ಕರಿದ ತಿಂಡಿ, ಸ್ವೀಟ್ಸ್ ತಿಂದ ಬಳಿಕ ಬಿಸಿ ನೀರು ಕುಡಿದ್ರೆ ತೂಕ ಇಳಿಯುತ್ತೆ!

First Published Jun 21, 2022, 6:45 PM IST

ತೂಕ ಇಳಿಸಿಕೊಳ್ಳಲು, ಡಯಟ್ ಮತ್ತು ಎಕ್ಸರ್ಸೈಜ್ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸಣ್ಣ ಸಣ್ಣ ಫಿಟ್ನೆಸ್ ಟಿಪ್ಸ್ ಫಾಲೋ ಮಾಡೋದು. ಒಂದೇ ಸಲಕ್ಕೆ ಜಿಮ್ ಮಾಡಿ ತೂಕ ಇಳಿಸಲು ಸಾಧ್ಯ ಇಲ್ಲ ಅಲ್ವಾ? ಅದಕ್ಕಾಗಿ, ಈ ಒಬೆಸಿಟಿ  ಕಡಿಮೆ ಮಾಡುವ ಟಿಪ್ಸ್ ಫಾಲೋ ಮಾಡೋ ಮೂಲಕ ಸುಲಭವಾಗಿ ತೂಕ ಕಳೆದುಕೊಳ್ಳಬಹುದು. ನಿಮ್ಮ ಲೈಫ್ ಸ್ಟೈಲ್ ನಲ್ಲಿ ನೀವು ಈ ವಿಷಯಗಳನ್ನು ಸೇರಿಸಬೇಕು. ಇದರಿಂದ ಸುಲಭವಾಗಿ ತೂಕ ಇಳಿಯಬಹುದು. 
 


ತೂಕ ಇಳಿಸುವ ಫಿಟ್ನೆಸ್ ಸಲಹೆಗಳಲ್ಲಿ ಒಂದು ಬಿಸಿ ನೀರು ಕುಡಿಯುವುದು. ನೀವು ಇದನ್ನು ನಿಮ್ಮ ದಿನಚರಿಯಲ್ಲಿ ಸೇರಿಸಬೇಕು. ಬಿಸಿ ನೀರು ಕುಡಿಯೋದರಿಂದ ತೂಕವು ವೇಗವಾಗಿ(Weight loss) ಕಡಿಮೆಯಾಗುತ್ತೆ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರು ಸೇವಿಸಿ. 

 ಸಿಹಿ ಮತ್ತು ಎಣ್ಣೆಯುಕ್ತ ಆಹಾರ(Oily food) ಸೇವಿಸಿದ ನಂತರ, ನೀವು ತಕ್ಷಣ ಬಿಸಿ ನೀರನ್ನು ಕುಡಿದ್ರೆ, ಅದರ ಪರಿಣಾಮ ದೇಹದ ಮೇಲಾಗೋದಿಲ್ಲವಂತೆ, ಅಷ್ಟೇ ಅಲ್ಲ, ಬಿಸಿ ನೀರು ಕುಡೀಯೋದ್ರಿಂದ ನೀವು ತಿನ್ನುವ ಮತ್ತು ಕುಡಿಯುವ ಎಲ್ಲವೂ ಸುಲಭವಾಗಿ ಜೀರ್ಣವಾಗುತ್ತೆ.

 ಏನನ್ನಾದರೂ ತಿಂದ ನಂತರ, ನೀವು ಕೇವಲ 1 ಲೋಟ ಬಿಸಿ ನೀರನ್ನು(Hot water) ಕುಡಿಯಬೇಕು. ಇದು ನಿಮ್ಮ ಒಬೆಸಿಟಿಯನ್ನು ಮ್ಯಾಜಿಕ್ ನಂತೆ ದೂರ ಮಾಡುತ್ತೆ. ಬಿಸಿ ನೀರು ಕುಡೀಯೋದ್ರಿಂದ ಆಗುವ ಪ್ರಯೋಜನ ತಿಳಿದುಕೊಳ್ಳೋಣ. 

ಎಣ್ಣೆಯಲ್ಲಿ ಕರಿದ ಮತ್ತು ಸಿಹಿಯಾದ ಆಹಾರ ಸೇವಿಸಿದ ನಂತರ ಬಿಸಿ ನೀರು ಕುಡಿಯಿರಿ
ನೀವು ಯಾವಾಗಲೂ ಫಿಟ್(Fit) ಆಗಿರ್ಬೇಕು ಎಂದು ನೀವು ಬಯಸಿದ್ರೆ, ಈ ರೂಲ್ ಪೆರ್ಫೆಕ್ಟಾಗಿ ಪಾಲಿಸಿ. ನೀವು ಸಿಹಿ ಅಥವಾ ಎಣ್ಣೆಯುಕ್ತ ಏನನ್ನಾದರೂ ತಿಂದು 10-15 ನಿಮಿಷಗಳ ನಂತರ ಒಂದು ಲೋಟ ಬಿಸಿ ನೀರು  ಕುಡಿಯಿರಿ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭಗೊಳಿಸುತ್ತೆ ಮತ್ತು ಒಬೆಸಿಟಿ ಕಡಿಮೆ ಮಾಡುತ್ತೆ.

ರಾತ್ರಿ ಮಲಗುವ ಮೊದಲು ಮತ್ತು ಬೆಳಿಗ್ಗೆ ಎದ್ದ ನಂತರವೂ ಬಿಸಿ ನೀರು ಕುಡಿಯಿರಿ. ಇದು ಸ್ಥೂಲಕಾಯತೆ ಅಥವಾ ಒಬೆಸಿಟಿಯನ್ನು(Obesity)  ಕಡಿಮೆ ಮಾಡುತ್ತೆ. ಬಿಸಿ ನೀರಿನ ಸೇವನೆಯಿಂದ ಆರೋಗ್ಯವೂ ಉತ್ತಮವಾಗಿರುತ್ತೆ ಎಂದು ತಜ್ಞರು ತಿಳಿಸುತ್ತಾರೆ.

ಬಿಸಿ ನೀರು ಕುಡಿಯುವ ಪ್ರಯೋಜನ
ಪ್ರತಿದಿನ ಬಿಸಿ ನೀರು ಕುಡಿಯೋದರಿಂದ ಬಾಡಿ ಡಿಟಾಕ್ಸ್(Body detox) ಆಗುತ್ತೆ, ದೇಹದಲ್ಲಿರುವ ಎಲ್ಲಾ ವಿಷಕಾರಿ ಅಂಶಗಳು ದೇಶದಿಂದ ಹೊರ ಹೋಗುತ್ತವೆ.
ಬಿಸಿ ನೀರು ಕುಡಿಯುವುದು ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ. 

ಬೆಚ್ಚಗಿನ ನೀರು  ಕುಡಿಯೋದರಿಂದ ತೂಕ ವೇಗವಾಗಿ ಕಡಿಮೆಯಾಗುತ್ತೆ.
ದೇಹದಲ್ಲಿ ಸಂಗ್ರಹವಾದ ಫ್ಯಾಟ್  ಬ್ರೇಕ್ ಡೌನ್ ಆಗುತ್ತೆ.
ಹಸಿವು ಕಡಿಮೆಯಾಗುತ್ತೆ. ತಿನ್ನುವ ಅರ್ಧ ಗಂಟೆ ಮೊದಲು 1 ಲೋಟ ಬಿಸಿ ನೀರು ಕುಡಿಯಿರಿ.
ಬಿಸಿ ನೀರು ಕುಡಿಯೋದರಿಂದ ಡೈಜೆಷನ್(Digestion) ಸುಧಾರಿಸುತ್ತೆ ಮತ್ತು ಜೀರ್ಣಕ್ರಿಯೆಯನ್ನು ಬಲಪಡಿಸುತ್ತೆ .

ರಾತ್ರಿ ಬಿಸಿ ನೀರು ಕುಡಿಯೋದರಿಂದ ಮಲಬದ್ಧತೆ(Constipation) ಮತ್ತು ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತೆ. 
ಪ್ರತಿದಿನ ಬಿಸಿ ನೀರು ಕುಡಿಯೋದರಿಂದ, ಗಂಟಲು ಆರೋಗ್ಯಕರವಾಗಿರುತ್ತೆ ಮತ್ತು  ಶೀತದ ಯಾವುದೇ ಸಮಸ್ಯೆಯಿರೋದಿಲ್ಲ.
 

click me!