ಮಕ್ಕಳ ನಿದ್ರೆ ಕಡೆಗಣಿಸಿದ್ರೆ ಅಪಾಯ ! ಪೋಷಕರೇ ಹುಷಾರ್

First Published | Mar 21, 2023, 3:57 PM IST

ಚಿಕ್ಕ ಮಕ್ಕಳಿಗೆ ಆಹಾರ ಮತ್ತೆ ನಿದ್ದೆ ಅತಿ ಮುಖ್ಯವಾದದ್ದು. ಚಿಕ್ಕ ಮಗುವಿಗೆ ಆಹಾರ ನೀಡೋದಕ್ಕಿಂತ ಅವರನ್ನು ಮಲಗಿಸೋದು ಹೆಚ್ಚು ಕಷ್ಟ. ಮಕ್ಕಳಿಗೆ ನಿದ್ರೆ ಬಹಳ ಮುಖ್ಯ ಏಕೆಂದ್ರೆ ಈ ಸಮಯದಲ್ಲಿ ಅವರ ದೇಹವು ಬೆಳೆಯುತ್ತೆ. ಈ ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ.ಅದರ ಬಗ್ಗೆ ತಿಳಿಯೋಣ.  

ಮಕ್ಕಳನ್ನು ನೋಡಿಕೊಳ್ಳೋದು ಸುಲಭದ ಕೆಲಸವಲ್ಲ. ತಿನ್ನುವುದು ಮತ್ತು ಕುಡಿಯೋದರಿಂದ ಹಿಡಿದು ಆರೋಗ್ಯ ಮತ್ತು ನಿದ್ರೆಯವರೆಗೆ(Sleep) ಎಲ್ಲವನ್ನೂ ಬಹಳ ನಿಕಟವಾಗಿ ನೋಡಿಕೊಳ್ಳಬೇಕು, ಆಗ ಮಾತ್ರ ಮಗು ಆರೋಗ್ಯಕರವಾಗಿ ಬೆಳೆಯುತ್ತೆ. ಚಿಕ್ಕ ಮಗುವಿಗೆ ಆಹಾರ ನೀಡೋದಕ್ಕಿಂತ ಅದನ್ನು ಪೋಷಿಸೋದು ಹೆಚ್ಚು ಕಷ್ಟ. ಮಕ್ಕಳಿಗೆ ನಿದ್ರೆ ಬಹಳ ಮುಖ್ಯ ಏಕೆಂದರೆ ಈ ಸಮಯದಲ್ಲಿ ಅವರ ದೇಹವು ಬೆಳೆಯುತ್ತೆ. ಈಗ ಒಂದು ಹೊಸ ಸಂಶೋಧನೆಯಲ್ಲಿ, ಇದರ ಬಗ್ಗೆ ಕೆಲವು ವಿಷಯಗಳು ಬಹಿರಂಗಗೊಂಡಿವೆ, ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.  

ನಿಮ್ಮ ಮಗು (Child) ಸ್ಥಿರವಾಗಿ ಸಾಕಷ್ಟು ಮತ್ತು ಉತ್ತಮ ಗುಣಮಟ್ಟದ ನಿದ್ರೆ ಪಡೆಯೋದನ್ನು ಖಚಿತಪಡಿಸಿಕೊಳ್ಳಲು ಅವರನ್ನು ಸಂತೋಷವಾಗಿ ಮತ್ತು ಆರೋಗ್ಯಕರವಾಗಿಡೋದು ಬಹಳ ಮುಖ್ಯ ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ. ಅದಕ್ಕಾಗಿ ಪೋಷಕರಾದವರು ಏನು ಮಾಡಬೇಕು ಅನ್ನೋದನ್ನು ನೋಡೋಣ. 

Latest Videos


ಸಂಶೋಧಕರ ಪ್ರಕಾರ, ಪ್ರತಿ ರಾತ್ರಿ ಹೆಚ್ಚುವರಿ 30 ನಿಮಿಷಗಳ ನಿದ್ರೆಯು ಸಹ ವ್ಯತ್ಯಾಸವನ್ನುಂಟು ಮಾಡುತ್ತೆ ಮತ್ತು ಮಗುವಿನ ದೈಹಿಕ ಮತ್ತು ಒಟ್ಟಾರೆ ಆರೋಗ್ಯಕ್ಕೆ(Physical health) ಇದು ಮುಖ್ಯ. ಒಂದು ವೇಳೆ ಮಗು ಸರಿಯಾದ ನಿದ್ರೆ ಪಡೆಯದೇ ಇದ್ದರೆ, ಮಗುವಿಗೆ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅವುಗಳ ಬಗ್ಗೆ ನೋಡೋಣ..

ಜಾಮಾ ನೆಟ್ವರ್ಕ್ ಓಪನ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಸಂಶೋಧಕರು ನ್ಯೂಜಿಲೆಂಡ್‌ನಲ್ಲಿ ವಾಸಿಸುವ 8 ರಿಂದ 12 ವರ್ಷ ವಯಸ್ಸಿನ 100 ಮಕ್ಕಳನ್ನು ಟ್ರ್ಯಾಕ್ ಮಾಡಿದ್ದಾರೆ. ಈ ಸಮಯದಲ್ಲಿ, ಒಂದು ವಾರದವರೆಗೆ, ಮಕ್ಕಳು ಸಾಮಾನ್ಯ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಮಲಗಲು ಹೋದರು. ಸಂಶೋಧಕರು ಹಗಲಿನಲ್ಲಿ ಸಂಭವಿಸಿದ ನಿದ್ರೆಯ ತೊಂದರೆ ಮತ್ತು ದೌರ್ಬಲ್ಯಗಳನ್ನು ಮೌಲ್ಯಮಾಪನ ಮಾಡಿದರು. ಜೊತೆಗೆ ಮಕ್ಕಳ ಆರೋಗ್ಯ(Child health) ಸಂಬಂಧಿತ ಜೀವನದ ಗುಣಮಟ್ಟದ ಬಗ್ಗೆ ಸಮೀಕ್ಷೆ ನಡೆಸಿದರು.

ನಿಯಮಿತವಾಗಿ ಮಕ್ಕಳು ರಾತ್ರಿ 8 ರಿಂದ 11 ಗಂಟೆಗಳ ಕಾಲ ಮಲಗುತ್ತಾರೆ. ಇದನ್ನು ಸಾಮಾನ್ಯವಾಗಿ ಆರೋಗ್ಯಕರವೆಂದು ಪರಿಗಣಿಸಲಾಗುತ್ತೆ ಎಂದು ಲೇಖಕರು ಗಮನಿಸಿದ್ದಾರೆ. ಒಂದು ವಾರದ ನಂತರ ರಾತ್ರಿ 39 ನಿಮಿಷಗಳ ಕಡಿಮೆ ನಿದ್ರೆ ಮಾಡಲಾಯಿತು. ಆ ಸಮಯದಲ್ಲಿ ಮಕ್ಕಳ ಒಟ್ಟಾರೆ ಆರೋಗ್ಯ ಮತ್ತು ಶಾಲೆಯಲ್ಲಿ ಕೂತುಕೊಳ್ಳೋ ಸಾಮರ್ಥ್ಯ ಕಡಿಮೆ ಆಗಿದೆ ಎಂದು ಅವರು ಕಂಡುಕೊಂಡರು. ಈ ಅಧ್ಯಯನವು(Study) ಮಕ್ಕಳಿಗೆ ಸಾಕಷ್ಟು ಮತ್ತು ಉತ್ತಮ ಗುಣಮಟ್ಟದ ನಿದ್ರೆ ಬಾರದೇ ಇರೋದು ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ ಎಂದು ಕಂಡುಹಿಡಿದಿದೆ.

ಪೋಷಕರು(Parents) ಮತ್ತು ಗೆಳೆಯರೊಂದಿಗಿನ ಸಂಬಂಧಗಳಲ್ಲಿ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಯಾವ ರೀತಿ ಪ್ರಭಾವಿತರಾಗುತ್ತಾರೆ ಮತ್ತು ಶಾಲೆಯ ಬಗ್ಗೆ ಅವರು ಹೇಗೆ ಯೋಚಿಸುತ್ತಾರೆ ಎಂಬುದನ್ನು ನಿರ್ಣಯಿಸೋದನ್ನು ಸಹ ಅಧ್ಯಯನವು ಒಳಗೊಂಡಿದೆ. ಶಾಲೆಯಲ್ಲಿ ಅಧ್ಯಯನ ಮಾಡುವಾಗ ಮಕ್ಕಳು ಗಮನ ಹರಿಸಲು ಮತ್ತು ದೈಹಿಕವಾಗಿ ಸದೃಢರಾಗಲು ಸಮರ್ಥರಾಗಿದ್ದಾರೆಯೇ ಮತ್ತು ಅದರ ನಂತರ ಮೋಜು ಮಾಡಲು ಮತ್ತು ತಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯಲು ಅವರಿಗೆ ಶಕ್ತಿ ಇದ್ಯಾ ಎಂಬ ಪ್ರಶ್ನೆಯೂ ಇದರಲ್ಲಿ ಸೇರಿದೆ. ಆದ್ದರಿಂದ ಎಲ್ಲಾ ಮಕ್ಕಳು ಸಮರ್ಥರಲ್ಲ ಎಂದು ಉತ್ತರವು ಕಂಡುಬಂದಿದೆ.

ಹಾಗಾಗಿ ಮಕ್ಕಳ ನಿದ್ರೆಯ ಮಹತ್ವ ಕಡೆಗಣಿಸದಂತೆ ಮತ್ತು ಸಾಧ್ಯವಾದಷ್ಟು ನಿದ್ರೆಗೆ ಆದ್ಯತೆ ನೀಡುವಂತೆ ಪೋಷಕರಿಗೆ ಸೂಚಿಸಲಾಗಿದೆ. ಕಡಿಮೆ ಗುಣಮಟ್ಟದ ನಿದ್ರೆ ಪಡೆಯೋದು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ(Mental Health) ಕುಸಿತಕ್ಕೆ ಕಾರಣವಾಗಬಹುದು ಹುಷಾರ್! ಇನ್ನು ಮುಂದೆ ನಿಮ್ಮ ಮಗು ಚೆನ್ನಾಗಿ ನಿದ್ರೆ ಮಾಡುವಂತೆ ನೋಡಿಕೊಳ್ತೀರಿ ಅಲ್ವಾ?

click me!