Break Up: ಹೃದಯದ ಮೇಲೂ ಬೀರುತ್ತೆ ಗಂಭೀರ ಪರಿಣಾಮ

First Published | Feb 16, 2023, 5:11 PM IST

ಒತ್ತಡ ಸಾಮಾನ್ಯವಾಗಿ ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ, ಹಾಗಾಗಿ ಯಾವತ್ತೂ ಅದನ್ನು ಲಘುವಾಗಿ ತೆಗೆದುಕೊಳ್ಳಬಾರದು.ಹಾರ್ಟ್ ಬ್ರೇಕ್ ಅಥವಾ ಬ್ರೇಕ್ ಅಪ್ ನಿಂದಲೂ ಜನರ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅನೇಕ ಸಂಶೋಧನೆಗಳು ತೋರಿಸುತ್ತವೆ. ಅದರ ಬಗ್ಗೆ ತಿಳಿಯೋಣ.

ನೀವು ಪ್ರೀತಿಸುವ ವ್ಯಕ್ತಿ ಸದಾ ನಿಮ್ಮ ಜೊತೆ ಇರೋದು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತದೆಯೇ? ನಿಮ್ಮ ಕ್ರಶ್ ಅಥವಾ ನೀವು ಪ್ರೀತಿಸುವ ಯಾರನ್ನಾದರೂ ಭೇಟಿಯಾದಾಗ ನಿಮ್ಮನ್ನೆ ನೀವು ಮರೆತು ಬಿಡುತ್ತೀರಿ ಅಲ್ವಾ? ಅಷ್ಟೊಂದು ಖುಷಿಯಲ್ಲಿ ತೇಲಾಡುತ್ತೀರಿ. ಈ ಉತ್ಸಾಹ, ಸಂತೋಷವು ನಿಮಗೆ ಹೃದಯದಲ್ಲಿ ಉತ್ತಮ ಭಾವನೆಯನ್ನು (good feeling) ಉಂಟುಮಾಡುತ್ತದೆ, ಇದು ನಿಮ್ಮ ಹೃದಯದ ಆರೋಗ್ಯಕ್ಕೂ ಒಳ್ಳೆಯದು.

ಪ್ರೀತಿಯನ್ನು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಶಾಂತಿ ಮತ್ತು ಆರಾಮವನ್ನು ಪಡೆಯುವ ಮೂಲಕ, ನಿಮ್ಮ ರಕ್ತದೊತ್ತಡವೂ ಉತ್ತಮವಾಗಿರುತ್ತದೆ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಆ ಸಂಬಂಧದಲ್ಲಿ ಸಂತೋಷವಾಗಿದ್ದರೆ, ಶಾಂತಿಯಿಂದ ಇದ್ದರೆ, ಇದು ನಿಮ್ಮ ರಕ್ತದೊತ್ತಡವನ್ನು (blood pressure) ಉತ್ತಮವಾಗಿರಿಸುತ್ತದೆ.

Tap to resize

ಪ್ರೀತಿಯು ಆರೋಗ್ಯಕ್ಕೆ ಹೇಗೆ ಪ್ರಯೋಜನ ನೀಡುತ್ತದೆ?
ನಾವು ಯಾರನ್ನಾದರೂ ಪ್ರೀತಿಸಿದಾಗ, ನಾವು ಒಳಗೆ ಒಳ್ಳೆಯದನ್ನು ಅನುಭವಿಸುತ್ತೇವೆ. ಪ್ರೀತಿಗೆ ನಿಮ್ಮನ್ನು ಆರೋಗ್ಯವಾಗಿಡುವ ಶಕ್ತಿ ಇದೆ. ಜೊತೆಗೆ ಪ್ರೀತಿ ನಿಮ್ಮ ಹೃದಯಕ್ಕೆ (love is good for heart) ಕೂಡ ತುಂಬಾ ಒಳ್ಳೆಯದು. ನೀವು ಹೃದ್ರೋಗದೊಂದಿಗೆ ಹೋರಾಡುತ್ತಿದ್ದರೆ, ಪ್ರೀತಿಯು ನಿಮ್ಮ ಚೇತರಿಕೆಗೆ ಸಹಾಯ ಮಾಡುತ್ತದೆ. ಅವಿವಾಹಿತ ಜನರಿಗಿಂತ ವಿವಾಹಿತರು ರೋಗಗಳಿಂದ ಉತ್ತಮವಾಗಿ ಚೇತರಿಸಿಕೊಳ್ಳಬಹುದು ಎಂದು ಸಂಶೋಧನೆ ತೋರಿಸಿದೆ.

ವಿವಾಹವು ಮಹಿಳೆಯರಿಗಿಂತ ಪುರುಷರ ಹೃದಯದ ಆರೋಗ್ಯಕ್ಕೆ (heart health) ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಅನ್ನೋದನ್ನು ಸಹ ಸಂಶೋಧನೆ ತಿಳಿಸಿದೆ. ನಿಮ್ಮ ದಾಂಪತ್ಯದಲ್ಲಿ ನೀವು ಸಂತೋಷವಾಗಿದ್ದರೆ, ನೀವು ಹೆಚ್ಚು ಕಾಲ ಬದುಕಬಹುದು. ಬಹುಶಃ ಇದರ ಹಿಂದಿನ ಕಾರಣವೆಂದರೆ ದಾಂಪತ್ಯ ಜೀವನದಲ್ಲಿ ಯಾರಾದರೂ ನಿಮ್ಮನ್ನು ಪ್ರೀತಿಸುವವರು ಇರುತ್ತಾರೆ, ನಿಮ್ಮನ್ನು ನೋಡಿಕೊಳ್ಳುವವರು ಇರುತ್ತಾರೆ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸುವವರು ಇರುತ್ತಾರೆ. ಇದರಿಂದ ನೀವು ಆರೋಗ್ಯದಿಂದ ಇರಬಹುದು.

ಬ್ರೇಕ್ ಅಪ್ ಆದಾಗ, ಏನಾಗುತ್ತದೆ?
ನೀವು ಯಾರನ್ನಾದರೂ ಪ್ರೀತಿಸಿದರೆ, ಅದು ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವನ್ನು ನೀಡುತ್ತೆ ನಿಜ.  ಅದೇ ಸಮಯದಲ್ಲಿ, ಹೃದಯ ಮುರಿದಾಗ ಅಥವಾ ಬ್ರೇಕ್ ಅಪ್ (breakup) ಆದಾಗ ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜನರು ಹೃದಯಾಘಾತಕ್ಕೆ ಒಳಗಾಗುವ ಅಥವಾ ಕೆಟ್ಟ ಸುದ್ದಿ ಬಂದಾಗ ಆಘಾತಕ್ಕೊಳಗಾಗುವ ಚಲನಚಿತ್ರಗಳನ್ನು ನಾವೆಲ್ಲರೂ ನೋಡಿದ್ದೇವೆ. ಅಂತಹ ಪರಿಸ್ಥಿತಿ ನಿಜ ಜೀವನದಲ್ಲಿಯೂ ಸಂಭವಿಸಬಹುದು. ಬ್ರೇಕ್ ಅಪ್ ಆದಾಗ ಜನರು ಟಾಕೋಟ್ಸುಬೊ ಎಂದು ಕರೆಯಲ್ಪಡುವ ಹೃದಯದ ಗಾಯ, ಹೃದಯಾಘಾತ (heart attack) ಮೊದಲಾದ ಸಮಸ್ಯೆ ಹೊಂದುವ ಸಾಧ್ಯತೆ ಇದೆ. 

ಬ್ರೋಕನ್ ಹಾರ್ಟ್ ಸಿಂಡ್ರೋಮ್ ಎಂದರೇನು?
ಕಾರ್ಡಿಯೋಮೈಪತಿ ಅಥವಾ ಬ್ರೋಕನ್ ಹಾರ್ಟ್ ಸಿಂಡ್ರೋಮ್ (broken heart syndrome) ಎಂಬುದು ಹಲವಾರು ಬಾರಿ ಚೇತರಿಸಿಕೊಳ್ಳಬಹುದಾದ ಸ್ಥಿತಿಯಾಗಿದೆ. ಆದರೆ ಅನೇಕ ಜನರ ಹೃದಯಗಳು ಈ ಸಮಸ್ಯೆಯಿಂದ ಶಾಶ್ವತವಾಗಿ ಅನಾರೋಗ್ಯಕ್ಕೆ ಒಳಗಾಗುತ್ತವೆ. ಬ್ರೋಕನ್ ಹಾರ್ಟ್ ಸಿಂಡ್ರೋಮ್ ನಿಜವಾದ ವೈದ್ಯಕೀಯ ಅಸ್ವಸ್ಥತೆ. ಇದರಲ್ಲಿ, ಹೃದಯದ ಗಾತ್ರ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ ಮತ್ತು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗುವುದಿಲ್ಲ. 

ಸಾಮಾನ್ಯವಾಗಿ, ಒತ್ತಡವನ್ನು ಕಡಿಮೆ ಮಾಡಿದಾಗ, ರೋಗಿಯು ಕೆಲವು ವಾರಗಳು ಅಥವಾ ತಿಂಗಳುಗಳಲ್ಲಿ ಈ ಸ್ಥಿತಿಯಿಂದ ಚೇತರಿಸಿಕೊಳ್ಳುತ್ತಾನೆ. ಬ್ರೋಕನ್ ಹಾರ್ಟ್ ಸಿಂಡ್ರೋಮ್ ಅನ್ನು ಟಾಕೋಟ್ಸುಬೊ ಕಾರ್ಡಿಯೋಮಯೋಪತಿ ಎಂದೂ ಕರೆಯಲಾಗುತ್ತದೆ, ಇದು ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಕೆಲವು ಸಂದರ್ಭಗಳಲ್ಲಿ, ಈ ಸ್ಥಿತಿಯು ಅಪಾಯಕಾರಿ ಮತ್ತು ಮಾರಣಾಂತಿಕವಾಗಬಹುದು, ಆದರೆ ಇದು ವಿರಳವಾಗಿ ಕಂಡುಬರುತ್ತದೆ.

Latest Videos

click me!