ಬಾಳೆಹಣ್ಣುಗಳ ಸೇವನೆಯಿಂದ ಆರೋಗ್ಯಕ್ಕೆ(Health) ಎಷ್ಟು ಪ್ರಯೋಜನಗಳಿವೆಯೋ?, ಅದರ ಅನಾನುಕೂಲತೆಗಳು ಸಹ ಅಷ್ಟೇ ಇವೆ. ಈ ಅನಾನುಕೂಲತೆಗಳನ್ನು ತಿಳಿಯದೆ ನೀವು ನಿರಂತರವಾಗಿ ಬಾಳೆಹಣ್ಣುಗಳನ್ನು ತಿನ್ನುತ್ತಿದ್ದರೆ, ಅದರಿಂದ ಉಂಟಾಗುವ ಕೆಲವು ಅನಾನುಕೂಲತೆಗಳ ಬಗ್ಗೆ ಇಲ್ಲಿ ತಿಳಿಯೋಣ.
ಮಲಬದ್ಧತೆ (constipation)
ಸಾಮಾನ್ಯವಾಗಿ, ಬಾಳೆಹಣ್ಣು ತಿನ್ನುವುದು ಮಲಬದ್ಧತೆಯಂತಹ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ. ಆದರೆ ನೀವು ಇದನ್ನು ಅತಿಯಾಗಿ ಸೇವಿಸುತ್ತಿದ್ದರೆ, ಹಾನಿಕಾರಕ. ವಿಶೇಷವಾಗಿ ಹೊಟ್ಟೆಯುಬ್ಬರ ಮತ್ತು ಮಲಬದ್ಧತೆಯ ಸಮಸ್ಯೆ ಇದ್ದೋರು, ಇದನ್ನು ತಿನ್ನದೇ ಇರೋದು ಬೆಸ್ಟ್. ನಿಮಗೆ ಮಲಬದ್ಧತೆಯ ಸಮಸ್ಯೆ ಇದ್ದರೆ, ಬಾಳೆಹಣ್ಣು ತಿನ್ನುವುದನ್ನು ತಪ್ಪಿಸಬೇಕು.
ತೂಕ
ಬಾಳೆಹಣ್ಣುಗಳನ್ನು ಸಾಮಾನ್ಯವಾಗಿ ಕಡಿಮೆ ತೂಕದ ಜನರು ತಿಂದ್ರೆ ಒಳ್ಳೆಯದು ಎನ್ನಲಾಗುತ್ತೆ. ಆದರೆ ಬಾಳೆಹಣ್ಣಿನಲ್ಲಿ ಫೈಬರ್, ನೈಸರ್ಗಿಕ ಸಕ್ಕರೆ ಮತ್ತು ಕ್ಯಾಲೊರಿಗಳ ಪ್ರಮಾಣವು ತುಂಬಾ ಹೆಚ್ಚಾಗಿದೆ ಎಂದು ಕಂಡುಬಂದಿದೆ. ಹಾಗಾಗಿ, ಅದರ ಅತಿಯಾದ ಸೇವನೆ ಬೊಜ್ಜು ಸಮಸ್ಯೆಗಳಿಗೆ (Obesity) ಕಾರಣವಾಗಬಹುದು. ಆದ್ದರಿಂದ ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಬಾಳೆಹಣ್ಣಿನಿಂದ ದೂರವಿರೋದು ಉತ್ತಮ.
ಮಧುಮೇಹ (DIabetes)
ನೀವು ಮಧುಮೇಹ ರೋಗಿಯಾಗಿದ್ದರೆ, ಬಾಳೆಹಣ್ಣುಗಳನ್ನು ಸೇವಿಸೋದು ತುಂಬಾ ಹಾನಿಕಾರಕ. ಬಾಳೆಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತೆ. ಆದ್ದರಿಂದ ನೀವು ಮಧುಮೇಹ ರೋಗಿಯಾಗಿದ್ದರೆ, ಬಾಳೆಹಣ್ಣು ಸೇವಿಸದಿರೋದು ಉತ್ತಮ.
ಅಸ್ತಮಾ (Asthma)
ಅಸ್ತಮಾ ರೋಗಿಗಳಿಗೆ ಬಾಳೆಹಣ್ಣು ತುಂಬಾ ಹಾನಿಕಾರಕ. ವಾಸ್ತವವಾಗಿ, ಬಾಳೆಹಣ್ಣು ತಿನ್ನೋದರಿಂದ ಅಸ್ತಮಾ ರೋಗಿಗಳಲ್ಲಿ ಅದರ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಆದ್ದರಿಂದ ನೀವು ಅಸ್ತಮಾ ಅಥವಾ ಶ್ವಾಸಕೋಶಕ್ಕೆ, ಉಸಿರಾಟಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ರೆ, ಅದನ್ನು ಸೇವಿಸದಿರಲು ಪ್ರಯತ್ನಿಸಿ.
ಮೈಗ್ರೇನ್ (Migraine)
ನಿಮಗೆ ಮೈಗ್ರೇನ್ ಸಮಸ್ಯೆ ಇದ್ದರೂ ಬಾಳೆಹಣ್ಣು ಸೇವಿಸಬೇಡಿ. ಇದರಲ್ಲಿರುವ ಅಮೈನೋ ಆಮ್ಲವು ಟೈರೋಸಿನ್ ಆಗಿದೆ, ಇದು ದೇಹಕ್ಕೆ ಹೋಗಿ ಟೈರಮೈನ್ ಆಗಿ ಬದಲಾಗುತ್ತೆ. ಇದು ನಿಮ್ಮ ಮೈಗ್ರೇನನ್ನು ಪ್ರಚೋದಿಸುತ್ತೆ. ನೋವು ಹೆಚ್ಚಾಗುತ್ತದೆ ಎಚ್ಚರದಿಂದಿರಿ.
ಅಲರ್ಜಿ (Allergy)
ಇನ್ನೂ ಕೆಲವರು ಜನರಿಗೆ ಬಾಳೆಹಣ್ಣು ತಿಂದರೆ ಅಲರ್ಜಿ ಉಂಟಾಗಬಹುದು. ಬಾಳೆಹಣ್ಣು ತಿನ್ನುವ ಮೂಲಕ ನೀವು ಉರಿಯೂತ ಮತ್ತು ಅಲರ್ಜಿಯ ಸಮಸ್ಯೆಗಳನ್ನು ಹೊಂದಿದ್ದರೆ, ನೀವು ಅದನ್ನು ಸೇವಿಸದಿರೋದು ಉತ್ತಮ, ಯಾಕಂದ್ರೆ ಅಲರ್ಜಿಯಿಂದಾಗಿ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ.