ಫ್ರೆಂಚ್ ಫ್ರೈಸ್ ಪ್ರಿಯರೇ ಎಚ್ಚರ! ನಿಮ್ಮ ಆರೋಗ್ಯಕ್ಕೆ ಕುತ್ತು ಖಂಡಿತ, ಕ್ಯಾನ್ಸರ್ ತಪ್ಪಿದ್ದಲ್ಲ!

First Published | Oct 1, 2024, 7:41 PM IST

ಫ್ರೆಂಚ್ ಫ್ರೈಸ್ ತಿಂದ್ರೆ ತೂಕ ಜಾಸ್ತಿ ಆಗುತ್ತೆ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಅಂತಾರೆ ವೈದ್ಯರು. ಹೈ ಟೆಂಪರೇಚರ್‌ನಲ್ಲಿ ಡೀಪ್ ಫ್ರೈ ಮಾಡೋದ್ರಿಂದ ಅನಾರೋಗ್ಯಕರ ಅಂಶಗಳು ಸೃಷ್ಟಿ ಆಗುತ್ತೆ.

ಫ್ರೆಂಚ್ ಫ್ರೈ  ಯಾರಿಗೆ ಇಷ್ಟವಿಲ್ಲ ಹೇಳಿ. ಹೆಸರು ಕೇಳ್ತಿದ್ದಂತೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಬಾಯಲ್ಲಿ ನೀರು ಬರುತ್ತೆ.  ಜನಪ್ರಿಯ ಫಾಸ್ಟ್ ಫುಡ್  ಫ್ರೆಂಚ್ ಫ್ರೈಯನ್ನು ಕೆಲವರು ವಾರಕ್ಕೆ ಎರಡು – ಮೂರು ಬಾರಿ ತಿನ್ನಲು ಇಷ್ಟಪಡ್ತಾರೆ. ಪ್ರತಿ ವರ್ಷ ಜುಲೈ 13 ರಂದು ಅಮೆರಿಕದಲ್ಲಿ  ನ್ಯಾಷನಲ್ ಫ್ರೆಂಚ್ ಫ್ರೈ ಡೇ ಆಚರಿಸಲಾಗುತ್ತದೆ. ಅಮೆರಿಕ (America) ದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಫ್ರೆಂಚ್ ಫ್ರೈಸ್ ಪ್ರಿಯರು ಈ ದಿನವನ್ನು ನ್ಯಾಷನಲ್ ಫ್ರೆಂಚ್ ಫ್ರೈ ಡೇ ಆಗಿ ಆಚರಿಸಲು ಇಷ್ಟಪಡುತ್ತಾರೆ.

ಒಮ್ಮೆ ತಿಂದ್ರೆ ಮತ್ತೆ ಮತ್ತೆ ತನ್ನ ಬಳಿ ಆಕರ್ಷಿಸುವ ಶಕ್ತಿ ಫ್ರೆಂಚ್ ಫ್ರೈಗೆ ಇದೆ. ಫ್ರೆಂಚ್ ಫ್ರೈಸ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಜಗತ್ತಿನಾದ್ಯಂತ ಫೇಮಸ್ ಇರೋ ಈ ಸ್ನ್ಯಾಕ್ಸ್ ಊರಿನಿಂದ ಹಿಡಿದು ಪೇಟೆವರೆಗೂ ಸಿಗುತ್ತೆ. ಆದ್ರೆ ಇದ್ರಿಂದ ಆರೋಗ್ಯ ಸಮಸ್ಯೆಗಳು ಬರೋ ಸಾಧ್ಯತೆ ಜಾಸ್ತಿ ಅಂತಾರೆ ವೈದ್ಯರು. ಫ್ರೆಂಚ್ ಫ್ರೈಸ್ ಜಾಸ್ತಿ ತಿಂದ್ರೆ ಬೊಜ್ಜು, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಕ್ಯಾನ್ಸರ್ ಬರಬಹುದು ಅಂತ ಎಚ್ಚರಿಕೆ ನೀಡಿದ್ದಾರೆ.

Tap to resize

ಫ್ರೆಂಚ್ ಫ್ರೈಸ್ ತಿಂದ್ರೆ ತೂಕ ಜಾಸ್ತಿ ಆಗುತ್ತದೆಯೇ?: ಹೌದು, ಹೊಸ ಸಂಶೋಧನೆಗಳ ಪ್ರಕಾರ, ಫ್ರೆಂಚ್ ಫ್ರೈಸ್ ತಿಂತಾನೇ ಇದ್ರೆ ತೂಕ ಜಾಸ್ತಿ ಆಗುತ್ತೆ. ಅಷ್ಟೇ ಅಲ್ಲದೆ ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಕ್ಯಾನ್ಸರ್ ಅಪ್ಪಳಿಸುವ risk ಕೂಡ ಜಾಸ್ತಿ ಇರುತ್ತೆ.

ಫ್ರೆಂಚ್ ಫ್ರೈಸ್ ಯಾಕೆ  ಹಾನಿಕಾರಕ?: ಫ್ರೆಂಚ್ ಫ್ರೈಸ್‌ ಅನ್ನ ತಯಾರಿಸೋ ವಿಧಾನದಿಂದಲೇ ಅದು ಹಾನಿಕಾರಕ ಅಂತಾರೆ ಆರೋಗ್ಯ ತಜ್ಞರು. ಹೈ ಟೆಂಪರೇಚರ್‌ನಲ್ಲಿ ಡೀಪ್ ಫ್ರೈ ಮಾಡೋದ್ರಿಂದ ಅದ್ರಲ್ಲಿ ಅನಾರೋಗ್ಯಕರ ಅಂಶಗಳು ಸೃಷ್ಟಿ ಆಗುತ್ತೆ. ಹೃದಯ ತಜ್ಞ ರವಿಂದರ್ ಸಿಂಗ್ ರಾವ್ ಹೇಳೋ ಪ್ರಕಾರ, ಫ್ರೆಂಚ್ ಫ್ರೈಸ್ ಮಾಡೋಕೆ ಯಾವ ತೈಲ ಬಳಸ್ತಾರೆ ಅನ್ನೋದೇ ಗೊತ್ತಿರಲ್ಲ. ಜಾಸ್ತಿ ಬಿಸಿ ಮಾಡಿದ ತೈಲ ಹೃದಯಕ್ಕೆ ತುಂಬಾ ಹಾನಿಕಾರಕ.

ಡಾ. ರಾವ್ ಹೇಳೋ ಹಾಗೆ, ಫ್ರೆಂಚ್ ಫ್ರೈಸ್ ಮಾಡೋಕೆ ಯಾವ ತೈಲ ಬಳಸ್ತಾರೆ, ಎಷ್ಟು ಸಲ ಅದೇ ತೈಲನ ಬಳಸಿದ್ದಾರೆ ಅನ್ನೋದೆ ಗೊತ್ತಿರಲ್ಲ. ರಿಪೀಟ್ ಮಾಡಿ ಬಳಸೋ ತೈಲದಲ್ಲಿ ಟ್ರಾನ್ಸ್ ಫ್ಯಾಟ್ ಜಾಸ್ತಿ ಇರುತ್ತೆ. ಇದು ಹೃದಯಕ್ಕೆ ತುಂಬಾ ಹಾನಿಕಾರಕ.

ಫ್ರೆಂಚ್ ಫ್ರೈ ಅಂದ್ರೆ ಆಲೂಗಡ್ಡೆ ಹುರಿದು ತಿನ್ನೋದು ಎಂಬ ವಿಷ್ಯ ಎಲ್ಲರಿಗೂ ಗೊತ್ತು. ಆದ್ರೆ ಈ ಆಲೂಗಡ್ಡೆ ಹುರಿದು ತಿನ್ನುವ ಪಾಕ ವಿಧಾನ ಎಲ್ಲಿಂದ ಶುರುವಾಯ್ತು ಗೊತ್ತಾ?. ಆಲೂಗಡ್ಡೆ ಹುರಿಯುವ ಅಭ್ಯಾಸವು ಮೊದಲು ಫ್ರಾನ್ಸ್ ಮತ್ತು ಉತ್ತರ ಬೆಲ್ಜಿಯಂನ ಸುತ್ತಮುತ್ತಲಿನ ಸ್ಥಳಗಳಲ್ಲಿ ಪ್ರಾರಂಭವಾಯಿತು.  

ಬೆಲ್ಜಿಯಂನ ಮಾಸ್ ಕಣಿವೆಯ ಬಳಿ ಒಂದು ಹಳ್ಳಿಯಿತ್ತು. ಈ ಹಳ್ಳಿಯ ಜನರು ನದಿಯಲ್ಲಿರುವ ಮೀನನ್ನು ಹಿಡಿದು ಅದನ್ನು ಫ್ರೈ ಮಾಡಿ ತಿನ್ನುತ್ತಿದ್ದರು. ಆದ್ರೆ ಚಳಿಗಾಲದಲ್ಲಿ ನದಿ ಮಂಜುಗಡ್ಡೆಯಾಗ್ತಿತ್ತು. ಆಗ ಮೀನುಗಳು ಸರಿಯಾಗಿ ಸಿಗ್ತಿರಲಿಲ್ಲ. ಹಾಗಾಗಿ ಅವರಿಗೆ ಸರಿಯಾದ ಆಹಾರ ಸಿಗ್ತಿರಲಿಲ್ಲ. ಹೊಟ್ಟೆ ತುಂಬಿಸಿಕೊಳ್ಳಲು ಅಲ್ಲಿನ ಜನರು ಆಲೂಗಡ್ಡೆ ಫ್ರೈ ಮಾಡಿ ತಿನ್ನಲು ಶುರು ಮಾಡಿದ್ರು. ಆಲೂಗಡ್ಡೆಯನ್ನೂ ಮೀನಿನ ರೀತಿಯಲ್ಲಿ ಕತ್ತರಿಸಿ ಫ್ರೈ ಮಾಡಿ ತಿನ್ನುತ್ತಿದ್ದರು. ಚಳಿಗಾಲದಲ್ಲಿ ಇದು ಅವರುಸ್ಥಿರ ಆಹಾರವಾಯಿತು.

 17 ನೇ ಶತಮಾನದ ಸಮಯದಲ್ಲಿ ಫ್ರೆಂಚ್ ಕ್ರಾಂತಿ ನಡೆಯುತ್ತಿತ್ತು. ಈ ವೇಳೆ  ಸೈನಿಕರಿಗೆ ತಿನ್ನಲು ಫ್ರೆಂಚ್ ಫ್ರೈಗಳನ್ನು ನೀಡಲಾಗುತ್ತಿತ್ತು. ಫ್ರಾನ್ಸ್ ನ ಪ್ರಸಿದ್ಧ ಪ್ಯಾರಿಸ್ ಸೇತುವೆಯ ನಂತರ ಇದನ್ನು ಫ್ರೈಟ್ಸ್ ಪಾಂಟ್ ನ್ಯೂಫ್ ಎಂದು ಕರೆಯಲಾಯಿತು. ಮೊದಲ ಮಹಾಯುದ್ಧದ ಸಮಯದಲ್ಲಿ ಅಮೇರಿಕನ್ ಸೈನ್ಯವು ಇಲ್ಲಿಗೆ ಬಂದಿತು. ಆಗ ಅಮೆರಿಕನ್ ಸೈನಿಕರು ಫ್ರೆಂಚ್ ಫ್ರೈ ಬಗ್ಗೆ ಬಗ್ಗೆ ತಿಳಿದುಕೊಂಡರು ಮತ್ತು ಅವರು ಅದನ್ನು ತುಂಬಾ ಇಷ್ಟಪಟ್ಟರು. ಅವರು ಇದನ್ನು ಮೊದಲು ಕೆಚಪ್, ಮೇಯನೀಸ್ ಮತ್ತು ವಿನೆಗರ್ ಜೊತೆಗೆ ತಿನ್ನಲು ಪ್ರಾರಂಭಿಸಿದರು. ನಂತರ ಅವರು ಅದಕ್ಕೆ ಫ್ರೆಂಚ್ ಫ್ರೈಸ್ ಎಂದು ನಾಮಕರಣ ಮಾಡಿದ್ರು. 

Latest Videos

click me!