ವಿಷ್ಣುಪ್ರಿಯೆ ತುಳಸಿಯ ಎಲೆಗಳಿಂದ ಹೊಳೆಯುವ ಚರ್ಮ ನಿಮ್ಮದಾಗಿಸಿ

ಬಹುತೇಕರು ಮಾರುಕಟ್ಟೆಯಲ್ಲಿ ಸಿಗುವ ಏನೇನೋ ಉತ್ಪನ್ನಗಳನ್ನು ಕೊಂಡು ಮುಖಕ್ಕೆ ಹಚ್ಚುತ್ತಿರುತ್ತಾರೆ. ಅವುಗಳ ಬದಲು ತುಳಸಿ ಎಲೆಗಳನ್ನು ಬಳಸಿ ಕೂಡ ಸುಂದರವಾಗಿ ಹೊಳೆಯಬಹುದೆಂದು ನಿಮಗೆ ಗೊತ್ತಾ?

Get glowing Radiant skin with Lord vishnus favourite Tulsi leaves
ತುಳಸಿ ಎಲೆಗಳನ್ನು ಚರ್ಮದ ಆರೈಕೆಯಲ್ಲಿ ಬಳಸುವ ವಿಧಾನಗಳು

ಸುಂದರವಾಗಿ ಕಾಣಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ಹಾಗೆ ಸುಂದರವಾಗಿ ಕಾಣಲು ನಾವು ಸ್ಕಿನ್ ಕೇರ್ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕು.
ಬಹುತೇಕ ಎಲ್ಲರೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳನ್ನೇ ಖರೀದಿಸಿ ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಅವುಗಳ ಬದಲಿಗೆ ತುಳಸಿ ಎಲೆಗಳನ್ನು ಬಳಸಿ ಕೂಡ ಸುಂದರವಾಗಿ ಹೊಳೆಯಬಹುದೆಂದು ನಿಮಗೆ ಗೊತ್ತಾ? ನೀವು ಓದಿದ್ದು ನಿಜವೇ, ತುಳಸಿ ಎಲೆಗಳನ್ನು ಬಳಸುವ ಹಾಗೆ ಬಳಸಿದರೆ.. ಸುಂದರವಾಗಿ ಹೊಳೆಯಬಹುದು. 

Get glowing Radiant skin with Lord vishnus favourite Tulsi leaves

ತುಳಸಿ ಎಲೆಗಳು ಅನೇಕ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿ ಇನ್ಫ್ಲಮೇಟರಿ ಗುಣಗಳು, ಆಂಟಿ ಆಕ್ಸಿಡೆಂಟ್ ಲಕ್ಷಣಗಳು ಹೇರಳವಾಗಿವೆ. ಇವು ಚರ್ಮದ ಸಮಸ್ಯೆಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ. ಮುಖ್ಯವಾಗಿ ಮೊಡವೆ ಸಮಸ್ಯೆ, ಒಣ ಚರ್ಮದಂತಹ ಸಮಸ್ಯೆಗಳು ಸಂಪೂರ್ಣವಾಗಿ ಕಡಿಮೆಯಾಗುತ್ತವೆ. ಹಾಗಾದರೆ, ತುಳಸಿಯನ್ನು ಮುಖಕ್ಕೆ ಹೇಗೆ ಹಚ್ಚಬೇಕೆಂದು ಈಗ ನೋಡೋಣ..


ನಿಮ್ಮ ಚರ್ಮ ಸಂರಕ್ಷಣಾ ದಿನಚರಿಯಲ್ಲಿ ತುಳಸಿಯನ್ನು ಸೇರಿಸಿಕೊಳ್ಳಲು 3 ಮಾರ್ಗಗಳು
ತುಳಸಿ ಅದ್ಭುತವಾದ ಫೇಸ್ ಟೋನರ್ ಆಗಿ ಕೆಲಸ ಮಾಡುತ್ತದೆ, ಇದನ್ನು ನೀವು ಮೇಕಪ್‌ಗೆ ಮೊದಲು, ಮೇಕಪ್ ತೆಗೆದ ನಂತರ ಉಪಯೋಗಿಸಬಹುದು. ನೀವು ಮನೆಯಲ್ಲಿ ತುಳಸಿ ಟೋನರ್ ಅನ್ನು ಹೇಗೆ ತಯಾರಿಸಿಕೊಳ್ಳಬಹುದೆಂಬ ಮಾಹಿತಿ ಇಲ್ಲಿದೆ

 ಗಿಡದಿಂದ ಕೆಲವು ತಾಜಾ ತುಳಸಿ ಎಲೆಗಳನ್ನು ತೆಗೆಯಿರಿ. ಈಗ ಒಂದು ಕಪ್ ನೀರನ್ನು ಕುದಿಸಿ, ಅದಕ್ಕೆ ತುಳಸಿ ಎಲೆಗಳನ್ನು ಸೇರಿಸಿ. ನೀರನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ, ನಂತರ ಎಲೆಗಳನ್ನು ಸೋಸಿ. ಸ್ಪ್ರೇ ಬಾಟಲಿಯಲ್ಲಿ ದ್ರವವನ್ನು ತುಂಬಿ, ಮೇಕಪ್ ತೆಗೆಯುವ ಮೊದಲು, ನಂತರ ನಿಮ್ಮ ಮುಖ, ಕುತ್ತಿಗೆಗೆ ಹಚ್ಚಿಕೊಳ್ಳಿ.

ಚರ್ಮದ ಆರೈಕೆ

ತುಳಸಿ  ಫೇಸ್ ಪ್ಯಾಕ್
ತುಳಸಿಯನ್ನು ನಿಂಬೆಕಾಯಿಯೊಂದಿಗೆ ಬೆರೆಸಿ ಫೇಸ್ ಪ್ಯಾಕ್ ಆಗಿ ಬಳಸಬಹುದು. ನೀವು ತುಳಸಿ, ನಿಂಬೆಕಾಯಿ ಫೇಸ್ ಪ್ಯಾಕ್ ಅನ್ನು ಹೇಗೆ ತಯಾರಿಸಿಕೊಳ್ಳಬಹುದೆಂದು ನೋಡೋಣ.. ಒಂದು ಬಟ್ಟಲಿನಲ್ಲಿ ಒಂದು ಟೇಬಲ್ ಸ್ಪೂನ್ ತುಳಸಿ ಪುಡಿ ತೆಗೆದುಕೊಳ್ಳಿ. ಅದರಲ್ಲಿ ಒಂದು ಟೇಬಲ್ ಸ್ಪೂನ್ ತಾಜಾ ನಿಂಬೆರಸ ಸೇರಿಸಿ. ಈ ಎರಡನ್ನೂ  ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮುಖ, ಕುತ್ತಿಗೆಗೆಲ್ಲಾ ಹಚ್ಚಿ, 10 ನಿಮಿಷ ಹಾಗೆಯೇ ಬಿಡಿ. ನಂತರ.. ಮುಖವನ್ನು ತೊಳೆದು, ಮಾಯಿಶ್ಚರೈಸರ್ ಹಚ್ಚಿದರೆ ಸಾಕು.

ತುಳಸಿ, ಮೊಸರು ಫೇಸ್ ಮಾಸ್ಕ್
ಮೊಸರು ಪೌಷ್ಟಿಕ ಗುಣಗಳನ್ನು ಹೊಂದಿದೆ. ತುಳಸಿಯೊಂದಿಗೆ ಬೆರೆಸಿದರೆ, ಇದು ಫೇಸ್ ಮಾಸ್ಕ್ ಆಗಿ ಅದ್ಭುತವಾಗಿ ಕೆಲಸ ಮಾಡುತ್ತದೆ. ನೀವು ತುಳಸಿ ಮೊಸರು ಫೇಸ್ ಮಾಸ್ಕ್ ಅನ್ನು ಹೇಗೆ ತಯಾರಿಸಬಹುದೆಂದು ನೋಡೋಣ.. ಒಂದು ಬಟ್ಟಲಿನಲ್ಲಿ ಒಂದು ಟೇಬಲ್ ಸ್ಪೂನ್ ತುಳಸಿ ಪುಡಿ ತೆಗೆದುಕೊಳ್ಳಿ. ಅದಕ್ಕೆ ಒಂದು ಟೇಬಲ್ ಸ್ಪೂನ್ ಮೊಸರು ಸೇರಿಸಿ. ಈ ಎರಡನ್ನೂ ಬೆರೆಸಿ ಒಳ್ಳೆಯ ಪೇಸ್ಟ್‌ನಂತೆ ಮಾಡಿ. ಈಗ ಇದನ್ನು ನಿಮ್ಮ ಮುಖ, ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ನಂತರ ನೀರಿನಿಂದ ಸ್ವಚ್ಛಗೊಳಿಸಿದರೆ ಸಾಕು. ಸುಂದರವಾಗಿ ಹೊಳೆಯಬಹುದು.

Latest Videos

vuukle one pixel image
click me!