ರಕ್ತದಾನವು ರೋಗಿಗೆ ಮಾತ್ರವಲ್ಲ ನಿಮ್ಮ ಆರೋಗ್ಯಕ್ಕೂ ಹಿತ

First Published | Feb 18, 2023, 3:43 PM IST

ರಕ್ತದಾನವು ಚಿಕಿತ್ಸೆ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಗೆ ಮಾತ್ರವಲ್ಲ, ರಕ್ತದಾನ ಮಾಡುವವರ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ. ರಕ್ತದಾನವು ದೌರ್ಬಲ್ಯಕ್ಕೆ ಕಾರಣವಾಗುತ್ತೆ ಎಂದು ಕೆಲವರ ಮನಸ್ಸಿನಲ್ಲಿ ಗೊಂದಲವಿದೆ ಆದರೆ ಅದು ಹಾಗಾಗೋಲ್ಲ.ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ.  

'ರಕ್ತದಾನ'(Blood donation) ಸಾಮಾಜಿಕ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬ ಸಮರ್ಥ ವ್ಯಕ್ತಿಯು ಅನುಸರಿಸಬೇಕು. ರಕ್ತದ ಕೊರತೆಯಿಂದ ಅಥವಾ ಸರಿಯಾದ ಸಮಯದಲ್ಲಿ ಸರಿಯಾದ ರಕ್ತದ ಗುಂಪನ್ನು ಪಡೆಯದ ಕಾರಣ ಎಷ್ಟೋ  ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ತಜ್ಞರ ಪ್ರಕಾರ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಕೇವಲ 37 ಪ್ರತಿಶತದಷ್ಟು ಜನರು ಮಾತ್ರ ರಕ್ತದಾನ ಮಾಡಲು ಅರ್ಹರಾಗಿದ್ದಾರೆ ಮತ್ತು ದಾನ ಮಾಡಬಲ್ಲವರಲ್ಲಿ 10 ಪ್ರತಿಶತಕ್ಕಿಂತ ಕಡಿಮೆ ಜನರು ವಾರ್ಷಿಕವಾಗಿ ರಕ್ತದಾನ ಮಾಡುತ್ತಾರೆ. ರಕ್ತದಾನ ಮಾಡೋದರಿಂದ ದೌರ್ಬಲ್ಯ ಉಂಟಾಗುತ್ತೆ ಅಥವಾ ಅದು ಅವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತೆ ಎಂದು ಕೆಲವು ಜನರ ಮನಸ್ಸಿನಲ್ಲಿ ಗೊಂದಲವಿದೆ.

ರಕ್ತದಾನವು ಚಿಕಿತ್ಸೆ ಮತ್ತು ತುರ್ತು ವೈದ್ಯಕೀಯ ಪರೀಕ್ಷೆಗೆ ಮಾತ್ರವಲ್ಲ, ವಿಶ್ವಾದ್ಯಂತ ಮಾರಣಾಂತಿಕ ಕಾಯಿಲೆಗಳಿಂದ(Deadly diseases) ಬಳಲುತ್ತಿರುವ ಜನರಿಗೆ ಇದು ಸಹಾಯವಾಗುತ್ತೆ. ಆನುವಂಶಿಕ ರಕ್ತದ ಅಸ್ವಸ್ಥತೆಗಳಾದ ಥಲಸ್ಸೆಮಿಯಾ ಮತ್ತು ಸಿಕಲ್ ಸೆಲ್ ಕಾಯಿಲೆ ಇರುವ ಜನರಿಗೆ ಆರೋಗ್ಯವಾಗಿರಲು ಜೀವನಪರ್ಯಂತ ರಕ್ತದ ಅಗತ್ಯವಿದೆ. ಇದಲ್ಲದೆ, ಹಿಮೋಫಿಲಿಯಾ ಕೂಡ ಅಪರೂಪದ ರಕ್ತದ ಸ್ಥಿತಿಯಾಗಿದ್ದು, ಇದರಲ್ಲಿ ರಕ್ತವು ಸಾಮಾನ್ಯವಾಗಿ ಹೆಪ್ಪುಗಟ್ಟುವುದಿಲ್ಲ ಮತ್ತು ಗಾಯ ಅಥವಾ ಅಪಘಾತದ ನಂತರ ರೋಗಿಯ ರಕ್ತಸ್ರಾವವು ಗಂಟೆಗಳವರೆಗೆ ಸಂಭವಿಸಬಹುದು. 

Tap to resize

ರಕ್ತದಾನವು ತುರ್ತು ಪರಿಸ್ಥಿತಿಯಲ್ಲಿ ಜೀವಗಳನ್ನು ಉಳಿಸುವುದಲ್ಲದೆ, ನಿರ್ದಿಷ್ಟ ಕಾಯಿಲೆ ಇರುವ ವ್ಯಕ್ತಿಗಳು ಹೆಚ್ಚು ಕಾಲ ಬದುಕುತ್ತಾರೆ ಮತ್ತು ಗುಣಮಟ್ಟದ ಜೀವನವನ್ನು ನಡೆಸುತ್ತಾರೆ. ಇಲ್ಲಿ ರಕ್ತದಾನದ ಬಗ್ಗೆ ಗಮನಹರಿಸಬೇಕಾದ ಮತ್ತೊಂದು ವಿಷಯವೆಂದರೆ ಇದು ರಕ್ತ ಸ್ವೀಕರಿಸುವವರಿಗೆ ಮಾತ್ರವಲ್ಲದೆ ರಕ್ತದಾನ ಮಾಡುವ ಜನರಿಗೆ ಅನೇಕ ಪ್ರಯೋಜನಗಳನ್ನು(Benefits) ಹೊಂದಿದೆ.

ರಕ್ತದಾನದ ಅಂತಹ 5 ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ-

ಹೃದ್ರೋಗದ(Heart problems) ಅಪಾಯವನ್ನು ಕಡಿಮೆ ಮಾಡುತ್ತೆ 
ನಿಯಮಿತ ರಕ್ತದಾನವು ಕಬ್ಬಿಣದ ಮಟ್ಟವನ್ನು ನಿಯಂತ್ರಣದಲ್ಲಿಡುತ್ತೆ. ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣವು ಹೆಚ್ಚಾಗಿ ರಕ್ತದ ಅಪಧಮನಿಗಳನ್ನು ನಿರ್ಬಂಧಿಸುತ್ತೆ, ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತೆ ಮತ್ತು ಹಿಮೋಕ್ರೊಮಾಟೋಸಿಸ್ ಎಂದು ಕರೆಯಲ್ಪಡುವ ಕಾಯಿಲೆಗೆ ಕಾರಣವಾಗುತ್ತೆ. 

ಆದ್ದರಿಂದ, ರಕ್ತದಾನದ ಮೂಲಕ ಹೆಚ್ಚುವರಿ ಕಬ್ಬಿಣದ ಶೇಖರಣೆಯನ್ನು ಕಡಿಮೆ ಮಾಡೋದರಿಂದ ನಿಮ್ಮ ಅಪಧಮನಿಗಳು ಕೆಲಸ ಮಾಡಲು ಹೆಚ್ಚಿನ ಪ್ರದೇಶ ನೀಡುತ್ತೆ ಮತ್ತು ರಕ್ತದ ನಾಡಿಮಿಡಿತ ಮತ್ತು ಹರಿವನ್ನು ಸ್ಥಿರವಾಗಿರಿಸುತ್ತೆ, ಇದರ ಪರಿಣಾಮವಾಗಿ ಹೃದಯಾಘಾತದ(Heart attack) ಅಪಾಯ ಕಡಿಮೆಯಾಗುತ್ತೆ.

ಕ್ಯಾನ್ಸರ್ (Cancer) ಸಾಧ್ಯತೆಗಳನ್ನು ಕಡಿಮೆ ಮಾಡುತ್ತೆ 
ರಕ್ತದಲ್ಲಿ ಕಬ್ಬಿಣದ ಅತಿಯಾದ ಶೇಖರಣೆಯನ್ನು ಕಡಿಮೆ ಮಾಡಲು, ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ನಿಯಮಿತವಾಗಿ ರಕ್ತದಾನ ಮಾಡುತ್ತಿರಬೇಕು. ರಕ್ತದಲ್ಲಿ ಹೆಚ್ಚಿನ ಕಬ್ಬಿಣದ ಶೇಖರಣೆಯು ಕೆಲವು ಪರಿಸ್ಥಿತಿಗಳಲ್ಲಿ ರಕ್ತದ ಕ್ಯಾನ್ಸರ್ನಂತಹ ಕೆಲವು ರೀತಿಯ ಕ್ಯಾನ್ಸರ್ನ ಅಪಾಯವನ್ನು ಹೆಚ್ಚಿಸುತ್ತೆ.

ಮಾನಸಿಕ ಆರೋಗ್ಯ(Mental health) ಸುಧಾರಣೆ
ರಕ್ತದಾನದಿಂದ ದೈಹಿಕ ಪ್ರಯೋಜನಗಳಿವೆ, ಜೊತೆಗೆ ಅದರ ಪ್ರಮುಖ ಆರೋಗ್ಯ ಪ್ರಯೋಜನಗಳಲ್ಲಿ ಒಂದು ಮಾನಸಿಕ ಅಂಶವಾಗಿದೆ. ಬೇರೊಬ್ಬರಿಗೆ ಒಳ್ಳೆಯದನ್ನು ಮಾಡಿದ ನಂತರ ನೀವು ಅನುಭವಿಸುವ ಆರಾಮವು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಬಹಳ ಸಕಾರಾತ್ಮಕ ಪರಿಣಾಮ ಬೀರುತ್ತೆ.

ರಕ್ತದಾನ ಎಂದರೆ ಎಲ್ಲೋ ಯಾರಿಗಾದರೂ ಹೆಚ್ಚು ಅಗತ್ಯವಾದ ಸಹಾಯ(Health) ಸಿಗುತ್ತೆ ಮತ್ತು ನೀವು ತುರ್ತು ಪರಿಸ್ಥಿತಿಯಲ್ಲಿ ಇನ್ನೊಬ್ಬರ ಜೀವವನ್ನು ಉಳಿಸುತ್ತೀರಿ. ಈ ರೀತಿಯ ಸ್ವಯಂಪ್ರೇರಿತ ಚಟುವಟಿಕೆಯು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಅನುಕೂಲಕರ ಪರಿಣಾಮ ಬೀರುತ್ತೆ ಮತ್ತು ಅಂತಿಮವಾಗಿ ನಿಮ್ಮ ಮನಸ್ಸು ಮತ್ತು ದೇಹವನ್ನು ಸುಧಾರಿಸುತ್ತೆ.

ತೂಕ ನಷ್ಟ(Weightloss)
ಆರೋಗ್ಯವಂತ ವ್ಯಕ್ತಿಗಳಲ್ಲಿ, ಸಮಯೋಚಿತ ರಕ್ತದಾನವು ತೂಕ ನಷ್ಟಕ್ಕೆ ಸಹಾಯ ಮಾಡುತ್ತೆ ಮತ್ತು ತ್ರಾಣವನ್ನು ಹೆಚ್ಚಿಸುತ್ತೆ. ಆದರೆ, ಇದನ್ನು ತೂಕ ನಷ್ಟದ ದೈನಂದಿನ ಪ್ರಕ್ರಿಯೆ ಎಂದು ಪರಿಗಣಿಸಬಾರದು. ಯಾವುದೇ ಆರೋಗ್ಯ ಅಪಾಯಗಳನ್ನು ತಪ್ಪಿಸಲು, ರಕ್ತದಾನ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸೋದು ಬಹಳ ಮುಖ್ಯ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ 
ಅನೇಕ ರೀತಿಯ ರೋಗಗಳನ್ನು ತಡೆಗಟ್ಟಲು ಇಮ್ಮ್ಯೂನಿಟಿ ಪವರ್(Immunity power) ಮುಖ್ಯ. ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ಮತ್ತು ರೋಗಗಳನ್ನು ಗುರುತಿಸುವುದರ ಜೊತೆಗೆ, ಆಗಾಗ್ಗೆ ರಕ್ತದಾನ ಮಾಡೋದರಿಂದ ಒಟ್ಟಾರೆ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಬಹುದು. ಒಬ್ಬ ವ್ಯಕ್ತಿ ಡಯಾಲಿಸಿಸ್ ಅಥವಾ ಸ್ವಯಂಪ್ರೇರಿತ ರಕ್ತದಾನಕ್ಕೆ ಒಳಗಾದಾಗ, ಕೆಂಪು ರಕ್ತ ಕಣಗಳು ಹೊಸದಾಗಿ ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಹೊಸ ರಕ್ತದ ಪ್ಲಾಸ್ಮಾದ ರಚನೆಯು ಲ್ಯೂಕೋಸೈಟ್ಗಳ ಬೆಳವಣಿಗೆಗೆ ಕಾರಣವಾಗುತ್ತೆ, ಇದು ಇಮ್ಮ್ಯೂನಿಟಿ ಪವರ್  ಹೆಚ್ಚಿಸುತ್ತೆ ಮತ್ತು ಅನೇಕ ರೋಗಗಳಿಂದ ರಕ್ಷಿಸುತ್ತೆ .

Latest Videos

click me!