ನಾವು ಬೆಳಗ್ಗೆ ಅತ್ಯುತ್ತಮ ಆಹಾರಗಳನ್ನು ಸೇವಿಸುತ್ತಿರಬಹುದು, ವಾಕಿಂಗ್ ಮಾಡುತ್ತಿರಬಹುದು ಅಥವಾ ಫಿಟ್ ಆಗಿರಲು ಎಲ್ಲವನ್ನೂ ಮಾಡುತ್ತಿರಬಹುದು. ಆದರೆ ಇಷ್ಟೆಲ್ಲಾ ಮಾಡಿದರೂ ಆರೋಗ್ಯ ಸರಿಯಾಗಿರದೇ ಇರಲು ಕಾರಣ ಸಂಜೆಯ ನಂತರ ನಾವು ರೂಢಿಸಿಕೊಂಡಿರುವ ಕೆಲವು ಹವ್ಯಾಸಗಳು. ವಿಶೇಷವಾಗಿ ರಾತ್ರಿಯಲ್ಲಿ ಮಲಗುವ ಮೊದಲು, ನಾವು ಯಾವ ರೀತಿಯ ಆಹಾರವನ್ನು ಸೇವಿಸುತ್ತೇವೆ ಅಥವಾ ನಾವು ಯಾವ ರೀತಿಯ ಚಟುವಟಿಕೆಗಳನ್ನು ಮಾಡುತ್ತೇವೆ ಎಂಬುದು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.
ಆರೋಗ್ಯ ತಜ್ಞರು ಹೇಳುವಂತೆ, ರಾತ್ರಿ ಕೆಲವು ಜನರು ದೊಡ್ಡ ಪ್ರಮಾಣದಲ್ಲಿ ಊಟ ಮಾಡಿ ತಕ್ಷಣವೇ ಮಲಗಲು ಹೋಗುತ್ತಾರೆ. ಈ ಎರಡೂ ಅಭ್ಯಾಸಗಳು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ವಿಶೇಷವಾಗಿ ಕರೋನಾ ಸಾಂಕ್ರಾಮಿಕ ರೋಗದ (pandemic) ಆಗಮನದ ನಂತರ, ಈ ಅಭ್ಯಾಸವು ತುಂಬಾ ವೇಗವಾಗಿ ಬೆಳೆಯುತ್ತಿರುವುದನ್ನು ಕಾಣಬಹುದು.
ಆರೋಗ್ಯ ಉತ್ತಮವಾಗಿಡಲು, ಎಲ್ಲಾ ಜನರು ರಾತ್ರಿಯಲ್ಲಿ ಮಲಗುವ ಮೊದಲು ಏನೆಲ್ಲಾ ಚಟುವಟಿಕೆಗಳನ್ನು ಮಾಡುತ್ತೀರಿ, ಅದನ್ನು ಮರುಪರಿಶೀಲಿಸುವ ಅಗತ್ಯವಿದೆ. ಇಡೀ ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಡಲು ಯಾವ ಅಭ್ಯಾಸಗಳು ಸಹಾಯ ಮಾಡುತ್ತವೆ ಎಂದು ತಿಳಿಯೋಣವೇ?
ರಾತ್ರಿಯ ಊಟವನ್ನು ಹಗುರವಾಗಿರಿಸಿಕೊಳ್ಳಿ
ದೇಹವನ್ನು ಆರೋಗ್ಯಕರವಾಗಿರಿಸಲು, ರಾತ್ರಿ ಊಟವು (night dinner) ಸಾಕಷ್ಟು ಹಗುರವಾಗಿರಬೇಕು ಮತ್ತು ಪೌಷ್ಟಿಕಾಂಶಭರಿತ ವಸ್ತುಗಳಿಂದ ಸಮೃದ್ಧವಾಗಿರಬೇಕು. ರಾತ್ರಿ ಊಟದಲ್ಲಿ ಭಾರಿ ಆಹಾರ ಸೇವಿಸಿದ್ರೆ, ಅದನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಇದಕ್ಕೆ ಮುಖ್ಯ ಕಾರಣವೆಂದರೆ ರಾತ್ರಿಯಲ್ಲಿ ಕಡಿಮೆ ಚಯಾಪಚಯ ದರ.
ಆಹಾರದ ಸರಿಯಾದ ಜೀರ್ಣಕ್ರಿಯೆಯ (digestion) ಕೊರತೆಯಿಂದಾಗಿ, ದೇಹ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳುವುದಿಲ್ಲ ಮತ್ತು ಇದು ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ನೀವು ಯಾವಾಗಲೂ ರಾತ್ರಿಯಲ್ಲಿ ಲಘು ಆಹಾರವನ್ನು ಸೇವಿಸಬೇಕು.
ಊಟದ ನಂತರ ನಡೆಯೋದನ್ನು ಮರೆಯಬೇಡಿ
ರಾತ್ರಿ ಮಲಗುವ ಮೊದಲು ಕೆಲವು ನಿಮಿಷಗಳ ನಡಿಗೆಯು ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುವುದಲ್ಲದೆ, ಈ ಅಭ್ಯಾಸವು ಮಧುಮೇಹ ಮತ್ತು ಹೃದ್ರೋಗಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಇತ್ತೀಚಿನ ಅಧ್ಯಯನಗಳು ನೀವು ಮಲಗುವ ಸ್ವಲ್ಪ ಮೊದಲು 10-15 ನಿಮಿಷಗಳ ಕಾಲ ನಡೆದರೆ, ಅದು ಊಟದ ನಂತರ ದೇಹದಲ್ಲಿ ಗ್ಲೂಕೋಸ್ (Glucose) ಮಟ್ಟವನ್ನು ಹೆಚ್ಚಿಸುವುದಿಲ್ಲ, ಇದು ಬೊಜ್ಜು (Obesity) ಮತ್ತು ಮಧುಮೇಹದ (diabetes) ಅಪಾಯವನ್ನು ಕಡಿಮೆ ಮಾಡುತ್ತದೆ, ಜೊತೆಗೆ ಉತ್ತಮ ನಿದ್ರೆಯೂ ನಿಮ್ಮದಾಗುತ್ತೆ ಎಂದು ತಿಳಿಸಿದೆ.
ಕೆಫೀನ್ ಮತ್ತು ನಿಕೋಟಿನ್ ನಿಂದ ದೂರವಿರಿ
ಕೆಫೀನ್ ಮತ್ತು ನಿಕೋಟಿನ್ ನಿದ್ರೆಗೆ ತೊಂದರೆ ನೀಡುವ ವಸ್ತುಗಳಾಗಿವೆ, ಅದಕ್ಕಾಗಿಯೇ ರಾತ್ರಿಯಲ್ಲಿ ಅವುಗಳನ್ನು ಸೇವಿಸುವುದನ್ನು ತಪ್ಪಿಸುವುದು ಒಳ್ಳೆಯದು. ರಾತ್ರಿ ಊಟದ ನಂತರ ನಿಮಗೂ ಅಂತಹ ಅಭ್ಯಾಸವಿದ್ದರೆ ತಕ್ಷಣವೇ ಅದನ್ನು ತ್ಯಜಿಸಿ. ರಾತ್ರಿಯಲ್ಲಿ ಕೆಫೀನ್ ಸೇವನೆ ನಿದ್ರೆಯ ಸಮಸ್ಯೆಗಳನ್ನು (sleeping problem) ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ತಜ್ಞರು ಕೆಫೀನ್ ಮತ್ತು ನಿಕೋಟಿನ್ ಜೊತೆಗೆ ಆಲ್ಕೋಹಾಲ್ (Alcohol) ಸೇವನೆಯನ್ನು ತಪ್ಪಿಸಲು ಹೇಳುತ್ತಾರೆ.
ಅರಿಶಿನ ಹಾಲು ಬೆಸ್ಟ್ (turmeric milk)
ಹಗಲಿನ ದಣಿವಿನ ನಂತರ ರಾತ್ರಿಯಲ್ಲಿ ಉತ್ತಮ ನಿದ್ರೆ ಪಡೆಯಲು, ಮಲಗುವ ಮೊದಲು ಪ್ರತಿದಿನ ಒಂದು ಕಪ್ ಹಾಲಿನಲ್ಲಿ ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ ಸೇವಿಸಬೇಕು. ಅರಿಶಿನವು ಉರಿಯೂತ ಶಮನಕಾರಿ (Inflmatory) ಗುಣಲಕ್ಷಣಗಳನ್ನು ಹೊಂದಿದ್ದು, ದೇಹದಿಂದ ಆಯಾಸ ಮತ್ತು ನೋವನ್ನು ತೆಗೆದುಹಾಕುವ ಮೂಲಕ ಆರಾಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ನಿದ್ರಾಹೀನತೆಯ ಸಮಸ್ಯೆಗಳನ್ನು ಹೊಂದಿರುವ ಜನರು ಸಹ ಈ ಪರಿಹಾರದಿಂದ ಪ್ರಯೋಜನ ಪಡೆಯಬಹುದು. ಅರಿಶಿನದ ಹಾಲು ರೋಗನಿರೋಧಕ (Immunity Power) ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅನೇಕ ರೀತಿಯ ಸೋಂಕುಗಳ (Infection) ಅಪಾಯವನ್ನು ಕಡಿಮೆ ಮಾಡುತ್ತದೆ.