ಅರಿಶಿನ(Turmeric)ವನ್ನು ಸೇವಿಸುವುದು ನಮಗೆ ತುಂಬಾ ಪ್ರಯೋಜನಕಾರಿ ಎಂದುಕೊಂಡಿದ್ದೇವೆ. ಆದರೆ, ಅರಿಶಿನವು ಎಲ್ಲರಿಗೂ ಒಂದೇ ರೀತಿಯ ಪ್ರಯೋಜನಗಳನ್ನು ತರುವುದಿಲ್ಲ. ಅರಿಶಿನದಿಂದ ಸಮಸ್ಯೆ ಎದುರಿಸಿದವರು ನಮ್ಮಲ್ಲಿ ಅನೇಕರು ಇದ್ದಾರೆ.
ಅರಿಶಿನವನ್ನು ಯಾರು ಸೇವಿಸಬಾರದು ಎಂದು ಹೇಳುತಿದ್ದೇವೆ. ಅಂದರೆ, ಯಾರಿಗೆ ಅರಿಶಿನ ಅಡ್ಡ ಪರಿಣಾಮ ಉಂಟು ಮಾಡುತ್ತದೆ ಎಂದು ನೋಡೋಣ.
ಅಪೆಂಡಿಸೈಟಿಸ್ ರೋಗಿಗಳು ಜಾಗರೂಕರಾಗಿರಿ
ಅಪೆಂಡಿಸೈಟಿಸ್ (ಸ್ಟೋನ್ಸ್) ಹೊಂದಿರುವ ರೋಗಿಗಳು ಅರಿಶಿನವನ್ನು ಸೇವಿಸುವ ಮೊದಲು ತಮ್ಮ ವೈದ್ಯರನ್ನು ಸಂಪರ್ಕಿಸಬೇಕು. ವಾಸ್ತವವಾಗಿ, ಆಗಾಗ್ಗೆ ಅಪೆಂಡಿಸೈಟಿಸ್ ಹೊಂದಿರುವ ಜನರು ಅರಿಶಿನವನ್ನು ಸೇವಿಸುತ್ತಿರುವುದರಿಂದಲೇ ಈ ಸಮಸ್ಯೆ ಎದುರಿಸುತ್ಬತಿರಹುದು. ಆದ್ದರಿಂದ ಅರಿಶಿನದ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ ಮತ್ತು ಅದನ್ನು ಬಳಸುವ ಮೊದಲು ವೈದ್ಯರನ್ನು(Doctor) ಸಂಪರ್ಕಿಸಿ.
ಮಧುಮೇಹ(Diabetes) ರೋಗಿಗಳು ಸೇವಿಸಬಾರದು
ಮಧುಮೇಹ ಇರುವವರು ಅರಿಶಿನವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಏಕೆಂದರೆ ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಮತ್ತು ರಕ್ತವನ್ನು ದುರ್ಬಲಗೊಳಿಸಲು ಔಷಧಿಗಳನ್ನು ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಅರಿಶಿನದ ಅತಿಯಾದ ಸೇವನೆಯಿಂದ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾಗಬಹುದು. ಇದು ದೇಹಕ್ಕೆ ಹಾನಿ ಮಾಡುತ್ತದೆ.
ರಕ್ತಸ್ರಾವ(Bleeding)ದ ಸಮಸ್ಯೆಯನ್ನು ಹೆಚ್ಚಿಸುತ್ತದೆ
ಅರಿಶಿನವು ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಆದ್ದರಿಂದ, ಮೂಗಿನಿಂದ ಅಥವಾ ದೇಹದ ಇತರ ಭಾಗಗಳಿಂದ ಹಠಾತ್ ರಕ್ತಸ್ರಾವವನ್ನು ಹೊಂದಿರುವ ಜನರು ಅರಿಶಿನದ ಸೇವನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯವು ಅವರಿಗೆ ಹಾನಿ ಮಾಡಬಹುದು.
ಕಾಮಾಲೆ(Jaundice) ರೋಗಿಗಳು ಅರಿಶಿನ ತಿನ್ನಬೇಡಿ
ಕಾಮಾಲೆ ಇರುವವರು ಅರಿಶಿನವನ್ನು ತಿನ್ನಬಾರದು. ಈ ಕಾಯಿಲೆಯಿಂದ ಚೇತರಿಸಿಕೊಂಡ ನಂತರವೂ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಿದ ನಂತರವೇ ಅರಿಶಿನವನ್ನು ಸೇವಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು.
ರಕ್ತ (Blood)ತೆಳುವಾಗುತ್ತದೆ
ಅರಿಶಿನದ ಶುದ್ಧೀಕರಣದ ಗುಣಗಳು ಸಹ ನಿಮ್ಮನ್ನು ಹೆಚ್ಚು ಸುಲಭವಾಗಿ ರಕ್ತಸ್ರಾವವಾಗುವಂತೆ ಮಾಡಬಹುದು. ಇದು ಏಕೆ ಸಂಭವಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಅರಿಶಿನದ ಇತರ ಸೂಚಿಸಿದ ಪ್ರಯೋಜನಗಳಾದ ಕಡಿಮೆ ಕೊಲೆಸ್ಟ್ರಾಲ್ ಮತ್ತು ಕಡಿಮೆ ರಕ್ತದೊತ್ತಡ, ಬಹುಶಃ ನಿಮ್ಮ ರಕ್ತದಲ್ಲಿ ಅರಿಶಿನ ಕಾರ್ಯ ನಿರ್ವಹಿಸುವ ವಿಧಾನದೊಂದಿಗೆ ಏನಾದರೂ ಸಂಬಂಧ ಹೊಂದಿದೆ ಎನ್ನಲಾಗಿದೆ. ಇದರಿಂದ ರಕ್ತ ತೆಳುವಾಗುತ್ತದೆ ಎನ್ನಲಾಗಿದೆ.
ಅರಿಶಿನ ಪೂರಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಮೂತ್ರದ ಆಕ್ಸಲೇಟ್ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು, ಇದು ಮೂತ್ರಪಿಂಡ(Kidney)ದ ಕಲ್ಲು ರಚನೆಯ ಅಪಾಯವನ್ನು ಹೆಚ್ಚಿಸುತ್ತದೆ. ಆದುದರಿಂದ ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುವುದು ಉಚಿತ.