ಬೆನ್ನು ನೋವಿನ ಜೊತೆಗೆ ಕಂಡುಬರುವ ಇತರೆ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರವೇನು?
ಕುರ್ಚಿಯ ಮೇಲೆ ಅತಿಯಾಗಿ ಕುಳಿತು ಕಾಣಿಸಿಕೊಳ್ಳುವ ಬೆನ್ನು ನೋವು ಒಂದೆಡೆಯಾದರೆ ಕೆಲಸದ ಒತ್ತಡದಿಂದ ತಲೆ ನೋವಿನ ಸಮಸ್ಯೆಯನ್ನು ಕೂಡ ಉದ್ಯೋಗಿಗಳು ಅನುಭವಿಸುತ್ತಾರೆ. ಈ ತಲೆ ನೋವಿನ ಸಮಸ್ಯೆಯು ಅನೇಕ ಕಾರಣಗಳಿಂದಾಗಿ ಕಾಣಿಸಿಕೊಳ್ಳುತ್ತದೆ. ಅವುಗಳೆಂದರೆ ಒತ್ತಡ, ಕುರ್ಚಿಯ ಮೇಲೆ ಕುಳಿತುಕೊಳ್ಳುವ ಭಂಗಿ, ಸರಿಯಾಗಿ ನೀರು ಸೇವಿಸದಿರುವುದು ಹಾಗೂ ಹೆಚ್ಚಿನ ಸಮಯ ಕಂಪ್ಯೂಟರ್ ಅನ್ನು ನೋಡುವುದರಿಂದಲೂ ಉದ್ಭವಿಸುತ್ತದೆ. ಈ ಆರೋಗ್ಯ ಸಮಸ್ಯೆಯು ಮಾರಣಾಂತಿಕವಲ್ಲವೆಂದೆನಿಸಿದರೂ ಕಾಲಕ್ರಮೇಣ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ ಹೋಗುತ್ತದೆ. ತಲೆ ನೋವಿನ ಲಕ್ಷಣಗಳನ್ನು ಗಮನಿಸಿದಾಗ ತಲೆಯ ಎರಡೂ ಬದಿಯಲ್ಲಿ ನೋವು ಅಥವಾ ಒತ್ತಡ, ಹಣೆಯಲ್ಲಿ ಬಿಗಿತ ಉಂಟಾಗುವುದು, ನೆತ್ತಿ, ಕುತ್ತಿಗೆ ಮತ್ತು ಭುಜಗಳಲ್ಲಿ ಸ್ನಾಯುಗಳ ಸೆಳೆತ ಉಂಟಾಗುವುದು, ಭಾವನಾತ್ಮಕವಾಗಿ ಒತ್ತಡ ಉಂಟಾಗುವುದು ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು ಎಂದು ತಜ್ಞರು ವಿವರಿಸಿದ್ದಾರೆ.