ಸರಳವಾಗಿ ಹೇಳುವುದಾದರೆ ಹಸಿ ಆಲೂಗಡ್ಡೆಯಿಂದ ಬರುವ ರಸವೇ ಜ್ಯೂಸ್. ಆಲೂಗಡ್ಡೆ ಜ್ಯೂಸ್ ವಿಟಮಿನ್ ಬಿ (Vitamin B) ಮತ್ತು ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ರಂಜಕ ಮತ್ತು ತಾಮ್ರ ಸೇರಿದಂತೆ ಪೋಷಕಾಂಶಗಳನ್ನು ಹೊಂದಿದೆ. ಆಲೂಗಡ್ಡೆ ಜ್ಯೂಸ್ ಇಷ್ಟೆಲ್ಲ ಪೌಷ್ಟಿಕಾಂಶವನ್ನು ಹೊಂದಿರುವುದರಿಂದ, ಇದು ದೇಹಕ್ಕೆ ವ್ಯಾಪಕವಾದ ಪ್ರಯೋಜನಗಳನ್ನು ನೀಡುತ್ತದೆ.
ಆಲೂಗಡ್ಡೆಯನ್ನು(Potato) ನೋಡಿದಾಗ ಬರುವ ಕೊಬ್ಬು, ದುಂಡಗಿನ ತರಕಾರಿ ಈ ರೀತಿಯ ಆಲೋಚನೆಗಳು ಬಿಟ್ಟು ಬಿಡಿ. ಬದಲಾಗಿ ಅದರ ರಸ ಅಥವಾ ಜ್ಯೂಸ್(Potato Juice) ಹೆಚ್ಚಿನ ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಬಹುದು(Health Benefits) ಎಂದು ಯೋಚಿಸಿದ್ದೀರಾ? ಹೌದು, ಆಲೂಗೆಡ್ಡೆ ಜ್ಯೂಸ್ ಬಹಳಷ್ಟು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.
212
ಆಲೂಗಡ್ಡೆ ಜ್ಯೂಸ್ ಎಂದರೇನು?
ಸರಳವಾಗಿ ಹೇಳುವುದಾದರೆ, ಇದು ಹಸಿ ಆಲೂಗಡ್ಡೆಯಿಂದ ಬರುವ ರಸವೇ ಜ್ಯೂಸ್. ಆಲೂಗಡ್ಡೆ ಜ್ಯೂಸ್ ವಿಟಮಿನ್ ಬಿ ಮತ್ತು ಸಿ, ಪೊಟ್ಯಾಸಿಯಮ್ (pottasium), ಕ್ಯಾಲ್ಸಿಯಂ, ಕಬ್ಬಿಣ, ರಂಜಕ ಮತ್ತು ತಾಮ್ರ ಸೇರಿದಂತೆ ಪೋಷಕಾಂಶಗಳನ್ನು ಹೊಂದಿದೆ. ಆಲೂಗಡ್ಡೆ ಜ್ಯೂಸ್ ಇಷ್ಟೆಲ್ಲ ಪೌಷ್ಟಿಕಾಂಶವನ್ನು ಹೊಂದಿರುವುದರಿಂದ, ಇದು ದೇಹಕ್ಕೆ ವ್ಯಾಪಕವಾದ ಪ್ರಯೋಜನಗಳನ್ನು ನೀಡುತ್ತದೆ.
312
ಇದರ ಆರೋಗ್ಯ ಪ್ರಯೋಜನಗಳೇನು? ಆಲೂಗಡ್ಡೆ ಜ್ಯೂಸ್ ಒಟ್ಟಾರೆ ಆರೋಗ್ಯಕ್ಕೆ (Health) ಹಲವು ಪ್ರಯೋಜನಗಳನ್ನು ನೀಡುತ್ತದೆ. ಇವುಗಳಲ್ಲಿ ಕೆಲವು ಸಂಶೋಧನೆಯಿಂದ ಕೂಡ ಸಾಬೀತಾಗಿದೆ. ಅವುಗಳು ಯಾವುದೆಂದು ತಿಳಿಯಲು ಇದನ್ನು ಪೂರ್ತಿಯಾಗಿ ಓದಿ ತಿಳಿಯಿರಿ.
412
ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ: ಆಲೂಗಡ್ಡೆ ಗಮನಾರ್ಹ ಪ್ರಮಾಣದ ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಈ ಅಂಶವು ಶೀತ ಮತ್ತು ಸೋಂಕಿನ ವಿರುದ್ಧ ಹೋರಾಡುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ( Immune system) ಬಲಪಡಿಸಲು ಸಹಾಯ ಮಾಡುತ್ತದೆ. ಅಂದರೆ ನಿಮಗೆ ಹೆಚ್ಚಿನ ರೋಗಗಳು ಬಾರದಂತೆ ತಡೆಯುತ್ತದೆ.
512
ನಿಯಮಿತವಾಗಿ ಒಂದು ಲೋಟ ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ರೋಗಗಳು ದೂರವಾಗುತ್ತವೆ ಮತ್ತು ರೋಗನಿರೋಧಕ ಶಕ್ತಿ (immunity power) ಸುಧಾರಿಸುತ್ತದೆ ಎಂದು ಸಾಬೀತಾಗಿದೆ. ಆದುದರಿಂದ ಆರೋಗ್ಯದಿಂದ ಇರಲು ಬಯಸಿದರೆ ಒಂದು ಲೋಟ ಆಲೂಗಡ್ಡೆ ಜ್ಯೂಸ್ ಸೇವಿಸುತ್ತಿರಿ.
612
ಸಂಧಿವಾತವನ್ನು ನಿವಾರಿಸುತ್ತದೆ: ಆಲೂಗಡ್ಡೆ ಜ್ಯೂಸ್ ಉರಿಯೂತದ (Inflammation ) ವಿರುದ್ಧ ಹೋರಾಡುವ ಅಂಶಗಳನ್ನು ಹೊಂದಿದೆ. ಇದು ಊತ, ಉರಿಯೂತಕ್ಕೆ ಸಂಬಂಧಿಸಿದ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಲವು ಸಮಸ್ಯೆ ನಿವಾರಣೆ ಮಾಡಲು ಇದನ್ನು ಹಲವಾರು ವರ್ಷಗಳಿಂದ ಬಳಕೆ ಮಾಡಲಾಗುತ್ತಿದೆ.
712
ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ಸಂಧಿವಾತ ಮತ್ತು ಸಂಧಿವಾತಕ್ಕೆ (Arthritis) ಸಂಬಂಧಿಸಿದ ಇತರ ಕೀಲುಗಳು ಮತ್ತು ಬೆನ್ನು ನೋವುಗಳು ಗುಣವಾಗುತ್ತವೆ ಎಂದು ಹೇಳಲಾಗುತ್ತದೆ. ಅಲ್ಲದೇ ಆಲೂಗಡ್ಡೆಯನ್ನು ನೇರವಾಗಿ ಕೀಲುಗಳಿಗೆ ಹಾಕಿ ಉಜ್ಜುವುದು ನೋವನ್ನು ನಿವಾರಿಸುತ್ತದೆ.
812
ಹುಣ್ಣುಗಳನ್ನು ಗುಣಪಡಿಸುತ್ತದೆ: ಆಲೂಗಡ್ಡೆ ಜ್ಯೂಸ್ ಜಠರಗರುಳಿನ ಸಮಸ್ಯೆಗಳ ಮೇಲೆ ಪರಿಣಾಮ ಬೀರಿ, ಪರಿಹಾರ ನೀಡುತ್ತದೆ.ಇದು ಅಲ್ಸರ್ ಚಿಕಿತ್ಸೆಗೂ (ulcer treatment) ಸಹಾಯ ಮಾಡುತ್ತದೆ. ಪ್ರತಿದಿನ ಒಂದು ಲೋಟ ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ಹೊಟ್ಟೆಯ ಹುಣ್ಣುಗಳ ಬೆಳವಣಿಗೆ ತಡೆಯುವಲ್ಲಿ ಸಹಾಯ ಮಾಡುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಪ್ರೋಬಯಾಟಿಕ್ ಪಾನೀಯವಾಗಿಯೂ ಕೆಲಸ ಮಾಡುತ್ತದೆ.
912
ಪಿತ್ತಜನಕಾಂಗವನ್ನು ನಿರ್ವಿಷಗೊಳಿಸುತ್ತದೆ: ಪಿತ್ತಜನಕಾಂಗ ಮತ್ತು ಪಿತ್ತಕೋಶವನ್ನು ಸ್ವಚ್ಛಗೊಳಿಸಲು ಆಲೂಗಡ್ಡೆ ಜ್ಯೂಸ್ ಅತ್ಯಂತ ಸುಲಭದ ವಿಧಾನಗಳಲ್ಲಿ ಒಂದಾಗಿದೆ. ಹೆಪಟೈಟಿಸ್ ಚಿಕಿತ್ಸೆಗಾಗಿ ಜಪಾನಿಯರು ಈ ಜ್ಯೂಸ್ ಬಳಕೆ ಮಾಡುತ್ತಾರೆ. ಎದ್ದ ತಕ್ಷಣ ಅಥವಾ ಬೆಳಗಿನ ತಿಂಡಿಗೆ 30 ನಿಮಿಷಗಳ ಮೊದಲು ಪ್ರತಿದಿನ ಒಂದು ಲೋಟ ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ನಿರ್ವಿಶೀಕರಣ ಮಾಡಲು ಸಹಾಯ ಮಾಡುತ್ತದೆ.
1012
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ: ಆಲೂಗಡ್ಡೆ ಫೈಬರ್ (Fiber) ಮತ್ತು ವಿಟಮಿನ್ ಎ, ಬಿ-ಕಾಂಪ್ಲೆಕ್ಸ್ ಮತ್ತು ಸಿ ನಂತಹ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುತ್ತದೆ ಈ ಪೋಷಕಾಂಶಗಳು ದೇಹದಲ್ಲಿನ ಕೊಲೆಸ್ಟ್ರಾಲ್ (cholesterol) ಮಟ್ಟವನ್ನು ಮಾಡುತ್ತದೆ. ಒಂದು ಲೋಟ ಆಲೂಗಡ್ಡೆ ಜ್ಯೂಸ್ ಅನ್ನು ಅದರ ತಿರುಳನ್ನು ಸೋಸದೆ ಕುಡಿಯುವುದರಿಂದ ಒಟ್ಟಾರೆ ಆರೋಗ್ಯ ಮತ್ತು ಕೊಲೆಸ್ಟ್ರಾಲ್ ಮಟ್ಟಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬುದು ಸಾಬೀತಾಗಿದೆ.
1112
ಮೈಗ್ರೇನ್ ಸಮಸ್ಯೆಗೆ ಚಿಕಿತ್ಸೆ ನೀಡುತ್ತದೆ : ಕಚ್ಚಾ ಆಲೂಗಡ್ಡೆ ಮತ್ತು ಅವುಗಳ ರಸವನ್ನು ಯುರೋಪಿಯನ್ ಔಷಧದಲ್ಲಿ ಬಹಳಷ್ಟು ವರ್ಷಗಳಿಂದ ಬಳಸಲಾಗುತ್ತಿದೆ. ನೋವು, ಒತ್ತಡ ಮತ್ತು ಮೈಗ್ರೇನ್ (migrain) ಅನ್ನು ನಿವಾರಿಸಲು ಆಲೂಗಡ್ಡೆ ಅಥವಾ ಆಲೂಗಡ್ಡೆಯ ಜ್ಯೂಸ್ ಅನ್ನು ಹಣೆಯ ಮೇಲೆ ಉಜ್ಜಬಹುದು.
1212
ಮಲಬದ್ಧತೆಯನ್ನು (constipation) ನಿವಾರಿಸುತ್ತದೆ: ಆಲೂಗಡ್ಡೆ ಗಮನಾರ್ಹ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಇದು ಇದು ಮಲಬದ್ಧತೆಗೆ ಚಿಕಿತ್ಸೆ ನೀಡಲು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಸಹಾಯಕವಾಗಿದೆ. ತಿರುಳಿನೊಂದಿಗೆ ಒಂದು ಲೋಟ ಆಲೂಗಡ್ಡೆ ಜ್ಯೂಸ್ ಸೇವಿಸುವುದರಿಂದ ಜಿಐ ಟ್ರಾಕ್ಟ್ ಅನ್ನು ಸ್ವಚ್ಛಗೊಳಿಸಲು ಮತ್ತು ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.