ಜನರು ಮೆಂತೆ(Fenugreek) ಮತ್ತು ಕಲೋಂಜಿ ಬೀಜಗಳನ್ನು ವಿಭಿನ್ನವಾಗಿ ಬಳಸುತ್ತಾರೆ, ಆದರೆ ನೀವು ಈ ಎರಡು ಬೀಜಗಳನ್ನು ಒಟ್ಟಿಗೆ ತಿಂದಾಗ, ಅವುಗಳ ಪ್ರಯೋಜನಗಳು ದ್ವಿಗುಣಗೊಳ್ಳುತ್ತವೆ. ಮೆಂತ್ಯ ಮತ್ತು ಕಲೋಂಜಿ ಬೀಜಗಳು ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತವೆ. ಮೆಂತ್ಯ ಮತ್ತು ಕಲೋಂಜಿಯನ್ನು ಒಟ್ಟಿಗೆ ಸೇವಿಸುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ತಿಳಿಯೋಣ
ಮೆಂತ್ಯ ಮತ್ತು ಕಲೋಂಜಿಯನ್ನು ಒಟ್ಟಿಗೆ ತಿನ್ನೋದು ಹೇಗೆ?
ಮೊದಲನೆಯದಾಗಿ ನೀವು ಸಮಾನ ಪ್ರಮಾಣದ ಮೆಂತ್ಯ ಮತ್ತು ಕಲೋಂಜಿ ಬೀಜಗಳನ್ನು ತೆಗೆದುಕೊಳ್ಳಬೇಕು. ಈಗ ಅವುಗಳನ್ನು 1 ಲೋಟ ನೀರಿನಲ್ಲಿ(Water) ಕುದಿಸಿ ಮತ್ತು ರುಚಿಗೆ ನಿಂಬೆ, ಶುಂಠಿ ಅಥವಾ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಇದಲ್ಲದೆ, ಎರಡನ್ನೂ ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ನೀರು ಕುಡಿಯಬೇಕು. ಪ್ರತಿದಿನ ಈ ನೀರನ್ನು ಕುಡಿಯುವ ಮೂಲಕ, ಮಧುಮೇಹವನ್ನು ನಿಯಂತ್ರಿಸಬಹುದು ಮತ್ತು ತೂಕವೂ ಕಡಿಮೆಯಾಗುತ್ತೆ.
ಮೆಂತ್ಯ ಮತ್ತು ಕಲೋಂಜಿಯಲ್ಲಿರುವ ಪೋಷಕಾಂಶಗಳು
ಮೆಂತ್ಯ ಮತ್ತು ಕಲೋಂಜಿ (ಕಪ್ಪು ಜೀರಿಗೆ) ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಮೆಂತ್ಯದಲ್ಲಿ ನಾರಿನಂಶ, ಪ್ರೋಟೀನ್(Protein), ಫೋಲೇಟ್, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶವು ಅಧಿಕವಾಗಿದೆ. ಅಲ್ಲದೇ ಮೆಗ್ನೀಸಿಯಮ್, ಪೊಟ್ಯಾಸಿಯಮ್, ರಂಜಕ ಮತ್ತು ಸೋಡಿಯಂನ ಉತ್ತಮ ಮೂಲವಾಗಿದೆ.
ಇದಲ್ಲದೆ, ಕಲೋಂಜಿಯಲ್ಲಿ(Kalonji) ಜೀವಸತ್ವಗಳು, ಫೈಬರ್, ಕ್ಯಾಲ್ಸಿಯಂ (Calcium), ಖನಿಜಗಳು ಮತ್ತು ಪ್ರೋಟೀನ್ ಅಧಿಕವಾಗಿದೆ. ಇವೆರಡನ್ನು ಜೊತೆಯಾಗಿ ಸೇವಿಸಿದರೆ ಆರೋಗ್ಯಕ್ಕೆ ಉತ್ತಮವಾಗಿದೆ. ಮೆಂತ್ಯ ಮತ್ತು ಕಲೋಂಜಿ ಬೀಜಗಳು ಜೊತೆಯಾಗಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ, ಜೊತೆಗೆ ಚರ್ಮ ಮತ್ತು ಕೂದಲಿಗೂ ಸಹ ಪ್ರಯೋಜನಕಾರಿ.
ಮೆಂತ್ಯ ಮತ್ತು ಕಲೋಂಜಿ ತಿನ್ನುವುದರ ಪ್ರಯೋಜನಗಳೇನು?
ಜೀರ್ಣಕ್ರಿಯೆಯನ್ನು(Digestion) ಬಲಪಡಿಸುತ್ತೆ :
ಮೆಂತ್ಯ ಮತ್ತು ಕಲೋಂಜಿಯನ್ನು ಸೇವಿಸುವುದು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಬಲಪಡಿಸುತ್ತದೆ. ಗ್ಯಾಸ್, ಹೊಟ್ಟೆ ಉಬ್ಬರ ಅಥವಾ ಹೊಟ್ಟೆನೋವಿನ ಸಮಸ್ಯೆ ಹೊಂದಿರುವ ಜನ ಖಂಡಿತವಾಗಿಯೂ ಮೆಂತ್ಯ ಮತ್ತು ಕಲೋಂಜಿ ಸೇವಿಸಬೇಕು. ಇದು ಕರುಳುಗಳನ್ನು ಶುದ್ಧೀಕರಿಸುತ್ತದೆ ಮತ್ತು ಮಲಬದ್ಧತೆ ಸಮಸ್ಯೆಗೆ ಪರಿಹಾರ ನೀಡುತ್ತೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
ಯಕೃತ್ತನ್ನು(Liver) ಆರೋಗ್ಯಕರವಾಗಿರಿಸುತ್ತೆ :
ಕಲೋಂಜಿ ಮತ್ತು ಮೆಂತ್ಯವನ್ನು ತಿನ್ನುವುದರಿಂದ ಯಕೃತ್ತು ಬಲಗೊಳ್ಳುತ್ತದೆ. ಇದು ಯಕೃತ್ತು ಹಾನಿಗೊಳಗಾಗುವುದನ್ನು ತಡೆಯುತ್ತದೆ. ಇದಲ್ಲದೆ, ಯಕೃತ್ತು ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ. ಮೆಂತ್ಯ ಮತ್ತು ಕಲೋಂಜಿಯನ್ನು ಒಟ್ಟಿಗೆ ತಿನ್ನುವುದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತೆ.
ಮಧುಮೇಹಕ್ಕೆ(Diabetes) ಪ್ರಯೋಜನಕಾರಿ
ಮೆಂತ್ಯ ಬೀಜಗಳು ಮತ್ತು ಕಲೋಂಜಿ ಎರಡೂ ಮಧುಮೇಹಿಗಳಿಗೆ ಪ್ರಯೋಜನಕಾರಿ. ಅವುಗಳ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಅಷ್ಟೇ ಅಲ್ಲ ಇದು ಇನ್ಸುಲಿನ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಂತ್ಯ ಮತ್ತು ಕಲೋಂಜಿಯನ್ನು ಜೊತೆಯಾಗಿ ತಿನ್ನೋದ್ರಿಂದ ಮೇದೋಜ್ಜೀರಕ ಗ್ರಂಥಿಯಲ್ಲಿ ಬೀಟಾ-ಕೋಶದ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಚರ್ಮ ಮತ್ತು ಕೂದಲಿನ ಆರೋಗ್ಯ(Hair and skin)
ಮೆಂತ್ಯ ಮತ್ತು ಕಲೋಂಜಿ ಬೀಜಗಳು ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಅವುಗಳನ್ನು ಸೇವಿಸುವುದರಿಂದ, ದೇಹವು ಸಾಕಷ್ಟು ಪ್ರೋಟೀನ್, ಜೀವಸತ್ವಗಳು ಮತ್ತು ಇತರ ಪೋಷಕಾಂಶಗಳನ್ನು ಪಡೆಯುತ್ತದೆ. ಇದು ಕೂದಲನ್ನು ಬಲವಾಗಿ ಮತ್ತು ಸ್ಟ್ರೈಟ್ ಆಗಿ ಮಾಡುತ್ತದೆ. ಅದೇ ಸಮಯದಲ್ಲಿ, ಮೆಂತ್ಯವು ಕೂದಲನ್ನು ಬೇಗನೆ ಬಿಳಿ ಬಣ್ಣಕ್ಕೆ ತಿರುಗದಂತೆ ರಕ್ಷಿಸುತ್ತದೆ. ಈ ಎರಡೂ ಚರ್ಮವನ್ನು ಉತ್ತಮಗೊಳಿಸುತ್ತವೆ.
ಮಾರಕ್ಕೂ ರೋಗಕ್ಕೂ ಮದ್ದು
ಮೆಂತ್ಯ ಮತ್ತು ಕಲೋಂಜಿಯನ್ನು ಒಟ್ಟಿಗೆ ಬೆರೆಸಿ ತಿನ್ನುವುದು ಮಾರಕ ರೋಗವನ್ನೂ ದೂರವಿಡುತ್ತದೆ. ಕೆಲವು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಲು ನೀವು ತಪ್ಪದೇ ಮೆಂತ್ಯ ಬೀಜದೊಂದಿದೆ, ಕಲೋಂಜಿಯನ್ನು ಸೇರಿಸಿ ಸೇವಿಸಿ.