ಇತ್ತೀಚಿನ ದಿನಗಳಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಟಿವಿ ಸ್ಕ್ರೀನ್ ನೋಡುತ್ತಾ ಕಾಲ ಕಳೆಯವುದು ಹೆಚ್ಚಾಗಿದೆ. ಇದರ ಪರಿಣಾಮವಾಗಿ ಕಣ್ಣುಗಳು ಒತ್ತಡಕ್ಕೊಳಗಾಗುತ್ತಿವೆ, ದೃಷ್ಟಿ ದುರ್ಬಲಗೊಳ್ಳುತ್ತಿದೆ. ಅಷ್ಟೇ ಏಕೆ, ಬಹಳ ಬೇಗ ಕನ್ನಡಕ ಧರಿಸುವ ಸಮಯವೂ ಬಂದಿದೆ. ಈ ಸಮಸ್ಯೆ ದೊಡ್ಡವರು, ಚಿಕ್ಕವರು ಎನ್ನದೆ ಎಲ್ಲಾ ವಯೋಮಾನದವರಲ್ಲೂ ಸಾಮಾನ್ಯವಾಗಿದೆ. ಆದರೆ ಏನೆಲ್ಲಾ ಮಾಡುವ ನಾವು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಕಡೆ ಗಮನಹರಿಸುವುದಿಲ್ಲ. ನಿಜ ಹೇಳಬೇಕೆಂದರೆ ಕೆಲವು ಆಹಾರಗಳು ಕಣ್ಣಿನ ಆರೋಗ್ಯಕ್ಕೆ ವರದಾನವಾಗಿದ್ದು, ದೃಷ್ಟಿಹೀನತೆಯ ಅಪಾಯ ಕಡಿಮೆ ಮಾಡುತ್ತವೆ. ಆದ್ದರಿಂದ ಕಣ್ಣುಗಳನ್ನು ಆರೋಗ್ಯವಾಗಿಡಲು ಮತ್ತು ಕನ್ನಡಕ ಧರಿಸುವ ಸಾಧ್ಯತೆಯನ್ನು ತಡೆಯಲು ಸಹಾಯ ಮಾಡುವ ಆ 10 ಸೂಪರ್‌ಫುಡ್‌ಗಳು ಯಾವುವು ಎಂದು ನೋಡೋಣ ಬನ್ನಿ..