ವಿಶ್ವದ ಆಗರ್ಭ ಶ್ರೀಮಂತ ಎಲಾನ್ ಮಸ್ಕ್ 53ರಲ್ಲೂ ಫಿಟ್ ಆಗಿರಲು ಕಾರಣ ಏನು ಗೊತ್ತಾ?

Published : Jan 25, 2025, 03:17 PM ISTUpdated : Jan 25, 2025, 03:22 PM IST

ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ತಮ್ಮ ಸಾಮರ್ಥ್ಯ ಮತ್ತು ಫಿಟ್ನೆಸ್ನಿಂದ ವಾವ 53ರ ವಯಸ್ಸಿನಲ್ಲೂ ಮೋಡಿ ಮಾಡ್ತಿದ್ದಾರೆ. ಅವರು ಇಷ್ಟೊಂದು ಫಿಟ್ ಆಗಿರೋದಕ್ಕೆ ಅವರು ಅನುಸರಿಸುವ ಆಹಾರ ಕ್ರಮಗಳೇನು? ಯಾವ ವ್ಯಾಯಾಮ ಮಾಡುತ್ತಾರೆ ಅನ್ನೋದನ್ನು ನೋಡೋಣ.   

PREV
17
ವಿಶ್ವದ ಆಗರ್ಭ ಶ್ರೀಮಂತ ಎಲಾನ್ ಮಸ್ಕ್ 53ರಲ್ಲೂ ಫಿಟ್ ಆಗಿರಲು ಕಾರಣ ಏನು ಗೊತ್ತಾ?

ಟೆಸ್ಲಾ ಮತ್ತು ಸ್ಪೇಸ್-ಎಕ್ಸ್ ನಂತಹ ಕಂಪನಿಗಳ ಮಾಲೀಕ ಮತ್ತು ವಿಶ್ವದ ಅತ್ಯಂತ ಶ್ರೀಮಂತ (World richest person) ವ್ಯಕ್ತಿ ಎಲಾನ್ ಮಸ್ಕ್ ಪ್ರತಿಯೊಬ್ಬರೂ ತಿಳಿದುಕೊಳ್ಳಲು ಇಷ್ಟಪಡುವ ವ್ಯಕ್ತಿ. ಮಸ್ಕ್ ಅವರಿಗೆ 53 ವರ್ಷ ವಯಸ್ಸು, ಆದರೆ ಅವರ ಫಿಟ್ನೆಸ್ ಅದ್ಭುತವಾಗಿದೆ. ಅವರು ಇಷ್ಟೊಂದು ಫಿಟ್ ಆಗಿರಲು ಏನು ಮಾಡ್ತಾರೆ? ಅವರ ಆಹಾರ, ಜೀವನ ಕ್ರಮ ಹೇಗಿರುತ್ತೆ ನೋಡೋಣ. 
 

27

ಟೆಸ್ಲಾ ಮಾಲೀಕ ಎಲಾನ್ ಮಸ್ಕ್ (Elon Musk) ತಮ್ಮ ಡಯಟ್ ನಲ್ಲಿ ಆರೋಗ್ಯಕರ ಆಹಾರ ಮತ್ತು ದೈನಂದಿನ ದಿನಚರಿಯಲ್ಲಿ ವ್ಯಾಯಾವನ್ನು ಮಿಸ್ ಮಾಡಿಕೊಳ್ಳೋದಿಲ್ಲ ಎಂದಿದ್ದಾರೆ. 53 ನೇ ವಯಸ್ಸಿನಲ್ಲಿಯೂ ಅವರು 40 ವರ್ಷದವರಂತೆ ಕಾಣಲು ಇದು ಕಾರಣವಾಗಿದೆ. ಮಸ್ಕ್ ಸಂದರ್ಶನವೊಂದರಲ್ಲಿ ಅವರು ಇಂಟರ್ ಮಿಟೆಂಟ್ ಫಾಸ್ಟಿಂಗ್ (intermittent fasting) ಮಾಡುತ್ತಾರೆ ಎಂದಿದ್ದಾರೆ. ಈ ಮೂಲಕ ಅವರು ಸುಮಾರು 9 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ.
 

37

ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ನ ವರದಿಯಲ್ಲಿ, ಇಂಟರ್ ಮಿಟೆಂಟ್ ಫಾಸ್ಟಿಂಗ್ ಸಮನಾದ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಕೆಲವು ರೋಗಗಳನ್ನು ತಡೆಗಟ್ಟಲು ಅಥವಾ ಹಿಮ್ಮೆಟ್ಟಿಸಲು ಅತ್ಯುತ್ತಮ ಮಾರ್ಗವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಲಾನ್ ಮಸ್ಕ್ ಅವರ ಡಯಟ್ ಮತ್ತು ವರ್ಕೌಟ್ ಶೆಡ್ಯೂಲ್ ಎಲ್ಲವೂ ಅವರ ಫಿಟ್ನೆಸ್ ಗೆ (fitness secret) ಮುಖ್ಯ ಕಾರಣವಾಗಿದೆ. 
 

47

ಎಲಾನ್ ಮಸ್ಕ್ ಏನು ತಿನ್ನುತ್ತಾರೆ?
ವರದಿಗಳ ಪ್ರಕಾರ, ಎಲಾನ್ ಮಸ್ಕ್ ತನ್ನ ಆಹಾರದ ಬಗ್ಗೆ ತುಂಬಾ ಕಟ್ಟುನಿಟ್ಟಾಗಿದ್ದಾರೆ ಮತ್ತು ಪ್ರತಿದಿನ ಹೆಚ್ಚಾಗಿ ಸರಳ ಮತ್ತು ಮನೆಯಲ್ಲಿ ತಯಾರಿಸಿದ (homely food) ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಅವರ ದೈನಂದಿನ ಆಹಾರದಲ್ಲಿ ಮಾಂಸ, ಹಣ್ಣುಗಳು, ತರಕಾರಿಗಳು ಮತ್ತು ಒಣ ಹಣ್ಣುಗಳನ್ನು ಸೇರಿರುತ್ತವೆ, ಯಾಕಂದ್ರೆ ಮಸ್ಕ್ ಅವುಗಳನ್ನು ಸೇವಿಸಲು ಇಷ್ಟಪಡ್ತಾರೆ. ಇದಲ್ಲದೆ, ಅವನು ತನ್ನನ್ನು ಹೈಡ್ರೇಟ್ ಆಗಿಡಲು ಸಾಕಷ್ಟು ನೀರು ಕುಡಿಯುತ್ತಾರೆ.

57

ಯಾವ ಜಂಕ್ ಫುಡ್ ಇಷ್ಟ?
ಎಲಾನ್ ಮಸ್ಕ್ ಆರೋಗ್ಯಕರ ಆಹಾರವನ್ನು ಮಾತ್ರ ತಿನ್ನೋದಲ್ಲ, ಅದರ ಜೊತೆ ಅವರು ಡೊನಟ್ಸ್ (doughnuts)  ತಿನ್ನಲು ಇಷ್ಟಪಡುತ್ತಾರೆ. ಇದಲ್ಲದೆ, ಅವರ ಆಹಾರದಲ್ಲಿ ಸುಶಿ, ಕಾಫಿ ಮತ್ತು ಡಯಟ್ ಕೋಕ್ ಕೂಡ ಸೇರಿದೆ. ಎಲಾನ್ ಮಸ್ಕ್ ತಮ್ಮ ಸಂದರ್ಶನವೊಂದರಲ್ಲಿ ತಾವು ಬೆಳಗ್ಗಿನ ಬ್ರೇಕ್ ಫಾಸ್ಟ್ ಸೇವಿಸೋದಿಲ್ಲ, ಅದಕ್ಕಾಗಿ ಸಮಯ ಇರೋದಿಲ್ಲ ಎಂದಿದ್ದಾರೆ. ಆದರೆ ಕಾಫಿ ಮಿಸ್ ಮಾಡೋದಿಲ್ವಂತೆ. 
 

67

ಎಲಾನ್ ಮಸ್ಕ್ ಎಷ್ಟು ಗಂಟೆಗಳ ಕಾಲ ಮಲಗುತ್ತಾರೆ?
ಸದೃಢವಾಗಿರಲು ಸಾಕಷ್ಟು ನಿದ್ರೆ ಬಹಳ ಮುಖ್ಯ. ಎಲಾನ್ ಮಸ್ಕ್ ಅವರ ಸ್ಲೀಪಿಂಗ್ ಸರ್ಕಲ್ (sleeping circle) ಬಗ್ಗೆ ಹೇಳೋದಾದ್ರೆ, ಅವರು ರಾತ್ರಿ ಸುಮಾರು 1 ಗಂಟೆಗೆ ಮಲಗುತ್ತಾರೆ, ಹಾಗೂ ಬೆಳಗ್ಗೆ 7 ಗಂಟೆಗೆ ಎದ್ದೇಳುತ್ತಾರೆ. ಒಟ್ಟಲ್ಲಿ ಅವರು ಕೇವಲ 6 ಗಂಟೆಗಳ ಕಾಲ ನಿದ್ದೆ ಮಾಡ್ತಾರೆ. 

77

ಎಲಾನ್ ಮಸ್ಕ್ ಯಾವ ವ್ಯಾಯಾಮಗಳನ್ನು ಮಾಡುತ್ತಾರೆ?
ಎಲಾನ್ ಮಸ್ಕ್ ಅವರ ಫಿಟ್ನೆಸ್ನಲ್ಲಿ ಆಹಾರ ಮಾತ್ರವಲ್ಲದೆ ವ್ಯಾಯಾಮಗಳು ಸಹ ಪ್ರಮುಖ ಪಾತ್ರವಹಿಸುತ್ತವೆ. ವರದಿಗಳ ಪ್ರಕಾರ, ಎಲಾನ್ ತನ್ನ ಬಾಡಿ ಮಸಲ್ಸ್ ಕಾಪಾಡಿಕೊಳ್ಳಲು ಟ್ರೆಡ್ ಮಿಲ್ ರನ್ನಿಂಗ್ ಮತ್ತು ವೈಟ್ ಲಿಫ್ಟ್ ಮಾಡ್ತಾರೆ. ಇದಲ್ಲದೆ, ಅವರು ಪುಷ್ ಅಪ್ಸ್, ಪುಲ್ ಅಪ್ಸ್, ಪ್ಲಾಂಕ್ಸ್ ಮತ್ತು ಸ್ಕ್ವಾಟ್ಗಳಂತಹ ವ್ಯಾಯಾಮಗಳನ್ನು ಸಹ ಮಾಡ್ತಾರೆ.
 

Read more Photos on
click me!

Recommended Stories