ಈ ಆರೋಗ್ಯ ಸಮಸ್ಯೆ ಇರೋರು ಬದನೆಕಾಯಿಯನ್ನು ತಿನ್ನಲೇಬೇಡಿ!

First Published | Sep 25, 2021, 3:53 PM IST

ಪ್ರತಿ ಋತುವಿನಲ್ಲಿ ಸಿಗುವ ಬದನೆಕಾಯಿ (Brinjal) ಆರೋಗ್ಯದ ದೃಷ್ಟಿಯಿಂದ ಮಾತ್ರ ಪ್ರಯೋಜನಕಾರಿಯಲ್ಲ, ರುಚಿಯ ದೃಷ್ಟಿಯಿಂದಲೂ ಬಹಳ ಜನಪ್ರಿಯ. ಬೇಸಿಗೆ ಮತ್ತು ಚಳಿಗಾಲದಲ್ಲಿ ಜನರು ಇದನ್ನು ಬಹಳ ಇಷ್ಟಪಟ್ಟು ತಯಾರಿಸುತ್ತಾರೆ ಮತ್ತು ತಿನ್ನುತ್ತಾರೆ. ವಾಸ್ತವವಾಗಿ ಬದನೆಯಲ್ಲಿ ಇತರ ತರಕಾರಿಗಳಲ್ಲಿ (Vegetables)  ಕಂಡು ಬರದ ಅನೇಕ ಪೋಷಕಾಂಶಗಳು ಇವೆ. ಅಲ್ಲದೆ ಬದನೆಕಾಯಿಯಲ್ಲಿ ಹೆಚ್ಚಿನ ಫೈಬರ್ ಮತ್ತು ಕಡಿಮೆ ಕ್ಯಾಲೊರಿಗಳಿವೆ. 

ಬದನೆಕಾಯಿಯಿಂದ ವಿವಿಧ ರೆಸಿಪಿಗಳನ್ನು ಮಾಡಿ ಸವಿಯಬಹುದು. ಇದರ ಸೇವನೆಯು ರಕ್ತದಲ್ಲಿನ ಸಕ್ಕರೆಯನ್ನು (blood sugar) ನಿಯಂತ್ರಣದಲ್ಲಿಡುತ್ತದೆ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುವುದಿಲ್ಲ. ಇದರಿಂದ ಹೃದ್ರೋಗದ ಅಪಾಯವೂ ಕಡಿಮೆಯಾಗುತ್ತದೆ. ಆದರೆ ತಿನ್ನುವ ಮುನ್ನ ಬದನೆಕಾಯಿಯನ್ನು ಯಾರು ತಿನ್ನಬಾರದು ಎನ್ನುವ ಬಗ್ಗೆ ಗಮನ ಹರಿಸಬೇಕು. 

ಒಂದು ನಿರ್ದಿಷ್ಟ ಆರೋಗ್ಯ ಸಮಸ್ಯೆಯಿಂದ (Health Problem) ಬಳಲುತ್ತಿದ್ದರೆ, ಬದನೆ ಸೇವಿಸುವುದರಿಂದ  ಆರೋಗ್ಯಕ್ಕೆ ಸಾಕಷ್ಟು ಹಾನಿ (Harm) ಉಂಟಾಗಬಹುದು. ಆದ್ದರಿಂದ ಯಾವ ಆರೋಗ್ಯಕರ ಸ್ಥಿತಿಯಲ್ಲಿ ಬದನೆಕಾಯಿಯನ್ನು ತಿನ್ನಬಾರದು ಎನ್ನುವ ಬಗ್ಗೆ ಮಾಹಿತಿ ತಿಳಿಯಿರಿ.  

Tap to resize

1.ಅಲರ್ಜಿಗಳು (Allergies) 
ನೀವು ಯಾವುದೇ ರೀತಿಯ ಅಲರ್ಜಿಯಿಂದ ಬಳಲುತ್ತಿದ್ದರೆ ಬದನೆಕಾಯಿ ತಿನ್ನುವುದನ್ನು ತಪ್ಪಿಸಿ. ಅಲರ್ಜಿಯ ಹೊರತಾಗಿಯೂ ನೀವು ಅದನ್ನು ಸೇವಿಸಿದರೆ, ಅದು  ಸಮಸ್ಯೆಯನ್ನು ಪ್ರಚೋದಿಸಬಹುದು ಮತ್ತು ಉಲ್ಬಣಗೊಳಿಸಬಹುದು. ಇದು ಬೇಗನೆ ಕಡಿಮೆಯಾಗೋದಿಲ್ಲ. 
 

2.ಖಿನ್ನತೆಗೆ  (Depression)ಔಷಧಿಗಳನ್ನು ತೆಗೆದುಕೊಳ್ಳುವುದು
ಮಾನಸಿಕ ಒತ್ತಡ (Mental stress)ಕ್ಕೆ ಒಳಗಾಗುತ್ತಿದ್ದರೆ ಮತ್ತು ಖಿನ್ನತೆಯ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ  ಬದನೆಕಾಯಿ ತಿನ್ನುವುದನ್ನು ತಪ್ಪಿಸಬೇಕು. ಈ ಔಷಧಿಗಳ ಜೊತೆ ಬದನೆಕಾಯಿ ತಿಂದರೆ ಔಷಧಗಳ ಪರಿಣಾಮ ಕೆಟ್ಟದಾಗಬಹುದು ಮತ್ತು ಪರಿಣಾಮ ಕಡಿಮೆಯಾಗಬಹುದು.

3.ಕಣ್ಣಿನ ಸಮಸ್ಯೆಗಳು
ಕಣ್ಣುಗಳಲ್ಲಿ ಕಿರಿಕಿರಿ ಇದ್ದರೆ ಮತ್ತು ಒಂದು ರೀತಿಯ ಅಸ್ವಸ್ಥತೆ ಇದ್ದರೆ, ಬದನೆಕಾಯಿಯನ್ನು ತಿನ್ನಬೇಡಿ. ಇದು ಯಾವುದೇ ಕಣ್ಣಿನ ಅಸ್ವಸ್ಥತೆಯನ್ನು ಪ್ರಚೋದಿಸುವ ಮತ್ತು  ಸಮಸ್ಯೆಯನ್ನು ಉಲ್ಬಣಗೊಳಿಸುವ ಸಾಧ್ಯತೆಯಿದೆ. ಆದುದರಿಂದ ಇದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ. 

4.ಮೂಲವ್ಯಾಧಿ (piles)
ಆಹಾರದಲ್ಲಿನ ಬದಲಾವಣೆಯಿಂದಾಗಿ ಮೂಲವ್ಯಾಧಿ ಸಮಸ್ಯೆ ಕಾಡುತ್ತದೆ. ಒಬ್ಬ ವ್ಯಕ್ತಿಯು ಮೂಲವ್ಯಾಧಿಯಿಂದ ಬಳಲುತ್ತಿದ್ದರೆ, ಬದನೆ ಸೇವನೆಯನ್ನು ತಪ್ಪಿಸುವುದು ಮುಖ್ಯ.ಇಲ್ಲದಿದ್ದರೆ ತೊಂದರೆ ಮತ್ತಷ್ಟು ಹೆಚ್ಚಾಗಬಹುದು. ಮೂಲವ್ಯಾಧಿ ಸಮಸ್ಯೆ ಹೆಚ್ಚಾದರೆ ಮತ್ತೆ ಚಿಕಿತ್ಸೆ ಮಾಡಬೇಕಾಗಿ ಬರುತ್ತದೆ. 

5.ಅಪೆಂಡಿಸೈಟಿಸ್
ನೀವು ಅಪೆಂಡಿಸೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ಬದನೆಕಾಯಿ ಸೇವನೆಯನ್ನು ನಿಷೇಧಿಸಬೇಕು. ಬದನೆಕಾಯಿಯಲ್ಲಿ ಆಕ್ಸಲೇಟ್ ಇದೆ, ಇದು ಮೂತ್ರಪಿಂಡಗಳಿಗೆ ಹಾನಿಕಾರಕ. ಇದರಿಂದ ಕಿಡ್ನಿ ಸಮಸ್ಯೆ ಉಂಟಾಗಬಹುದು. ಇದು ಆರೋಗ್ಯಕ್ಕೆ ಹಾನಿಕಾರಕ. 

6.ರಕ್ತಹೀನತೆ
 ದೇಹವು ರಕ್ತಹೀನತೆಯಿಂದ (anemia) ಕೂಡಿದೆ ಎಂದಾಗಿದ್ದರೆ , ಅನೀಮಿಯಾ ಸಮಸ್ಯೆಯಿಂದ ಬಳಲುತ್ತಿದ್ದರೆ ನೀವು ಬದನೆಕಾಯಿಯನ್ನು ಸೇವಿಸಬಾರದು. ರಕ್ತಹೀನತೆ ಇರುವ ವ್ಯಕ್ತಿ ಇದನ್ನು ತಿಂದರೆ ಸಮಸ್ಯೆ ಉಂಟಾಗಬಹುದು. ಇದು ಪ್ರಾಣಕ್ಕೆ ಅಪಾಯ.

pregnancy

7.ಗರ್ಭಧಾರಣೆ
ಗರ್ಭಿಣಿ ಮಹಿಳೆಯರು (pregnant women)  ಆರೋಗ್ಯದ ಬಗ್ಗೆ ಮುಖ್ಯವಾದ ತಾವು ಸೇವನೆ ಮಾಡುವ ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಗರ್ಭಿಣಿಯರು ಬದನೆಕಾಯಿಯನ್ನು ಸೇವಿಸಬಾರದು. ಗರ್ಭಾವಸ್ಥೆಯಲ್ಲಿ ಸೇವಿಸಿದರೆ, ಬೆಳೆಯುತ್ತಿರುವ ಭ್ರೂಣಕ್ಕೆ ಹಾನಿಯಾಗಬಹುದು.

Latest Videos

click me!