚು ಗಂಭೀರವಾದ ಚರ್ಮದ ಸಮಸ್ಯೆಗಳಿಗೆ ಚರ್ಮದ ತಜ್ಞರನ್ನು ಭೇಟಿ ನೀಡಿ ಪರೀಕ್ಷೆ ನಡೆಸಿದರೆ ಉತ್ತಮ. 

ನಿದ್ರೆಯ ಕೊರತೆಯಿಂದ ಚರ್ಮಕ್ಕೆ ಹಾನಿ

ನಿದ್ರೆಯ ಕೊರತೆಯು ಚರ್ಮದ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ಒಂದು ವಿಷಚಕ್ರವಾಗಿರಬಹುದು: ನೀವು ಒತ್ತಡಕ್ಕೆ ಒಳಗಾದರೆ ನಿದ್ರೆ ಮಾಡಲು ಸಾಧ್ಯವಿಲ್ಲ. ನಿದ್ರೆ ಕೊರತೆಯು ಆಯಾಸ ಮತ್ತು ಕಿರಿಕಿರಿ ಹೆಚ್ಚಿಸುತ್ತೆ., ಇದು ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಿದ್ರೆಯ ಕೊರತೆಯು ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳು ಮತ್ತು ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಸಮಸ್ಯೆಯನ್ನುಂಟು ಮಾಡುತ್ತೆ.

Latest Videos

click me!