ನೀರು ಕಡಿಮೆ ಕುಡಿದ್ರೆ ಸಮಸ್ಯೆ… ಜಾಸ್ತಿ ಕುಡಿದ್ರೂ ತುಂಬಾನೆ ಸಮಸ್ಯೆ

Published : Mar 17, 2025, 04:16 PM ISTUpdated : Mar 17, 2025, 04:35 PM IST

ನೀರು ಕಡಿಮೆ ಕುಡೀಯೋದ್ರಿಂದ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಕಾಡುತ್ತೆ ನಿಜ. ಆದರೆ ಅತಿಯಾಗಿ ನಿರು ಕುಡಿಯೋದರಿಂದಲೂ ಸಮಸ್ಯೆಗಳು ಕಾಡುತ್ತವೆ ಅನ್ನೋದು ನಿಮಗೆ ಗೊತ್ತಿದ್ಯಾ? ಗೊತ್ತಿಲ್ಲ ಅಂದ್ರೆ ನಿಮಗಾಗಿ ಇಲ್ಲಿದೆ ಮಹತ್ವದ ಮಾಹಿತಿ.   

PREV
18
ನೀರು ಕಡಿಮೆ ಕುಡಿದ್ರೆ ಸಮಸ್ಯೆ… ಜಾಸ್ತಿ ಕುಡಿದ್ರೂ ತುಂಬಾನೆ ಸಮಸ್ಯೆ

ಜೀವನಕ್ಕೆ ನೀರು ಅತ್ಯಗತ್ಯ, ನೀರು ಕಡಿಮೆ ಕುಡಿಯೋದರಿಂದ ಏನೆಲ್ಲಾ ಸಮಸ್ಯೆಗಳು ಕಾಡುತ್ತದೆಯೇ? ಅದೇ ರೀತಿ ನೀರನ್ನು ಅತಿಯಾಗಿ ಕುಡಿಯುವುದು ಸಹ ಹಾನಿಕಾರಕ ಅನ್ನೋದು ನಿಮಗೆ ತಿಳಿದಿದೆಯೇ? ಹೆಚ್ಚು ನೀರು ಕುಡಿಯೋದರಿಂದ ಉಂಟಾಗುವ 7 ಪ್ರಮುಖ ಅನಾನುಕೂಲಗಳು ಇಲ್ಲಿವೆ. ಅವುಗಳ ಬಗ್ಗೆ ತಿಳಿಯೋಣ.
 

28

ಮೂತ್ರಪಿಂಡಗಳ ಮೇಲೆ ಅತಿಯಾದ ಹೊರೆ ಉಂಟಾಗುತ್ತೆ
ನಮ್ಮ ಮೂತ್ರಪಿಂಡಗಳು (kidney) ಹೆಚ್ಚುವರಿ ನೀರನ್ನು ಫಿಲ್ಟರ್ ಮಾಡಿ ನಮ್ಮ ದೇಹದಿಂದ ತ್ಯಾಜ್ಯವನ್ನು ತೆಗೆದುಹಾಕುತ್ತವೆ. ಆದಾಗ್ಯೂ, ನಾವು ಹೆಚ್ಚು ನೀರು ಕುಡಿದಾಗ, ಅದನ್ನು ಸಂಸ್ಕರಿಸಲು ನಮ್ಮ ಮೂತ್ರಪಿಂಡಗಳು ಹೆಚ್ಚು ಶ್ರಮಿಸಬೇಕಾಗುತ್ತೆ. ಇದು ಮೂತ್ರಪಿಂಡದ ಒತ್ತಡಕ್ಕೆ ಕಾರಣವಾಗಬಹುದು ಮತ್ತು ಕಾಲಾನಂತರದಲ್ಲಿ ಅವುಗಳ ದಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ.
 

38

ಅಗತ್ಯ ಎಲೆಕ್ಟ್ರೋಲೈಟ್ ಗಳನ್ನು ದುರ್ಬಲಗೊಳಿಸುತ್ತದೆ
ಸೋಡಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂತಹ ಎಲೆಕ್ಟ್ರೋಲೈಟ್ ಗಳು (electrolite) ದೈಹಿಕ ಕಾರ್ಯಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೆಚ್ಚುವರಿ ನೀರು ಸೇವನೆ ಎಲೆಕ್ಟ್ರೋಲೈಟ್ ಗಳನ್ನು ದುರ್ಬಲಗೊಳಿಸುತ್ತದೆ, ಇದು ಅಸಮತೋಲನಕ್ಕೆ ಕಾರಣವಾಗುತ್ತದೆ, ಇದರಿಂದ ಸ್ನಾಯು ಸೆಳೆತ, ದೌರ್ಬಲ್ಯ ಮತ್ತಿತರ ಸಮಸ್ಯೆಗಳು ಉಂಟಾಗುತ್ತವೆ.

48

ಅತಿಯಾದ ನೀರಿನಿಂದ ಇಂಟಾಕ್ಸಿಕೇಶನ್ ಉಂಟಾಗುತ್ತೆ
ಹೆಚ್ಚು ನೀರು ಕುಡಿಯುವುದು ಹೈಪೋನಾಟ್ರೇಮಿಯಾಕ್ಕೆ ಕಾರಣವಾಗಬಹುದು, ಈ ಸ್ಥಿತಿಯು ರಕ್ತದ ಹನಿಯಲ್ಲಿ ಸೋಡಿಯಂ ಮಟ್ಟವು ಅಪಾಯಕಾರಿಯಾಗಿ ಕಡಿಮೆಯಾಗುವಂತೆ ಮಾಡುತ್ತೆ. ಇದು  ವಾಕರಿಕೆ, ವಾಂತಿ, ಸೆಳೆತ ಮೊದಲಾದ ಸಮಸ್ಯೆ, ಕೊನೆಗೆ ಸಾವು ಉಂಟಾಗುವ ಸಾಧ್ಯತೆ ಕೂಡ ಇರುತ್ತೆ. 

58

ಮೂತ್ರವಿಸರ್ಜನೆ ಮತ್ತು ನಿದ್ರೆಗೆ ತೊಂದರೆಯಾಗುತ್ತೆ 
ನೀವು ಹೆಚ್ಚು ನೀರನ್ನು ಸೇವಿಸಿದಾಗ,  ದೇಹದಲ್ಲಿ ರಕ್ತದ ಪ್ರಮಾಣವು ಹೆಚ್ಚಾಗುತ್ತದೆ, ಇದು ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತೆ. ಇದು ಹೃದಯವನ್ನು ಹೆಚ್ಚು ಪಂಪ್ ಮಾಡುವಂತೆ ಮಾಡುತ್ತೆ, ಇದರಿಂದ ಹೃದ್ರೋಗದ ಅಪಾಯ ಹೆಚ್ಚಾಗಬಹುದು. 
 

68

ಕೈಗಳು, ಪಾದಗಳು ಮತ್ತು ಮುಖದಲ್ಲಿ ಊತ
ಅತಿಯಾದ ನೀರು ಸೇವನೆಯಿಂದ ದೇಹದ ವಿವಿಧ ಭಾಗಗಳಲ್ಲಿ ನೀರು ಸೇರುವ ಸಾಧ್ಯತೆ ಇದೆ.  ಇದರಿಂದಾಗಿ ನಿಮ್ಮ ಕೈಗಳು, ಪಾದಗಳು ಮತ್ತು ಮುಖದಲ್ಲಿ ಊತ ಕಾಣಿಸಿಕೊಳ್ಳುತ್ತೆ. 
 

78

ಜೀರ್ಣಕ್ರಿಯೆ ಮೇಲೆ ಪರಿಣಾಮ
ಅತಿಯಾದ ನೀರು ಹೊಟ್ಟೆಯ ಆಮ್ಲಗಳನ್ನು ದುರ್ಬಲಗೊಳಿಸುತ್ತದೆ, ಜೀರ್ಣಕ್ರಿಯೆಯನ್ನು ಕಡಿಮೆ ಮಾಡುತ್ತದೆ. ಇದು ಹೊಟ್ಟೆ ಉಬ್ಬರ, ಅಜೀರ್ಣ ಮೊದಲಾದ ಸಮಸ್ಯೆಗಳು ಉಂಟಾಗಲು ಕಾರಣವಾಗುತ್ತೆ. 

88

ದಿನಕ್ಕೆ ಎಷ್ಟು ನೀರು ಕುಡಿಯಬೇಕು? 
ಸಾಮಾನ್ಯವಾಗಿ, ವಯಸ್ಕರು ದಿನಕ್ಕೆ 2-3 ಲೀಟರ್ (8-12 ಲೋಟಗಳು) ನೀರನ್ನು ಕುಡಿಯಬೇಕು. ನೀವು ಸಾಕಷ್ಟು ನೀರು ಕುಡಿಯುತ್ತಿದ್ದೀರಾ ಎಂದು ಪರೀಕ್ಷಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ಮೂತ್ರದ ಬಣ್ಣವನ್ನು ಗಮನಿಸುವುದು. ತಿಳಿ ಹಳದಿ ಎಂದರೆ ಚೆನ್ನಾಗಿ ಹೈಡ್ರೇಟ್ ಆಗಿದ್ದರೆ, ಗಾಢ ಹಳದಿ ಎಂದರೆ ನಿರ್ಜಲೀಕರಣವನ್ನು ಸೂಚಿಸುತ್ತದೆ. ಜಾಗರೂಕರಾಗಿರಿ. 

click me!

Recommended Stories