ಸಾಕ್ಸ್ ಇಲ್ಲದೆ ಶೂ ಹಾಕಿದ್ರೆ ಏನಾಗುತ್ತೆ?, ತಪ್ಪಿಯೂ ಹೀಗೆ ಮಾಡಬೇಡಿ!

First Published | Sep 30, 2024, 5:09 PM IST

ಕೆಲವರು ಸಾಕ್ಸ್ ಹಾಕದೆ ಕೇವಲ ಶೂಗಳನ್ನು ಮಾತ್ರ ಹಾಕುತ್ತಾರೆ. ಆದರೆ ಈ ಅಭ್ಯಾಸದಿಂದ ಚರ್ಮದ ಸಮಸ್ಯೆಗಳು ಬರುತ್ತವೆ. 
 

ಇತ್ತೀಚಿನ ದಿನಗಳಲ್ಲಿ ಸಾಕ್ಸ್ ಇಲ್ಲದೆ ಶೂಗಳನ್ನು ಧರಿಸುವುದು ಟ್ರೆಂಡಿ ಆಗಿದೆ. ಹುಡುಗರಷ್ಟೇ ಅಲ್ಲ ಹುಡುಗಿಯರು ಸಹ ಇದನ್ನು ಅನುಸರಿಸುತ್ತಿದ್ದಾರೆ. ವಿಶೇಷವಾಗಿ ಯುವಕರು ಸಾಕ್ಸ್ ಗಳನ್ನು ಧರಿಸುವುದನ್ನೇ ಮರೆತು ಬಿಟ್ಟಿದ್ದಾರೆ. ಇದು ಇತ್ತೀಚಿನ ಟ್ರೆಂಡ್ ಆಗಿದ್ದರೂ ನಿಮ್ಮ ಆರೋಗ್ಯಕ್ಕೆ ಮಾತ್ರ ಒಳ್ಳೆಯದಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಸಾಕ್ಸ್ ಇಲ್ಲದೆ ಶೂಸ್ ಹಾಕಿದ್ರೆ ಸ್ಟೈಲಿಶ್ ಆಗಿ ಕಾಣ್ತೀರಿ. ಇದು ನಿಜ ಆದ್ರೆ.. ಸೇಫ್ಟಿ ಮಾತ್ರ ಅಲ್ಲ. ಹೌದು ಹೀಗೆ ಸಾಕ್ಸ್ ಇಲ್ಲದೆ ನೀವು ಕೇವಲ ಶೂಗಳನ್ನು ಮಾತ್ರ ಹಾಕಿದ್ರೆ ನಿಮ್ಮ ಆರೋಗ್ಯ ಹಾಳಾಗುತ್ತೆ.   

ಸಾಕ್ಸ್ ಇಲ್ಲದೆ ಶೂಗಳನ್ನು ಹೆಚ್ಚು ಹೊತ್ತು ಹಾಕಿದ್ರೆ ಪಾದಗಳಲ್ಲಿ ಖಂಡಿತ ಬೆವರು ಬರುತ್ತೆ. ಇದು ಸರ್ವೇ ಸಾಮಾನ್ಯ. ಆದ್ರೆ ಸಾಕ್ಸ್ ಈ ಬೆವರನ್ನು ಹೀರಿಕೊಂಡು ಪಾದಗಳನ್ನು ಒಣಗಿಸಲು ಸಹಾಯ ಮಾಡುತ್ತೆ. ಆದ್ರೆ ನೀವು ಸಾಕ್ಸ್ ಇಲ್ಲದೆ ಶೂಗಳನ್ನು ಹಾಕಿದ್ರೆ ಪಾದಗಳಲ್ಲಿ ತೇವಾಂಶ ಹೆಚ್ಚು ಹೊತ್ತು ಇರುತ್ತೆ. ಇದರಿಂದ ಫಂಗಸ್, ಬ್ಯಾಕ್ಟೀರಿಯಾ ಹೆಚ್ಚಾಗುತ್ತೆ. ಇದು  ನಿಮ್ಮನ್ನು ಬ್ಯಾಕ್ಟೀರಿಯಲ್, ಫಂಗಲ್ ಸೋಂಕುಗಳು, ಅಥ್ಲೀಟ್ಸ್ ಫೂಟ್ ಸೋಂಕುಗಳಿಗೆ ತುತ್ತಾಗುವಂತೆ ಮಾಡುತ್ತೆ. 

Tap to resize

ಪಾದಗಳಲ್ಲಿ ಗುಳ್ಳೆಗಳು: ಸಾಕ್ಸ್ ನಮ್ಮ ಪಾದಗಳಿಗೆ, ಶೂಗಳಿಗೆ ನಡುವೆ ರಕ್ಷಣಾ ಕವಚದಂತೆ ಕೆಲಸ ಮಾಡುತ್ತೆ. ಆದ್ರೆ ನೀವು ತುಂಬಾ ಹೊತ್ತು ಸಾಕ್ಸ್ ಇಲ್ಲದೆ ಶೂಗಳನ್ನು ಹಾಕಿಕೊಂಡು ನಡೆದರೂ, ಓಡಿದರೂ ಪಾದಗಳಲ್ಲಿ ಗುಳ್ಳೆಗಳು ಖಂಡಿತ ಬರುತ್ತವೆ. ಅಷ್ಟೇ ಅಲ್ಲದೆ ಇದು ನಿಮಗೆ ತುರಿಕೆ, ಕಿರಿಕಿರಿಯನ್ನು ಉಂಟುಮಾಡುತ್ತೆ. ಇದಲ್ಲದೆ ಸಾಕ್ಸ್ ಹಾಕದೆ ಕೇವಲ ಶೂಗಳನ್ನು ಮಾತ್ರ ಹಾಕಿದ್ರೆ ಕೆಲವೊಮ್ಮೆ ಶೂಸ್ ಬಿಗಿಯಾಗಿದೆ ಅಂತ ಅನಿಸಬಹುದು. ಇದರಿಂದ ನಿಮ್ಮ ಪಾದಗಳಿಗೆ ಗಾಯಗಳಾಗುವ ಸಾಧ್ಯತೆ ಇರುತ್ತೆ. ಬಿಗಿಯಾದ ಶೂಗಳಿಗೆ ಸಾಕ್ಸ್ ಹಾಕಿದ್ರೆ ಈ ಸಮಸ್ಯೆ ಬಹಳಷ್ಟು ಕಡಿಮೆಯಾಗುತ್ತೆ. 
 

ಪಾದದ ಚರ್ಮದ ಸೋಂಕು: ಹೆಚ್ಚು ಹೊತ್ತು ಸಾಕ್ಸ್ ಇಲ್ಲದೆ ಶೂಗಳನ್ನು ಧರಿಸುವುದರಿಂದ ಪಾದಗಳಲ್ಲಿ ತೇವಾಂಶ ಹೆಚ್ಚಾಗುತ್ತದೆ. ಅದೇ ರೀತಿ ಘರ್ಷಣೆ ಕೂಡ ಉಂಟಾಗುತ್ತದೆ. ಇದರಿಂದ ಚರ್ಮದ ಸೋಂಕುಗಳು ಬರುತ್ತವೆ. ಈ ಸೋಂಕು ಹೆಚ್ಚಾದರೆ ಸೆಲ್ಯುಲೈಟಿಸ್ ನಂತಹ ಅಪಾಯಕಾರಿ ಸಮಸ್ಯೆಗಳು ಬರುತ್ತವೆ.  ಇದನ್ನು ಆರಂಭದಲ್ಲಿ ಗುರುತಿಸದಿದ್ದರೆ ಪರಿಸ್ಥಿತಿ ಗಂಭೀರವಾಗುತ್ತದೆ. ಅದಕ್ಕೆ ನಿಮ್ಮ ಪಾದಗಳಲ್ಲಿ ಯಾವುದೇ ಸೋಂಕು ಹಲವು ದಿನಗಳವರೆಗೆ ಇದ್ದರೆ ತಕ್ಷಣ ಆಸ್ಪತ್ರೆಗೆ ಹೋಗಿ. 
 

ಶೂಗಳು

ದುರ್ವಾಸನೆ: ಸಾಕ್ಸ್ ಇಲ್ಲದೆ ಶೂಗಳನ್ನು ಧರಿಸುವುದರಿಂದ ನಿಮ್ಮ ಪಾದಗಳಲ್ಲಿ ತೇವಾಂಶ ಹೆಚ್ಚಾಗುತ್ತದೆ. ಇದರಿಂದ ಪಾದಗಳಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತದೆ. ಇದರಿಂದ ನಿಮ್ಮ ಪಾದಗಳಿಂದ ಆಗಾಗ್ಗೆ ದುರ್ವಾಸನೆ ಬರುತ್ತದೆ. ವಿಶೇಷವಾಗಿ ಸಾಕ್ಸ್ ಇಲ್ಲದೆ ಲೆದರ್ ಶೂಗಳನ್ನು ಯಾವಾಗಲೂ ಧರಿಸುವವರಿಂದ ದುರ್ವಾಸನೆ ಹೆಚ್ಚಾಗಿ ಬರುತ್ತದೆ. ಇದರಿಂದ ನೀವು ಕೆಲವು ಸಂದರ್ಭಗಳಲ್ಲಿ ತುಂಬಾ ಮುಜುಗರ ಅನುಭವಿಸಬೇಕಾಗುತ್ತದೆ. ಈ ಸಮಸ್ಯೆಗಳೇ ಬರಬಾರದು ಅಂದ್ರೆ ಸಾಕ್ಸ್ ಇಲ್ಲದೆ ಶೂಗಳನ್ನು ಧರಿಸುವುದನ್ನು ನಿಲ್ಲಿಸಿ. ಇದರ ಜೊತೆಗೆ ಸಾಕ್ಸ್ ಗಳನ್ನು ಪ್ರತಿದಿನ ಸ್ವಚ್ಛಗೊಳಿಸಿ ಧರಿಸುವ ಅಭ್ಯಾಸ ಮಾಡಿಕೊಳ್ಳಿ. 

Latest Videos

click me!