ಅಡಲ್ಟ್ ಕಂಟೆಂಟ್ ನೋಡಿದ್ರೆ ಮೆದುಳ ಮೇಲೆ ಬೀರೋ ಪರಿಣಾಮ ಅಷ್ಟಿಷ್ಟಲ್ಲ!

First Published | Feb 16, 2023, 1:42 PM IST

ಸಾಮಾನ್ಯವಾಗಿ ಜನರು ಒಂದಲ್ಲ, ಒಂದು ಕಾರಣಗಳಿಂದ ಅಡಲ್ಟ್ ಕಂಟೆಂಟ್ ನೋಡ್ತಾರೆ. ಆದರೆ ಇದನ್ನು ನೋಡೋದ್ರಿಂದ ಏನಾಗುತ್ತೆ ಗೊತ್ತಾ? ಅಶ್ಲೀಲತೆಯು ನಮ್ಮ ಮೆದುಳು ಮತ್ತು ನಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವರದಿಯೊಂದು ಸ್ಪಷ್ಟಪಡಿಸಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ಹೆಚ್ಚಿನ ಜನರು ತಪ್ಪು ಎಂದು ಪರಿಗಣಿಸುವ ಚಲನಚಿತ್ರಗಳ ಬಗ್ಗೆ ಇಲ್ಲಿ ಮಾತನಾಡಲಾಗುತ್ತಿದೆ. ಅಂದರೆ ಅಡಲ್ಟ್ ಫಿಲಂ (adult content). ಸಮಾಜಕ್ಕೆ ಅನುಗುಣವಾಗಿ ಕೆಟ್ಟ ಮತ್ತು ಭಾರತದಲ್ಲಿ ನಿಷೇಧಿಸಲಾದ ಅಡಲ್ಟ್ ಕಂಟೆಂಟ್ ಹೊಂದಿರುವ ಚಲನಚಿತ್ರಗಳ ಬಗ್ಗೆ ಇಲ್ಲಿ ಹೇಳಲಾಗ್ತಿದೆ. ಹೌದು,ಈ ಬ್ಲೂ ಫಿಲಂ (Blue Film), ಅಡಲ್ಟ್ ಕಂಟೆಂಟ್ ನೋಡೋದ್ರಿಂದ ನಿಮ್ಮ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ ಅನ್ನೋದನ್ನು ನೀವು ತಿಳಿದುಕೊಳ್ಳಲೇಬೇಕು.
 

ಭಾರತದಲ್ಲಿ ನೀಲಿ ಚಲನಚಿತ್ರಗಳನ್ನು (blue films) ನಿಷೇಧಿಸಲಾಗಿದೆ. ಆದರೆ ಇದನ್ನು ನೋಡೋದೇನೂ ತಪ್ಪೇನಿಲ್ಲ, ಆದರೆ ಇಂತಹ ವಿಡೀಯೋ, ಚಿತ್ರಗಳನ್ನು ಹೆಚ್ಚು ಹೆಚ್ಚು ನೋಡುತ್ತಿದ್ದರೆ ಅದರಿಂದ ಕೆಟ್ಟ ಪರಿಣಾಮ ಬೀರುತ್ತೆ. ಅಶ್ಲೀಲತೆಯು ದೇಹ ಮತ್ತು ಮನಸ್ಸು ಎರಡರ ಮೇಲೂ ಪರಿಣಾಮ ಬೀರುತ್ತದೆ. ಇದರ ಬಗ್ಗೆ ಅನೇಕ ಸಂಶೋಧನೆಗಳನ್ನು ಮಾಡಲಾಗಿದೆ. ನಿಮ್ಮ ಮೆದುಳಿನ ಮೇಲೆ ಅದರ (effect on brain) ಪರಿಣಾಮವೇನು ಎಂದು ಸಹ ತಿಳಿಸಲಾಗಿದೆ.

Latest Videos


ಅಶ್ಲೀಲ ಚಿತ್ರಗಳು ಮೆದುಳಿನ ಮೇಲೆ ಈ ಪರಿಣಾಮವನ್ನು ಬೀರುತ್ತೆ
ನ್ಯೂರೋಸೈನ್ಸ್ ನ್ಯೂಸಿನಲ್ಲಿ ಪ್ರಕಟವಾದ ಒಂದು ಸಂಶೋಧನೆಯು ವಿಜ್ಞಾನವು ಈಗ ನರವೈಜ್ಞಾನಿಕ ಮಹತ್ವವನ್ನು (Significance of Neuroscience) ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ ಎಂದು ಸೂಚಿಸುತ್ತದೆ. ಅಶ್ಲೀಲ ಚಿತ್ರಗಳು ನಿಜವಾದ ಅರ್ಥದಲ್ಲಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಈ ಸಂಶೋಧನೆ ತೋರಿಸುತ್ತದೆ. 

ರಿವಾರ್ಡ್ ಸೆಂಟರ್ ಎಂದು ಕರೆಯಲ್ಪಡುವ ಮೆದುಳಿನ ಒಂದು ಪ್ರದೇಶವಿದೆ. ಇದು ನಮ್ಮ ಅಭ್ಯಾಸಗಳನ್ನು ಬೆಳೆಸಲು ಸಹಾಯ ಮಾಡುತ್ತದೆ. ಈ ಭಾಗವು ದೇಹದಲ್ಲಿ ಡೋಪಮೈನ್ (dopamine chemical) ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ ಮತ್ತು ನಮ್ಮ ಕ್ರಿಯೆ ಮತ್ತು ತಿಳುವಳಿಕೆಯ ನಡುವೆ ಸಂಪರ್ಕ ಏರ್ಪಡಿಸುತ್ತೆ. ಡೋಪಮೈನ್ ಅನ್ನು ಸಂತೋಷದ ರಾಸಾಯನಿಕ ಎಂದೂ ಕರೆಯಲಾಗುತ್ತದೆ ಮತ್ತು ಇದು ನಮ್ಮ ಅಭ್ಯಾಸಗಳು ಮತ್ತು ಪ್ರತಿಫಲಗಳ ನಡುವೆ ಸಂಪರ್ಕವನ್ನು ಮಾಡುತ್ತದೆ, ಉದಾಹರಣೆಗೆ, ವ್ಯಾಯಾಮ (Exercise), ತಿನ್ನುವುದು, ಲೈಂಗಿಕತೆ (Sex) ಇತ್ಯಾದಿಗಳನ್ನು ಒಂದು ನಿರ್ದಿಷ್ಟ ಕ್ರಿಯೆಯಾಗಿ ನೋಡಲಾಗುತ್ತದೆ.

ಅಶ್ಲೀಲ ಚಿತ್ರಗಳನ್ನು ನೋಡಿದಾಗ ಮೆದುಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ ಮತ್ತು ಸಿಹಿ ತಿಂಡಿ ದೇಹದೊಳಗೆ ಹೋದಂತೆ ತೋರುತ್ತದೆ. ಇದು ಕಡುಬಯಕೆಯಂತೆಯೇ ಕಾರ್ಯನಿರ್ವಹಿಸುತ್ತದೆ. ಮೆದುಳು ಆಫ್ ಸ್ವಿಚ್ ಅನ್ನು ಹೊಂದಿದೆ, ಅದು ಕಡುಬಯಕೆ ಪೂರ್ಣಗೊಂಡಾಗ ಡೋಪಮೈನ್ ಅನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸುತ್ತದೆ.  

ಇದಲ್ಲದೆ, ಅಡಲ್ಟ್ ಕಂಟೆಂಟ್ ವ್ಯಸನಕಾರಿ ಔಷಧದಂತೆಯೇ (Drugs Addiction) ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಡೋಪಮೈನ್ ಬಿಡುಗಡೆಯನ್ನು ಹೆಚ್ಚಿಸುತ್ತದೆ. ಇದು ನಿರಂತರವಾಗಿ ಸಂಭವಿಸಿದಾಗ, ನಮ್ಮ ಮೆದುಳು ಡೋಪಮೈನ್ನ ಸಹಿಷ್ಣುತೆಯನ್ನು ನಿರ್ಮಿಸುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ, ಸ್ವಲ್ಪ ಸಮಯದ ನಂತರ, ಅದೇ ರೀತಿಯ ಸಂತೋಷವನ್ನು ಪಡೆಯಲು ಮತ್ತೆ ಮತ್ತೆ ಇಂತಹ ಚಿತ್ರಗಳನ್ನು ನೋಡಲು ಆರಂಭಿಸುತ್ತಾರೆ. 

ಒಂದು ವೇಳೆ ಜನರು ಇದಕ್ಕೆ ಅಡಿಕ್ಟ್ ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೆದುಳಿನ ಸಾಮರ್ಥ್ಯವೂ ಕಡಿಮೆಯಾಗುತ್ತದೆ ಮತ್ತು ಇದು ಮೆದುಳಿನ ರಿವಾರ್ಡ್ ಸರ್ಕ್ಯೂಟ್ನಲ್ಲಿ ಅಸಮರ್ಪಕ ಕಾರ್ಯನಿರ್ವಹಣೆಗೆ ಕಾರಣವಾಗುತ್ತದೆ ಎಂದು ಒಂದು ವರದಿ ಹೇಳುತ್ತೆ. ಇದರಿಂದಾ ನಾವು ಯಾವುದೇ ವಿಷಯಕ್ಕೂ ವ್ಯಸನಿಯಾಗಬಹುದು.

ದೇಹದ ಮೇಲೆ ಅಡಲ್ಟ್ ಕಂಟೆಂಟ್ ಪರಿಣಾಮಗಳು 
ಯಾರಾದರೂ ವ್ಯಸನಿಯಾಗಿದ್ದರೆ ಅಥವಾ ದೀರ್ಘಕಾಲದವರೆಗೆ ಒಂದೇ ರೀತಿಯ ವಿಷಯವನ್ನು ನೋಡುತ್ತಿದ್ದರೆ, ಅದು ದೇಹದ ಮೇಲೂ ಪರಿಣಾಮ ಬೀರಬಹುದು.

ಲೈಂಗಿಕ ಅಪಸಾಮಾನ್ಯ ಕ್ರಿಯೆ (sexual dysfunction)
ದೀರ್ಘಕಾಲದವರೆಗೆ ಅಡಲ್ಟ್ ಕಂಟೆಂಟ್ ನೋಡುವುದರ ಮೊದಲ ಪರಿಣಾಮವೆಂದರೆ ಲೈಂಗಿಕ ಅಪಸಾಮಾನ್ಯ ಕ್ರಿಯೆ. ನಿರ್ದಿಷ್ಟವಾಗಿ ನಿಮ್ಮ ನಿಜ ಜೀವನದ ಸಂಗಾತಿಯೊಂದಿಗೆ ಪರಾಕಾಷ್ಠೆಯನ್ನು (orgasm) ಪಡೆಯಲು ಅಸಮರ್ಥತೆ ಉಂಟಾಗುವ ಸಾಧ್ಯತೆ ಇದೆ.  

ವೈವಾಹಿಕ ಜೀವನದಲ್ಲಿ ಸಮಸ್ಯೆಗಳು (problem in married life)
ಅಡಲ್ಟ್ ಕಂಟೆಂಟ್ ವಿಭಿನ್ನ ರೀತಿಯ ಬಯಕೆಯನ್ನು ಅಭಿವೃದ್ಧಿಪಡಿಸಬಹುದು.  ಹೀಗಾಗಿ ನಿಮ್ಮ ಸಂಗಾತಿಯಿಂದ ನೀವು ಹೆಚ್ಚಿನದನ್ನು ನಿರೀಕ್ಷಿಸಬಹುದು ಮತ್ತು ಅಂತಹ ಪರಿಸ್ಥಿತಿಯಲ್ಲಿ, ವೈವಾಹಿಕ ಜೀವನವೂ ತೊಂದರೆಗೊಳಗಾಗಬಹುದು. ಇದರಿಂದ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತೆ.

ಅಡಿಕ್ಟ್ ಆಗಬೇಡಿ
ಅಡಲ್ಟ್ ಕಂಟೆಂಟ್ ನಿಯಮಿತವಾಗಿ ನೋಡುತ್ತಿದ್ದರೆ ಅದು ವ್ಯಸನಕ್ಕೆ ಕಾರಣವಾಗಬಹುದು. ಅದರ ವ್ಯಸನವು ಒಂದು ರೀತಿಯ ಸಮಸ್ಯೆಯಾಗಿದ್ದು, ಇದರಿಂದಾಗಿ ನೈಸರ್ಗಿಕ ಭಾವನೆಗಳು ಕೊನೆಗೊಳ್ಳಬಹುದು.  ಆದುದರಿಂದ ಯಾವುದೇ ವಿಷಯಗಳಿಗೆ ಅಡಿಕ್ಟ್ ಆಗೋದನ್ನು ನಿಲ್ಲಿಸಬೇಕು. 
 

click me!