ಮಕ್ಕಳಲ್ಲಿನ ನರಸಂಬಂಧಿ ಸಮಸ್ಯೆಗಳನ್ನು ಅವರು ನವಜಾತ ಶಿಶುಗಳಾಗಿದ್ದಾಗಲೇ ಗುರುತಿಸುವುದು ಬಹಳ ಅಗತ್ಯ, ನರಸಂಬಂಧಿ ಸಮಸ್ಯೆಗಳು ಕೆಲವೊಮ್ಮೆ ಸೂಕ್ಷ್ಮವಾಗಿ ಕಂಡು ಬರಬಹುದು. ಆದರೆ ಇದಕ್ಕೂ ವೈದ್ಯಕೀಯ ಆರೈಕೆಯೆ ಅಗತ್ಯವಿದೆ. ಹಾಗಿದ್ದರೆ ಮಗು ಬೆಳವಣಿಗೆಯ ಸಮಯದಲ್ಲಿಯೇ ಪೋಷಕರು ಇದನ್ನು ಗುರುತಿಸುವುದು ಹೇಗೆ ಎಂದು ನೋಡೋಣ.
26
ಸ್ನಾಯುಗಳ ಟೋನ್
ಸ್ನಾಯುಗಳ ಟೋನ್ ಎಂದರೆ ಸ್ನಾಯುಗಳಲ್ಲಿನ ಒತ್ತಡದ ಪ್ರಮಾಣವಾಗಿದೆ. ನಾವು ಕುಳಿತಾಗ ಮತ್ತು ನಿಂತಾಗ ನಮ್ಮ ದೇಹವನ್ನು ನೇರವಾಗಿ ಹಿಡಿದಿಡಲು ನಮ್ಮ ಸ್ನಾಯುಗಳ ಟೋನ್ ಸಹಾಯ ಮಾಡುತ್ತದೆ. ಆದರೆ ಚಪ್ಪಟೆಯಾದ ಕೈಕಾಲುಗಳು ಗಟ್ಟಿಯಾದ ಸ್ನಾಯುಗಳು ನಿಧಾನ ಬೆಳವಣಿಗೆಯ ನರ ಸಂಕೇತಗಳನ್ನು ಸೂಚಕವಾಗಿರಬಹುದು.
36
ಸಹಜವಲ್ಲದ ವರ್ತನೆಗಳು
ಮಕ್ಕಳ ಸಹಜವಲ್ಲದ ವರ್ತನೆಗಳು, ಜರ್ಕಿಂಗ್‌ಗಳು ಅಥವಾ ಕಣ್ಣುಗಳನ್ನು ಅತ್ತಿತ್ತ ತಿರುಗಿಸುವ ರೀತಿ ಕೂಡ ಕೆಲವೊಮ್ಮೆ ಅಪಸ್ಮಾರದ ಲಕ್ಷಣವಾಗಿರಬಹುದು.
46
ಆಹಾರ ಸೇವನೆಗೆ ಕಷ್ಟಪಡುವುದು
ಆಹಾರವನ್ನು ಸೇವಿಸುವಾಗ ಅಥವಾ ನುಂಗುವಾಗ ಕಷ್ಟಪಡುವುದು ನರಸಂಬಂಧಿ ಸಮಸ್ಯೆಗಳ ಸೂಚಕವಾಗಿರಬಹುದು. 2ರಿಂದ 3 ತಿಂಗಳ ನಂತರ ಮಕ್ಕಳ ಚಲನವಲನದಲ್ಲಿನ ಬದಲಾವಣೆ, ಅಥವಾ ಯಾವುದಕ್ಕೂ ಅವರು ಪ್ರತಿಕ್ರಿಯಿಸುವ ರೀತಿ ಕಡಿಮೆಯಾಗಿರುವುದು ಕೂಡ ನರಸಂಬಂಧಿ ಸಮಸ್ಯೆಗಳ ಲಕ್ಷಣವಾಗಿರಬಹುದು.
56
ಕಣ್ಣುಗಳ ನೇರ ಸಂಪರ್ಕ ಇಲ್ಲದಿರುವುದು
ಎರಡು ತಿಂಗಳಾದರೂ ಮುಖ ಪರಿಚಯ ಅಥವಾ ಯಾವುದೇ ವಸ್ತುಗಳ ಬಗ್ಗೆ ಗಮನಹರಿಸದಿರುವುದು ನೋಡದಿರುವುದು ಕೂಡ ನರ ಸಮಸ್ಯೆಯ ಒಂದು ಲಕ್ಷಣವಾಗಿರಬಹುದು
66
ಚಟುವಟಿಕೆಗಳಲ್ಲಿ ವಿಳಂಬ
ಮಗುವಿನ ಮೊದ ಮೊದಲ ಚಟುವಟಿಕೆಗಳಾದ ಅಂಬೆಗಾಲಿಕ್ಕಿ ನಡೆಯುವುದು, ಹರಿದಾಡಿಕೊಂಡು ಹೋಗಲು ಶುರು ಮಾಡುವುದು, ಸ್ವಂತವಾಗಿ ಎದ್ದು ನಿಲ್ಲಲು ಪ್ರಯತ್ನಿಸುವುದು ಇದೆಲ್ಲವೂ ನರಸಂಬಂಧಿ ಸಮಸ್ಯೆಗಳ ಕಾರಣದಿಂದಿರಬಹುದು.
ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೆಯೂ ಸಮಾಧಾನ ಮಾಡಿದರೂ ಕೇಳದಷ್ಟು ನಿರಂತರ ಅಳುವುದು ಕೂಡ ನರಸಂಬಂಧಿ ಸಮಸ್ಯೆಗಳ ಕಾರಣದಿಂದಿರಬಹುದು.