ಅನಿಲ್ ಕಪೂರ್ ಸೆಕ್ಸ್ ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು, ಫಿಟ್‍ನೆಸ್ ಸೀಕ್ರೆಟ್ಸ್ ಬಗ್ಗೆ ಗುಸು ಗುಸು

First Published | Sep 19, 2022, 3:48 PM IST

ಅನಿಲ್ ಕಪೂರ್ 65ನೇ ವಯಸ್ಸಿನಲ್ಲಿ 40 ವರ್ಷ ವಯಸ್ಸಿನವರಂತೆ ಕಾಣುತ್ತಾರೆ, ಈಗಿನ ನಟರ ಮುಂದೆ ಸರಿಸಮಾನರಂತೆ ಕಾಣುವ ಅನಿಲ್ ಕಪೂರ್ ಫಿಟ್ ನೆಸ್ ಗುಟ್ಟೇನು ಅಂತಾ ನಿಮಗೂ ಅನಿಸಿರಬಹುದು ಅಲ್ವಾ? ಅನಿಲ್ ಇನ್ನೂ ತನ್ನ ಫಿಟ್ನೆಸ್‌ನೊಂದಿಗೆ ತನಗಿಂತ ಕಿರಿಯ ನಟರೊಂದಿಗೆ ಇನ್ನೂ ಕಿರಿಯರಂತೆ ಕಾಣುತ್ತಾರೆ. ನೀವು ಅವರ ಫಿಟ್ ನೆಸ್ ನಿಂದ ಪ್ರಭಾವಿತರಾದರೆ, ಆಗ ನೀವು ಅವರ ಫಿಟ್ ನೆಸ್ ನ ರಹಸ್ಯ ಸಹ ತಿಳಿದುಕೊಳ್ಳಬೇಕು. ಹೌದು, 65 ರ ಹರೆಯದಲ್ಲೂ ಇಷ್ಟೊಂದು ಫಿಟ್ ಆಗಿರಲು ಕಾರಣ ಏನು? ನಿಮಗೆ ಈ ಸೀಕ್ರೆಟ್ ರಿವೀಲ್ ಮಾಡ್ತಿದ್ದೀವಿ ಕೇಳಿ… 

ಅನಿಲ್ ಕಪೂರ್ ಅವರ ಹೆಸರನ್ನು ಕೇಳಿದ ತಕ್ಷಣ, ನೀವು ಅವರ ನಟನೆ ಮತ್ತು ಕೆಲವು ಮೆಮೊರೇಬಲ್ ಚಲನಚಿತ್ರಗಳನ್ನು ನೆನಪಿಸಿಕೊಳ್ಳಲು ಪ್ರಾರಂಭಿಸುತ್ತೀರಿ ಅಲ್ವಾ? ಆದರೆ ಇಷ್ಟು ಮಾತ್ರವಲ್ಲ, ಅದಕ್ಕಿಂತ ಹೆಚ್ಚಾಗಿ, ಅನಿಲ್ ಕಪೂರ್ ಅವರ ಫಿಟ್ ನೆಸ್ (fitness) ಬಗ್ಗೆ ಚರ್ಚಿಸಲಾಗುತ್ತದೆ. ಯಾಕೆಂದ್ರೆ ಅನಿಲ್ ಕಪೂರ್ ಅವರಿಗೆ 65 ವರ್ಷ ವಯಸ್ಸಾಗಿದೆ, ಆದರೆ ಈ ವಯಸ್ಸಿನಲ್ಲಿಯೂ, 'ಮಿಸ್ಟರ್ ಇಂಡಿಯಾ' ತುಂಬಾ ಸುಂದರವಾಗಿ ಮತ್ತು ಫಿಟ್ ಆಗಿ ಇರೋದೆ ಎಲ್ಲರಿಗೂ ಅಚ್ಚರಿ.

ಅನಿಲ್ ಕಪೂರ್ ಅವರನ್ನು ರೆಟ್ರೋ ನಟ ಎಂದು ಹೇಳಲು ಸಾಧ್ಯವೇ ಇಲ್ಲ, ಯಾಕಂದ್ರೆ ಇಂದಿಗೂ ತನ್ನ ಫಿಟ್ನೆಸ್ನೊಂದಿಗೆ ತನಗಿಂತ ಕಿರಿಯ ನಟರೊಂದಿಗೆ ಕಾಂಪಿಟ್ ಮಾಡ್ತಾರೆ. ನೀವು ಅವರ ಫಿಟ್ ನೆಸ್ ಬಗ್ಗೆ ತಿಳಿದುಕೊಳ್ಳುವ ಹಂಬಲ ಹೊಂದಿದ್ದೀರಾ? ಹಾಗಿದ್ರೆ ಬನ್ನಿ ಅನಿಲ್ ಕಪೂರ್ ಅವರ ಫಿಟ್ ನೆಸ್ ನ ರಹಸ್ಯವನ್ನು ನಾವು ನಿಮಗೆ ತಿಳಿಸುತ್ತೇವೆ ಕೇಳಿ…
 

Tap to resize

ಹಾಟ್ ಯೋಗ

ಅನಿಲ್ ಕಪೂರ್ ಅವರು ಅನೇಕ ಸಂದರ್ಶನಗಳಲ್ಲಿ ಹಾಟ್ ಯೋಗದಿಂದ (hot yoga) ಸಾಕಷ್ಟು ಪ್ರಯೋಜನ ಪಡೆದಿರುವುದು ಎಂದು ಹೇಳಿದ್ದಾರೆ. ಹಾಟ್ ಯೋಗವು ಚರ್ಮ ಹೊಳೆಯುವ ಟಾನಿಕ್ ನಂತೆ ಕೆಲಸ ಮಾಡುತ್ತದೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದ ನೀವು ಇನ್ನೂ ಯಂಗ್ ಆಗಿ ಕಾಣುವಂತೆ ಮಾಡುತ್ತೆ.

ಹಾಟ್ ಯೋಗದ ಬಗ್ಗೆ ಗೊತ್ತಿಲ್ಲದವರಿಗೆ ಇಲ್ಲಿದೆ ಮಾಹಿತಿ…, ಈ ಯೋಗಾಸನವನ್ನು ಬಿಸಿಯಾದ ಸ್ಥಳದಲ್ಲಿ ಮಾಡಲಾಗುತ್ತದೆ, ಅಂದರೆ, ನೀವು ಒಂದು ಕೋಣೆಯಲ್ಲಿ ಯೋಗ ಮಾಡುತ್ತಿದ್ದರೆ, ಇಲ್ಲಿನ ತಾಪಮಾನವನ್ನು 40-45 ಡಿಗ್ರಿಗಳಲ್ಲಿ ಇರಿಸಲಾಗುತ್ತದೆ. ಈ ಕಾರಣಕ್ಕಾಗಿ ಇದನ್ನು ಹಾಟ್ ಯೋಗಾಸನ ಎಂದು ಕರೆಯಲಾಗುತ್ತದೆ. ಸುಮಾರು 80-90 ನಿಮಿಷಗಳ ಈ ಯೋಗ ಸೆಶನ್ ನಲ್ಲಿ, 26 ಆಸನಗಳು ಮತ್ತು 2 ಪ್ರಾಣಾಯಾಮಗಳನ್ನು ಮಾಡಲಾಗುತ್ತದೆ.   

ಸ್ಕಿನ್ ಕೇರ್ ಉತ್ಪನ್ನಗಳು (skin care product)

ಅನಿಲ್ ಕಪೂರ್ ಅವರು ತಮ್ಮ ಚರ್ಮದ ಗುಣಮಟ್ಟಕ್ಕೆ ಅನುಗುಣವಾಗಿ,  ಉತ್ತಮ ಚರ್ಮದ ಆರೈಕೆ ಉತ್ಪನ್ನಗಳನ್ನು ಸಹ ಬಳಸುತ್ತಾರೆ ಎಂದು ಹೇಳಿದ್ದಾರೆ. ಇದು ದೈನಂದಿನ ಚರ್ಮದ ಆರೈಕೆಯ ದಿನಚರಿಗಳನ್ನು ಸಹ ಒಳಗೊಂಡಿದೆ. ಇದರಿಂದ ಸ್ಕಿನ್ ತುಂಬಾನೆ ಹೆಲ್ತಿಯಾಗಿರುತ್ತೆ.

8 ಗಂಟೆಗಳ ನಿದ್ರೆ

ನೀವು ವಯಸ್ಸಾಗುವಿಕೆಯನ್ನು ನಿಧಾನಗೊಳಿಸಲು ಬಯಸಿದರೆ, ಅಂದ್ರೆ ಯಾವಾಗಲೂ ಯಂಗ್ ಆಗಿ ಕಾಣಲು ಬಯಸಿದರೆ 8 ಗಂಟೆಗಳ ನಿದ್ರೆ ತುಂಬಾನೆ ಮುಖ್ಯ. ನೀವು ಪ್ರತಿದಿನ 8-9 ಗಂಟೆಗಳ ಉತ್ತಮ ನಿದ್ರೆಯನ್ನು ಪಡೆಯುವ ಮೂಲಕ ಸುಕ್ಕುಗಳು ಮತ್ತು ಚರ್ಮದ ಸಮಸ್ಯೆಗಳನ್ನು ತಪ್ಪಿಸಬಹುದು. 

ಆಹಾರದಲ್ಲಿ ಏನು ತೆಗೆದುಕೊಳ್ಳಬೇಕು?

ಕಡಿಮೆ ಕ್ಯಾಲೋರಿ ಕಾರ್ಬೋಹೈಡ್ರೇಟ್ಸ್ ಮತ್ತು ಹೆಚ್ಚಿನ ಪ್ರೋಟೀನ್ ಆಹಾರವು (protein food) ನಿಮಗೆ ಯಾವುದೇ ರೀತಿಯಲ್ಲಿ ಫ್ಯಾಟ್ ಹೆಚ್ಚಾಗದಂತೆ ಕಾಪಾಡುತ್ತದೆ. ವಿಶೇಷವಾಗಿ ನಿಮ್ಮ ಹೊಟ್ಟೆ ಸುತ್ತಲೂ ಯಾವುದೇ ಕೊಬ್ಬು ಶೇಖರಣೆಯಾಗುವುದಿಲ್ಲ. ಅನಿಲ್ ಆರೋಗ್ಯಕರ ಆಹಾರದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುತ್ತಾರೆ. 

ವೇಗದ ನಡಿಗೆ

ಓಟ ಮತ್ತು ವೇಗದ ನಡಿಗೆ ಕೂಡ ಒಬ್ಬರು ಫಿಟ್ ಆಗಿ ಉಳಿಯುವ ಎರಡು ಮಾರ್ಗಗಳು. ವಿಶೇಷವಾಗಿ ಬೆಳಗ್ಗೆ, ನಡೆಯಿರಿ. ಇದಲ್ಲದೆ, ಆಹಾರವನ್ನು ಸೇವಿಸಿದ ನಂತರವೂ ನಡೆಯುವುದು ಬಹಳ ಮುಖ್ಯ. ನಡೆಯುವುದರಿಂದ ಆರೋಗ್ಯ ಆಕ್ಟೀವ್ ಆಗಿರುತ್ತೆ, ಇದರಿಂದ ನೀವು ದಿನವಿಡೀ ಕ್ರಿಯಾಶೀಲರಾಗಿರಲು (Active) ಸಹಾಯ ಮಾಡುತ್ತೆ.

ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳಿ

ದೇಹವನ್ನು ಹೈಡ್ರೇಟ್ ಆಗಿಡುವುದು ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸುವುದು ಮಾತ್ರವಲ್ಲದೆ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಅನಿಲ್ ಕಪೂರ್ ತನ್ನ ಆಹಾರದ ಜೊತೆಗೆ, ನೀರಿನ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಾರೆ. ಅನಿಲ್ ಕಪೂರ್ ಪ್ರತಿದಿನ 2-3 ಲೀಟರ್ ನೀರು ಕುಡಿಯುತ್ತಾರೆ.   

Latest Videos

click me!