Overthinking ಯಾವತ್ತಿದ್ದರೂ ಆರೋಗ್ಯಕ್ಕೇ ಕುತ್ತು, ಚಿಂತೆ ಚಿತೆ ಅಂತಾರಲ್ಲ ಅದಕ್ಕೆ?

First Published | Nov 20, 2023, 4:54 PM IST

ಅತಿಯಾಗಿ ಯೋಚಿಸುವ ಸಮಸ್ಯೆ ಯುವಕರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದು ನಿಮ್ಮ ಆಂತರಿಕ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸ್ಥಿತಿ.. ಅತಿಯಾಗಿ ಓದೋದರಿಂದ. ಬೇಡದ್ದನ್ನು ಯೋಚಿಸುವುದರಿಂದ ಏನೆಲ್ಲಾ ಸಮಸ್ಯೆ ಕಾಡುತ್ತೆ ನೋಡೋಣ. 
 

ಅತಿಯಾಗಿ ಯೋಚಿಸುವುದು (overthinking)  ಎಂದರೆ ಯಾವುದರ ಬಗ್ಗೆಯಾದರೂ ಅಗತ್ಯಕ್ಕಿಂತ ಹೆಚ್ಚು ಯೋಚಿಸುವುದು. ಒಂದು ವಿಷ್ಯದ ಬಗ್ಗೆ ಹೆಚ್ಚು ಯೋಚಿಸುವ ಜನರು ಸಾಮಾನ್ಯ ವ್ಯಕ್ತಿಗಿಂತ ಹೆಚ್ಚು ಅಸಮಾಧಾನಗೊಳ್ಳುತ್ತಾರೆ. ಅದೇ ಸಮಯದಲ್ಲಿ, ಅಂತಹ ಜನರು ತಮ್ಮನ್ನು ಮಾನಸಿಕ ಅಸ್ವಸ್ಥರನ್ನಾಗಿ (mental disturb) ಮಾಡಿಕೊಳ್ಳುತ್ತಾರೆ. ಆದರೆ ಅತಿಯಾಗಿ ಯೋಚಿಸುವ ಪರಿಣಾಮವು ಮಾನಸಿಕ ಆರೋಗ್ಯಕ್ಕೆ ಸೀಮಿತವಾಗಿಲ್ಲ, ಇದು ನಿಮ್ಮನ್ನು ದೈಹಿಕ ಸಮಸ್ಯೆಗಳಿಂದ ಬಳಲುವಂತೆ ಮಾಡುತ್ತದೆ ಅನ್ನೋದು ಗೊತ್ತಾ? ಹೌದು ಅತಿಯಾಗಿ ಯೋಚಿಸುವುದು ದೈಹಿಕ ಸಮಸ್ಯೆಗಳನ್ನು ಹೇಗೆ ಉಂಟುಮಾಡುತ್ತದೆ ಎಂದು ಈಗ ನೀವು ಆಶ್ಚರ್ಯ ಪಡುತ್ತಿರಬಹುದು? ಅದಕ್ಕೆ ಉತ್ತರ ಇಲ್ಲಿದೆ. ನೀವೆ ನೋಡಿ…
 

ಅತಿಯಾಗಿ ಯೋಚಿಸುವ ಲಕ್ಷಣಗಳನ್ನು ಇಲ್ಲಿ ತಿಳಿಯಿರಿ
ನಿರ್ಧಾರಗಳನ್ನು (dicision making)ತೆಗೆದುಕೊಳ್ಳುವಲ್ಲಿ ತೊಂದರೆ
ಭಾವನಾತ್ಮಕ ಅನುಪಸ್ಥಿತಿ (Emotional Absence)
ಮಂಪರು
ಕೋಪ (Anguish)
ಒಂಟಿತನ
ಉದ್ವಿಗ್ನತೆ (Anxity)
ಒಂದು ವಿಚಾರವನ್ನು ಮತ್ತೆ ಮತ್ತೆ ಪುನರಾವರ್ತಿಸುವುದು.
ಏಕಾಗ್ರತೆ (Concentration) ಸಾಧಿಸಲು ಕಷ್ಟ

Tap to resize

ದೈಹಿಕ ಆರೋಗ್ಯದ ಮೇಲೆ ಅತಿಯಾಗಿ ಯೋಚಿಸುವ ಪರಿಣಾಮಗಳೇನು ಗೊತ್ತಾ? 
ಅತಿಯಾಗಿ ಯೋಚಿಸುವುದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು

ನೀವು ಅತಿಯಾಗಿ ಯೋಚಿಸುತ್ತಿದ್ದರೆ, ಅಥವಾ ಒಂದೇ ವಿಷಯವನ್ನು ಮತ್ತೆ ಮತ್ತೆ ಯೋಚಿಸುತ್ತಿದ್ದರೆ, ಹಾಗೆ ಮಾಡುವುದರಿಂದ ನಿಮ್ಮ ಮನಸ್ಸು ಪ್ರಕ್ಷುಬ್ಧವಾಗುತ್ತದೆ. ಇದು ಒತ್ತಡವನ್ನು ಆಹ್ವಾನಿಸುತ್ತದೆ, ಇದು ರಕ್ತದೊತ್ತಡವನ್ನು (pressure) ಹೆಚ್ಚಿಸುತ್ತದೆ. ಇದರಿಂದ ಪಾರ್ಶ್ವವಾಯು ಅಥವಾ ಹೃದಯಾಘಾತದಂತಹ (Heart Attack) ಹೃದಯ ಸಮಸ್ಯೆಗಳೂ ಕಾಡಬಹುದು. ಅಧಿಕ ಒತ್ತಡದಿಂದ ಧೂಮಪಾನ, ಮದ್ಯಪಾನವೂ ರೂಢಿಯಾಗಿ ಆರೋಗ್ಯಕ್ಕೆ ಹಾನಿ ಮಾಡಬಹುದು. 
 

ನಿದ್ರೆಯ ಕೊರತೆಗೆ ಕಾರಣವಾಗಬಹುದು
ನೀವು ತುಂಬಾ ಕಷ್ಟಪಟ್ಟು ಮಲಗಲು ಪ್ರಯತ್ನಿಸುತ್ತೀರಿ, ಆದರೆ ನಿಮ್ಮ ಎಂದಿಗೂ ಮುಗಿಯದ ಆಲೋಚನೆಗಳು ನಿಮ್ಮನ್ನು ರಾತ್ರಿ ನಿದ್ರೆ ಮಾಡಲು ಬಿಡೋದಿಲ್ಲ ಅಲ್ವಾ? ನಿದ್ರೆಯ ಸಮಸ್ಯೆ ಅನುಭವಿಸುವುದು ಅತಿಯಾಗಿ ಯೋಚಿಸುವ ಸಾಮಾನ್ಯ ಪರಿಣಾಮಗಳಲ್ಲಿ ಒಂದಾಗಿದೆ. ನೀವು ಹೆಚ್ಚು ಯೋಚಿಸಿದರೆ, ನಿಮಗೆ ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡಲು (sleeping problem) ಸಾಧ್ಯವಾಗುವುದಿಲ್ಲ ಮತ್ತು ಮರುದಿನ ಬೆಳಿಗ್ಗೆ ನೀವು ಆಲಸ್ಯ, ಕಿರಿಕಿರಿ ಮತ್ತು ದಣಿವನ್ನು ಅನುಭವಿಸುತ್ತೀರಿ. ನಿದ್ರೆಯ ಕೊರತೆಯು ನಿಮಗೆ ಕೆಲಸದ ಮೇಲೆ ಕೇಂದ್ರೀಕರಿಸಲು ಕಷ್ಟಕರವಾಗಿಸುತ್ತದೆ, ಉತ್ಪಾದಕತೆಯನ್ನು (Productivity) ಕಡಿಮೆ ಮಾಡುತ್ತದೆ, ನಿಮಗೆ ಹೆಚ್ಚು ಹಸಿವನ್ನುಂಟು ಮಾಡುತ್ತದೆ, ಇದು ತ್ವರಿತ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

ಹಸಿವಾಗೋಲ್ಲ
ಅತಿಯಾಗಿ ಯೋಚಿಸುವುದರಿಂದ ಕೆಲವು ಜನರು ಹಸಿವಿನ ಕೊರತೆಯನ್ನು ಅನುಭವಿಸಬಹುದು. ಇದು ನಿಮ್ಮ ಮೆದುಳನ್ನು ಕಾರ್ಯನಿರತವಾಗಿರಿಸುತ್ತದೆ ಮತ್ತು ನೀವು ಹಸಿದಿದ್ದೀರಿ ಅಥವಾ ತಿನ್ನುವ ಸಮಯ ಎಂದು ಸಂಕೇತವನ್ನು ಮೆದುಳಿಗೆ ತಲುಪಲು ಬಿಡುವುದಿಲ್ಲ. ವೈದ್ಯರ ಪ್ರಕಾರ, ಅತಿಯಾದ ಆಲೋಚನೆಯಿಂದಾಗಿ ನೀವು ಒತ್ತಡದಲ್ಲಿದ್ದರೆ, ನಿಮಗೆ ಆಹಾರವನ್ನು ತಿನ್ನಲು ಸಾಧ್ಯವಾಗುವುದಿಲ್ಲ ಅಥವಾ ಕೆಲವೊಮ್ಮೆ ಹೆಚ್ಚು ತಿನ್ನಲು (over eating) ಪ್ರಾರಂಭಿಸುತ್ತೀರಿ. ಎರಡೂ ಅಭ್ಯಾಸಗಳು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ.

ಜೀರ್ಣಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ (Negative Impact on Digestive System)
ಅತಿಯಾದ ಆಲೋಚನೆಯಿಂದ ಉಂಟಾಗುವ ಒತ್ತಡವು ಜೀರ್ಣಕಾರಿ(digestion system)  ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಏಕೆಂದರೆ ಇದು ಹೊಟ್ಟೆಯಲ್ಲಿ ರಕ್ತದ ಹರಿವು ಮತ್ತು ಆಮ್ಲಜನಕವನ್ನು ಕಡಿಮೆ ಮಾಡುತ್ತದೆ. ಅತಿಯಾಗಿ ಯೋಚಿಸುವುದು ಒತ್ತಡದ ಪರಿಣಾಮವಾಗಿ ಜಠರಗರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು.

ರೋಗನಿರೋಧಕ ಶಕ್ತಿಯ (Immunity Power) ಮೇಲೆ ನಕಾರಾತ್ಮಕ ಪರಿಣಾಮ
ಅತಿಯಾಗಿ ಯೋಚಿಸುವುದು ಒತ್ತಡವನ್ನು ಹೆಚ್ಚಿಸುತ್ತದೆ, ಮತ್ತು ನೀವು ಒತ್ತಡದಲ್ಲಿದ್ದಾಗ, ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಮಟ್ಟವು ಹೆಚ್ಚಾಗುತ್ತದೆ. ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುವುದು ರೋಗನಿರೋಧಕ ಶಕ್ತಿಯನ್ನು (immunity power) ದುರ್ಬಲಗೊಳಿಸುತ್ತದೆ, ಅಲರ್ಜಿಗಳು, ಸೋಂಕುಗಳು (Infections) ಮತ್ತು ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.

Latest Videos

click me!