ಬಿಲ್ವಪತ್ರೆ ತಿಂದ್ರೆ ಏನಾಗುತ್ತೆ?
ರೋಗ ನಿರೋಧಕ ಶಕ್ತಿ ಜಾಸ್ತಿ ಆಗುತ್ತೆ
ಯಾವ ರೋಗನೂ ಇಲ್ಲದೆ ಆರೋಗ್ಯವಾಗಿರಬೇಕಂದ್ರೆ ನಮ್ಮ ರೋಗ ನಿರೋಧಕ ಶಕ್ತಿ ಜಾಸ್ತಿ ಇರಬೇಕು. ನಿಮಗೆ ಪದೇ ಪದೇ ಏನೋ ಒಂದು ಅನಾರೋಗ್ಯ ಸಮಸ್ಯೆ, ರೋಗ ಬಂದ್ರೆ ನಿಮ್ಮ ರೋಗ ನಿರೋಧಕ ಶಕ್ತಿ ಕಡಿಮೆ ಇದೆ ಅಂತ ಅರ್ಥ.
ಆದ್ರೆ ರೋಗ ನಿರೋಧಕ ಶಕ್ತಿ ಕಡಿಮೆ ಇರೋರಿಗೆ ಬಿಲ್ವಪತ್ರೆ ತುಂಬಾ ಒಳ್ಳೇದು. ಈ ಎಲೆನ ಜಗಿದು ತಿಂದ್ರೆ ನಿಮ್ಮ ರೋಗ ನಿರೋಧಕ ಶಕ್ತಿ ಜಾಸ್ತಿ ಆಗುತ್ತೆ. ಈ ಎಲೆಗಳಲ್ಲಿ ವಿಟಮಿನ್ ಸಿ ತುಂಬಾ ಇರುತ್ತೆ. ಹಾಗೇ ಇದರಲ್ಲಿ ಯಾಂಟಿ ಆಕ್ಸಿಡೆಂಟ್‌ಗಳು ಕೂಡ ತುಂಬಾ ಇರುತ್ತೆ. ಇದು ರೋಗಗಳ ವಿರುದ್ಧ ಹೋರಾಡೋಕೆ ನಮ್ಮ ಶರೀರಕ್ಕೆ ತುಂಬಾ ಸಹಾಯ ಮಾಡುತ್ತೆ. ನಿಮಗೆ ರೋಗ ನಿರೋಧಕ ಶಕ್ತಿ ಜಾಸ್ತಿ ಇದ್ರೆ ನಿಮಗೆ ಕೆಮ್ಮು, ನೆಗಡಿ, ಜ್ವರ, ಬೇರೆ ಇನ್ಫೆಕ್ಷನ್‌ಗಳು ಬರೋ ಸಾಧ್ಯತೆ ಕಡಿಮೆ ಆಗುತ್ತೆ.