ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಲಬುರಗಿಯಲ್ಲಿ ಆರಂಭಗೊಂಡಿರುವ ಜನಸ್ನೇಹಿ ಹೆಲ್ತ್ ಎಟಿಎಂ. ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಿಎಂ ಸಿದ್ದರಾಮಯ್ಯನವರು ಉದ್ಘಾಟಿಸಿದ ಈ ಯೋಜನೆಯಿಂದ ಸಾರ್ವಜನಿಕರು ಆರೋಗ್ಯ ಪರೀಕ್ಷೆಯ ರಿಪೋರ್ಟ್‌ಗಳನ್ನು ಪಡೆಯಬಹುದಾಗಿದೆ. ಇದರಿಂದ ಆಸ್ಪತ್ರೆಗಳ ಮುಂದೆ ಕ್ಯೂ ನಿಲ್ಲುವುದು, ಅನವಶ್ಯಕ ಹಣ ಖರ್ಚು ಮಾಡುವುದು ತಪ್ಪಲಿದೆ.
ಇಲ್ಲಿವರೆಗೆ ಜನರು ಎಟಿಎಂ ಅಂದ್ರೆ ಕೇವಲ ಹಣ ತೆಗೆಯಲು ಬಳಸುವ ಮಷಿನ್ ಎಂದೇ ನಂಬಿದ್ದರು. ಆದರೆ ಇಲ್ಲಿ ಕೇಳಿ ಇನ್ಮುಂದೆ ಎಟಿಎಂನಿಂದ ಹಣವಷ್ಟೇ ಅಲ್ಲ, ಹೆಲ್ತ್ ರಿಪೋರ್ಟ್ ಕೂಡ ಪಡೆಯಬಹುದಾಗಿದೆ. ರಾಜ್ಯ ಸರ್ಕಾರದ ಹೆಲ್ತ್ ಡಿಪಾರ್ಟ್‌ಮೆಂಟ್‌ನಿಂದ ಮೊದಲ ಬಾರಿಗೆ ಕಲಬುರಗಿ ಜಿಲ್ಲೆಯಲ್ಲಿ ಇಂಥದ್ದೊಂದು ಹೆಲ್ತ್ ಎಟಿಎಂ ಪ್ರಾರಂಭೀಸಿದೆ.. ಕೇವಲ ಹತ್ತು ನಿಮಿಷದಲ್ಲೇ ಸಾರ್ವಜನಿಕರು ಹೆಲ್ತ್ ರಿಪೋರ್ಟ್ ಪಡೆಯಬಹುದಾಗಿದೆ.
24
ಕಲ್ಯಾಣ ಕರ್ನಾಟಕ ಉತ್ಸವದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲೇ ಮೊದಲ ಬಾರಿಗೆ ಕಲಬುರಗಿಯಲ್ಲಿ ಸ್ಮಾರ್ಟ್ ಹೆಲ್ತ್ ಕಿಯೋಸ್ಕ್ ಅನ್ನು ಉದ್ಘಾಟಿಸಿದರು. ಇದರಿಂದ ಆರೋಗ್ಯ ಸಮಸ್ಯೆಗಳಿಗೆ ಸಾರ್ವಜನಿಕರು ಆಸ್ಪತ್ರೆಗೆ ಅಲೆಯುವುದು ತಪ್ಪಲಿದೆ. ಮುಖ್ಯವಾಗಿ ಬಡವರಿಗೆ ಸದುಪಯೋಗವಾಗಲಿದೆ.
'ಆರೋಗ್ಯ ಮಿತ್ರ' ಯೋಜನೆಯಡಿ ಆರಂಭಿಸಿರುವ ಈ ಯೋಜನೆಗೆ ಹೆಚ್.ಪಿ.ಎಂಟರ್‌ಪ್ರೈಸಸ್‌ನಿಂದ 25 ಹೆಲ್ತ್ ಎಟಿಎಂ ಘಟಕಗಳನ್ನು ಕಲಬುರಗಿಗೆ ನೀಡಿದೆ. CSR ಅನುದಾನದ ಅಡಿ ಪಡೆದ ಎಟಿಎಂ ಘಟಕಗಳನ್ನು ಕಲ್ಯಾಣ ಕರ್ನಾಟಕ ದಿನದಿಂದೇ ಕಲಬುರಗಿ ಜನತೆಗೆ ಬಂಪರ್ ಗಿಫ್ಟ್ ಕೊಟ್ಟಿರುವ ಸಿದ್ದರಾಮಯ್ಯ.
34
ಹೆಲ್ತ್ ಎಟಿಎಂನಿಂದ ಎಲ್ಲ ಪರೀಕ್ಷೆಗಳನ್ನು ಸಾರ್ವಜನಿಕರೇ ಮಾಡಿಕೊಳ್ಳಲು ಬರುವುದಿಲ್ಲ ಎಂಬುದು ಗಮನಿಸಬೇಕು. ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆಯಂಥ ಕೆಲವು ನಿರ್ಧಿಷ್ಟ ಟೆಸ್ಟ್‌ಗಳನ್ನು ಅಲ್ಲಿನ ಲ್ಯಾಬ್ ಟೆಕ್ನಿಷಿಯನ್ ಮಾಡಿದರೆ ಉಳಿದ ಸಾಮಾನ್ಯ ಪರೀಕ್ಷೆಗಳಾದ ಬ್ಲಡ್, ಆಕ್ಸಿಜನ್ ಲೆವೆಲ್, ತೂಕ ಪರೀಕ್ಷೆ ಇವೆಲ್ಲ ಸ್ವತಃ ಮಾಡಿಕೊಳ್ಳಬಹುದಾಗಿ ಇದಕ್ಕೂ ಮೊದಲು ನೋಂದಾಯಿತ ಫೋನ್ ನಂಬರ್ ದಾಖಲಿಸಿದರೆ ಹೆಲ್ತ್ ರಿಪೋರ್ಟ್ ನಿಮ್ಮ ವಾಟ್ಸಪ್ ಗೆ ರವಾನಿಸುತ್ತದೆ.
44
ಸಣ್ಣಪುಟ್ಟ ಕಾಯಿಲೆಗೆ ಆಸ್ಪತ್ರೆಗೆ ತೆರಳಿ ಹಣ ಖರ್ಚು ಮಾಡುವುದು ತಪ್ಪಲಿದೆ. ಹೆಲ್ತ್ ಎಟಿಎಂ ಟೆಸ್ಟ್ ನಿಖರ ರಿಪೋರ್ಟ್ ಗಳನ್ನು ನೀಡಲಿದೆ. ಇನ್ನೊಂದು ವಿಷಯವೆಂದರೆ ಯಾವುದೇ ರೋಗಿಯ ಕಾಯಿಲೆಯ ದಾಖಲೆ ಸುರಕ್ಷಾ ಮತ್ತು ಗೌಪ್ಯವಾಗಿಡಲಾಗುತ್ತದೆ. ಇಂಥದ್ದೊಂದು ಹೆಲ್ತ್ ಎಟಿಎಂ ಆರಂಭಿಸಿದ್ದಕ್ಕೆ ಕಲಬುರಗಿ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.