ಕೂದಲಿಗೆ ಎಣ್ಣೆ ಹಚ್ಚುವಾಗ ಭಾರತೀಯರು ಮಾಡ್ತಾರೆ ಈ ತಪ್ಪು

Published : Sep 08, 2026, 07:28 PM IST

hair care tips : ತಲೆ ಕೂದಲಿನ ಆರೈಕೆ ಇತ್ತೀಚಿನ ದಿನಗಳಲ್ಲಿ ಸವಾಲಾಗಿದೆ. ಎಣ್ಣೆ ಯಾವಾಗ, ಎಷ್ಟು ಮತ್ತು ಹೇಗೆ ಹಚ್ಚಬೇಕು ಎಂಬುದು ನಮಗೆ ತಿಳಿದಿರಬೇಕು. ಇಲ್ಲ ಅಂದ್ರೆ ಕೂದಲ ಆರೋಗ್ಯ ಹಾಳಾಗೋದು ಗ್ಯಾರಂಟಿ.

PREV
14
ರಾತ್ರಿ ಪೂರ್ತಿ ಎಣ್ಣೆ ಹಚ್ಕೊಂಡು ಮಲಗಿದ್ರೆ ಏನಾಗುತ್ತೆ?

ಹಿಂದೆ ರಾತ್ರಿ ತಲೆಗೆ ಎಣ್ಣೆ ಹಚ್ಚಿ ಮಲಗ್ತಿದ್ರು. ಬೆಳಿಗ್ಗೆ ತಲೆ ಸ್ನಾನ ಮಾಡುವ ಅಭ್ಯಾಸ ಇತ್ತು. ಆದ್ರೆ ತಲೆ ಕೂದಲಿನ ಆರೈಕೆಗೆ ಇದು ಸೂಕ್ತವಲ್ಲ ಎನ್ನುತ್ತಾರೆ ತಜ್ಞರು. ರಾತ್ರಿ ಪೂರ್ತಿ ಕೂದಲಿನಲ್ಲಿ ಎಣ್ಣೆಯಿದ್ರೆ ಕೂದಲಿನ ಆರೋಗ್ಯಕ್ಕೆ ಉತ್ತಮ ಎಂಬುದೇನಿಲ್ಲ. ತಲೆ ಕೂದಲಿನಲ್ಲಿ ಎಣ್ಣೆ ಹಲವು ಗಂಟೆಗಳ ಕಾಲ ಇದ್ದರೆ ಧೂಳು, ಕೊಳೆ ಮತ್ತು ಬೆವರು ಅದಕ್ಕೆ ಅಂಟಿಕೊಳ್ಳುತ್ತೆ. ಇದರಿಂದ ತಲೆಯ ಚರ್ಮದಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ರಾತ್ರಿ ಪೂರ್ತಿ ಎಣ್ಣೆ ಹಚ್ಚಿಕೊಂಡು ಮಲಗುವ ಬದಲು, ಶಾಂಪೂ ಮಾಡುವ ಸ್ವಲ್ಪ ಸಮಯದ ಮೊದಲು ಎಣ್ಣೆ ಹಚ್ಚುವುದು ಉತ್ತಮ.

24
ಒಣಕೂದಲಿಗೆ ಎಣ್ಣೆ

ಅನೇಕರು ತಮ್ಮದು ಒಣ ಕೂದಲು ಎನ್ನುವ ಕಾರಣ ಹೇಳಿ, ಬೇಕಾಬಿಟ್ಟಿ ಎಣ್ಣೆಯನ್ನು ಹಚ್ಚಿಕೊಳ್ತಾರೆ. ಇದ್ರ ಅಗತ್ಯ ಕೂಡ ಇಲ್ಲ. ಕೂದಲನ್ನು ಸ್ವಲ್ಪ ತೇವಗೊಳಿಸಿದ ನಂತರ ಎಣ್ಣೆ ಹಚ್ಚಿದರೆ ಅದು ಕೂದಲಿಗೆ ಸುಲಭವಾಗಿ ಹರಡುತ್ತದೆ ಮತ್ತು ಹೆಚ್ಚು ಎಣ್ಣೆ ಬಳಸಬೇಕಾಗುವುದಿಲ್ಲ.

34
ಶಾಂಪೂ ಮಾಡುವ ಮೊದಲು ಹೀಗೆ ಮಾಡಿ

ಶಾಂಪೂ ಮಾಡುವ ಸುಮಾರು 5 ರಿಂದ 10 ನಿಮಿಷಗಳ ಮೊದಲು ಕೂದಲು ಮತ್ತು ಕೂದಲಿನ ಬುಡಕ್ಕೆ ಸ್ವಲ್ಪ ಪ್ರಮಾಣದ ಎಣ್ಣೆ ಹಚ್ಚಿ. ಎಣ್ಣೆಯನ್ನು ಹಚ್ಚುವಾಗ ಚರ್ಮವನ್ನು ಜೋರಾಗಿ ಉಜ್ಜಬೇಡಿ. ಉಗುರುಗಳಿಂದ ಕೆರೆದುಕೊಳ್ಳುವುದನ್ನೂ ತಪ್ಪಿಸಿ. ಬೆರಳ ತುದಿಗಳಿಂದ ನಿಧಾನವಾಗಿ ಹಚ್ಚಿ. ಮಸಾಜ್‌ ಮಾಡಿ. ಎಣ್ಣೆಯನ್ನು ಹಚ್ಚಿದ ನಂತರ ಸ್ವಲ್ಪ ಸಮಯ ಬಿಟ್ಟು ಶಾಂಪೂ ಬಳಸಿ ಕೂದಲನ್ನು ಸ್ವಚ್ಛವಾಗಿ ತೊಳೆಯಿರಿ.

44
ಹೆಚ್ಚು ಎಣ್ಣೆ ಎಂದರೆ ಹೆಚ್ಚು ಆರೈಕೆ ಅಲ್ಲ

ಕೂದಲಿಗೆ ಎಣ್ಣೆ ಹಚ್ಚುವ ಉದ್ದೇಶ ಕೂದಲನ್ನು ಅತಿಯಾಗಿ ಎಣ್ಣೆಯುಕ್ತವಾಗಿಸುವುದಲ್ಲ. ಕಡಿಮೆ ಪ್ರಮಾಣದಲ್ಲಿ, ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಎಣ್ಣೆ ಬಳಸುವುದು ಮುಖ್ಯ. ರಾತ್ರಿ ಪೂರ್ತಿ ಎಣ್ಣೆ ಹಚ್ಚಿಕೊಂಡು ಮಲಗುವ ಅಭ್ಯಾಸವಿದ್ದರೆ, ಇನ್ನು ಮುಂದೆ ಶಾಂಪೂ ಮಾಡುವ ಮೊದಲು ಕೆಲವೇ ನಿಮಿಷಗಳ ಕಾಲ ಎಣ್ಣೆ ಹಚ್ಚುವ ವಿಧಾನವನ್ನು ಪ್ರಯತ್ನಿಸಿ. ನಿಮ್ಮ ಕೂದಲು ಮತ್ತು ಚರ್ಮದ ಸ್ವಭಾವಕ್ಕೆ ತಕ್ಕಂತೆ ಹೇರ್ ಕೇರ್ ಮಾಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories