ಪ್ರಾಥಮಿಕ ಚಿಕಿತ್ಸೆಯು ವಿಷದ ವಿಧವನ್ನು ಅವಲಂಬಿಸಿರುತ್ತದೆ
ವ್ಯಕ್ತಿಯ ಚೇತರಿಕೆಯು ಅವರು ಸೇವಿಸಿದ ವಿಷದ ವಿಧವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ನಿದ್ರೆ ಮಾತ್ರೆಗಳು ಅಥವಾ ಕ್ಯಾಪ್ಸುಲ್‌ಗಳನ್ನು ಸೇವಿಸಿದ್ದರೆ, ಅವು ಪರಿಣಾಮ ಬೀರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಆದರೆ ಯಾವುದೇ ಕೀಟನಾಶಕ, ಫಿನೈಲ್ ಅಥವಾ ಇಲಿ ವಿಷವನ್ನು ಸೇವಿಸಿದ್ದರೆ, ಅದು ಅಪಾಯಕಾರಿಯಾಗಬಹುದು. ಅಂತಹ ಸಂದರ್ಭದಲ್ಲಿ ಆಸ್ಪತ್ರೆಗೆ ಶೀಘ್ರದಲ್ಲಿ ದಾಖಲಿಸುವುದು ಮುಖ್ಯ. ಆದರೆ ಅದಕ್ಕೂ ಮುನ್ನ ನೀವು ಪ್ರಥಮ ಚಿಕಿತ್ಸೆ (First Aid) ನೀಡಿದ್ರೆ, ಜೀವ ಉಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ.