ಶಾರ್ಪ್, ಟೋನ್ಡ್ ಜಾ ಲೈನ್ ಪಡೆಯಲು ಈ ಕೆಲಸ ಮಾಡಿ

Published : Mar 30, 2023, 04:47 PM IST

ಹುಟ್ಟಿದಾಗ ಶಾರ್ಪ್ ಮತ್ತು ಆಕರ್ಷಕ ಜಾ ಲೈನ್ ನೊಂದಿಗೆ ಜನಿಸಿದ ಅದೃಷ್ಟವಂತರು ಕೆಲವರಿರಬಹುದು. ಆದರೆ ಎಲ್ಲರ ಹಣೆಬರಹದಲ್ಲಿ ಇದು ಇರೋಲ್ಲ, ಇದಕ್ಕಾಗಿ ನೀವು ಶ್ರಮಿಸಬೇಕಾಗುತ್ತೆ. ಅದನ್ನು ಟೋನ್ ಮಾಡಲು ಅಥವಾ ನಿರ್ವಹಿಸಲು ಸಾಕಷ್ಟು ಹೆಣಗಾಡಬೇಕಾಗುತ್ತೆ. 

PREV
111
ಶಾರ್ಪ್, ಟೋನ್ಡ್ ಜಾ ಲೈನ್  ಪಡೆಯಲು ಈ ಕೆಲಸ ಮಾಡಿ

ನಿಯಮಿತ ವ್ಯಾಯಾಮದ ಕೊರತೆ, ಜಂಕ್ ಫುಡ್ನ ಹೆಚ್ಚಿನ ಸೇವನೆ ಮತ್ತು ಕೆಟ್ಟ ಜೀವನಶೈಲಿ ಅದರ ಮೇಲೆ ಬಹಳ ವ್ಯಾಪಕವಾದ ಪರಿಣಾಮವನ್ನು ಬೀರುತ್ತೆ, ಇದು ನಮ್ಮ ಡಬಲ್ ಚಿನ್ ಮೂಲಕವೂ ಗೋಚರಿಸುತ್ತೆ. ಟೋನ್ಡ್ ಮತ್ತು ಶಾರ್ಪ್ ಜಾ ಲೈನ್ (Jaw line)ನೀವು ಹೇಗೆ ಪಡೆಯಬಹುದು ಎಂದು ತಿಳಿಯೋಣ.

211

ವ್ಯಾಯಾಮ  (Exercise): ಉತ್ತಮ ಜಾ ಲೈನ್  ಪಡೆಯಲು ವ್ಯಾಯಾಮ ಮಾಡಬೇಕಾದ ಪ್ರಮುಖ ವಿಷಯವಾಗಿದೆ. ತೂಕ ಕಳೆದುಕೊಳ್ಳೋದು ಮತ್ತು ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡೋದು ಬಾಡಿ ಮೇಲೆ ಪರಿಣಾಮ ಬೀರೋದು ಮಾತ್ರವಲ್ಲದೆ, ಇದು ನಿಮ್ಮ ಲುಕ್  ಮೇಲೂ ಪರಿಣಾಮ ಬೀರುತ್ತೆ. ಮುಖದ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಮುಖದ ಚರ್ಮವನ್ನು ಬಲಪಡಿಸಲು ಸಹಾಯ ಮಾಡುವ ಅನೇಕ ವ್ಯಾಯಾಮಗಳಿವೆ.  ಬಾಯಿಯನ್ನು ಪದೇ ಪದೇ ಓಪನ್, ಕ್ಲೋಸ್ ಮಾಡಲು ಪ್ರಯತ್ನಿಸಿ ಮತ್ತು ವಿವಿಧ ರೀತಿಯಲ್ಲಿ ಫೇಸ್ ಎಕ್ಸ್ಪ್ರೆಶನ್ ಮಾಡಿ, ಇದನ್ನು ಹಲವಾರು ಬಾರಿ ಮಾಡಲು ಪ್ರಯತ್ನಿಸಿ.

311

ಹೆಚ್ಚಾಗಿ ನಗುತ್ತಿರಿ (Smile): ನಗೋದರಿಂದ ಅನೇಕ ಪ್ರಯೋಜನಗಳಿವೆ ಮತ್ತು ಅವುಗಳಲ್ಲಿ ಒಂದು ನಿಮ್ಮ ಮುಖದ ಸ್ನಾಯುಗಳನ್ನು ಟೋನಿಂಗ್ ಮಾಡೋದನ್ನು ಒಳಗೊಂಡಿದೆ. ನಗು ನಿಮ್ಮ ಕೆನ್ನೆ ಮೂಳೆಗಳನ್ನು ವಿಸ್ತರಿಸುತ್ತೆ ಮತ್ತು ಇದರಿಂದಾಗಿ ಮುಖಕ್ಕೆ ವ್ಯಾಯಾಮ ಹಾಗು ನಿಮ್ಮ ಮುಖದ ಸ್ನಾಯುಗಳಿಗೆ ಕೆಲಸ ನೀಡುತ್ತೆ. ನಗು ಒಳ್ಳೆಯ ಮೂಡ್ ಹೆಚ್ಚಿಸಲು ಉತ್ತಮವಾಗಿದೆ.

411

ಕಾಂಟೋರಿಂಗ್ (Contouring): ನೀವು ಬಯಸುವ ಲುಕ್ ಪಡೆಯಲು ಕಾಂಟೋರಿಂಗ್ ಸರಳ ಮಾರ್ಗಗಳಲ್ಲಿ ಒಂದಾಗಿದೆ. ನಿಮ್ಮ ಮುಖಕ್ಕೆ ತಕ್ಷಣದ ಆಕಾರವನ್ನು ನೀಡಬೇಕಾದರೆ, ಕಾಂಟೋರಿಂಗ್ ಟೆಕ್ನಿಕ್ ನಿಜವಾಗಿಯೂ ಒಬ್ಬರ ಮುಖದ ರಚನೆಯನ್ನು ಮಾತ್ರವಲ್ಲದೆ ಮೂಗು, ತುಟಿಗಳು, ಕೆನ್ನೆ ಮತ್ತು ಹುಬ್ಬುಗಳನ್ನು ಸಹ ಆಕಾರಗೊಳಿಸಲು ಸಹಾಯ ಮಾಡುತ್ತೆ. ಇದಕ್ಕಾಗಿ, ನೀವು ನಿಮ್ಮ ಮುಖದ ಬದಿಗಳಲ್ಲಿ ಕಾಂಟೋರಿಂಗ್ ಪೌಡರ್ / ಕ್ರೀಮ್ ಹಚ್ಚಬೇಕು ಮತ್ತು ಅದನ್ನು ಸರಿಯಾಗಿ ಮಿಕ್ಸ್ ಮಾಡಬೇಕು.

511

ಫಿಶ್ ಫೇಸ್( Fish Face) ಮಾಡಿಕೊಳ್ಳಿ: ಶಾರ್ಪ್ ದವಡೆ ಮತ್ತು ಕೆನ್ನೆ ಮೂಳೆಗಳನ್ನು ಪಡೆಯಲು ಇದು ಮತ್ತೊಂದು ಜಾಲಿ ಟೆಕ್ನಿಕ್ . ಫಿಶ್ ಫೇಸ್ ಮಾಡಿ ಮತ್ತು ನಂತರ ಅದನ್ನು 5-8 ಸೆಕೆಂಡುಗಳ ಕಾಲ ಅದೇ ಭಂಗಿಯಲ್ಲಿ ಹಿಡಿದುಕೊಳ್ಳಿ ಮತ್ತು ಅದನ್ನು ಮತ್ತೆ ರಿಪೀಟ್ ಮಾಡಿ.

611

ಮುಖಕ್ಕೆ ಮಸಾಜ್(Face massage) ಮಾಡಿ: ಮಸಾಜ್ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ ಹಾಗೆಯೇ ಇದು ನಿಮ್ಮ ಮುಖಕ್ಕೆ ಯಂಗ್ ಲುಕ್ ನೀಡಲು ಸಹಾಯ ಮಾಡುತ್ತೆ. ಆದ್ದರಿಂದ ಕೆಲವು ನಿಮಿಷಗಳ ಕಾಲ ನಿಮ್ಮ ಬೆರಳುಗಳಿಂದ ಮುಖವನ್ನು ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ಮಲಗುವ ಮೊದಲು ಮತ್ತು ಬೆಳಿಗ್ಗೆ ಎದ್ದ ನಂತರ ನಿಮ್ಮ ಮುಖವನ್ನು ಎಸೆನ್ಷಿಯಲ್ ಆಯಿಲ್ ಅಥವಾ ಸೌಮ್ಯ ಮಾಯಿಶ್ಚರೈಸರ್ ನಿಂದ ಮಸಾಜ್ ಮಾಡಿ. ಫ್ರೆಶ್ನೆಸ್ ಅನುಭವಿಸಲು ನಿಮ್ಮ ಗಲ್ಲ, ದವಡೆ, ಮಣಿಕಟ್ಟು ಮತ್ತು ಕೆನ್ನೆಗಳನ್ನು ಕೆಲವು ಸೆಕೆಂಡುಗಳ ಕಾಲ ಉಜ್ಜಿ. ಇದು ನಿಮ್ಮ ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತೆ . ನೀವು ಐಸ್ ಕ್ಯೂಬ್ ನಿಂದ ನಿಮ್ಮ ಮುಖವನ್ನು ಮಸಾಜ್ ಮಾಡಬಹುದು. ಯಾವಾಗಲೂ ಕೆಳಭಾಗದಿಂದ ಮೇಲ್ಭಾಗಕ್ಕೆ ಚಲಿಸಿ, ಇದು ಚರ್ಮವನ್ನು ಕುಗ್ಗದಂತೆ ರಕ್ಷಿಸುತ್ತೆ ಎಂಬುದನ್ನು ಗಮನಿಸಿ.

711

ನೀರು ಕುಡಿಯಿರಿ (Water): ದೇಹದಲ್ಲಿರುವ ಕೊಳಕು ಸಹ ನಿಮ್ಮ ಮುಖದ ಮೇಲೆ ಕಂಡುಬರುತ್ತೆ . ನೀರು ಡಿಹೈಡ್ರೇಷನ್ ತಡೆಯೋದು ಮಾತ್ರವಲ್ಲದೆ ನಿಮ್ಮ ದೇಹದಿಂದ ವಿಷವನ್ನು ಹೊರಹಾಕುತ್ತೆ. ನಿಮ್ಮ ದೇಹದಿಂದ ನಿಯಮಿತವಾಗಿ ವಿಷ ಹೊರಹಾಕಿ ಅನಾರೋಗ್ಯಕರ ಜೀವಾಣುಗಳನ್ನು ತೊಡೆದುಹಾಕಲು ನೀರು ಕುಡಿಯೋದು ತುಂಬಾ ಅವಶ್ಯಕ. ಇದು ನೀವು ಯಂಗ್ ಆಗಿ ಕಾಣುವಂತೆ ಮಾಡುತ್ತೆ ಮತ್ತು ನಿಮ್ಮ ಮುಖವು ಹೆಚ್ಚು ಟೋನ್ ಆಗುತ್ತೆ.

811

 A, E, I, O, U ಹೇಳಿ: ಈ 6 ಸ್ವರಗಳನ್ನು ಗಟ್ಟಿಯಾಗಿ ಉಚ್ಚರಿಸಿ - A, E, I, O, U - ಇದು ಕುತ್ತಿಗೆಯ ಸ್ನಾಯುಗಳನ್ನು ಮೇಲೆತ್ತಲು ಸಹಾಯ ಮಾಡುತ್ತೆ. ಹಾಗೇ ಶಾರ್ಪ್ ಜಾ ಲೈನ್ ಪಡೆಯಲು ಸಹಾಯ ಮಾಡುವ ಸರಳ ವ್ಯಾಯಾಮಗಳಲ್ಲಿ(Simple exercise) ಇದು ಒಂದಾಗಿದೆ.

911

ಉತ್ತಮ ಜಾ ಲೈನ್ ಪಡೆಯಲು ಚೂಯಿಂಗ್ ಗಮ್ (Chewing gum)  ಜಗಿಯಿರಿ: ಚೂಯಿಂಗ್ ಗಮ್ ಮೌತ್ ಫ್ರೆಶನರ್ ಆಗಿ ಮಾತ್ರವಲ್ಲದೆ ಮಸಾಜ್ ಆಗಿಯೂ ಕೆಲಸ ಮಾಡುತ್ತೆ. ಮುಖದ ಸ್ನಾಯುಗಳಿಗೆ ವ್ಯಾಯಾಮ ನೀಡಲು ಇದು ಸುಲಭವಾದ ಮಾರ್ಗವಾಗಿದೆ. ಇದು ಏಕಕಾಲದಲ್ಲಿ ಹಲವಾರು ಸ್ನಾಯು ವ್ಯಾಯಾಮಗಳನ್ನು ಒಳಗೊಂಡಿದೆ.

1011

ಚಿನ್ ಲಿಫ್ಟ್ (Chin lift) ಅಭ್ಯಾಸ ಮಾಡಿ: ಚಿನ್ ಲಿಫ್ಟ್  ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಗಲ್ಲದ ಮೇಲೆ ಕೆಲಸ ಮಾಡಲು ಸಹಾಯ ಮಾಡುವ ವ್ಯಾಯಾಮಗಳಾಗಿವೆ. ಮೇಲೆ ನೋಡಿ ಮತ್ತು ಸುಮಾರು 30 ಸೆಕೆಂಡುಗಳ ಕಾಲ ಈ ಭಂಗಿಯಲ್ಲಿ ಇರಿ.  ಗಲ್ಲ ಮತ್ತು ಜಾ ಲೈನ್ ಟೋನ್ ಮಾಡಲು ಪ್ರತಿದಿನ 10 ಬಾರಿ ಇದನ್ನು ಮಾಡಿ.

1111

ಜಾ ಲೈನ್ ಬಿಗಿಯಾಗಿಹಿಡಿದುಕೊಳ್ಳಿ: ಉತ್ತಮ ಜಾ ಲೈನ್ ಗಾಗಿ 10 ಸೆಕೆಂಡುಗಳ ಕಾಲ ಜಾ ಲೈನ್ ನ್ನು ಬಿಗಿಯಾಗಿ ಹಿಡಿಯಿರಿ ನಂತರ ಅದನ್ನು ಬಿಡಿ. ಇದರಿಂದ ಸ್ವಲ್ಪ ಸುಸ್ತು ಮತ್ತು ಸ್ವಲ್ಪ ಕಿರಿಕಿರಿಯನ್ನು ಅನುಭವಿಸಬೇಕಾಗುತ್ತೆ. ಮುಖದ ಬಣ್ಣವನ್ನು(Face colour) ಸುಧಾರಿಸಲು ಇದನ್ನು 10-15 ಬಾರಿ ರಿಪೀಟ್ ಮಾಡಿ.

Read more Photos on
click me!

Recommended Stories