ಪ್ಲಾಸ್ಟಿಕ್ ಮೇಲೆ ನಿಷೇಧ : ಹಾಗಿದ್ರೆ ಇನ್ನೇನು ಬಳಸೋದು?

Published : Jul 02, 2022, 04:41 PM IST

ಬೆಳಿಗ್ಗೆ ಎದ್ದಾಗಿನಿಂದ ಆರಂಭವಾಗಿ ರಾತ್ರಿ ಮಲಗುವವರೆಗೆ ನಮ್ಮ ದೈನಂದಿನ ದಿನಚರಿಯಲ್ಲಿ ಪ್ಲಾಸ್ಟಿಕ್ ಪ್ರಮುಖ ಪಾತ್ರ ವಹಿಸುತ್ತೆ ಅಂದರೆ ತಪ್ಪಾಗಲಾರದು. ಯಾಕೆಂದರೆ ಅಷ್ಟರಮಟ್ಟಿಗೆ ಪ್ಲಾಸ್ಟಿಕ್ ನಮ್ಮ ಜೀವನದ ಒಳ ಹೊಕ್ಕಿದೆ. ಪ್ಲಾಸ್ಟಿಕ್ ನಲ್ಲಿ ಪ್ಯಾಕ್ ಮಾಡಿದ ಹಾಲನ್ನು ಕುಡಿಯುವ ಮೂಲಕ ನಾವು ಮುಂಜಾನೆಯನ್ನು ಪ್ರಾರಂಭಿಸುತ್ತೇವೆ, ಅಲ್ಲದೇ ಆಹಾರವನ್ನು ಪ್ಲಾಸ್ಟಿಕ್ ಟಿಫಿನ್ ನಲ್ಲಿ ಪ್ಯಾಕ್ ಸ್ಕೂಲ್, ಆಫೀಸ್ ಕೊಂಡೋಯ್ಯುತ್ತೇವೆ. ಹೀಗೆ ನಮ್ಮ ಜೀವನದ ಪ್ರತಿಯೊಂದು ಭಾಗದಲ್ಲೂ ಪ್ಲಾಸ್ಟಿಕ್ ಸೇರಿಕೊಂಡಿದೆ. 

PREV
19
 ಪ್ಲಾಸ್ಟಿಕ್ ಮೇಲೆ ನಿಷೇಧ : ಹಾಗಿದ್ರೆ ಇನ್ನೇನು ಬಳಸೋದು?

ಪ್ಲಾಸ್ಟಿಕ್ (Plastic) ನಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ಪರಿಸರಕ್ಕೂ ಹಾನಿಕಾರಕವಾಗಿದೆ. ಪ್ಲಾಸ್ಟಿಕ್ ನಿಂದ ಪರಿಸರಕ್ಕಾಗುವ ಹಾನಿಯನ್ನು ತಪ್ಪಿಸಲು, ಜುಲೈ 1 ರಿಂದ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಲಾಗುತ್ತಿದೆ. ಪ್ಲಾಸ್ಟಿಕ್ ಸಂಪೂರ್ಣ ನಿಷೇಧವಾಗಬೇಕಾದ್ರೆ ಅದನ್ನು ನಾವೇ ಆರಂಭಿಸಬೇಕು. ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ಇತರ ವಸ್ತುಗಳನ್ನು ಬಳಸಬೇಕು. ಹಾಗಾದ್ರೆ ಮಾತ್ರ ಪರಿಸರ ಉಳಿಸಲು ಸಾಧ್ಯವಾಗುತ್ತೆ.

29

ನಿಮ್ಮ ಮನೆ ಮತ್ತು ಪರಿಸರವು ಪ್ಲಾಸ್ಟಿಕ್ ಮುಕ್ತವಾಗಬೇಕೆಂದು ನೀವು ಬಯಸಿದರೆ ಏನು ಮಾಡಬೇಕೆಂದು ನೀವು ಯೋಚಿಸಿದ್ದೀರಾ? ನಿಮ್ಮ ಅಗತ್ಯಗಳನ್ನು ಪೂರೈಸುವ ಮತ್ತು ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಕೆಲವು ನೇಚರ್ ಫ್ರೆಂಡ್ಲಿ(Nature friendly) ಸಲಹೆಗಳು ಇಲ್ಲಿವೆ. 

39

ಸ್ಟೈನ್ ಲೆಸ್ ಸ್ಟೀಲ್ (Stainless steel)
ಪ್ರತಿದಿನ ಬಳಸುವ ಪ್ಲಾಸ್ಟಿಕ್ ಬಾಟಲಿಗಳು ಸಹ ಮಾಲಿನ್ಯವನ್ನು ಹೆಚ್ಚಿಸುತ್ತವೆ. ಬದಲಾಗಿ ಸ್ಟೀಲ್ ಬಾಟಲಿ ಬಳಸೋದು ಆರೋಗ್ಯಕರ. ಸ್ಟೇನ್ ಲೆಸ್ ಸ್ಟೀಲ್ ಸ್ಟ್ರಾಂಗ್ ಆಗಿದ್ದು, ಅದನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು, ಇದರಲ್ಲಿ ನೀರು ಸಂಗ್ರಹಿಸೋದು ಸುಲಭ. ಇತ್ತೀಚಿನ ವರ್ಷಗಳಲ್ಲಿ ಇದರ ಬಳಕೆ ತುಂಬಾನೆ ಹೆಚ್ಚಾಗಿದೆ. ಇದನ್ನು ಬಳಸುವ ಮೂಲಕ  ಏಕ-ಬಳಕೆಯ ಕಪ್ ಗಳು, ಕಿಚನ್ ಸ್ಟೋರೇಜ್, ಲಂಚ್ ಬಾಕ್ಸ್ ಗಳು ಮತ್ತು ಹೆಚ್ಚಿನದನ್ನು ಬದಲಾಯಿಸಬಹುದು.
 

49

ಗಾಜು (Glass)
ಗಾಜು ಕಡಿಮೆ ದರ ಹೊಂದಿದ್ದು, ಜಡವಾಗಿದೆ ಮತ್ತು ಇದನ್ನು ಸುಲಭವಾಗಿ ರೀ ಯೂಸ್ ಮಾಡಬಹುದು. ಗಾಜಿನ ಜಾಡಿಗಳು ಆಹಾರ ಸಂಗ್ರಹಣೆಗೆ ಉತ್ತಮ ಆಯ್ಕೆ. ಜಾಮ್ ಗಳು, ಜೇನುತುಪ್ಪ, ಉಪ್ಪಿನಕಾಯಿ, ಡ್ರೈ ಫ್ರುಟ್ಸ್ ಗಳನ್ನೂ ನೀವು ಗಾಜಿನ ಜಾಡಿಗಳಲ್ಲಿ ಸಂಗ್ರಹಿಸಬಹುದು.

59

ನ್ಯಾಚುರಲ್ ಫೈಬರ್ ಫ್ಯಾಬ್ರಿಕ್ (Natural fibre fabrics)
ನ್ಯಾಚುರಲ್ ಫ್ಯಾಬ್ರಿಕ್ ನ್ನು ನೀವು ಪ್ಲಾಸ್ಟಿಕ್ ಚೀಲಗಳ ಬದಲಾಗಿ ಬದಲಾಯಿಸಬಹುದು. ಆರ್ಗಾನಿಕ್ ಹತ್ತಿ, ಉಣ್ಣೆ, ಸೆಣಬು ಅಥವಾ ಬಿದಿರಿನಿಂದ ಮಾಡಿದ ಬಾಳಿಕೆ ಬರುವ ಬಟ್ಟೆಗಳು ತೊಳೆಯುವಾಗ ಪ್ಲಾಸ್ಟಿಕ್ ನಂತಹ ನಾರುಗಳನ್ನು ಬಿಡುವುದಿಲ್ಲ. ಇವುಗಳನ್ನು ನೀವು ಮರುಬಳಕೆ ಮಾಡಬಹುದು. ಶಾಪಿಂಗ್ ಗಾಗಿ, ಪ್ಲಾಸ್ಟಿಕ್ ಬದಲಾಗಿ ಉಣ್ಣೆ, ಜೂಟ್ ಅಥವಾ ಹತ್ತಿ ಚೀಲ ಬಳಸಿ. 

69

ಮರ 
ಪ್ಲಾಸ್ಟಿಕ್ ಬದಲಾಗಿ ನೀವು ಮರವನ್ನು ಬಳಸಬಹುದು ಗೊತ್ತಾ?  ಮರದ(Wooden) ಕುಂಚಗಳು, ಅಡುಗೆಮನೆಯ ಪಾತ್ರೆಗಳು ಮತ್ತು ಕಟಿಂಗ್ ಬೋರ್ಡ್ ಮೊದಲಾದ ಗೃಹೋಪಯೋಗಿ ವಸ್ತುಗಳಲ್ಲಿ ಪ್ಲಾಸ್ಟಿಕ್ ಬದಲಾಗಿ ಮರವನ್ನು ಬಳಕೆ ಮಾಡಬಹುದು. 

79

 ಬಿದಿರು (Bamboo)
ಇದು ಪರಿಸರ ಸ್ನೇಹಿ ಸಂಪನ್ಮೂಲವಾಗಿದ್ದು, ಇದು ವೇಗವಾಗಿ ಬೆಳೆಯುತ್ತದೆ. ಪ್ಲಾಸ್ಟಿಕ್ ಅನ್ನು ಟೇಬಲ್ ವೇರ್ ಮತ್ತು ಡ್ರಿಂಕಿಂಗ್ ಸ್ಟ್ರಾಗಳಂತಹ ವಸ್ತುಗಳಾಗಿ ಪರಿವರ್ತಿಸಬಹುದು. ಇದು ಹಗುರ, ಬಾಳಿಕೆ ಬರುವ, ಅಲ್ಲದೇ ಕಾಂಪೋಸ್ಟಬಲ್ ಆಗಿದೆ.

89

ಕಾಗದ (Paper)
ಕೆಲವು ವರ್ಷಗಳ ಹಿಂದಿನವರೆಗೆ, ಅನೇಕ ವಸ್ತುಗಳನ್ನು ಸಾದಾ ಕಾಗದದಲ್ಲಿ ಪ್ಯಾಕ್ ಮಾಡಲಾಗುತ್ತಿತ್ತು, ಇದು ಪ್ಲಾಸ್ಟಿಕ್ ಗಿಂತ ತುಂಬಾನೆ ಉತ್ತಮವಾಗಿದೆ, ಆದರೆ ಕಾಗದವನ್ನು ಮತ್ತೆ ಮತ್ತೆ ಮರುಬಳಕೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಪ್ರತಿ ಬಾರಿ ಅದನ್ನು ಮರುಬಳಕೆ ಮಾಡಿದಾಗ, ಅದರ ಫೈಬರ್ ಕಡಿಮೆಯಾಗುತ್ತದೆ, ಇದನ್ನು ಗೊಬ್ಬರವಾಗಿಯೂ ಬಳಕೆ ಮಾಡಬಹುದು. 

99

ಬಯೋಪ್ಲಾಸ್ಟಿಕ್(Bioplastic) ಬಗ್ಗೆ ಗೊತ್ತಾ?
ಜೈವಿಕ ಪ್ಲಾಸ್ಟಿಕ್ ಗಳು ಅಥವಾ ಜೈವಿಕ ವಿಘಟನೀಯ, ಕಾಂಪೋಸ್ಟಬಲ್ ಪ್ಲಾಸ್ಟಿಕ್ ಗಳಾಗಿವೆ, ಅವು ಪೆಟ್ರೋಲಿಯಂಗಿಂತ ನೈಸರ್ಗಿಕ ವಸ್ತುಗಳಿಂದ ಮಾಡಲ್ಪಟ್ಟಿವೆ. ಪ್ಲಾಸ್ಟಿಕ್ ನಮ್ಮ ಆಹಾರ ಮತ್ತು ನಮ್ಮ ಮನೆಯ ಸುತ್ತಲಿನ ಪರಿಸರಕ್ಕೆ ಹಾನಿಕಾರಕವಾಗಿದೆ. ಅದಕ್ಕಾಗಿಯೇ ಇಂದು ಬಯೋಪ್ಲಾಸ್ಟಿಕ್ ಹೆಚ್ಚು ಬಳಕೆಯಲ್ಲಿ ಬಂದಿದೆ.  

click me!

Recommended Stories