ಕೆಲವೊಮ್ಮೆ ಎರಡು ಒಳ್ಳೆಯ ಆಹಾರಗಳನ್ನು ಒಟ್ಟಿಗೆ ಸೇವಿಸೋದರಿಂದ ದೇಹಕ್ಕೆ ಹಾನಿಯಾಗುತ್ತೆ ಎಂದು ಹೇಳಲಾಗುತ್ತೆ. ಇದು ನಿಜ. ಅವುಗಳಲ್ಲಿ ಒಂದು ಮೊಟ್ಟೆ. ಇಂದು ನಾವು ಮೊಟ್ಟೆಗಳೊಂದಿಗೆ ಯಾವ ಆಹಾರ ತಿನ್ನಬಾರದು ಎಂಬುದರ ಬಗ್ಗೆ ಮಾತನಾಡೋಣ. ಜೊತೆಗೆ ಯಾವ ಆಹಾರ ತಿಂದ್ರೆ ಏನಾಗುತ್ತೆ ಅನ್ನೋದನ್ನು ಸಹ ನೋಡೋಣ.
ಸೋಶಿಯಲ್ ಮೀಡಿಯಾದ ಈ ಯುಗದಲ್ಲಿ, ಜನರು ಹೊಸದನ್ನು ಪ್ರಯತ್ನಿಸುತ್ತಿರುತ್ತಾರೆ, ಅವರು ಅದನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ನಲ್ಲಿ ಅಪ್ ಲೋಡ್ ಮಾಡ್ತಾ, ಹೆಚ್ಚು ಜನಪ್ರಿಯತೆ ಪಡೆಯಲು ಪ್ರಯತ್ನಿಸುತ್ತಾರೆ. ಈ ಕಾರಣಕ್ಕಾಗಿ, ಅಂತಹ ಅನೇಕ ಆಹಾರ ಕಾಂಬಿನೇಶನ್ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗುತ್ತಿವೆ, ಇದನ್ನು ನೋಡಿ ನೀವು ಅದನ್ನು ತಿನ್ನಬಹುದೇ ಎಂದು ಒಂದು ಕ್ಷಣ ಯೋಚಿಸುವಂತಾಗುತ್ತೆ. ಅಂತಹ ವಿಯರ್ಡ್ ಕಾಂಬಿನೇಶನ್ ಆಹಾರ ಇರುತ್ತೆ.
ಯೂಟ್ಯೂಬ್ ನಲ್ಲಿ ಅನೇಕ ವೀಡಿಯೊಗಳಿವೆ, ಅದರಲ್ಲಿ ನೀವು ವಿವಿಧ ರೀತಿಯ ಆಹಾರ ಕಾಂಬಿನೇಶನ್ಸ್ (food combination) ನೋಡಬಹುದು. ಆದರೆ ಕೆಲವೊಂದು ಆಹಾರಗಳನ್ನು ಜೊತೆಯಾಗಿ ತಿನ್ನೋದು ದೇಹಕ್ಕೆ ಅಪಾಯಕಾರಿ. ಮಾತ್ರವಲ್ಲ, ಪೋಷಕಾಂಶಗಳ ಕೊರತೆಯೂ ಉಂಟಾಗುತ್ತೆ. ಮೊಟ್ಟೆಗಳಲ್ಲಿ ಸಾಕಷ್ಟು ಪ್ರೋಟೀನ್ ಇರುತ್ತದೆ. ಆದರೆ ನೀವು ಅದನ್ನು ಕೆಲವೊಂದು ಆಹಾರಗಳ ಜೊತೆ ಸೇವಿಸಿದರೆ ಅದು ದೇಹಕ್ಕೆ ಹಾನಿಕಾರಕವಾಗಬಹುದು. ಇಂದು, ಈ ಲೇಖನದ ಮೂಲಕ, ಮೊಟ್ಟೆಯನ್ನು ಯಾವ ಆಹಾರಗಳೊಂದಿಗೆ ತಿನ್ನಬಾರದು ಅನ್ನೋದನ್ನು ಹೇಳ್ತೀವಿ ಕೇಳಿ.
ಮೊಟ್ಟೆಯೊಂದಿಗೆ ಈ ಆಹಾರಗಳನ್ನು ಅಪ್ಪಿ ತಪ್ಪಿಯೂ ತಿನ್ನಬಾರದು…
ಮೊಟ್ಟೆ ಮತ್ತು ಸಕ್ಕರೆ (egg and sugar)
ನೀವು ಮೊಟ್ಟೆಯೊಂದಿಗೆ ಸಕ್ಕರೆಯಿಂದ ಮಾಡಿದ ಆಹಾರ ಪದಾರ್ಥಗಳು ಅಥವಾ ಸಿಹಿ ಪದಾರ್ಥಗಳನ್ನು ಸೇವಿಸಿದರೆ, ಅದು ನಿಮ್ಮ ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಮೊಟ್ಟೆ ಮತ್ತು ಸಿಹಿ ಚೀಸ್ ಎರಡನ್ನೂ ಒಟ್ಟಿಗೆ ಸೇವಿಸಿದಾಗ, ಅದು ಅಮೈನೋ ಆಮ್ಲಗಳನ್ನು ಉತ್ಪಾದಿಸುತ್ತದೆ, ಇದು ದೇಹಕ್ಕೆ ವಿಷಕಾರಿಯಾಗುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಗೂ ಕಾರಣವಾಗಬಹುದು. ಆದ್ದರಿಂದ, ಅದನ್ನು ಅವಾಯ್ಡ್ ಮಾಡಿ.
ಮೊಟ್ಟೆ ಮತ್ತು ಬಾಳೆಹಣ್ಣು (egg with banana)
ಅನೇಕ ಜನರು ಬೆಳಗಿನ ಉಪಾಹಾರಕ್ಕಾಗಿ ಮೊಟ್ಟೆಗಳೊಂದಿಗೆ ಬಾಳೆಹಣ್ಣುಗಳನ್ನು ತಿನ್ನುತ್ತಾರೆ. ಆದರೆ ಈ ಎರಡನ್ನು ಎಂದಿಗೂ ಒಟ್ಟಿಗೆ ತಿನ್ನಬಾರದು. ಏಕೆಂದರೆ ಮೊಟ್ಟೆಗಳು ಸಾಕಷ್ಟು ಪ್ರೋಟೀನ್ ಹೊಂದಿರುತ್ತವೆ, ಆದರೆ ಬಾಳೆಹಣ್ಣುಗಳು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ. ಎರಡನ್ನೂ ಒಟ್ಟಿಗೆ ತಿನ್ನುವುದರಿಂದ ಹೊಟ್ಟೆ ತುಂಬಿದ, ಅಥವಾ ಭಾರವಾದ ಅನುಭವ ನೀಡುತ್ತೆ.
ಮೊಟ್ಟೆ ಮತ್ತು ಚಹಾ (Egg with tea)
ಬೆಳಿಗ್ಗೆ ಮೊಟ್ಟೆ ಸೇವಿಸಿದ ನಂತರ ಚಹಾ ಕುಡಿಯಲು ಇಷ್ಟಪಡುವ ಅನೇಕ ಜನರಿದ್ದಾರೆ. ಆದರೆ, ಈ ಎರಡನ್ನೂ ಒಟ್ಟಿಗೆ ತಿನ್ನುವುದು ಹೊಟ್ಟೆಯ ತೊಂದರೆಗಳು ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಮೊಟ್ಟೆಯನ್ನು ಕೆಫೀನ್ ನೊಂದಿಗೆ ಸೇವಿಸಿದ್ರೆ, ಅದು ಪ್ರೋಟೀನ್ ಮೌಲ್ಯವನ್ನು ಕಡಿಮೆ ಮಾಡುತ್ತದೆ. ಒಟ್ಟಿಗೆ ತಿನ್ನುವುದು ಮಲಬದ್ಧತೆಗೆ ಕಾರಣವಾಗಬಹುದು.
ಮೊಟ್ಟೆ ಮತ್ತು ಮಟನ್ (egg with mutton)
ಮೊಟ್ಟೆ ಮತ್ತು ಮಟನ್ ಒಟ್ಟಿಗೆ ತಿನ್ನಬಾರದು. ಈ ಆಹಾರ ಕಾಂಬಿನೇಶನ್ ದೇಹಕ್ಕೆ ತುಂಬಾ ಹಾನಿಕಾರಕ. ಮೊಟ್ಟೆಯಲ್ಲಿರುವ ಪ್ರೋಟೀನ್ ಮತ್ತು ಮಟನ್ ನಲ್ಲಿ ಕಂಡುಬರುವ ಹೆಚ್ಚುವರಿ ಕೊಬ್ಬುಗಳು ದೇಹ ಮತ್ತು ಜೀರ್ಣಕ್ರಿಯೆಗೆ ಸೂಕ್ತವಲ್ಲ. ಇದನ್ನು ಒಟ್ಟಿಗೆ ಸೇವಿಸಿದ ನಂತರ, ನೀವು ಆಲಸ್ಯ ಮತ್ತು ದಣಿವನ್ನು ಸಹ ಹೊಂದಿರಬಹುದು. ಆದ್ದರಿಂದ, ಮಟನ್‌ನೊಂದಿಗೆ ಮೊಟ್ಟೆಗಳನ್ನು ಎಂದಿಗೂ ತಿನ್ನಬೇಡಿ.