ಮೊಟ್ಟೆ ಬೇಕು ಆರೋಗ್ಯಕ್ಕೆ, ಬಿಟ್ಟರೆ ಏನಾಗಬಹುದು ಅನ್ನೋ ಕಲ್ಪನೆ ಇದ್ಯಾ?

First Published Jul 21, 2022, 4:08 PM IST

ಮೊಟ್ಟೆಗಳಿಂದ ತುಂಬಾ ಆರೋಗ್ಯ ಪ್ರಯೋಜನಗಳಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅದ್ರ ಬಗ್ಗೆ ನಾವು ಏನು ಹೇಳದೇ ಇದ್ದರೂ, ಪ್ರತಿಯೊಬ್ಬರೂ ಇದರ ಬಗ್ಗೆ ತಿಳಿದುಕೊಂಡಿರುತ್ತಾರೆ. ಮೊಟ್ಟೆ ತಿನ್ನೋದರ ಪ್ರಯೋಜನಗಳಲ್ಲಿ ತೂಕ ನಿಯಂತ್ರಿಸೋದು, ಕಣ್ಣಿನ ಆರೋಗ್ಯ ಸುಧಾರಿಸೋದು, ಪ್ರೋಟೀನ್ ಮತ್ತು ಒಮೆಗಾ -3 ಆಸಿಡ್ ಗಳಂತಹ ಅನೇಕ ಪೋಷಕಾಂಶಗಳನ್ನು ಒದಗಿಸೋದು ಇತ್ಯಾದಿ ಸೇರಿವೆ. 

ಮೊಟ್ಟೆ(Egg)  ಪ್ರೋಟೀನ್ ನ ಅತ್ಯುತ್ತಮ ಮೂಲ, ಜೊತೆಗೆ ವಿಟಮಿನ್ ಬಿ 12, ಬಯೋಟಿನ್, ಥಯಾಮಿನ್ ಮತ್ತು ಸೆಲೆನಿಯಂ ಸಹ ಸೇರಿವೆ. ಅಷ್ಟೇ ಅಲ್ಲ ಮೊಟ್ಟೆ ಅಗತ್ಯವಿರುವ ಎಲ್ಲಾ ಒಂಬತ್ತು ಅಮೈನೋ ಆಮ್ಲಗಳನ್ನು ಹೊಂದಿವೆ. ಅವು ದೇಹದ ಅಗತ್ಯಗಳನ್ನು ಪೂರೈಸುತ್ತವೆ. ಅಲ್ಲದೇ ಮೊಟ್ಟೆಯಲ್ಲಿ ವಿಟಮಿನ್ ಎ, ಬಿ, ಕ್ಯಾಲ್ಸಿಯಂ, ರಂಜಕದಂತಹ ಪೋಷಕಾಂಶಗಳ ಆಗರವಾಗಿದೆ.

ಪ್ರತಿದಿನ ಮೊಟ್ಟೆ ತಿನ್ನೋದ್ರಿಂದ ಹೃದಯ(Heart) ಆರೋಗ್ಯಕರವಾಗಿಡಲು ಸಹಕರಿಸುತ್ತೆ. ಮನಸ್ಸಿನ ಕಾರ್ಯನಿರ್ವಹಣೆಯನ್ನು ಉತ್ತೇಜಿಸುತ್ತೆ, ಅಂದ್ರೆ ಮನಸು ಸಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೆ. ಜೊತೆಗೆ ಮೂಳೆಗಳನ್ನು ಬಲಪಡಿಸುತ್ತೆ. ಆದರೆ ನೀವು ಮೊಟ್ಟೆ ತಿನ್ನದಿದ್ದರೆ ಏನಾಗುತ್ತೆ ಎಂದು ಯೋಚಿಸಿದ್ದೀರಾ? ಈ ಬಗ್ಗೆ ವಿಜ್ಞಾನವು ಏನು ಹೇಳುತ್ತೆ  ಎಂದು ನೋಡೋಣ.

ಕೊಲೆಸ್ಟ್ರಾಲ್(Cholestrol) ಕಡಿಮೆ ಮಾಡಬಹುದು

ಒಂದು ಅಧ್ಯಯನದ ಪ್ರಕಾರ, ಮೊಟ್ಟೆಯ ಹಳದಿ  ಹೆಚ್ಚಿನ ಕೊಲೆಸ್ಟ್ರಾಲ್ ಅಂಶ ಹೊಂದಿರುತ್ತೆ. ಇದರರ್ಥ ಮೊಟ್ಟೆ ತಿನ್ನದಿರೋದು ನಿಮ್ಮ ಕೊಲೆಸ್ಟ್ರಾಲ್ ಅಪಾಯವನ್ನು ಕಡಿಮೆ ಮಾಡುತ್ತೆ. ನೀವು ಪ್ರತಿ ವಾರ ಒಂದಕ್ಕಿಂತ ಕಡಿಮೆ ಮೊಟ್ಟೆ ಸೇವಿಸಿದರೆ, ನೀವು ಸುರಕ್ಷಿತವಾಗಿರಬಹುದು.

ಮೊಡವೆ(Pimples) ತಡೆಗಟ್ಟಬಹುದು

ಒಂದು ವರದಿ ಪ್ರಕಾರ, ಪ್ರೊಜೆಸ್ಟರಾನ್ ಹಾರ್ಮೋನ್ ಹೆಚ್ಚಳದಿಂದ ಮೊಡವೆ ಉಂಟಾಗುತ್ತೆ, ಇದು ಮೊಟ್ಟೆಗಳಲ್ಲಿ ಹೆಚ್ಚು ಕಂಡುಬರುತ್ತೆ. ದೇಹವು ಸ್ವತಃ ಈ ಹಾರ್ಮೋನುಗಳನ್ನು ಉತ್ಪಾದಿಸುತ್ತದೆಯಾದರೂ, ಮೊಟ್ಟೆ ತಿನ್ನುವ ಮೂಲಕ ನೀವು ನಿಮ್ಮ ದೇಹಕ್ಕೆ ಹೆಚ್ಚುವರಿ ಹಾರ್ಮೋನುಗಳು ಸೇರುತ್ತವೆ. ಆದ್ದರಿಂದ ನೀವು ಇದ್ದಕ್ಕಿದ್ದಂತೆ ಚರ್ಮದ ಮೇಲೆ ಕೆಲವು ಕಲೆಗಳನ್ನು ನೋಡಿದರೆ, ನೀವು ಎಷ್ಟು ಮೊಟ್ಟೆ ಸೇವಿಸುತ್ತೀರಿ ಎಂದು ಗಮನದಲ್ಲಿಡಿ.

ಹೃದ್ರೋಗದ(Heart diseases) ಅಪಾಯ ಕಡಿಮೆ ಮಾಡಬಹುದು

ನೀವು ಪ್ರತಿದಿನ ಒಂದು ಮೊಟ್ಟೆ ತಿನ್ನಬಹುದು, ಇದು ಆರೋಗ್ಯಕ್ಕೆ ಪ್ರಯೋಜನಕಾರಿ. ನೀವು ಮಧುಮೇಹದಂತಹ ಆರೋಗ್ಯ ಸ್ಥಿತಿಯಿಂದ ಬಳಲುತ್ತಿದ್ದರೆ, ಹೆಚ್ಚು ಮೊಟ್ಟೆ ತಿನ್ನೋದರಿಂದ ಹೃದ್ರೋಗ ಬರುವ ಸಾಧ್ಯತೆ ಹೆಚ್ಚಾಗಬಹುದು. ದಿನಕ್ಕೆ ಒಂದಕ್ಕಿಂತ ಹೆಚ್ಚು ಮೊಟ್ಟೆ ತಿನ್ನುವ ಪುರುಷರು ಹೆಚ್ಚಿನ ಅಪಾಯ ಹೊಂದಿರುತ್ತಾರೆ ಎಂದು ಒಂದು ಅಧ್ಯಯನವು ಕಂಡುಕೊಂಡಿದೆ

ಹೊಟ್ಟೆ ಉಬ್ಬರ ನಿವಾರಣೆ

ಒಂದು ವರದಿಯ ಪ್ರಕಾರ, ಮೊಟ್ಟೆ ಕೆಲವು ಜನರಿಗೆ ಉತ್ತಮ ಉಪಾಹಾರ. ಆದರೆ ಅನೇಕ ಜನರು ಮೊಟ್ಟೆ ತಿಂದ ನಂತರ ಹೊಟ್ಟೆ ಉಬ್ಬರ ಅಥವಾ ಗ್ಯಾಸ್(Gas) ಸಮಸ್ಯೆಯಿಂದ ಬಳಲುತ್ತಾರೆ. ಇದು ನಿಮ್ಮನ್ನು ಉಬ್ಬಸ ಸಮಸ್ಯೆಗೆ ದೂಡುವುದು ಮಾತ್ರವಲ್ಲದೇ, ನೀವು ಕಿಬ್ಬೊಟ್ಟೆ ನೋವು, ತಲೆನೋವು ಮತ್ತು ಒತ್ತಡ ಸಹ ಅನುಭವಿಸಬಹುದು.

ಮಲಬದ್ಧತೆ(Constipation) ತಡೆಗಟ್ಟಬಹುದು

ಮೊಟ್ಟೆ ಸಾಕಷ್ಟು ಪ್ರೋಟೀನ್  ಹೊಂದಿರುತ್ತೆ, ಆದರೆ ಅವುಗಳಲ್ಲಿ ನಾರಿನಂಶವಿಲ್ಲ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ. ನಾರಿನಂಶದ ಕೊರತೆಯು ಮಲಬದ್ಧತೆಗೆ ಕಾರಣವಾಗುತ್ತೆ. ಇದರರ್ಥ ನೀವು ಮೊಟ್ಟೆ ತಿನ್ನದಿದ್ದರೆ, ನೀವು ಮಲಬದ್ಧತೆ ತಪ್ಪಿಸಬಹುದು. ಯಾವಾಗಲೂ ಹೆಚ್ಚಿನ ನಾರಿನಂಶವಿರುವ ಆಹಾರಗಳೊಂದಿಗೆ ಮೊಟ್ಟೆ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ.

click me!