Bae Leaves Benefits: ಖಾಲಿ ಹೊಟ್ಟೆಗೆ ಈ ಎಲೆ ಅಗೆದು ತಿಂದ್ರೆ ಸಾಕು… ಶುಗರ್, ಹೃದ್ರೋಗ ಸೇರಿ ಹಲವು ಸಮಸ್ಯೆಯಿಂದ ಮುಕ್ತಿ

Published : Jun 13, 2025, 05:48 PM IST

ಬಿಲ್ವಪತ್ರೆ ಒಂದು ಪವಿತ್ರ ಮತ್ತು ಔಷಧೀಯ ಸಸ್ಯವಾಗಿದ್ದು, ಇದು ಜೀರ್ಣಕ್ರಿಯೆ, ಮಧುಮೇಹ, ಹೃದಯದ ಆರೋಗ್ಯ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳಲ್ಲಿ ಪ್ರಯೋಜನಕಾರಿಯಾಗಿದೆ. ಇದರ ಎಲೆಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. 

PREV
16

ಭಾರತದಲ್ಲಿ ಬಿಲ್ವಪತ್ರೆಯನ್ನು (bael leaf)ತುಂಬಾನೆ ಪವಿತ್ರ ಮರವೆಂದು ಪರಿಗಣಿಸಲಾಗುತ್ತದೆ, ಇದು ಶಿವನಿಗೆ ಪ್ರಿಯವಾದ ಮರವಾಗಿದ್ದು, ಶಿವನನ್ನು ಮೆಚ್ಚಿಸಲು ಈ ಗಿಡದ ಎಲೆಗಳನ್ನು ಬಳಕೆ ಮಾಡಲಾಗುತ್ತೆ. ಆದರೆ ಅದರ ಮಹತ್ವವು ಧಾರ್ಮಿಕವಾಗಿ ಮಾತ್ರವಲ್ಲದೆ ಔಷಧೀಯವಾಗಿಯೂ ಇದೆ. ಆಯುರ್ವೇದದಲ್ಲಿ,(Ayurveda) ಬಿಲ್ವಪತ್ರೆಯ ಹಣ್ಣುಗಳು, ಎಲೆಗಳು, ಬೇರುಗಳು ಮತ್ತು ಕಾಂಡ - ಎಲ್ಲವನ್ನೂ ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಬಿಲ್ವಪತ್ರೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು, ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

26

ಬಿಲ್ವಪತ್ರೆ ಮತ್ತು ಕ್ಯಾನ್ಸರ್ ಕುರಿತು ಸಂಶೋಧನೆ

ಜರ್ನಲ್ ಆಫ್ ಹರ್ಬಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಸಂಶೋಧನೆಯು ಬಿಲ್ವಪತ್ರೆ ಎಲೆ ಹೃದಯವನ್ನು ಆರೋಗ್ಯಕರವಾಗಿಡಲು ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಪರಿಣಾಮಕಾರಿ ಎಂದು ಕಂಡುಹಿಡಿದಿದೆ. ಬಕ್ಸಾರ್‌ನ ಡಾ. ಅರುಣ್ ಕುಮಾರ್ ನೇತೃತ್ವದ ವಿಜ್ಞಾನಿಗಳ ತಂಡವು ಇಲಿಗಳ ಮೇಲೆ ಸ್ತನ ಕ್ಯಾನ್ಸರ್ (breast cancer) ಮಾದರಿಯಲ್ಲಿ ಬೇಲ್ ಹಣ್ಣನ್ನು ಬಳಸಿತು. ಪರಿಣಾಮವಾಗಿ, ಗೆಡ್ಡೆಯ ಗಾತ್ರವು ಸುಮಾರು 79% ರಷ್ಟು ಕಡಿಮೆಯಾಗಿದೆ.

36

ಬಿಲ್ವಪತ್ರೆ ಹಲವು ಪೋಷಕಾಂಶಗಳ ಮೂಲ

ಉತ್ತರ ಪ್ರದೇಶದ ವಿಜ್ಞಾನಿಗಳು ಬಿಲ್ವ ಪತ್ರೆಯ ಬಗ್ಗೆ ಸಂಶೋಧನೆ ನಡೆಸಿ, ಆಸ್ತಮಾ, ಅತಿಸಾರ, ಇನ್ಸುಲಿನ್ ಮಟ್ಟವನ್ನು ಸಮತೋಲನಗೊಳಿಸುವುದು, ಕೂದಲನ್ನು ಬಲಪಡಿಸುವುದು ಮತ್ತು ತಾಯಿಯ ಹಾಲಿನ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಇದು ಸಹಾಯ ಮಾಡುತ್ತದೆ ಎಂಬುದನ್ನು ಕಂಡುಹಿಡಿದಿದ್ದಾರೆ. ಅಷ್ಟೇ ಅಲ್ಲ, ಬಿಲ್ವಪತ್ರೆಯಲ್ಲಿ ವಿಟಮಿನ್ ಎ, ಸಿ, ಬಿ6 ಹಾಗೂ ಕ್ಯಾಲ್ಸಿಯಂ, ಫೈಬರ್ ಮತ್ತು ಪೊಟ್ಯಾಸಿಯಮ್‌ನಂತಹ ಅಂಶಗಳಿವೆ. ಇದು ಸೋಂಕಿನಿಂದ ರಕ್ಷಿಸುವ ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿದೆ.

46

ಜೀರ್ಣಕ್ರಿಯೆ ಉತ್ತಮ

ಅಜೀರ್ಣ, ಗ್ಯಾಸ್, ಬರ್ನಿಂಗ್ ಸೆನ್ಸೇಶನ್ (burning sensation) ಅಥವಾ ಹೊಟ್ಟೆ ಉಬ್ಬರದಂತಹ ಹೊಟ್ಟೆಯ ಸಮಸ್ಯೆಗಳನ್ನು ಹೊಂದಿರುವ ಜನರಿಗೆ, ಬಿಲ್ವ ಪತ್ರೆವು ತುಂಬಾನೆ ಪ್ರಯೋಜನ ನೀಡುತ್ತೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಲ್ವ ಪತ್ರೆವನ್ನು ಅಗಿಯೋದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದರಲ್ಲಿ ಫೈಬರ್ ಸಮೃದ್ಧವಾಗಿದ್ದು, ಇದು ಹೊಟ್ಟೆಯನ್ನು ಸ್ವಚ್ಛವಾಗಿರಿಸುತ್ತದೆ.

56

ಮಧುಮೇಹ ನಿಯಂತ್ರಣ

ಮಧುಮೇಹವನ್ನು (diabetes) ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ, ಆದರೆ ಬಿಲ್ವ ಪತ್ರೆವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಬಹುದು ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

66

ಮುನ್ನೆಚ್ಚರಿಕೆಗಳು ಮತ್ತು ಸೇವನೆಯ ವಿಧಾನ

ಬಿಲ್ವ ಪತ್ರೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು (blood sugar level) ನಿಯಂತ್ರಿಸುತ್ತದೆ, ಆದ್ದರಿಂದ ಮಧುಮೇಹ ರೋಗಿಗಳು ಇದನ್ನು ನಿಯಮಿತವಾಗಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಆದರೆ ಋತುಮಾನಕ್ಕೆ ಅನುಗುಣವಾಗಿ ಇದನ್ನು ಸೇವಿಸಬೇಕು. ವಿಶೇಷವಾಗಿ ಚಳಿಗಾಲದಲ್ಲಿ, ಒಂದಕ್ಕಿಂತ ಹೆಚ್ಚು ಬಿಲ್ವ ಪತ್ರೆ ತಿನ್ನುವುದು ಹಾನಿಕಾರಕವಾಗಿದೆ.

Read more Photos on
click me!

Recommended Stories