Asthma attack ಆದಾಗ ಪ್ರಥಮ ಚಿಕಿತ್ಸೆ ಹೇಗಿರಬೇಕು? ಡಾಕ್ಟರ್ ಏನ್ ಹೇಳ್ತಾರೆ ನೋಡಿ

First Published | Nov 9, 2022, 2:32 PM IST

ದೆಹಲಿ-ಎನ್ಸಿಆರ್ನಲ್ಲಿ ವಾಯುಮಾಲಿನ್ಯವು ವಿಷಕಾರಿ ವಾಯುಮಾಲಿನ್ಯವನ್ನು ಉಂಟುಮಾಡುತ್ತಲೇ ಇದೆ. ಈ ಕಾರಣದಿಂದಾಗಿ, ಅಸ್ತಮಾ ಮತ್ತು ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವ ಜನರ ಸಮಸ್ಯೆಗಳು ಗಮನಾರ್ಹವಾಗಿ ಹೆಚ್ಚಾಗಿದೆ. ದೆಹಲಿಯಲ್ಲಿ ಮಾತ್ರವಲ್ಲ, ನಮ್ಮಲ್ಲೂ ಹಲವೆಡೆ ವಾಯುಮಾಲಿನ್ಯ ಸಮಸ್ಯೆ ಇದೆ. ಅಂತಹ ಜಾಗಗಳಲ್ಲಿ ವಾಸಿಸುತ್ತಿರುವ ರೋಗಿಗಳು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು? ವೈದ್ಯರಿಂದ ಉತ್ತರವನ್ನು ತಿಳಿದುಕೊಳ್ಳೋಣ.
 

ಕಳೆದ ಕೆಲವು ವಾರಗಳಿಂದ, ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ನಗರಗಳ ಗಾಳಿಯ ಗುಣಮಟ್ಟ (ಎಕ್ಯೂಐ) ಬಹಳ ಗಂಭೀರ ಮಟ್ಟದಲ್ಲಿದೆ. ಗಾಳಿಯು ಕಲುಷಿತವಾಗಿರೋದರಿಂದ, ಜನರು ಉಸಿರಾಟದ ಸಮಸ್ಯೆ, ಕಣ್ಣಿನ ಕಿರಿಕಿರಿ ಮತ್ತು ಅಸ್ತಮಾ(Asthama) ಅಟ್ಯಾಕ್ನಂತಹ  ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಅನೇಕ ಜನರು ದೆಹಲಿಯಿಂದ ದೂರವಿರುವ, ಫ್ರೆಶ್ ಗಾಳಿ ಸಿಗುವ ಸ್ಥಳಗಳನ್ನು ಹುಡುಕಲು ಹೊರಟಿದ್ದಾರೆ, ಇದರಿಂದಾದರೂ ತೊಂದರೆಯನ್ನು ತಪ್ಪಿಸಬಹುದು ಎಂದು. 

ಅಸ್ತಮಾ ಮತ್ತು ಉಸಿರಾಟದ ಕಾಯಿಲೆಗಳ ರೋಗಿಗಳಿಗೆ ವಾಯುಮಾಲಿನ್ಯವು(Air pollution) ತುಂಬಾ ಅಪಾಯಕಾರಿ. ಶುದ್ಧ ಗಾಳಿಯ ಕೊರತೆಯಿಂದಾಗಿ, ಅಸ್ತಮಾ ಅಟ್ಯಾಕ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಅಸ್ತಮಾ ಅಟ್ಯಾಕ್ ಮಾರಣಾಂತಿಕವಾಗಬಹುದು. ಹಾಗಾಗಿ ಜನರು ಅದರ ರೋಗಲಕ್ಷಣಗಳನ್ನು ಗುರುತಿಸಬೇಕು ಮತ್ತು ತಕ್ಷಣವೇ ಪ್ರಥಮ ಚಿಕಿತ್ಸೆ ಪಡೆಯಬೇಕು. ಹಾಗಾಗಿ ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಬೇಕು. 

Tap to resize

ಈಗ ಆಸ್ತಮಾ ಅಟ್ಯಾಕ್(Asthama attack) ಅಂದರೆ ಏನು? ಈ ಸ್ಥಿತಿಯಲ್ಲಿ ಪ್ರಥಮ ಚಿಕಿತ್ಸೆ ಎಂದರೇನು ಎಂಬ ಪ್ರಶ್ನೆ ಉದ್ಭವಿಸುತ್ತೆ . ಇದರ ಬಗ್ಗೆ ಶ್ವಾಸಕೋಶಶಾಸ್ತ್ರಜ್ಞರಿಂದ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳೋಣ. ಜೊತೆಗೆ ಅಸ್ತಮಾ ಸಮಸ್ಯೆ ಹೆಚ್ಚಾಗದಂತೆ ಕಾಪಾಡಲು ನಾವೇನು ಮಾಡಬೇಕು ಅನ್ನೋದನ್ನು ಸಹ ತಿಳಿಯೋಣ. 

ಮಾಲಿನ್ಯದಿಂದಾಗಿ ಅಸ್ತಮಾ ಅಟ್ಯಾಕ್ ಪ್ರಕರಣಗಳು ಹೆಚ್ಚುತ್ತಿವೆಯೇ?
ಶ್ವಾಸಕೋಶ ತಜ್ಞರ ಪ್ರಕಾರ, ವಾಯುಮಾಲಿನ್ಯ, ಹವಾಮಾನದಲ್ಲಿನ ಬದಲಾವಣೆ (Weather changes)ಮತ್ತು ಅಲರ್ಜಿಕಾರಕಗಳು ಸೇರಿದಂತೆ ಅನೇಕ ವಿಷಯಗಳು ಅಸ್ತಮಾವನ್ನು ಪ್ರಚೋದಿಸಬಹುದು. ಮಾಲಿನ್ಯದಿಂದಾಗಿ, ಅಸ್ತಮಾ ರೋಗಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಅಸ್ತಮಾ ಅಟ್ಯಾಕ್ ಪ್ರಕರಣಗಳು ಹೆಚ್ಚಾಗಿವೆ. 

ಮಾಲಿನ್ಯವು ಹೆಚ್ಚಾದಂತೆ, ಉಸಿರಾಟದ ತೊಂದರೆ, ಗಂಟಲು ಸಮಸ್ಯೆ, ತೀವ್ರವಾದ ಕೆಮ್ಮು(Cough), ಶೀತ, ಎದೆ ನೋವಿನಂತ ಪ್ರಕರಣಗಳು ಹೆಚ್ಚು ಕಂಡುಬರುತ್ತವೆ. ಅಸ್ತಮಾ ಅಥವಾ ಇತರ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವ ಜನರು ಮಾಲಿನ್ಯದಿಂದ ಹೆಚ್ಚು ಅಪಾಯದಲ್ಲಿದ್ದಾರೆ. ಮಾಲಿನ್ಯವು ಶ್ವಾಸಕೋಶಗಳಿಗೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತೆ  ಮತ್ತು ದೀರ್ಘಕಾಲದವರೆಗೆ ಮಾಲಿನ್ಯದಲ್ಲಿ ಉಳಿಯೋದರಿಂದ ಶ್ವಾಸಕೋಶದ ಕ್ಯಾನ್ಸರ್, ಗಂಟಲು ಕ್ಯಾನ್ಸರ್ ಮತ್ತು ಇತರ ಕ್ಯಾನ್ಸರ್ ಗಳ ಅಪಾಯ ಹೆಚ್ಚಿಸುತ್ತೆ.

ಅಸ್ತಮಾ ಅಟ್ಟಾಕ್ಕ್ನ ಲಕ್ಷಣಗಳು
- ಉಸಿರಾಟದಲ್ಲಿ ಅತಿಯಾದ ತೊಂದರೆ(Breathing problem)
- ಎದೆಯಲ್ಲಿ ಬಿಗಿತದ  ಅನುಭವ 
- ಉಸಿರಾಡುವಾಗ ಶಬ್ದ
- ಮಾತನಾಡಲು ಅತಿಯಾದ ತೊಂದರೆ
- ನಡೆಯಲು ಹೆಚ್ಚು ತೊಂದರೆ

ಅಸ್ತಮಾ ಅಟ್ಯಾಕ್ ಗೆ ಪ್ರಥಮ ಚಿಕಿತ್ಸೆ ಹೇಗೆ ಮಾಡೋದು?
ಅಸ್ತಮಾ ಅಟ್ಯಾಕ್ ಮತ್ತು ಕಾರ್ಡಿಯಾಕ್ ಅರೆಸ್ಟ್(Cardiac arrest) ಬಗ್ಗೆ ಹೆಚ್ಚಿನ ಜನರು ಗೊಂದಲಕ್ಕೊಳಗಾಗುತ್ತಾರೆ. ಮೊದಲನೆಯದಾಗಿ, ಇದು ಯಾವ ರೀತಿಯ ಅಟ್ಯಾಕ್ ಎಂದು ಅರ್ಥಮಾಡಿಕೊಳ್ಳಬೇಕು. ಅಸ್ತಮಾ ಅಟ್ಯಾಕ್ ಆದಾಗ ಉಸಿರಾಟದ ತೊಂದರೆಗಳು ತುಂಬಾ ಹೆಚ್ಚಾಗಿರುತ್ತವೆ. ಈಗಾಗಲೇ ಅಸ್ತಮಾದಿಂದ ಬಳಲುತ್ತಿರುವ ಜನರು ರೋಗಲಕ್ಷಣದ ಆಧಾರದ ಮೇಲೆ ಅದನ್ನು ಗುರುತಿಸಬಹುದು. 

ಅಸ್ತಮಾ ಅಟ್ಯಾಕ್ ಸಂದರ್ಭದಲ್ಲಿ, ಔಷಧಿಯನ್ನು ಮೊದಲು ಇನ್ಹೇಲರ್ (Inhaler) ಅಥವಾ ನೆಬ್ಯುಲೈಜರ್ ಮೂಲಕ ತೆಗೆದುಕೊಳ್ಳಬೇಕು. ಈ ಸಮಯದಲ್ಲಿ, ರೋಗಲಕ್ಷಣಗಳು ಹೆಚ್ಚಿದ್ದರೆ, ಇನ್ಹೇಲರ್ನ ಡೋಸ್  ಸಹ ಹೆಚ್ಚು ತೆಗೆದುಕೊಳ್ಳಬಹುದು. ಅಸ್ತಮಾ ಅಟ್ಯಾಕ್ ಸಂಭವಿಸಿದಾಗ, ಉಸಿರಾಟದ ನಾಳಗಳು ಸಂಕುಚಿತಗೊಳ್ಳುತ್ತವೆ ಮತ್ತು ಉಸಿರಾಡಲು ಕಷ್ಟವಾಗುತ್ತೆ . ಇದಕ್ಕಾಗಿ, ವೈದ್ಯರು ಕೆಲವು ಎಮರ್ಜೆನ್ಸಿ  ಔಷಧಿಗಳನ್ನು ನೀಡುತ್ತಾರೆ, ಅದನ್ನು ಬಳಸಬೇಕು. ಪ್ರಥಮ ಚಿಕಿತ್ಸೆಯ ನಂತರ, ಸಾಧ್ಯವಾದಷ್ಟು ಬೇಗ ಶ್ವಾಸಕೋಶಶಾಸ್ತ್ರಜ್ಞರ ಬಳಿಗೆ ಹೋಗಬೇಕು.

ಯಾವ ಜನರು ಅಸ್ತಮಾ ಅಟ್ಟಾಕ್ಕ್ನ  ಹೆಚ್ಚಿನ ಅಪಾಯದಲ್ಲಿದ್ದಾರೆ?
ಶ್ವಾಸಕೋಶ ತಜ್ಞರ ಪ್ರಕಾರ, ಅಸ್ತಮಾ ರೋಗಿಗಳು ಪ್ರತಿ 3 ತಿಂಗಳಿಗೊಮ್ಮೆ ಶ್ವಾಸಕೋಶದ(Lungs) ಫಂಕ್ಷನಿಂಗ್ ಟೆಸ್ಟ್ ಮಾಡಿಸಬೇಕು. ಈ ಪರೀಕ್ಷೆಯಲ್ಲಿ, ಶ್ವಾಸಕೋಶದ ಸಾಮರ್ಥ್ಯವನ್ನು ಕಾಣಬಹುದು. ಕಡಿಮೆ ಶ್ವಾಸಕೋಶದ ಸಾಮರ್ಥ್ಯ ಹೊಂದಿರುವ ರೋಗಿಗಳು ಅಸ್ತಮಾ ಅಟ್ಟಾಕ್ಕ್ನ ಹೆಚ್ಚಿನ ಅಪಾಯದಲ್ಲಿದ್ದಾರೆ.

ಅಸ್ತಮಾ ಅಟ್ಯಾಕ್ ತಪ್ಪಿಸಲು ಲಸಿಕೆ(Vaccination) ಪಡೆಯಬಹುದು. ಪ್ರತಿ ವರ್ಷ, ವೈದ್ಯರು ರೋಗಿಯ ಸ್ಥಿತಿಯನ್ನು ನೋಡಿದ ನಂತರ ಈ ಲಸಿಕೆಯನ್ನು ನೀಡುತ್ತಾರೆ. ಆರೋಗ್ಯವಾಗಿರುವ ಜನರು ಮಾಲಿನ್ಯದಿಂದಾಗಿ ಉಸಿರಾಟದ ದಾಳಿ ಅಥವಾ ತೀವ್ರ ವೈರಲ್ ಸಿಂಡ್ರೋಮ್ ಸಹ ಹೊಂದಿರಬಹುದು. ಹಾಗಾಗಿ ಜನರು ತಕ್ಷಣವೇ ವೈದ್ಯರನ್ನು ಭೇಟಿಯಾಗಬೇಕು ಮತ್ತು ಅವರಿಗೆ ತೊಂದರೆ ಇದ್ದರೆ ಔಷಧಿಯನ್ನು ತೆಗೆದುಕೊಳ್ಳಬೇಕು.

ವಾಯುಮಾಲಿನ್ಯದ ಅಪಾಯಕಾರಿ ಪರಿಣಾಮಗಳನ್ನು ತಡೆಗಟ್ಟೋದು ಹೇಗೆ ?
- ಮನೆಯಿಂದ ಸಾಧ್ಯವಾದಷ್ಟು ಹೊರನಡೆಯೋದನ್ನು ತಪ್ಪಿಸಬೇಕು 
- ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಡಿ
- ನೀವು ಮಾಸ್ಕ್ನೊಂದಿಗೆ(Mask) ಮಾತ್ರ ಹೊರಗೆ ಹೋಗಬೇಕು
- ಅಸ್ತಮಾ ರೋಗಿಗಳು ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಳ್ಳಬೇಕು
- ಆರೋಗ್ಯಕರ ಆಹಾರ ಸೇವಿಸಿ ಮತ್ತು ಸಾಕಷ್ಟು ನೀರು ಕುಡಿಯಿರಿ
- ನೀವು ಮನೆಯಲ್ಲಿ ಏರ್ ಪ್ಯೂರಿಫೈಯರ್ ಇನ್ಸ್ಟಾಲ್ ಮಾಡಬಹುದು

Latest Videos

click me!