ಪದೇ ಪದೇ ತೇಗು ಬರುತ್ತಾ? ಇದು ಗಂಭೀರ ಕಾಯಿಲೆಯ ಲಕ್ಷಣ

First Published | Aug 26, 2023, 4:37 PM IST

ಮಹಿಳೆಯೊಬ್ಬರಿಗೆ ಪದೆ ಪದೇ ತೇಗು ಬರುತ್ತಿತ್ತಂತೆ, ಇದು ಸಾಮಾನ್ಯ ತೇಗು ಎಂದು ಅದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಕೆಲವು ತಿಂಗಳುಗಳ ನಂತರ, ತೇಗು ಜೊತೆಗೆ, ವಾಂತಿ ಮತ್ತು ವಾಕರಿಕೆಯೂ ಬಂತು. ಆವಾಗ ಗೊತ್ತಾಯ್ತು ಇದೊಂದು ಗಂಭೀರಾ ಕಾಯಿಲೆಯ ಲಕ್ಷಣ ಎಂದು. 

ಆಹಾರವನ್ನು ಸೇವಿಸಿದ ನಂತರ ತೇಗು (burping) ಬರೋದು ಸಾಮಾನ್ಯವಾಗಿದೆ. ಇದು ನಿಮಗೂ ಆಗಿರಬಹುದು, ಮನೆಯಲ್ಲಿಗೆ ಯಾರಿಗೆ ಬೇಕಾದರೂ ಆಗಿರಬಹುದು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಸಾಮಾನ್ಯವಾಗಿ ಆಹಾರ ಸೇವಿಸಿದ ನಂತರ ತೇಗು ಬರುತ್ತೆ. ತೇಗು ಬಂದರೇನೆ ನಮಗೆ ಸಮಾಧಾನ. ಆದರೆ ಯಾರಿಗಾದರೂ ದಿನವಿಡೀ ನಿರಂತರವಾಗಿ ತೇಗು ಬರುತ್ತಿದ್ದರೆ, ಅದು ಗಂಭೀರ ಕಾಯಿಲೆಯ ಸಂಕೇತವಾಗಿರಬಹುದು. 

ಡೈಲಿಮೇಲ್ ವರದಿಯ ಪ್ರಕಾರ, 24 ವರ್ಷದ ಮಹಿಳೆಗೆ ಪದೇ ಪದೇ ತೇಗು ಬರುತ್ತಿತ್ತಂತೆ . ಆಕೆಗೆ ದಿನಕ್ಕೆ 5 ರಿಂದ 10 ಬಾರಿ ತೇಗು ಬರುತ್ತಿತ್ತಂತೆ. ಸ್ವಲ್ಪ ಸಮಯದ ನಂತರ, ಮಹಿಳೆಗೆ ನಿರಂತರ ತೇಗು ಆರಂಭವಾಯಿತು. ವೃತ್ತಿಯಲ್ಲಿ ನರ್ಸ್ ಆಗಿರುವ ಮಹಿಳೆಗೆ ಅನುಮಾನ ಬಂದಾಗ, ಅವರು ತಪಾಸಣೆಗೆ ಮಾಡಿಸಿದ್ರಂತೆ., ಅಲ್ಲಿ ಅವರಿಗೆ ಮೂರನೇ ಹಂತದ ಕರುಳಿನ ಕ್ಯಾನ್ಸರ್ (colon cancer) ಇರುವುದು ಪತ್ತೆಯಾಯಿತು.  
 

Latest Videos


ಪದೇ ಪದೇ ತೇಗು ಬರೋದ್ರಿಂದ ಮಹಿಳೆ ಅಸಮಾಧಾನಗೊಂಡಿದ್ದಳು. ಮಹಿಳೆಯ ಈ ಅಭ್ಯಾಸ ನೋಡಿ ಜನರು ನಗುತ್ತಿದ್ದರು ಅಥವಾ ಗೇಲಿ ಮಾಡುತ್ತಿದ್ದರು. ಮೊದಲಿಗೆ, ಆಕೆಗೆ ತೇಗು ಮಾತ್ರ ಬರುತ್ತಿತ್ತು,. ಆದರೆ ಕೆಲವು ತಿಂಗಳುಗಳ ನಂತರ, ತೇಗು ಜೊತೆಗೆ, ವಾಂತಿ (vomiting) ಮತ್ತು ವಾಕರಿಕೆ ಸಹ ಆರಂಭವಾಯಿತು. ಅಷ್ಟೇ ಅಲ್ಲ, ಆಕೆಗೆ ಸರಿಯಾಗಿ ಮಲವಿಸರ್ಜನೆ ಸಹ ಆಗ್ತಿರಲಿಲ್ಲ. ಜೊತೆಗೆ ಹೊಟ್ಟೆಯಲ್ಲಿ ನೋವು ಮತ್ತು ಸೆಳೆತ ಸಹ ಕಾಣಿಸಿಕೊಂಡಿತು. 

ಆಗಾಗ್ಗೆ ತೇಗು ಬರೋದು ಒಳ್ಳೆಯ ಸಂಕೇತವಲ್ಲ: ಮೊದಲಿಗೆ, ಕರುಳಿನಲ್ಲಿ ಸಣ್ಣ ಸಮಸ್ಯೆ ಇರಬಹುದು, ಅದು ಸಮಯದೊಂದಿಗೆ ತಾನಾಗಿಯೇ ಗುಣವಾಗುತ್ತದೆ ಎಂದು ಮಹಿಳೆ ಅಂದುಕೊಂಡಿದ್ದರಂತೆ. ಆದರೆ ಸಮಯ ಕಳೆದರೂ, ಯಾವುದೇ ಪರಿಹಾರ ಸಿಗದಿದ್ದಾಗ ಮತ್ತು ನೋವು (stomach pain) ಹೆಚ್ಚಾಗುತ್ತಲೇ ಇದ್ದಾಗ, ಮಹಿಳೆ ತಪಾಸಣೆಗಾಗಿ ಆಸ್ಪತ್ರೆಗೆ ಹೋದರು. 

ಮಹಿಳೆಯನ್ನು ಸಿಟಿ ಸ್ಕ್ಯಾನ್ಗೆ (CT Scan) ಒಳಪಡಿಸಲಾಯಿತು, ಇದರಿಂದ ಆಕೆಯ ದೊಡ್ಡ ಕರುಳಿನಲ್ಲಿ ಕ್ಯಾನ್ಸರ್ ಗೆಡ್ಡೆ ಆಗಿರೋದು ತಿಳಿದು ಬಂದಿದೆ. ಇದರ ನಂತರ, ಮಹಿಳೆಯನ್ನು ಬಯಾಪ್ಸಿಗೆ ಒಳಪಡಿಸಲಾಯಿತು, ಇದರಲ್ಲಿ ಅವರಿಗೆ ಮೂರನೇ ಹಂತದ ಕರುಳಿನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. 

ಕರುಳಿನ ಕ್ಯಾನ್ಸರ್ (Colon Cancer) ಇರೋದು ಪತ್ತೆಯಾದ ನಂತರ, ಮಹಿಳೆಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಕರುಳಿನ ಪೀಡಿತ ಭಾಗವನ್ನು ತೆಗೆದುಹಾಕಲು ಮಹಿಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕೆಲವು ದುಗ್ಧರಸ ಗ್ರಂಥಿಗಳನ್ನು ತೆಗೆದುಹಾಕಲಾಯಿತು. ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ಜನರಲ್ಲಿ ತೇಗು ಕಾಣಿಸಿಕೊಳ್ಳುವುದು ಒಂದು ಗಂಭೀರ ಲಕ್ಷಣವಾಗಿದೆ.

ಕರುಳಿನ ಕ್ಯಾನ್ಸರ್ ನ ಲಕ್ಷಣಗಳು
1. ಕರುಳಿನ ಅಭ್ಯಾಸದಲ್ಲಿ ಬದಲಾವಣೆಯನ್ನು ಅನುಭವಿಸುವುದು
2. ಗುದನಾಳದಿಂದ ರಕ್ತಸ್ರಾವ
3. ಮೋಷನ್ ಮಾಡುವಾಗ ರಕ್ತ (bleeding while motion)
4. ಹೊಟ್ಟೆ ನೋವು, ಗ್ಯಾಸ್, ಸೆಳೆತ
5. ಆಗಾಗ್ಗೆ ಮೋಷನ್ ಬರೋದು
6. ಯಾವುದೇ ಕಾರಣವಿಲ್ಲದೆ ತೂಕ ನಷ್ಟ
7. ಎಲ್ಲಾ ಸಮಯದಲ್ಲೂ ದಣಿವನ್ನು ಅನುಭವಿಸುವುದು

click me!