ಈ ಆಹಾರಗಳು ಹೃದಯದ ಶತ್ರು…, ತಕ್ಷಣವೇ ಅವೈಯ್ಡ್ ಮಾಡಿ!

First Published | Dec 30, 2022, 6:02 PM IST

ಇತ್ತೀಚಿನ ದಿನಗಳಲ್ಲಿ, ಬದಲಾಗುತ್ತಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರಗಳಿಂದಾಗಿ, ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ನೀವು ನಿಮ್ಮ ಆಹಾರದ ಬಗ್ಗೆ ಗಮನ ಹರಿಸಿದರೆ, ನೀವು ಹೃದಯವನ್ನು ಆರೋಗ್ಯಕರವಾಗಿಡಬಹುದು. ಯಾವ ಆಹಾರ ಹೃದಯಕ್ಕೆ ಹಾನಿಕಾರಕ ಎಂದು ತಿಳಿಯೋಣ.

ಏನೇ ಹೇಳಿ, ಹೃದಯ ಆರೋಗ್ಯಕರವಾಗಿದ್ರೆ ಮಾತ್ರ ನೀವು ಸಂಪೂರ್ಣವಾಗಿ ಆರೋಗ್ಯದಿಂದ ಇರಲು ಸಾಧ್ಯ. ಹೃದಯ ಆರೋಗ್ಯಕರವಾಗಿರಲು (healthy heart) ನೀವು ಹೆಚ್ಚೇನೂ ಕಷ್ಟ ಪಡಬೇಕಾಗಿಲ್ಲ. ಸರಿಯಾದ ಆಹಾರ ಕ್ರಮ, ಒಂದಷ್ಟು ವ್ಯಾಯಾಮ, ಧ್ಯಾನ, ಆರೋಗ್ಯ ತಪಾಸಣೆ ಮಾಡಿಸಿದ್ರೆ, ಖಂಡಿತವಾಗಿಯೂ ಆರೋಗ್ಯ ಉತ್ತಮವಾಗಿರುತ್ತೆ. ಮುಖ್ಯವಾಗಿ ನೀವು ಸೇವಿಸುವ ಅಹಾರದ ಬಗ್ಗೆ ನೀವು ಎಚ್ಚರದಿಂದಿರಬೇಕು. ಯಾಕೆಂದ್ರೆ, ನಿಮ್ಮ ಬಾಯಿಗೆ ರುಚಿ ಎನಿಸುವ ಎಲ್ಲಾ ಆಹಾರಗಳು ಹೃದಯಕ್ಕೆ ಒಳ್ಳೆಯದಾಗಿರೋದಿಲ್ಲ. ಅಂತಹ ಆಹಾರಗಳ ಬಗ್ಗೆ ನೀವು ಒಂದಿಷ್ಟು ಮಾಹಿತಿಯನ್ನು ತಿಳಿದುಕೊಂಡ್ರೆ ಹೃದಯ ಆರಾಮವಾಗಿರುತ್ತೆ. 

ಆರೋಗ್ಯವಾಗಿರಲು ಹೃದಯದ ಬಗ್ಗೆ ಕಾಳಜಿ ವಹಿಸೋದು ಬಹಳ ಮುಖ್ಯ. ಬದಲಾಗುತ್ತಿರುವ ಜೀವನಶೈಲಿ ಮತ್ತು ತಪ್ಪು ಆಹಾರದಿಂದಾಗಿ, ಜನರು ಅನೇಕ ಗಂಭೀರ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗಳ (heart related problems) ಸಂದರ್ಭದಲ್ಲಿ ಆಹಾರ ಪದಾರ್ಥಗಳು ಸಹ ಪ್ರಮುಖ ಪಾತ್ರ ವಹಿಸುತ್ತವೆ. 

Tap to resize

ಕೆಲವು ಆಹಾರ ಹೃದಯವನ್ನು ಆರೋಗ್ಯಕರವಾಗಿರಿಸುತ್ತವೆ, ಹಾಗೇ ಅನೇಕ ರೀತಿಯ ಆಹಾರ ಸೇವಿಸೋದು ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಹೃದಯವನ್ನು ಆರೋಗ್ಯಕರವಾಗಿಡಲು ನೀವು ಯಾವ ಆಹಾರಗಳನ್ನು ತಿನ್ನಬಾರದು ಎಂದು ತಿಳಿಯೋಣ. 

ಸೋಡಾ ಕುಡಿಯೋದನ್ನು ತಪ್ಪಿಸಿ (avoid soda)

ನಿಯಮಿತವಾಗಿ ಸೋಡಾ ಕುಡಿಯೋದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಬಹುದು. ಇದು ಹೃದ್ರೋಗದ ಅಪಾಯವನ್ನು ಸಹ ಹೆಚ್ಚಿಸುತ್ತೆ. ಆದ್ದರಿಂದ, ಅತಿಯಾಗಿ ಸೋಡಾ ಕುಡಿಯೋದು ಹೃದಯಕ್ಕೆ ಹಾನಿಕಾರಕ. ಇವುಗಳನ್ನು ಅವಾಯ್ಡ್ ಮಾಡಿ, ನೀರು, ಜ್ಯೂಸ್ ಮೊದಲಾದ ಪಾನೀಯಗಳ ಸೇವನೆ ಹೆಚ್ಚಿಸೋದು ಬೆಸ್ಟ್.

ರೆಡ್ ಮೀಟ್ ತಿನ್ನೊದನ್ನು ಅವಾಯ್ಡ್ ಮಾಡಿ (avoid red meat)

ರೆಡ್ ಮೀಟ್‌ನಲ್ಲಿರುವ ಕೊಲೆಸ್ಟ್ರಾಲ್, ಉಪ್ಪು, ಸ್ಯಾಚುರೇಟೆಡ್ ಕೊಬ್ಬು ಹೃದಯದ ಆರೋಗ್ಯಕ್ಕೆ ಹಾನಿಕಾರಕ. ಹೃದಯವನ್ನು ಆರೋಗ್ಯಕರವಾಗಿಡಲು ಕೆಂಪು ಮಾಂಸ ಸೇವಿಸಬಾರದು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ.ಹಾಗಾಗಿ ರೆಡ್ ಮೀಟ್ ಅವಾಯ್ಡ್ ಮಾಡಿ. 

ಪಿಜ್ಜಾ ಹೃದಯಕ್ಕೆ ಹಾನಿಕಾರಕ (pizza is dangerous to heart)

ಪ್ರತಿಯೊಬ್ಬರೂ ಪಿಜ್ಜಾವನ್ನು ತುಂಬಾ ಇಷ್ಟಪಡುತ್ತಾರೆ. ಆದರೆ, ಇದು ಆರೋಗ್ಯಕ್ಕೆ ತುಂಬಾ ಡೇಂಜರ್. ಇದು ಹೆಚ್ಚಿನ ಪ್ರಮಾಣದ ಕೊಬ್ಬು ಮತ್ತು ಸೋಡಿಯಂ ಹೊಂದಿರುತ್ತೆ. ಇದು ಆರ್ಟರಿಯನ್ನು ಬ್ಲಾಕ್ ಮಾಡಬಹುದು. ಇದರಿಂದ ಹೃದಯಕ್ಕೆ ತೊಂದರೆಯೇ ಹೆಚ್ಚು. ನಿಮಗೂ ಪಿಜ್ಜಾ ಇಷ್ಟವಾಗಿದ್ದರೆ, ಹೃದಯದ ಆರೋಗ್ಯಕ್ಕಾಗಿ ಇದನ್ನು ಸೇವಿಸೋದನ್ನು ಅವಾಯ್ಡ್ ಮಾಡೋದು ಬೆಸ್ಟ್.

ಬೇಕ್ ಮಾಡಿದ ಆಹಾರ ಹಾನಿಕಾರಕ (be carefull about baked items)

ಜನರು ಹೆಚ್ಚಾಗಿ ಸಣ್ಣ ಹಸಿವನ್ನು ನೀಗಿಸಲು ಕುಕೀಸ್, ಕೇಕ್, ಮಫಿನ್ ಗಳನ್ನು ತಿನ್ನುತ್ತಾರೆ. ಆದರೆ, ಅವು ಹೃದಯದ ಆರೋಗ್ಯಕ್ಕೆ ಹಾನಿಕಾರಕ. ಇದು ಹೆಚ್ಚಿನ ಪ್ರಮಾಣದ ಸಕ್ಕರೆ ಹೊಂದಿರುತ್ತೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು, ಇದು ಹೃದಯಕ್ಕೆ ಹಾನಿ ಉಂಟುಮಾಡಬಹುದು ಎಚ್ಚರ.

ಹೆಚ್ಚು ಉಪ್ಪು ಸೇವಿಸಬೇಡಿ (do not eat salty food)

ನೀವು ಹೆಚ್ಚು ಉಪ್ಪನ್ನು ಸೇವಿಸಿದ್ರೆ, ಅದು ಅಧಿಕ ರಕ್ತದೊತ್ತಡ ಉಂಟುಮಾಡುತ್ತೆ, ಇದು ಹೃದ್ರೋಗಗಳಿಗೆ ಕಾರಣವಾಗಬಹುದು. ಈ ಅಪಾಯವನ್ನು ತಪ್ಪಿಸಲು, ಉಪ್ಪನ್ನು ಮಿತ ಪ್ರಮಾಣದಲ್ಲಿ ಸೇವಿಸಿ. ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ.  ಈ ಆಹಾರಗಳನ್ನು ಅವಾಯ್ಡ್ ಮಾಡಿದ್ರೆ ಹೃದಯ ಆರೋಗ್ಯವಾಗಿರೋದ್ರಲ್ಲಿ ಡೌಟೇ ಇಲ್ಲ. 
 

Latest Videos

click me!