ಅರಿಶಿನ ಅಡುಗೆಮನೆಯಲ್ಲಿ ಪ್ರತಿದಿನ ಬಳಸುವ ಮಸಾಲೆ. ಅನೇಕ ವರ್ಷಗಳಿಂದ ಇದನ್ನು ಮನೆ ಮದ್ದಿನ ರೂಪದಲ್ಲೂ ಬಳಕೆ ಮಾಡಲಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಕೀಲು ನೋವಿನ ಸಸಮಸ್ಯೆ ಹೆಚ್ಚಾಗ್ತಿದ್ದು. ಅದಕ್ಕೆ ನೀವು ಈ ಅರಿಶಿನವನ್ನು ಔಷಧಿ ರೂಪದಲ್ಲಿ ಬಳಸ್ಬಹುದು.
2 ಟೇಬಲ್ ಸ್ಪೂನ್ ಅರಿಶಿನ ಪುಡಿ, 1 ಟೇಬಲ್ ಸ್ಪೂನ್ ತೆಂಗಿನ ಎಣ್ಣೆ ಮತ್ತು ಒಂದು ಚಿಟಿಕೆ ಕರಿಮೆಣಸು ಪುಡಿ ಇದಕ್ಕೆ ಅಗತ್ಯವಿದೆ. ನೀವು ಈ ಮೂರೂ ಪದಾರ್ಥವನ್ನು ಸೇರಿಸಿ ದಪ್ಪ ಪೇಸ್ಟ್ ತಯಾರಿಸಿ. ಸ್ವಲ್ಪ ಬೆಚ್ಚಗೆ ಮಾಡಿ ಮಲಗುವ ಮುನ್ನ ನೋವಿರುವ ಕೀಲುಗಳ ಮೇಲೆ ಹಚ್ಚಿ.
25
ಮೊಣಕಾಲು ನೋವಿಗೆ ಪರಿಹಾರ
ಸ್ವಲ್ಪ ಬೆಚ್ಚಗಿನ ಅರಿಶಿನ ಪೇಸ್ಟ್ ಅನ್ನು ಮೊಣಕಾಲಿನ ಕೀಲುಗಳ ಮೇಲೆ ವೃತ್ತಾಕಾರವಾಗಿ ಹಚ್ಚಿ. ನಂತರ ಬಟ್ಟೆಯಿಂದ ಮುಚ್ಚಿ ರಾತ್ರಿ ಪೂರ್ತಿ ಹಾಗೆಯೇ ಬಿಡಿ. ಇದು ಮೊಣಕಾಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಧ್ಯಯನದ ಪ್ರಕಾರ ಎರಡರಿಂದ ಮೂರು ವಾರಗಳಲ್ಲಿ ಮೊಣಕಾಲು ನೋವಿಗೆ ಪರಿಹಾರ ಸಿಗುತ್ತದೆ.
35
ಬೆನ್ನು ನೋವು
ಬರೀ ಮೊಣಕಾಲು ಮಾತ್ರವಲ್ಲ ಬೆನ್ನು ನೋವಿನಿಂದ ಬಳಲುತ್ತಿರುವವರು ಕೂಡ ಇದನ್ನು ಬಳಸಬಹುದು. ಬೆಚ್ಚಗಿನ ಅರಿಶಿನ ಪೇಸ್ಟ್ ಅನ್ನು ಬೆನ್ನಿನ ಕೆಳಭಾಗ ಹಾಗೂ ಬೆನ್ನೆಲುಬಿನ ಸುತ್ತಲಿನ ಸ್ನಾಯುಗಳ ಮೇಲೆ ಹಚ್ಚಿ. ರಾತ್ರಿ ಪೂರ್ತಿ ಬಿಡಿ. ಇದು ದೀರ್ಘಕಾಲದ ಬೆನ್ನುನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಲ್ಯಾಪ್ ಟಾಪ್, ಮೊಬೈಲ್ ಹೆಚ್ಚು ಬಳಸುವವರಿಗೆ ಈ ಸಮಸ್ಯೆ ಹೆಚ್ಚಾಗಿದೆ. ನಿಮಗೂ ಭುಜ, ಕುತ್ತಿಗೆ ನೋವು ಹೆಚ್ಚಿದ್ದರೆ ನೀವು ಅರಿಶಿನ ಪೇಸ್ಟ್ ಬಳಸಬಹುದು. ಬೆಚ್ಚಗಿನ ಅರಿಶಿನ ಪೇಸ್ಟ್ ಅನ್ನು ಕುತ್ತಿಗೆ ಹಾಗೂ ಭುಜದ ಮೇಲೆ ಕೇವಲ 7 ದಿನಗಳವರೆಗೆ ಹಚ್ಚಿ ನೋಡಿ. ಇದು ಕುತ್ತಿಗೆ ಮೇಲೆ ಆಗಿರುವ ಗಟ್ಟಿತನ ಮತ್ತು ದೀರ್ಘಕಾಲದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
55
ಮಣಿಕಟ್ಟಿನ ನೋವಿಗೆ ಔಷಧ
ಊದಿಕೊಂಡಿರುವ ಕಣಕಾಲು ಹಾಗೂ ಗಟ್ಟಿಯಾದ ಮಣಿಕಟ್ಟುಗಳ ಮೇಲೆ ರಾತ್ರಿ ಪೂರ್ತಿ ಬೆಚ್ಚಗಿನ ಅರಿಶಿನ ಪೇಸ್ಟ್ ಹಚ್ಚಿಟ್ಟರೆ ಇದು ಉತ್ತಮ ಪರಿಹಾರ ನೀಡಬಲ್ಲದು. ಇದು ಊತ ಮತ್ತು ಕೀಲುಗಳ ಗಟ್ಟಿತನವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.