ನಿದ್ದೆ ಹೆಚ್ಚಾದ್ರೆ ಆರೋಗ್ಯಕ್ಕೆ ಕುತ್ತು, ಬ್ರೈನ್ ಸ್ಟ್ರೋಕ್ ಕೂಡಾ ಆಗ್ಬೋದು!

First Published | Nov 9, 2022, 2:34 PM IST

ಸಿಕ್ಕಾಪಟ್ಟೆ ಸುಸ್ತು, ನಿದ್ದೇನೆ ಆಗಿಲ್ಲ ಹೀಗೆಲ್ಲಾ ಹೇಳಿ ಹಗಲ್ಲೆಲ್ಲಾ ನಿದ್ದೆ ಮಾಡ್ತೀರಾ ? ಹಾಗಿದ್ರೆ ತಿಳ್ಕೊಳ್ಳಿ, ನಿದ್ದೆ ಹೆಚ್ಚಾದ್ರೂ ಆರೋಗ್ಯಕ್ಕೆ ತೊಂದ್ರೆಯಿದೆ. ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ನಿದ್ದೆ ಮಾಡುವವರಲ್ಲಿ ಬ್ರೈನ್ ಸ್ಟ್ರೋಕ್ ಬರುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಅಧ್ಯಯನದ ಮೂಲಕ ಸಾಬೀತುಪಡಿಸಿದ್ದಾರೆ.

ದೈನಂದಿನ ಚಟುವಟಿಕೆಗಳ ಜೊತೆಗೆ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ನಿದ್ರೆ ಬಹಳ ಮುಖ್ಯ. ಆದರೆ ಇಂದಿನ ದಿನಗಳಲ್ಲಿ ಒತ್ತಡದ ಜೀವನಶೈಲಿ (Lifestyle)ಯಿಂದ ಎಲ್ಲರೂ ಒದ್ದಾಡುತ್ತಿದ್ದಾರೆ. ಹೀಗಾಗಿ ಹೊತ್ತಲ್ಲದ ಹೊತ್ತಿನಲ್ಲಿ ಗಂಟೆಗಟ್ಟಲೆ ನಿದ್ದೆ (Sleep) ಮಾಡುತ್ತಲೇ ಇರುತ್ತಾರೆ.

ರಾತ್ರಿ ಪಾಳಿ (Night shift) ಕೆಲಸ ಮಾಡುವವರು ಹಗಲ್ಲೆಲ್ಲಾ ಮಲಗುವುದು, ಹಗಲು ಕೆಲಸ ಮಾಡುವವರು ರಾತ್ರಿ ಸುಸ್ತೆಂದು ಬೇಗ ಮಲಗುವುದು ಸಾಮಾನ್ಯವಾಗಿ. ಒಟ್ನಲ್ಲಿ ಎಷ್ಟೊತ್ತಿಗೂ ಮಲಗುತ್ತಲೇ ಇರುತ್ತಾರೆ. ಆರೋಗ್ಯಕ್ಕೆ ನಿದ್ದೆ ಬೇಕು ನಿಜ. ಆದರೆ ಅತಿಯಾದ ನಿದ್ದೆ ಆರೋಗ್ಯಕ್ಕೆ (Health) ಅಗತ್ಯವಿಲ್ಲ. ಬದಲಾಗಿ ಇದು ರೋಗಗಳಿಗೆ ಕಾರಣವಾಗಬಹುದು.
 

Tap to resize

ಒಬ್ಬ ವ್ಯಕ್ತಿಯು ದಿನಕ್ಕೆ 8 ಗಂಟೆಗಳ ಕಾಲ ಮಲಗಿದರೆ, ಅವನು ತುಂಬಾ ಆರೋಗ್ಯವಂತನಾಗಿರುತ್ತಾನೆ ಎಂದು ತಜ್ಞರು ತಿಳಿಸುತ್ತಾರೆ. 8 ಗಂಟೆಗಳ ನಿದ್ದೆ ನಿಮ್ಮನ್ನು ಯಾವುದೇ ಆರೋಗ್ಯ ಸಮಸ್ಯೆಗಳಿಂದ ಮುಕ್ತಗೊಳಿಸುತ್ತದೆ. ಹಗಲಿನಲ್ಲಿ (Day) ಹೆಚ್ಚು ಹೊತ್ತು ನಿದ್ದೆಗೆ ಸಮಯ ಮೀಸಲಿಟ್ಟವರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ತಜ್ಞರು (Experts).  ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವವರು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬ ಮಾಹಿತಿ ಇಲ್ಲಿದೆ

ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ನಿದ್ದೆ ಮಾಡುವವರಲ್ಲಿ ಬ್ರೈನ್ ಸ್ಟ್ರೋಕ್ ಬರುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಅಧ್ಯಯನದ ಮೂಲಕ ಸಾಬೀತುಪಡಿಸಿದ್ದಾರೆ. ಅತಿಯಾದ ನಿದ್ದೆಯಿಂದ ದೇಹದ ತೂಕ(Weight) ಹೆಚ್ಚಾಗುವುದಲ್ಲದೆ, ಕೊಬ್ಬಿನ ಶೇಖರಣೆ ಮತ್ತು ಹೃದಯದ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಇವುಗಳ ಜೊತೆಗೆ ತಲೆನೋವು, ಬೆನ್ನು ನೋವು, ಹೃದಯಾಘಾತದಂತಹ (Heartattack) ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಾಗಿದೆ.

ಹೆಚ್ಚು ನಿದ್ರಿಸುವ ಜನರು ತೀವ್ರ ಖಿನ್ನತೆ, ತಲೆನೋವು, ಅಸಹಜ ಹೃದಯ ಬಡಿತಗಳು ಮತ್ತು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರೆ. ಯಾವುದೇ ಕೆಲಸವನ್ನು ಮಾಡಲು ಆಸಕ್ತಿಯ ಕೊರತೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಹೆಚ್ಚು ಹೊತ್ತು ನಿದ್ದೆ ಮಾಡುವವರ ಜೀವಿತಾವಧಿಯೂ ಕಡಿಮೆಯಿರುತ್ತದೆ.

ಪ್ರತಿದಿನ ಬೆಳಿಗ್ಗೆ ಎದ್ದಾಗ ಯೋಗಾಭ್ಯಾಸ ಮಾಡುವುದು ಮತ್ತು ಹೆಚ್ಚು ಹೊತ್ತು ನಿದ್ದೆ ಮಾಡದೆ ಕೇವಲ ಎಂಟು ಗಂಟೆ ನಿದ್ದೆ ಮಾಡುವುದು ತುಂಬಾ ಒಳ್ಳೆಯದು. ಹಗಲಿನ ನಿದ್ರೆಯನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಅಂತೆಯೇ, ದಿನವಿಡೀ ಹೆಚ್ಚು ದೈಹಿಕ ಚಟುವಟಿಕೆಯನ್ನು ಮಾಡುವುದರಿಂದ ರಾತ್ರಿ ಬೇಗನೆ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಅಂತೆಯೇ, ನರಮಂಡಲದ ಮೇಲೆ ಪರಿಣಾಮ ಬೀರುವ ಮದ್ಯಪಾನ ಮತ್ತು ಧೂಮಪಾನದಂತಹ ಮಾದಕ ವಸ್ತುಗಳಿಂದ ದೂರವಿರುವುದು ತುಂಬಾ ಒಳ್ಳೆಯದು.

Latest Videos

click me!