Health Tips: ಕಿವಿ ಸೋಂಕು: ಇಗ್ನೋರ್ ಮಾಡ್ಬೇಡಿ… ಬ್ರೈನ್ ಟ್ಯೂಮರ್ ಲಕ್ಷಣವೂ ಆಗಿರಬಹುದು!

Published : Jul 09, 2023, 07:00 AM IST

ಬ್ರೈನ್ ಟ್ಯೂಮರಿಂದಾಗಿ ಇಂಗ್ಲೆಂಡ್‌ನ 19 ವರ್ಷದ ಹದಿಹರೆಯದ ಯುವಕ ಸಾವನ್ನಪ್ಪಿದ್ದಾನೆ. ಅವನ ಮೆದುಳಿನ ಕ್ಯಾನ್ಸರ್ ರೋಗಲಕ್ಷಣಗಳನ್ನು ವೈದ್ಯರು ಸಹ ಗುರುತಿಸಲು ಸಾಧ್ಯವಾಗಲಿಲ್ಲ. ಹಾಗಿದ್ರೆ ಬ್ರೈನ್ ಟ್ಯೂಮರ್ ಬಗ್ಗೆ ಹೆಚ್ಚಾಗಿ ತಿಳಿಯಲು ಈ ಸ್ಟೋರಿ ಓದಿ.  

PREV
17
Health Tips: ಕಿವಿ ಸೋಂಕು: ಇಗ್ನೋರ್ ಮಾಡ್ಬೇಡಿ… ಬ್ರೈನ್ ಟ್ಯೂಮರ್ ಲಕ್ಷಣವೂ ಆಗಿರಬಹುದು!

ಬ್ರೈನ್ ಟ್ಯೂಮರ್(Brain Tumour) ಮಾರಣಾಂತಿಕ
ಬ್ರೈನ್ ಟ್ಯೂಮರ್ ಒಂದು ಅಪಾಯಕಾರಿ ಕಾಯಿಲೆ. ಇದು ಸಾವಿಗೆ ಕಾರಣವಾಗಬಹುದು. ಕೆಲವೊಮ್ಮೆ ಇದರ ರೋಗಲಕ್ಷಣಗಳು ಇತರ ರೋಗಗಳಿಗೆ ಹೋಲುತ್ತವೆ. ಅವುಗಳನ್ನು ನಿರ್ಲಕ್ಷಿಸೋದು ಮಾರಣಾಂತಿಕವಾಗಬಹುದು. ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿರುವ 19 ವರ್ಷದ ಯುವಕನೊಬ್ಬ ತನ್ನ ಬ್ರೈನ್ ಟ್ಯೂಮರನ್ನು ಸರಿಯಾದ ಸಮಯದಲ್ಲಿ ಗುರುತಿಸಲು ವಿಫಲವಾದ ಕಾರಣ ಸಾವನ್ನಪ್ಪಿದ್ದಾನೆ.

27

ರೋಗಲಕ್ಷಣಗಳು ಮೊದಲು ಕಂಡುಬಂದದ್ದು
ಸೆಪ್ಟೆಂಬರ್ 2021 ರಲ್ಲಿ ಫುಟ್ಬಾಲ್ ಆಡುವಾಗ ಆ  ಹುಡುಗ ವಾಂತಿ ಮಾಡಿಕೊಂಡನು, ನಂತರ ಪ್ರಜ್ಞೆ ತಪ್ಪಿದ್ದನು. ತಕ್ಷಣ ಆ ಹುಡುಗನನ್ನು ಹಿರಿಯ ಸರ್ಕಾರಿ ವೈದ್ಯರಿಗೆ ತೋರಿಸಿದಾಗ, ಕಿವಿ ಸೋಂಕಿನಿಂದಾಗಿ(Ear infection)  ಹೀಗೆ ಆಗಿದೆ ಅಷ್ಟೇ, ಬೇರೇನೂ ತೊಂದರೆ ಇಲ್ಲ ಎಂದು ಅವರನ್ನು ಮನೆಗೆ ಕಳುಹಿಸಲಾಯಿತು.

37

ಅಕ್ಟೋಬರ್‌ನಲ್ಲಿ ಇದ್ದಕ್ಕಿದ್ದಂತೆ, ಯುವಕನಿಗೆ ಮಾತನಾಡಲು ಅಥವಾ ನಡೆಯಲು ಕಷ್ಟವಾಗತೊಡಗಿತು. ನಂತರ ಅವರನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಈಗ ಆ ಹುಡುಗನ ಮೆದುಳಿನಲ್ಲಿ(Brain) ಅಪಾಯಕಾರಿ ಗೆಡ್ಡೆ ಕಂಡುಬಂದಿತು.

47

ಶಸ್ತ್ರಚಿಕಿತ್ಸೆಯ ನಂತರವೂ ಜೀವವನ್ನು ಉಳಿಸಲಾಗಲಿಲ್ಲ
ಆ ಯುವಕನ ಬ್ರೈನ್ ಟ್ಯೂಮರನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಪಡಿಸಿದರು. ಅದರ ನಂತರ ಆತನ ಸ್ಥಿತಿ ಸುಧಾರಿಸಿತು ಆದರೆ ಇದಾದ 3 ವಾರಗಳಲ್ಲಿ ಆತ ಸಾವನ್ನಪ್ಪಿದನು(Death). ಶಸ್ತ್ರಚಿಕಿತ್ಸೆಯ ನಂತರವೂ, ಆತನ ಮೆದುಳಿನಲ್ಲಿ ಊತ ಹೆಚ್ಚಾಯಿತು ಎಂದು ವೈದ್ಯರು ತಿಳಿಸಿದರು.

57

ಈ ರೋಗಲಕ್ಷಣ ನಿರ್ಲಕ್ಷಿಸಬೇಡಿ
ತಲೆನೋವು, ಸೆಳೆತ, ಕೈ ಮತ್ತು ಕಾಲುಗಳನ್ನು ಚಲಿಸಲು ಆಗದಿರೋದು, ನಡೆಯಲು ಸಾಧ್ಯವಾಗದಿರೋದು, ನೋಡಲು, ಕೇಳಲು ಅಥವಾ ವಾಸನೆ ನೋಡಲು ಸಾಧ್ಯವಾಗದಿರೋದು, ವಾಕರಿಕೆ, ವಾಂತಿ, ಜ್ಞಾಪಕ ಶಕ್ತಿಯ(Memory power) ನಷ್ಟ ಇತ್ಯಾದಿಗಳು ಮೆದುಳಿನ ಗೆಡ್ಡೆಗಳ ಆರಂಭಿಕ ಲಕ್ಷಣಗಳಾಗಿವೆ.

67

ಬ್ರೈನ್ ಟ್ಯೂಮರ್ನ 4 ನೇ ಹಂತ ಹೀಗಿರುತ್ತೆ 
ಗೆಡ್ಡೆಯು(Tumour) ಮೆದುಳಿನಲ್ಲಿ ನಿಧಾನವಾಗಿ ಹರಡುತ್ತೆ ಮತ್ತು ಈ ಹರಡುವಿಕೆಯನ್ನು ಬೇರೆ ಬೇರೆ ಹಂತಗಳಾಗಿ ವಿಂಗಡಿಸಲಾಗಿದೆ. ಗ್ರೇಡ್ 1 ಬ್ರೈನ್ ಟ್ಯೂಮರ್ ಅತ್ಯಂತ ಮುಂಚಿನದ್ದು, ಗ್ರೇಡ್ 2, ಗ್ರೇಡ್ 3 ನಂತರ  ಗ್ರೇಡ್ 4 ತಲುಪುತ್ತವೆ. ಈ ಕೊನೆಯ ಹಂತದಲ್ಲಿ, ಬ್ರೈನ್ ಟ್ಯೂಮರ್ ಇತರ ಅಂಗಗಳ ಮೇಲೂ ಪರಿಣಾಮ ಬೀರುತ್ತೆ.

77

ಸಂಶೋಧನೆ ಹೇಳುವುದೇನು?
ಕೆಲವು ಸಂಶೋಧನೆಗಳು ಆಹಾರದ ಎನ್-ನೈಟ್ರೋಸೊ ಕಾಂಪೌಂಡಿಂದ ಮೆದುಳಿನ ಗೆಡ್ಡೆಗಳ ಹೆಚ್ಚಿನ ಅಪಾಯವನ್ನು ತೋರಿಸಿವೆ. ಈ ಅಂಶವನ್ನು ಕೆಲವು, ಸಿಗರೇಟ್ ಹೊಗೆ(Smoke) ಮತ್ತು ಸೌಂದರ್ಯವರ್ಧಕಗಳಲ್ಲಿ ಇರುವ ನೈಟ್ರೇಟ್ ಗಳಿಂದ ಉಂಟಾಗುವ ಸಾಧ್ಯತೆ ಇದೆ.  ಆದ್ದರಿಂದ ಬ್ರೈನ್ ಟ್ಯೂಮರ್ ಬಗ್ಗೆ ಈ ಎಲ್ಲಾ ಮಾಹಿತಿಗಳನ್ನು ಮೊದಲೇ ತಿಳಿದುಕೊಂಡರೆ ಅದರಿಂದಾಗೋ ಅಪಾಯವನ್ನು ಮೊದಲೇ ತಿಳಿದು ಸರಿಯಾದ ಚಿಕಿತ್ಸೆಯೊಂದಿಗೆ ಬ್ರೈನ್ ಟ್ಯೂಮರ್ ಅಪಾಯವನ್ನು ಕಡಿಮೆ ಮಾಡಬಹುದು.   
 

Read more Photos on
click me!

Recommended Stories