ಮೈಕೈ ನೋವಾಗಲಿ ದೇಹದಲ್ಲಾಗುವ ಇತರ ಯಾವುದೇ ನೋವಾಗಲಿ ಸಹಿಸಲಾಗದು, ಅನೇಕರು ಸಣ್ಣ ಪುಟ್ಟ ನೋವಿಗೂ ಪೈನ್ ಕಿಲ್ಲರ್ ಅಥವಾ ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಈ ನೋವು ನಿವಾರಕಗಳು ನಮ್ಮ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ವಿಚಾರ ನಿಮಗೆ ಗೊತ್ತೆ.
26
ನಿರಂತರವಾಗಿ ನೋವು ನಿವಾರಕ ಮಾತ್ರೆ ಸೇವಿಸುವುದರಿಂದ ಹೊಟ್ಟೆಯಲ್ಲಿ ರಕ್ತ ಸ್ರಾವ ಉಂಟಾಗಬಹುದು ಇದರಿಂದ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು. ಅಲ್ಲದೇ ನೋವು ನಿವಾರಕ ಮಾತ್ರೆಗಳು ಮೂತ್ರ ಪಿಂಡದ ಸಾಮರ್ಥ್ಯವನ್ನು ಕೂಡ ನಿಧಾನವಾಗಿ ಕಡಿಮೆ ಮಾಡುತ್ತವೆ. ಮುಂದೆ ಇದು ಮೂತ್ರ ಪಿಂಡದ ವೈಫಲ್ಯಕ್ಕೆ ಕಾರಣವಾಗುತ್ತದೆ.
36
ಬರೀ ಇಷ್ಟೇ ಅಲ್ಲ, ಬೇರೆ ಆರೋಗ್ಯ ಸಮಸ್ಯೆಗಳಿಗೂ ಈ ಫೈನ್ ಕಿಲ್ಲರ್‌ಗಳು ಯಥೇಚ್ಛವಾದ ಕೊಡುಗೆ ನೀಡುತ್ತವೆ. ನೋವು ನಿವಾರಕ ಔಷಧಗಳು ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ, ಲಿವರ್ ವೈಫಲ್ಯವನ್ನು ಉಂಟು ಮಾಡುತ್ತದೆ. ಅತಿಯಾಗಿ ಇದನ್ನು ಬಳಸುವುದರಿಂದ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.
46
ಹೆಚ್ಚಿನ ಪ್ರಮಾಣದ ನೋವು ನಿವಾರಕ ಮಾತ್ರೆಗಳು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ. ಈ ಔಷಧ ಸೇವನೆಯ ಬಳಿಕ ರೋಗಿಗಳ ಸಾವಿನ ಅಪಾಯ ಶೇ. 59ರಷ್ಟು ಹೆಚ್ಚಾಗುತ್ತದೆ ಎನ್ನುತ್ತಾರೆ ಡೆನ್ಮಾರ್ಕ್ ಕೋಪನ್‌ಹೇಗನ್ ಯೂನಿವರ್ಸಿಟಿ ಆಸ್ಪತ್ರೆಯ ಸಂಶೋಧಕರು.
56
pain killer
ಬರೀ ಇಷ್ಟೇ ಅಲ್ಲ ಈ ನೋವು ನಿವಾರಕ ಮಾತ್ರೆಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಕೂಡ ಕಡಿಮೆ ಮಾಡುತವಂತೆ, ಇದರಿಂದ ನಮಗೆ ಬೇರೆ ಸಣ್ಣ ಪುಟ್ಟ ಕಾಯಿಲೆಗಳು ಬಂದಾಗಲು ಸಹಿಸಲಾಗದು ಅದರ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ದೇಹ ಕಳೆದುಕೊಳ್ಳುತ್ತದೆ.
66
ಇದರ ಜೊತೆಗೆ ನೋವು ನಿವಾರಕ ಔಷಧಗಳು ಯಕೃತ್ ಗೂ ಮಾರಣಾಂತಿಕ ಹಾನಿ ಮಾಡುತ್ತವೆ. ನೋವು ನಿವಾರಕ ಔಷಧಿ ತೆಗೆದುಕೊಂಡ ಒಂದೆರಡು ದಿನಗಳ ಬಳಿಕ ಹೊಟ್ಟೆ ಮತ್ತು ಕರುಳಿನಲ್ಲೂ ಸಮಸ್ಯೆಗಳು ಉಂಟಾಗಬಹುದು. ಇದು ಮಲಬದ್ಧತೆ, ಹೊಟ್ಟೆ ಉಬ್ಬುವುದು, ವಾಯು ಮತ್ತು ಮೂಲವ್ಯಾಧಿಗೆ ಕಾರಣವಾಗಬಹುದು. ಯಾಕೆಂದರೆ ಈ ಔಷಧಗಳನ್ನು ಜೀರ್ಣಿಸಿಕೊಳ್ಳುವುದು ನಮ್ಮ ದೇಹಕ್ಕೆ ಕಷ್ಟವಾಗುತ್ತದೆ. ಹೀಗಾಗಿ ಯಾವುದೇ ನೋವು ಇದೆ ಅಂತ ನೋವಿನ ಮಾತ್ರೆ ತೆಗೆದುಕೊಳ್ಳುವ ಮೊದಲು ಈ ಪ್ರಮುಖ ವಿಚಾರಗಳು ನಿಮ್ಮ ಗಮನದಲ್ಲಿರಲಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.