ಗರ್ಭಧಾರಣೆಯು (Pregnancy) ಬಹಳ ಸೂಕ್ಷ್ಮವಾದ ಹಂತವಾಗಿದೆ. ಈ ಸಮಯದಲ್ಲಿ ಗರ್ಭಿಣಿಯ ಬಗ್ಗೆ ಎಷ್ಟು ಜಾಗರೂಕತೆ ವಹಿಸಿದರೂ ಕೂಡ ಕಡಿಮೆಯೇ. ಈ ದಿನಗಳಲ್ಲಿ, ಗರ್ಭಿಣಿಯರನ್ನು ಆರೋಗ್ಯಕರವಾಗಿ ಮತ್ತು ಸುರಕ್ಷಿತವಾಗಿಡಲು, ಮನೆಯ ಹಿರಿಯರು ಕೆಲವು ಆಹಾರಗಳನ್ನು ತಿನ್ನಬಾರದು, ಸಾಧ್ಯವಾದಷ್ಟು ಅವಾಯ್ಡ್ ಮಾಡಿ ಎನ್ನುತ್ತಾರೆ. ಅವುಗಳಲ್ಲಿ ಒಂದು ಶುಂಠಿ. ಗರ್ಭಿಣಿಯರು ಶುಂಠಿಯನ್ನು ತಿನ್ನಬಾರದು. ಇದು ತಾಯಿ ಮತ್ತು ಮಗು ಇಬ್ಬರಿಗೂ ಹಾನಿಯನ್ನುಂಟು ಮಾಡುತ್ತದೆ ಎನ್ನಲಾಗುತ್ತೆ. ಆದರೆ ಇದು ನಿಜವೇ ? ಸುಳ್ಳೇ? ಅನ್ನೋದನ್ನು ತಿಳಿಯೋಣ.