Dog Bite First Aid: ನಾಯಿ ಕಚ್ಚಿದ್ರೆ ಭಯ ಪಡ್ಬೇಡಿ… ತಕ್ಷಣ ಈ ಚಿಕಿತ್ಸೆ ನೀಡಿ

Published : Jul 24, 2025, 08:29 AM ISTUpdated : Jul 24, 2025, 10:06 AM IST

ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳು ಕಚ್ಚಿರುವ ಪ್ರಕರಣಗಳು ಹೆಚ್ಚಾಗಿದೆ. ಒಂದು ವೇಳೆ ನಾಯಿ ಕಚ್ಚಿದ್ರೆ ಅದಕ್ಕೇನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ. 

PREV
16

ಕರ್ನಾಟಕದಲ್ಲಿ ಹಲವು ಕಡೆಗಳಲ್ಲಿ ಬೀದಿ ನಾಯಿ ಕಚ್ಚಿದ (dog bite) ಪ್ರಕರಣಗಳು ವರದಿಯಾಗಿವೆ. ನಾಯಿಗಳು ರಸ್ತೆಯಲ್ಲಿ ಓಡಾಡುತ್ತಿದ್ದರೆ ಭಯ ಆಗುತ್ತೆ. ಇಂತಹ ಸಂದರ್ಭದಲ್ಲಿ ನಾಯಿ ಕಚ್ಚಿದ್ರೆ ಏನು ಮಾಡಬೇಕು? ನಾಯಿ ಕಚ್ಚಿದ ತಕ್ಷಣ ಪ್ಯಾನಿಕ್ ಆಗಬೇಡಿ. ಬದಲಾಗಿ ತಕ್ಷಣ ಈ ವಿಧಾನಗಳನ್ನು ಅಳವಡಿಸಿಕೊಂಡು, ಗಂಭೀರ ಸಮಸ್ಯೆ ಉಂಟಾಗುವುದನ್ನು ತಪ್ಪಿಸಿ.

26

ನಾಯಿ ಕಚ್ಚಿದರೆ, ತಕ್ಷಣ ಈ ಕ್ರಮಗಳನ್ನು ತೆಗೆದುಕೊಳ್ಳಿ:

  • ಗಾಯವನ್ನು ತೊಳೆಯಿರಿ (wash the wound). ಸೌಮ್ಯವಾದ ಸೋಪ್ ಬಳಸಿ ಮತ್ತು ಐದು ರಿಂದ 10 ನಿಮಿಷಗಳ ಕಾಲ ಟ್ಯಾಪ್ ನೀರನ್ನು ಅದರ ಮೇಲೆ ಸುರಿಯಿರಿ.
  • ಸ್ವಚ್ಛವಾದ ಬಟ್ಟೆಯಿಂದ ರಕ್ತಸ್ರಾವವನ್ನು ಚೆನ್ನಾಗಿ ಒರೆಸಿ..
  • ನಿಮ್ಮ ಬಳಿ ಆಂಟಿ ಬಯೋಟಿಕ್ ಕ್ರೀಂ ಇದ್ದರೆ ಅದನ್ನು ಬಳಸಿ.
  • ಗಾಯದ ಮೇಲೆ ಸ್ಟಿರೈಡ್ ಬ್ಯಾಂಡೇಜ್ ಬಳಸಿ.
  • ಗಾಯವನ್ನು ಬ್ಯಾಂಡೇಜ್ (bandage) ಮಾಡಿ ಕೂಡಲೇ ನಿಮ್ಮ ವೈದ್ಯರನ್ನು ಭೇಟಿ ಮಾಡಿ.
  • ನಿಮ್ಮ ವೈದ್ಯರು ಗಾಯವನ್ನು ಪರೀಕ್ಷಿಸಿದ ನಂತರ ವೈದ್ಯರ ಸಲಹೆ ಪಡೆದು ನಂತರ ವೈದ್ಯರ ಸಲಹೆಯ ಮೇರೆ ಬ್ಯಾಂಡೇಜ್ ಪದೇ ಪದೇ ಬದಲಾಯಿಸಿ.
  • ಕೆಂಪು, ಊತ, ಹೆಚ್ಚಿದ ನೋವು ಮತ್ತು ಜ್ವರ ಸೇರಿದಂತೆ ಸೋಂಕಿನ ಚಿಹ್ನೆಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಬೇಡಿ.
36

ವೈದ್ಯರು ಏನು ಮಾಡುತ್ತಾರೆ?

ನಿಮ್ಮನ್ನು ಕಚ್ಚಿದ ನಾಯಿಯ ಬಗ್ಗೆ ಮತ್ತು ಅದು ಹೇಗೆ ಸಂಭವಿಸಿತು ಎಂಬುದರ ಕುರಿತು ನಿಮ್ಮ ವೈದ್ಯರು ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತಾರೆ. ಸೋಂಕಿಗೆ ಕಾಳಜಿಯ ಅಗತ್ಯ ಇದ್ದರೆ ಅವರು ಗಾಯವನ್ನು ಮತ್ತೆ ಸ್ವಚ್ಛಗೊಳಿಸುತ್ತಾರೆ, ಆಂಟಿ ಬಯೋಟಿಕ್ (anti biotic) ಕ್ರೀಂ ಹಚ್ಚುತ್ತಾರೆ ಮತ್ತು ಆಗ್ಮೆಂಟಿನ್‌ನಂತಹ ಆಂಟಿ ಬಯೋಟಿಕ್ ಹಚ್ಚೋದಕ್ಕೆ ಸಲಹೆ ನೀಡುತ್ತಾರೆ.

46

ಯಾವುದೇ ನಾಯಿ ಕಚ್ಚಿದ ನಂತರ, ಟೆಟನಸ್ ಇಂಜೆಕ್ಷನ್ (tetanus injection)ತೆಗೆದುಕೊಳ್ಳಬೇಕು. ಟೆಟನಸ್ ಇಮ್ಯುನೈಸೇಶನ್ 10 ವರ್ಷಗಳವರೆಗೆ ಉತ್ತಮ ಪರಿಣಾಮ ಬೀರುತ್ತದೆ, ಗಾಯವು ಹೆಚ್ಚು ಆಳವಾಗಿದ್ದರೆ ಮತ್ತು ನೀವು ಕೊನೆಯ ಚುಚ್ಚು ಮದ್ದು ಪಡೆದು ಐದು ವರ್ಷಗಳಿಗಿಂತ ಹೆಚ್ಚು ಸಮಯ ಕಳೆದಿದ್ದರೆ ನಿಮ್ಮ ವೈದ್ಯರು ಬೂಸ್ಟರ್ ಅನ್ನು ಶಿಫಾರಸು ಮಾಡಬಹುದು.

56

ನಾಯಿಯ ಕಡಿತದಿಂದ ಬರುವ ಬ್ಯಾಕ್ಟೀರಿಯಾಗಳು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತವೆ. ಸರಿಸುಮಾರು ಅರ್ಧದಷ್ಟು ನಾಯಿ ಕಡಿತಗಳು ಸ್ಟ್ಯಾಫಿಲೋಕೊಕಸ್, ಸ್ಟ್ರೆಪ್ಟೋಕೊಕಸ್ ಮತ್ತು ಪ್ಯಾಶ್ಚುರೆಲ್ಲಾ, ಹಾಗೆಯೇ ಕ್ಯಾಪ್ನೋಸೈಟೋಫಾಗ ಸೇರಿದಂತೆ ಬ್ಯಾಕ್ಟೀರಿಯಾವನ್ನು ಉತ್ಪಾದಿಸುತ್ತವೆ.

66

ಲಸಿಕೆ (rabies vaccine) ಹಾಕದ ನಾಯಿಗಳಿಂದ ರೇಬೀಸ್ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿಯೇ ವೈದ್ಯರು ನಾಯಿ ಕಚ್ಚಿದಾಗ ನಾಯಿಯ ವಿವರವನ್ನು ತಿಳಿಯಲು ಬಯಸುತ್ತಾರೆ. ನೀವು ಸಾಧ್ಯವಾದಷ್ಟು ನಾಯಿಯ ಕುರಿತಾದ ವಿವರಗಳನ್ನು ನೀಡುವುದು ಉತ್ತಮ.

Read more Photos on
click me!

Recommended Stories